ಕ್ಯಾಪ್ಟನ್‌ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ


Team Udayavani, Jan 26, 2018, 2:09 PM IST

26Jan-1.2.jpg

ಪುತ್ತೂರು: ಕಾರ್ಗಿಲ್‌ನ ಮೈಕೊರೆವ ಚಳಿ, ಸುರಿವ ಮಂಜು, ಕ್ಷಣ ಕ್ಷಣಕ್ಕೂ ಪ್ರತಿಕೂಲ ಹವಾಮಾನ. ಆದರೆ ಇವ್ಯಾವು ದನ್ನೂ ಲೆಕ್ಕಿಸದೆ ದೇಶ ಸೇವೆಯೊಂದೇ ಉದ್ದೇಶ ಎಂದು ಗಡಿ ಕಾಯುತ್ತಿರುವವರು ಸೈನಿಕ ಕ್ಯಾಪ್ಟನ್‌ ರಾಧೇಶ್‌. ರಾಧೇಶ್‌ ಮೂಲತಃ ಪುತ್ತೂರಿನವರು. ಸದ್ಯ ಕಾರ್ಗಿಲ್‌ನ ದ್ರಾಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2015ರಲ್ಲಿ ಭಾರತೀಯ ಭೂಸೇನೆಗೆ ಅಧಿಕಾರಿಯಾಗಿ ಸೇರಿದ ರಾಧೇಶ್‌ ದೇಶ ಸೇವೆ ಮಾಡಲು ಅವಕಾಶ ಸಿಕ್ಕಿದ ಬಗ್ಗೆ ಅತೀವ ಹೆಮ್ಮೆ ಪಡುತ್ತಾರೆ. 2016 ಎಪ್ರಿಲ್‌ನಿಂದ ಚೆನ್ನೈಯಲ್ಲಿ ಕಠಿನ ತರಬೇತಿ ಪೂರೈಸಿದ್ದ ಅವರು ಬಳಿಕ ವಿಶ್ವದ ಅತಿ ದುರ್ಗಮ ಯುದ್ಧ ಭೂಮಿ ಸಿಯಾಚಿನ್‌ ಗ್ಲೇಸಿಯರ್‌ನಲ್ಲಿ ಲೆಫ್ಟಿನೆಂಟ್‌ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆ ಬಳಿಕ ಅವರೀಗ ಕ್ಯಾಪ್ಟನ್‌ ಆಗಿ ಪದೋನ್ನತಿ ಹೊಂದಿ ಕಾರ್ಗಿಲ್‌ನ ದ್ರಾಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಅಣ್ಣನ ಹಾದಿಯಲ್ಲಿ ತಮ್ಮ !
ರಾಧೇಶ್‌ ಅವರ ತಂದೆ ರಾಧಾಕೃಷ್ಣ ಗೌಡ ಪುತ್ತೂರು ಎಪಿಎಂಸಿ ರಸ್ತೆಯ ನಿವಾಸಿ. ಇವರೂ ಸೇನೆಯಲ್ಲಿದ್ದರು ಬಳಿಕ ಎಸ್‌ಬಿಐ ಸೇರಿದ್ದು ಅಲ್ಲೂ ನಿವೃತ್ತರಾಗಿದ್ದಾರೆ. ತಾಯಿ ಉಷಾ ಉಪ್ಪಿನಂಗಡಿ ಸಹಕಾರಿ ಸಂಘದ ಉದ್ಯೋಗಿಯಾಗಿದ್ದಾರೆ. ರಾಧೇಶ್‌ ಅಣ್ಣ ರಂಜಿತ್‌ ನೌಕಾದಳದ ಲೆಫ್ಟಿನೆಂಟ್‌ ಅಧಿಕಾರಿಯಾಗಿದ್ದಾರೆ. ಅಣ್ಣ ಅಧಿಕಾರಿಯಾಗಿ ನೇಮಕವಾಗುತ್ತಿದ್ದಂತೆ ರಾಧೇಶ್‌ ಅವರಿಗೂ ಈ ಬಗ್ಗೆ ತೀವ್ರ ಒಲವು ಮೂಡಿದ್ದು, ಅಣ್ಣನಂತೆ ತಾನೂ ಆಗಬೇಕೆಂದು ಭೂಸೇನೆಗೆ ಸೇರ್ಪಡೆಯಾಗಲು ಶ್ರಮವಹಿಸಿದರು. 

ರಾಧೇಶ್‌ ಅವರು ಮಂಜಲ್ಪಡ್ಪು ಸುದಾನ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮಂಗಳೂರು ಸಂತ ಅಲೋಶಿಯಸ್‌ನಲ್ಲಿ ಪದವಿಪೂರ್ವ, ಪದವಿ ಶಿಕ್ಷಣ ಬಳಿಕ ನೆಹರೂನಗರ ವಿವೇಕಾನಂದ ಕಾಲೇಜಿನಲ್ಲಿ ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಪದವಿ, ಬೆಂಗಳೂರಿನ ಜೈನ್‌ ಕಾಲೇಜಿನಲ್ಲಿ ಏರೋಸ್ಪೇಸ್‌ ವಿಭಾಗದಲ್ಲಿ ಎಂ.ಟೆಕ್‌. ಪದವಿ ಪಡೆದಿದ್ದಾರೆ. ಬಳಿಕ ಭೂಸೇನೆ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದು, 2015ರಿಂದ ದೇಶಸೇವೆಗೆ ಸಮರ್ಪಿಸಿಕೊಂಡಿದ್ದಾರೆ. 

