ಆಟದ ಪೀರಿಯೆಡ್‌


Team Udayavani, Jan 26, 2018, 1:01 PM IST

26-43.jpg

ನಾವು ಹತ್ತಾರು ಮಂದಿ ಹುಡುಗರು ಒಟ್ಟಾಗಿ ಶಾಲಾ ಜೀವನಕ್ಕೆ ಪಾದಾರ್ಪಣೆ ಮಾಡಿದ್ದರೂ ಸಮಯ ಸಿಕ್ಕಾಗಲೆಲ್ಲ ಗಲ್ಲಿಯಲ್ಲಿ ಕ್ರಿಕೆಟ್‌ ಆಡುತ್ತ ಮೋಜು ಮಾಡುವ ಪರಿ ಖಾಯಂ ಆಗಿತ್ತು. ಸಮವಸ್ತ್ರದ ಮಣ್ಣನ್ನು ಕಂಡು ಅಮ್ಮ ಬೈಯುತ್ತಿದ್ದರು. ಶಿಸ್ತು ಎಂಬುದರ ಕುರಿತು ಅರಿವೇ ಇಲ್ಲದ ನಮಗೆ ಇದೊಂದು ಕೇವಲ ಕಾಲವನ್ನು ತಳ್ಳಿಬಿಡುವ ಮೋಜಿನ ಆಟ ಮಾತ್ರವೇ ಆಗಿತ್ತು. ಆದರೆ, ಶಾಲಾ ಕ್ರೀಡಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಬೇಕೆಂದರೆ ಹಳೆಯ ಗೆಳೆಯರನ್ನು ಬದಿಗೆ ಸರಿಸಿ ಹೊಸ ಗೆಳೆಯರೊಂದಿಗೆ ಮೈದಾನಕ್ಕೆ ಒಗ್ಗಿಕೊಳ್ಳಬೇಕಾಯಿತು.

ತರಬೇತಿದಾರರ ಕಟ್ಟುನಿಟ್ಟಿನ ಆಜ್ಞೆಯನ್ನು ಪಾಲಿಸುತ್ತಾ, ಪ್ರಾಥಮಿಕ ಶಾಲಾ ದಿನಗಳಲ್ಲಿ ತರಗತಿ ಅವಧಿಯ ಮುನ್ನ ಹಾಗೂ ಅವಧಿ ಬಳಿಕ ತರಬೇತಿ ಪಡೆಯುತ್ತಾ ಎಲ್ಲರೊಳಗೊಂದಾಗಿ ತರಬೇತಿ ಪಡೆಯುತ್ತಾ ಒಂಡೆದೆ ಸಕುಟುಂಬಿಕ ವಾತಾವರಣ ನಮ್ಮೊಳಗೆ ಸೃಷ್ಟಿಯಾಗಿ ಕ್ರೀಡೆ ಎಂಬ ಸಾಗರದಲ್ಲಿ ಅಲೆಗಳೆಂಬ ಪಟುಗಳಾಗಿ ತೇಲಾಡುತ್ತಾ ಶಿಸ್ತು ಎಂಬ ಕಾಲಚಕ್ರ ನಮ್ಮ ಪರಿಧಿಯೊಳಕ್ಕೆ ಪ್ರತಿಷ್ಠಾಪನೆಯಾಗಿತ್ತು. ಶಾಲಾ ದಿನಗಳಲ್ಲಿ ರಜೆಯ ಮಂತ್ರವ ಜಪಿಸುತ್ತಿದ್ದ ನಮಗೆ ಪಂದ್ಯಾವಳಿಯ ಕಾವು ರಂಗೇರುತ್ತಿದ್ದ ಸಂದರ್ಭಗಳಲ್ಲಂತೂ ರಜಾದಿನವೂ ನಮಗೆ ಕ್ರೀಡೆಯು ಆಸಕ್ತಿದಾಯಕವಾಗಿ ಮಾರ್ಪಟ್ಟಿತ್ತು. ಹೋಬಳಿ, ತಾಲ್ಲೂಕು, ಜಿಲ್ಲಾ, ರಾಜ್ಯಮಟ್ಟದ ಹಂತಗಳಲ್ಲಿ ಕ್ರೀಡಾ ಕಾರ್ಯದಿಂದ ಗುರುತಿಸಿಕೊಳ್ಳಲು ಶಿಸ್ತು ಮತ್ತು ಕಠಿನ ಪರಿಶ್ರಮ ಎಂಬುದು ಬೇಕೇ ಬೇಕು. ಕ್ರೀಡೆಯಲ್ಲಿ ತನ್ಮಯರಾಗಿ ಪಾಲ್ಗೊಳ್ಳಲೂ ಕ್ರೀಡೆಯ ಕುರಿತು ಆಸಕ್ತಿ ಹೊಂದಿದಾತನಿಗೆ ಮಾತ್ರ ಸಾಧ್ಯ.

