ಮೊಬೈಲ್ ಇಂದಿರಾ ಕ್ಯಾಂಟೀನ್‌ಗೆ ಇಂದು ಚಾಲನೆ
Team Udayavani, Jan 26, 2018, 11:59 AM IST
ಬೆಂಗಳೂರು: ಬಿಬಿಎಂಪಿ ಜಾರಿಗೊಳಿಸುತ್ತಿರುವ “ಮೊಬೈಲ್ ಇಂದಿರಾ ಕ್ಯಾಂಟೀನ್’ ಸೇವೆಗೆ ಶುಕ್ರವಾರ (ಜ.26) ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.
ಇಂದಿರಾ ಕ್ಯಾಂಟೀನ್‌ಗಳ ನಿರ್ಮಾಣಕ್ಕೆ ಜಾಗ ದೊರೆಯದ ವಾರ್ಡ್‌ಗಳಲ್ಲಿನ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ವಿತರಿಸಲು ಬಿಬಿಎಂಪಿ ಮೊಬೈಲ್ ಕ್ಯಾಂಟೀನ್ ಪರಿಚಯಿಸುತ್ತಿದ್ದು, ಕ್ಯಾಂಟೀನ್‌ಗೆ ಅಗತ್ಯವಿರುವ ವಾಹನಗಳನ್ನು ಈಗಾಗಲೇ ವಿನ್ಯಾಸಗೊಳಿಸಲಾಗಿದೆ. 16 ವಾಹನಗಳಿಗೆ ಶುಕ್ರವಾರ ವಿಧಾನಸೌಧದ ಮುಂಭಾಗ ಮುಖ್ಯಮಂತ್ರಿಗಳು ಹಸಿರು ನಿಶಾನೆ ತೋರಲಿದ್ದಾರೆ.
ಪಾಲಿಕೆಯಿಂದ 198 ವಾರ್ಡ್‌ಗಳ ಪೈಕಿ 172 ವಾರ್ಡ್‌ಗಳಲ್ಲಿ ಈಗಾಗಲೇ ಕ್ಯಾಂಟೀನ್ ನಿರ್ಮಿಸಿದ್ದು, 2 ವಾರ್ಡ್‌ಗಳಲ್ಲಿ ಸ್ಥಳ ಗುರುತಿಸಲಾಗಿದೆ. ಉಳಿದಂತೆ ಸ್ಥಳ ದೊರೆಯದ 24 ವಾರ್ಡ್‌ಗಳಲ್ಲಿ ಮೊಬೈಲ್ ಕ್ಯಾಂಟೀನ್ ಮೂಲಕ ಆಹಾರ ಪೂರೈಸಲು ಯೋಜನೆ ರೂಪಿಸಲಾಗಿದೆ. ಅದರಂತೆ 24 ವಾರ್ಡ್‌ಗಳಲ್ಲಿ ಮೊಬೈಲ್ ಕ್ಯಾಂಟೀನ್‌ಗೆ ಜಾಗ ಗುರುತಿಸಿ, ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
120 ಮಂದಿಗೆ ಉದ್ಯೋಗ: ಪ್ರತಿಯೊಂದು ಮೊಬೈಲ್ ಇಂದಿರಾ ಕ್ಯಾಂಟೀನ್‌ನಲ್ಲಿ ವಾಹನ ಚಾಲಕ, ಟೋಕನ್ ನೀಡಲು, ಆಹಾರ ವಿತರಿಸಲು ಇಬ್ಬರು ಮತ್ತು ಕ್ಯಾಂಟೀನ್‌ನಲ್ಲಿ ಸ್ವತ್ಛತೆ, ನೈರ್ಮಲ್ಯ ಹಾಗೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಒಬ್ಬ ಮಾರ್ಷಲ್ ಸೇರಿ 5 ಸಿಬ್ಬಂದಿ ಇರಲಿದ್ದಾರೆ. ಅದರಂತೆ ಒಟ್ಟು 24 ವಾಹನಗಳಿಂದ 120 ಉದ್ಯೋಗ ಸೃಷ್ಟಿಯಾಗಲಿವೆ.
ಸೇವೆ ದೊರೆವ ಸ್ಥಳಗಳು
ಪಶ್ಚಿಮ ವಲಯ: ಕಾಡು ಮಲ್ಲೇಶ್ವರ, ಮೆಜೆಸ್ಟಿಕ್, ಓಕಳಿಪುರ, ದಯಾನಂದನಗರ, ಬಸವೇಶ್ವರನಗರ, ಚಾಮರಾಜಪೇಟೆ, ಶ್ರೀರಾಮಮಂದಿರ
ದಕ್ಷಿಣ ವಲಯ: ಶ್ರೀನಗರ, ಗಿರಿನಗರ, ಮಡಿವಾಳ, ಜಯನಗರ, ಜೆ.ಪಿ.ನಗರ, ಕೆಂಪಾಪುರ ಅಗ್ರಹಾರ, ಬಾಪೂಜಿನಗರ, ಯಡಿಯೂರು
ಪೂರ್ವ ವಲಯ: ಕಾಚರಕನಹಳ್ಳಿ, ಮೋರಾಯನಪಾಳ್ಯ, ಹಲಸೂರು
ಬೊಮ್ಮನಹಳ್ಳಿ: ಯಲಚೇನಹಳ್ಳಿ
ಮಹದೇವಪುರ: ಎಚ್‌ಎಎಲ್, ಏರ್‌ಪೋರ್ಟ್
ರಾಜರಾಜೇಶ್ವರಿನಗರ: ಲಕ್ಷ್ಮೀದೇವಿನಗರ, ಜ್ಞಾನಭಾರತಿ ನಗರ, ಲಗ್ಗೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್
Bengaluru: ಹನಿಟ್ರ್ಯಾಪ್: ಪ್ರೊಫೆಸರ್‌ಗೆ 3 ಕೋಟಿ ಸುಲಿಗೆ; ಉಡುಪಿ, ಕಾರ್ಕಳ ಮೂಲದವರ ಬಂಧನ
Bengaluru: ಬಸ್‌ಗಳಲ್ಲಿ ಮೊಬೈಲ್ ಕಳ್ಳತನ: ಇಬ್ಬರು ಆರೋಪಿಗಳ ಸೆರೆ, 60 ಫೋನ್ ಜಪ್ತಿ
Bengaluru: ಕಾರು ಅತಿವೇಗವಾಗಿ ಬಂದು ಬೇರು ಕಾರುಗಳಿಗೆ ಡಿಕ್ಕಿ: ಸರಣಿ ಅಪಘಾತ
Bengaluru: 3.25 ಕೋಟಿ ರೂ. ಗಾಂಜಾ ಜಪ್ತಿ: ಮೂವರ ಸೆರೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.