ಹೀರೋ ನಂಬರ್ ಒನ್: ಡಾ. ಅಬ್ದುಲ್ ಕಲಾಂ ಕುರಿತ ಮಕ್ಕಳ ಚಿತ್ರ
Team Udayavani, Jan 26, 2018, 12:17 PM IST
ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಕುರಿತಾಗಿ ಸಾಕಷ್ಟು ಪುಸ್ತಕಗಳು, ಅವರ ಜೀವನದ ಕುರಿತ ಬರಹಗಳು ಬಂದಿವೆ. ಅವರ ಜೀವನ ಅನೇಕರಿಗೆ ಪ್ರೇರಣೆ ಎಂದರೆ ತಪ್ಪಿಲ್ಲ. ಈಗ ಕಲಾಂ ಕುರಿತಾಗಿ ಕನ್ನಡದಲ್ಲಿ ಸಿನಿಮಾವೊಂದು ತಯಾರಾಗಿದೆ. ಅದು “ಮೈ ಹೀರೋ ಕಲಾಂ’. “ಮೈ ಹೀರೋ ಕಲಾಂ’ ಎಂಬ ಮಕ್ಕಳ ಚಿತ್ರವೊಂದು ಸದ್ದಿಲ್ಲದೇ ತಯಾರಾಗಿದ್ದು, ಈಗ ಸೆನ್ಸಾರ್ ಅಂಗಳದಲ್ಲಿದೆ. ಅನೇಕ ಅನೇಕ ಕಮರ್ಷಿಯಲ್ ಚಿತ್ರಗಳನ್ನು ನಿರ್ಮಿಸಿರುವ ಅಣಜಿ ನಾಗರಾಜ್ ಮೊದಲ ಬಾರಿಗೆ “ಮೈ ಹೀರೋ ಕಲಾಂ’ ಎಂಬ ಮಕ್ಕಳ ಚಿತ್ರವನ್ನು ನಿರ್ಮಿಸಿದ್ದಾರೆ. ಶಿವು ಹಿರೇಮಠ ಈ ಚಿತ್ರದ ನಿರ್ದೇಶಕರು.
ಈ ಚಿತ್ರದಲ್ಲಿ ಕಲಾಂ ಅವರ ಬಾಲ್ಯ, ಬದುಕು, ಅವರ ಶಾಲಾ ದಿನಗಳು, ಯಾವುದೇ ಬೇಧ-ಭಾವ ಇಲ್ಲದೇ ಬೆರೆಯುತ್ತಿದ್ದ ರೀತಿ, ಮುಂದೆ ಅವರು ಹಳ್ಳಿಯಿಂದ ದಿಲ್ಲಿ ಮಟ್ಟಕ್ಕೆ ಬೆಳೆದ ಪರಿಯನ್ನಿಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಮುಖ್ಯವಾಗಿ ಈ ಚಿತ್ರದಲ್ಲಿ ಮಕ್ಕಳಿಗೊಂದು ಸಂದೇಶ ಕೂಡಾ ಹೇಳಿದೆಯಂತೆ ಚಿತ್ರತಂಡ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದರೆ ಅಥವಾ ಅನುತ್ತೀರ್ಣರಾದರೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದಾರಂತೆ. ಜೊತೆಗೆ ಅಬ್ದುಲ್ ಕಲಾಂ ಅವರು ಹೇಗೆ ಇತತರಿಗೆ ಮಾದರಿಯಾಗಿದ್ದರು, ಸರಳವಾಗಿ ಹೇಗೆ ಬದುಕುತ್ತಿದ್ದರು ಎಂಬ ಅಂಶವನ್ನು ಈ ಚಿತ್ರದಲ್ಲಿ ಹೇಳಲಾಗಿದೆಯಂತೆ. ನಿರ್ದೇಶಕ ಶಿವು ಹಿರೇಮಠ ಅವರಿಗೆ ಕಲಾಂ ಕುರಿತ ಸಿನಿಮಾವನ್ನು ನಿರ್ದೇಶಿಸಿದ ಖುಷಿ ಇದೆ. “ಈ ಚಿತ್ರದಲ್ಲಿ ಕಲಾಂ ಅವರ ಬಾಲ್ಯದ ಸಾಕಷ್ಟು ಅಂಶಗಳನ್ನು ಹೇಳಿದ್ದೇವೆ. ಇವೆಲ್ಲವೂ ಇಂದಿನ ಮಕ್ಕಳಿಗೆ ಪ್ರೇರಣೆಯಾಗಬಲ್ಲ ಅಂಶಗಳು’ ಎಂಬುದು ನಿರ್ದೇಶಕ ಶಿವು ಹಿರೇಮಠ.
ಕಲಾಂ ಅವರ ಬಗೆಗಿನ ಪುಸ್ತಕ, ವಿಡಿಯೋ ಸೇರಿದಂತೆ ಅನೇಕ ವಿಷಯಗಳನ್ನು ನೋಡಿದ ಅಣಜಿಯವರಿಗೆ ಕಲಾಂ ಬಗ್ಗೆ ಸಿನಿಮಾ ನಿರ್ಮಿಸಬೇಕೆಂಬ ಮನಸ್ಸಾಯಿತಂತೆ. ತಾನು ಇಷ್ಟು ದಿನ ಮಾಡಿದ ಸಿನಿಮಾಗಳನ್ನು ಒಂದು ತಕ್ಕಡಿಯಲ್ಲಿ ಹಾಗೂ “ಮೈ ಹೀರೋ ಕಲಾಂ’ ಅನ್ನು ಮತ್ತೂಂದು ತಕ್ಕಡಿಯಲ್ಲಿಟ್ಟರೆ ಈ ಸಿನಿಮಾವೇ ಜಾಸ್ತಿ ಎಂಬುದು ಅಣಜಿ ಮಾತು. ಚಿತ್ರದಲ್ಲಿ ಚಿನ್ಮಯ್ ಹಾಗೂ ದೀಪಕ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂಗಡಿ ಶಾಂತಪ್ಪ ಅವರ ಕಥೆಗೆ ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ಪಳನಿ ಡಿ ಸೇನಾಪತಿ ಹಿನ್ನೆಲೆ ಸಂಗೀತ, ಆನಂದ್ ಛಾಯಾಗ್ರಹಣ ಚಿತ್ರಕ್ಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.