ಕ್ರೀಡೆಯ ವ್ಯಾಪ್ತಿಯೇ ಅಂತದ್ದು. ತರಬೇತುದಾರರು ತಮ್ಮ ಕ್ರೀಡಾ ಚಾಕಚಕ್ಯತೆಯಿಂದ ಮೈದಾನದಲ್ಲಿ  ತಮ್ಮ ಶಿಷ್ಯ ಕ್ರೀಡಾಪಟುಗಳನ್ನು ಪಳಗಿಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಅವರ ಕಾರ್ಯ ಶ್ಲಾಘನೀಯ. “ಎರಡೂ ಕೈ ಸೇರಿದರೆ ಚಪ್ಪಾಳೆ’ ಎಂಬ ನಾಣ್ಣುಡಿಯಂತೆ ಅಂಗಣದಲ್ಲಿ ಕ್ರೀಡಾಪಟು ಹಾಗೂ ಶಿಕ್ಷಕನ ಹೊಂದಾಣಿಕೆ ಹೊಸ ಕಾರ್ಯಕ್ಕೆ ಮುಂದಾಗಲು ಪ್ರೇರಣೆಯಾಗುತ್ತದೆ. ಗುರುಭಕ್ತಿ, ಆಟದ ಮೇಲಿನ ಶ್ರದ್ಧೆ , ಕ್ರೀಡೆಯ ಮೇಲಿನ ಒಲವು ಒಬ್ಬನಿಗೆ ಉತ್ತಮ ಕ್ರೀಡಾಪಟುವಾಗಲು ಅವಶ್ಯ. ಇದರಿಂದ ತಾನು ಬೆಳೆಯುವುದರೊಂದಿಗೆ ಇತರರನ್ನು ಬೆಳೆಸುವ  ಸುಗುಣವನ್ನು  ಆತ ಮೈಗೂಡಿಸಿಕೊಳ್ಳಲು ಶಕ್ತನಾಗಿರುತ್ತಾನೆ. ಜೊತೆಗೆ ಆತ ಸಮಾಜದಲ್ಲಿಯೂ ಅನೇಕ ಕ್ರೀಡಾ ಸಾಧಕರನ್ನು , ಕ್ರೀಡಾ ಪಟುಗಳನ್ನು ಕಣ್ಣೆದುರು ಚಿತ್ರಿಸಿಕೊಂಡು ಅವರ ಜೀವನದ ಶಿಸ್ತು-ಸಂಯಮ ಎಂಬ ಅಂಶಗಳ ಹಾದಿಯಲ್ಲಿ ಸಾಗುತ್ತಾ ಸರಳತೆ, ವಿನಯತೆ, ಏಕಾಗ್ರತೆ, ಕಠಿನ ಶ್ರಮ ಮೊದಲಾದ ಸದ್ವಿಚಾರಗಳನ್ನ ಅಳವಡಿಸಿಕೊಂಡರೆ ಕ್ರೀಡಾ ಕ್ಷೇತ್ರದಲ್ಲಿ ಶೋಭಿಸುವುದರಲ್ಲಿ ಎರಡು ಮಾತಿಲ್ಲ. ಚಂಚಲ ಮನೋಸ್ಥಿತಿಯವರಿಗೆ ಕ್ರೀಡೆ ಪರಿಪೂರ್ಣವಲ್ಲ. ನಿರಾಸಕ್ತಿಯಿಂದ ಗಳಿಸುವುದು ಬರಿಯ ಶೂನ್ಯ. 

ನಾವು ಹೆತ್ತವರ ಆಸೆಗೆ ಒತ್ತಾಸೆಯಾಗಿ ನಿಂತು, ಗುರುಗಳ ಮಾರ್ಗದರ್ಶನ ಪಡೆದು ನಮ್ಮ ಆಸಕ್ತಿಯ ರಂಗದಲ್ಲಿ ಸಾಗಿದರೆ ಜೀವನದ ಹಾದಿಯನ್ನು ಸುಗಮ, ಸಂಪದ್ಭರಿತವಾಗಿಸಲು ಖಂಡಿತಾ ಸಾಧ್ಯವಿದೆ. ಕ್ರೀಡಾರಂಗವನ್ನೇ ಆರಿಸಿಕೊಂಡು ಯಶಸ್ವಿಯಾದವರೂ ಅನೇಕರ ಮಂದಿ ನಮ್ಮ ಮುಂದಿದ್ದಾರೆ. ಕ್ರೀಡೆ ಅವರ ಜೀವನದ ದಿಕ್ಕನ್ನೇ ಬದಲಿಸಿದೆ.

ಗಣೇಶ ಕುಮಾರ್‌
ಪತ್ರಿಕೋದ್ಯಮ ವಿದ್ಯಾರ್ಥಿ, ವಿ. ವಿ. ಕಾಲೇಜು, ಮಂಗಳೂರು

ಟಾಪ್ ನ್ಯೂಸ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

K L RAhul

KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ

Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

tdy-19

Great Indian Hornbill:‌ ನಿಸರ್ಗದ ನಡುವೆ ಬಣ್ಣದ ಚಿತ್ತಾರ

ಇಂಗ್ಲಿಷ್‌ ಪದಕತೆ: ಅಧ್ಯಯನ

ಇಂಗ್ಲಿಷ್‌ ಪದಕತೆ: ಅಧ್ಯಯನ

bags

ಕರೋಲ್‌ಬಾಗ್‌ನ ಚೌಕಾಸಿ ಲೋಕ

ಬಾಲ್ಯವೇ ಮರಳಿ ಬಾ

ಬಾಲ್ಯವೇ ಮರಳಿ ಬಾ

Chukubuku-train

ಚುಕುಬುಕು ಟ್ರೇನ್‌ ಏರಿದಾಗ…

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

1-balaaaa

Raj Thackeray ಮಹಾ ಫಲಿತಾಂಶದ ನಂತರ ಪ್ರಮುಖ ಪಾತ್ರ ವಹಿಸಲಿದ್ದಾರೆ: ನಂದಗಾಂವ್ಕರ್

Siddu-Bagalakote

Ration Card: ಅನರ್ಹರಿಗೆ ಬಿಪಿಎಲ್‌ ಕಾರ್ಡ್‌ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ

ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…

142

Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.