ಪೊಲೀಸರ ಹಿಂದೆ ಹೋಗಿ ತಗಲಾಕ್ಕೊಂಡ ಕೊಲೆಗಾರ!


Team Udayavani, Jan 26, 2018, 11:59 AM IST

arrest.jpg

ಬೆಂಗಳೂರು: ಪೊಲೀಸರು ಕೊಲೆಯೊಂದರ ಬಗ್ಗೆ ತನಿಖೆ ನಡೆಸುತ್ತಿದ್ದರು. ಎಲ್ಲಾದರೂ ಆರೋಪಿಯ ಸುಳಿವು ಸಿಗಬಹುದೆಂದು, ಶವ ಸಿಕ್ಕ ಸ್ಥಳ ಸೇರಿ ಎಲ್ಲೆಲ್ಲೂ ಹುಡುಕಾಟ ನಡೆಸಿದ್ದರು. ಹೀಗೆ ಪೊಲೀಸರು ಹೋದಲ್ಲೆಲ್ಲಾ ಆ ಕೊಲೆಗಡುಕ ಅವರನ್ನು ಹಿಂಬಾಲಿಸುತ್ತಿದ್ದ. ಇದನ್ನು ಗಮನಿಸಿದ ಪೊಲೀಸರು ಹಿಡಿದು ವಿಚಾರಿಸಿದಾಗ “ಆ ಕೊಲೆ’ಯನ್ನು ತಾನೇ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹೀಗೆ ಪೊಲೀಸರು ಇದ್ದಲ್ಲಿಗೇ ಹೋಗಿ ತಗಲಾಕ್ಕೊಂಡಿರುವುದು ರವಿ ಎಂಬ ಆರೋಪಿ. ಹೆಬ್ಟಾಳ ಕೆರೆ ಕೋಡಿ ಬಳಿ ಗೋಣಿ ಚೀಲದಲ್ಲಿ ಅನಿಲ್‌ ಎಂಬಾತನ ಶವ ಪತ್ತೆಯಾಗಿತ್ತು. ಈ ಅನಿಲ್‌ನನ್ನು ಕೊಂದಿರುವುದು ಇದೇ ರವಿ. ಚನ್ನಪಟ್ಟಣ ಮೂಲದ ಆರ್‌. ರವಿ, ಮೃತ ಅನಿಲ್‌ನ ಸ್ನೇಹಿತನಾಗಿದ್ದು, ಕ್ಷುಲ್ಲಕ ಕಾರಣಕ್ಕೆ ಗೆಳೆಯನನ್ನೇ ಕೊಂದವನನ್ನು ಬಂಧಿಸುವಲ್ಲಿ ಕೊಡಿಗೇಹಳ್ಳಿ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಹತ್ಯೆಯಾದ ಅನಿಲ್‌ ಮತ್ತು ಬಂಧಿತ ಆರೋಪಿ ರವಿ ಇಬ್ಬರು ಸ್ನೇಹಿತರು. ರವಿಯನ್ನು ಆಗಾಗ “ಹಾಫ್ ಮೆಂಟಲ್‌’ ಎಂದು ಅನಿಲ್‌ರೇಗಿಸುತ್ತಿದ್ದ. ಇದೇ ಕಾರಣಕ್ಕೆ ಕೋಪಗೊಂಡಿದ್ದ ರವಿ, ಗೆಳೆಯನೆಂದೂ ನೋಡದೆ ನಿಲ್‌ನನ್ನು ಕೊಂದಿರುವುದು ತನಿಖೆಯಿಂದ ಗೊತ್ತಾಗಿದೆ.

ಗಂಗಾನಗರದ ಸಿಬಿಐ ಕಚೇರಿ ಮುಂದೆ ಗೋಬಿ ಮಂಚೂರಿ ಸೇರಿದಂತೆ ಫಾಸ್ಟ್‌ ಪುಡ್‌ ಮಾರಾಟದ ಹೋಟೆಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರು ಮೂಲದ ಅನಿಲ್‌ ಹಾಗೂ ರವಿ ಹಲವು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಇಬ್ಬರ ನಡುವೆ ಅತಿಯಾದ ಸಲುಗೆ ಇತ್ತು. ಹಾಗಾಗಿ, ಅನಿಲ್‌, ರವಿಯನ್ನು ಆಗಾಗ “ಹಾಫ್ ಮೆಂಟಲ್‌’ ಎಂದು ರೇಗಿಸುತ್ತಿದ್ದ.

