ಫೆಬ್ರವರಿಯಲ್ಲಿ ಜಂತರ್ ಮಂತರ್
Team Udayavani, Jan 26, 2018, 11:50 AM IST
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ “ಜಂತರ್ ಮಂತರ್’ ಚಿತ್ರ ಈ ವಾರ ತೆರೆಕಾಣಬೇಕಿತ್ತು. ಆದರೆ, ಈ ವಾರ ಒಂದಷ್ಟು ದೊಡ್ಡ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ ಹೊಸಬರ “ಜಂತರ್ ಮಂತರ್’ ಬಿಡುಗಡೆ ಮುಂದಕ್ಕೆ ಹೋಗಿದೆ. ಚಿತ್ರವನ್ನು ಫೆ.2 ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ನಿಮಗೆ ಗೊತ್ತಿರುವಂತೆ “ಜಂತರ್ ಮಂತರ್’ ಚಿತ್ರದಲ್ಲಿ ನಟಿಸಿರೋದು “ಕಾಮಿಡಿ ಕಿಲಾಡಿಗಳು’ ಶೋನಲ್ಲಿ ಮೆಚ್ಚುಗೆ ಗಳಿಸಿದ ಮಂದಿ. ಈ ಚಿತ್ರವನ್ನು ಗೋವಿಂದೇಗೌಡ ನಿರ್ದೇಶಿಸಿದ್ದಾರೆ. ಗೋವಿಂದೇ ಗೌಡ ಅವರು “ಜಂತರ್ ಮಂತರ್’ ಕಥೆಯನ್ನು ಮೂರು ವರ್ಷಗಳ ಹಿಂದೆ ಮಾಡಿಕೊಂಡಿದ್ದರಂತೆ. ಆದರೆ, ಯಾವ್ಯಾವ ಪಾತ್ರಕ್ಕೆ ಯಾವ ಕಲಾವಿದರನ್ನು ಹಾಕಿಕೊಳ್ಳೋದು ಎಂಬ ಗೊಂದಲದಲ್ಲದ್ದ ಗೋವಿಂದೇಗೌಡ ಅವರಿಗೆ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮ ಯಶಸ್ವಿಯಾದ ನಂತರ ಸಿನಿಮಾದ ಯಾವ ಪಾತ್ರಗಳಿಗೆ ಯಾವ ಕಲಾವಿದರು ಬೇಕೆಂಬ ಬಗ್ಗೆ ಸ್ಪಷ್ಟತೆ ಸಿಕ್ಕಿತಂತೆ.
ಅಷ್ಟಕೂ “ಜಂತರ್ ಮಂತರ್’ ಅಂದರೇನು, ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಜೀವನದಲ್ಲಿ ಏನೂ ಸಾಧನೆ ಮಾಡದೇ ಇರುವ ವ್ಯಕ್ತಿಗೆ ಏಕಾಏಕಿ ಸುಯೋಗ ಬಂದರೆ ಅದು ಜಂತರ್ ಮಂತರ್. ಆ ತರಹದ ಸಂದರ್ಭದೊಂದಿಗೆ ಇಡೀ ಸಿನಿಮಾ ಸಾಗುತ್ತದೆಯಂತೆ. ಬಯಸದೇ ಬಂದ ಭಾಗ್ಯ ಎಂಬ ಕಾನ್ಸೆಪ್ಟ್ ನಡಿ ಸಾಗುವ ಸಿನಿಮಾದಲ್ಲಿ ಮನರಂಜನೆಗೆ ಒತ್ತುಕೊಡಲಾಗಿ ದೆಯಂತೆ. ಚಿತ್ರವನ್ನು ಶಿವಸುಂದರ್ ಎಲ್ ಮತ್ತು ಬಿ. ನಾಗರಾಜ್ ಸಾಲುಂಡಿ ನಿರ್ಮಿಸಿದ್ದಾರೆ. ಇವರ ಜೊತೆ ಮಹೇಶ್, ರಾಜು, ಅನಂತ್ ಕೈ ಜೋಡಿಸಿದ್ದಾರೆ. ಚಿತ್ರದಲ್ಲಿ ಶಿವರಾಜ್ ಕೆ.ಆರ್. ಪೇಟೆ, ಹಿತೇಶ್, ಸಂಭ್ರಮ, ನಯನಾ, ಮಾಸ್ಟರ್ ಆನಂದ್, ಸಂಜು ಬಸಯ್ಯ, ಉದಯ್, ಶೋಭರಾಜ್, ವಿ. ಮನೋಹರ್ ನಟಿಸಿದ್ದಾರೆ.
ಚಿತ್ರ ಔಟ್ ಅಂಡ್ ಔಟ್ ಕಾಮಿಡಿಯಾಗಿದ್ದು, ಪ್ರೇಕ್ಷಕರು ಎರಡೂವರೆ ಗಂಟೆಗಳ ಕಾಲ ಖುಷಿಯಿಂದ ನಗುತ್ತಾರೆ. ಜೊತೆಗೆ ಚಿತ್ರದಲ್ಲಿ ಒಂದೊಳ್ಳೆಯ ಸಂದೇಶ ಕೂಡಾ ಇದೆ ಎಂಬುದು ಚಿತ್ರದಲ್ಲಿ ನಟಿಸಿದ ಕಲಾವಿದರ ಮಾತು. ಚಿತ್ರದ ರೆಟ್ರೋ ಹಾಡೊಂದನ್ನು ಜಗ್ಗೇಶ್ ಹಾಡಿದ್ದು, ಆನಂದ್ ಹಾಗೂ ನಯನ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಚಿತ್ರಕ್ಕೆ ರಾಕಿ ಸೋನು ಸಂಗೀತವಿದೆ. ಸುರೇಶ್‌ಬಾಬು ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Re Release: ದರ್ಶನ್ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ
BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್: ಆಸೀಸ್ ಸರಣಿಗೆ ತಂಡ ಸೇರಲಿದ್ದಾರೆ ಶಮಿ
Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.