ಇದರಿಂದ ಇಬ್ಬರ ನಡುವೆ ಅನೇಕ ಬಾರಿ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಜ.20ರ ರಾತ್ರಿ ಜಗಳವಾಗಿದೆ. ಊಟದ ಬಳಿಕ ಮನೆಯಲ್ಲಿ ಮಲಗಿದ್ದಾಗ ಬೆಳಗ್ಗೆ 5 ಗಂಟೆಗೆ ರವಿ, ಅನಿಲ್‌ನ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮೃತದೇಹ ಮನೆಯಲ್ಲೇ ಇದ್ದರೆ ಮಾಲೀಕರಿಗೆ ವಿಷಯ ಗೊತ್ತಾಗಲಿದೆ ಎಂದು ಗಾಬರಿಗೊಂಡ ರವಿ, ಶವವನ್ನು ಪ್ಲಾಸ್ಟಿಕ್‌ ಚೀಲದಲ್ಲಿ ತುಂಬಿ ಬ್ಲಾಂಕೆಟ್‌ನಿಂದ ಬಿಗಿಯಾಗಿ ಸುತ್ತಿದ್ದಾನೆ.

ನಂತರ ಪರಿಚಯಸ್ಥ ಆಟೋ ಚಾಲಕನನ್ನು ಕರೆದು, ಚೀಲದಲ್ಲಿ ಕೆಲ ವಸ್ತುಗಳಿವೆ ಅದನ್ನು ಬೇರೆ ಕಡೆ ಸಾಗಿಸಬೇಕಿದೆ ಎಂದು ಕಥೆ ಕಟ್ಟಿ ಹೆಬ್ಟಾಳ ಕೆರೆ ಕೋಡಿ ಬಳಿ ಹೋಗಿ ಆಟೋ ಇಳಿದಿದ್ದಾನೆ. ಆಟೋ ಚಾಲಕ ಅಲ್ಲಿಂದ ತೆರಳಿದ ನಂತರ ಶವವನ್ನು ಕೋಡಿಗೆ ತಳ್ಳಿ ವಾಪಸಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಆರೋಪಿ ಸಿಕ್ಕಿಬಿದ್ದದ್ದು ಹೀಗೆ…: ಜ.21ರಂದು ಹೆಬ್ಟಾಳ ಕೆರೆ ಕೋಡಿ ಬಳಿ ಗೋಣಿ ಚೀಲದಲ್ಲಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಕೊಡಿಗೇಹಳ್ಳಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ ಬಳಿಕ ಸುತ್ತಮುತ್ತ ಪ್ರದೇಶದಲ್ಲಿ ಏನಾದರೂ ಸುಳಿವು ಸಿಗಬಹುದು ಎಂದು ಹುಡುಕಾಟ ನಡೆಸುತ್ತಿದ್ದರು.

ಈ ವೇಳೆ ಆರೋಪಿ ರವಿ ಪೊಲೀಸರ ಹಿಂದಯೇ ಬರುತ್ತಿದ್ದ. ಆತನ ವರ್ತನೆ ಅನುಮಾನಾಸ್ಪದವಾಗಿತ್ತು ಮತ್ತು ಮುಖದಲ್ಲಿ ಭಯ ಕಾಣುತ್ತಿತ್ತು. ಅನುಮಾನ ಬಂದ ಹಿನ್ನೆಲೆಯಲ್ಲಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಟಾಪ್ ನ್ಯೂಸ್

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

23-bng

Bengaluru: ಬೆಂಗಳೂರಲ್ಲಿ ಶೀಘ್ರ ಪ್ರತಿ ಕೆಜಿ ಈರುಳ್ಳಿ ಬೆಲೆ 100?

22-bng

Bengaluru: ಏರ್ಪೋರ್ಟ್‌ ಟಿ-2ಗೆ ವರ್ಟಿಕಲ್‌ ಗಾರ್ಡನ್‌ ರಂಗು

21-bng

Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ

20-flipama

Bengaluru: 19 ಕಡೆ ಫ್ಲಿಪ್‌ ಕಾರ್ಟ್‌, ಅಮೆಜಾನ್‌ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ

19-bng

Bengaluru: ಪೀಣ್ಯದಲ್ಲಿ 12 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಅಭಿವೃದ್ಧಿ ಪ್ರಾಧಿಕಾರ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

Udupi: “ವಕ್ಫ್ ‘ ಸಮಸ್ಯೆ ಶೀರ್ಘ‌ ಪರಿಹಾರಕ್ಕೆ ಪುತ್ತಿಗೆ ಶೀ ಆಗ್ರಹ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.