ಸೇನೆಗೆ ಸೇರಲು ಪ್ರೇರೇಪಿಸಿ
ರಾಧೇಶ್‌ ಅವರು ಹೇಳುವಂತೆ, ಸೇನೆಯ ಬಗ್ಗೆ ರಾಜ್ಯದ ಜನರಲ್ಲಿ ಹೆಚ್ಚಿನ ತಿಳಿವಳಿಕೆ ಇಲ್ಲ. ಬಂದೂಕು ಹಿಡಿದು ಗಡಿ ಕಾಯುವುದೇ ಸೇನೆಗೆ ಸೇರಿದವರು ಮಾಡುವ ಕೆಲಸ ಎಂದುಕೊಂಡಿರುತ್ತಾರೆ. ಉತ್ತಮ ಶಿಕ್ಷಣ ಪಡೆದವರೂ ಸೇನೆಗೆ ಸೇರಲು ಹಿಂಜರಿಯುತ್ತಾರೆ. ಆದರೆ ಗಡಿ ಕಾಯುವುದಷ್ಟೇ ಸೇನೆಯಲ್ಲಿನ ಕೆಲಸವಲ್ಲ. ಇಲ್ಲಿ ಅಧಿಕಾರಿ ಹುದ್ದೆಗಳಿವೆ. ಇಂತಹ ಹುದ್ದೆಗಳಿಗೆ ಉತ್ತಮ ಶಿಕ್ಷಣ ಪಡೆದವರೂ ಬರಲು ಯತ್ನಿಸಬೇಕು. ಕೆಲವರು ಸೇನೆಗೆ ಸೇರಬೇಕೆಂಬ ಆಸೆ ಹೊಂದಿರುತ್ತಾರೆ. ಇನ್ನು ಕೆಲವರಿಗೆ ಈ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಕ್ಕಿರುವುದಿಲ್ಲ. ದೇಶ ಸೇವೆಯ ಕೆಲಸಕ್ಕೆ, ಸೇನೆ ಸೇರಲು ಹೆತ್ತವರೂ ಪ್ರೇರೇಪಿಸಬೇಕು.

ಹೆಲಿಕಾಪ್ಟರ್‌ನಲ್ಲಿ ಆಹಾರ ತರ್ತಾರೆ!
ಸಿಯಾಚಿನ್‌ನಲ್ಲಿ ಸೇವೆ ಸಲ್ಲಿಸಿ ಅಪೂರ್ವ ಅನುಭವ ಪಡೆದಿರುವ ರಾಧೇಶ್‌ ಹೇಳುವಂತೆ, ಸಿಯಾಚಿನ್‌ಗೆ ಸೈನಿಕರು ಹಂತ ಹಂತವಾಗಿ ಸುಮಾರು 80 ಕಿ.ಮೀ. ನಡೆಯಬೇಕಾಗುತ್ತದೆ. ಈ ವೇಳೆ ನಿಗದಿಪಡಿಸಿದ ದಾರಿಯಲ್ಲೇ ಸಾಗಬೇಕು. ಕೆಲವೆಡೆ ಮೇಲ್ಮೆ„ ಹಿಮಗಡ್ಡೆಯಂತೆ ಕಂಡು ಬಂದರೂ ಕೆಲವೆಡೆ ಮೈನಸ್‌ 40 ಡಿ. ಸೆ.ನಿಂದ ಮೈನಸ್‌ 50ಡಿ. ಸೆ. ನಷ್ಟು ಉಷ್ಣತೆಯಲ್ಲಿ ಕರಗಿದ ಹಿಮವೂ ಇರುತ್ತದೆ. ಇದರಲ್ಲಿ ನಡೆದರೆ ಅಪಾಯ ಕಟ್ಟಿಟ್ಟದ್ದು. ಸಿಯಾಚಿನ್‌ ನ ನಿರ್ದಿಷ್ಟ ಪ್ರದೇಶ ತಲುಪಿದ ಮೇಲೆ ಹೆಲಿಕಾಪ್ಟರ್‌ ಮೂಲಕವೇ ಆಹಾರ ಪೂರೈಕೆ ಆಗುತ್ತಿರುತ್ತದೆ.

ದೇಶದ ಅಭಿವೃದ್ಧಿ ಆಗಬೇಕು
ಸೇನೆ, ಗಡಿ ಕಾಯುವುದೂ ಸಹಿತ ಯಾವುದೇ ಸಂದರ್ಭಕ್ಕೂ ಯಾವುದೇ ಕ್ಷಣದಲ್ಲೂ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುತ್ತದೆ. ಇಲ್ಲಿ ಮೇಲಧಿಕಾರಿಗಳ ಮಾತುಗಳನ್ನು ನಾವು ಶಿರಸಾವಹಿಸಿ ಪಾಲಿಸುತ್ತೇವೆ. ದೇಶದಲ್ಲಿ ನಮಗೆ ಬೇಕಾದಂತೆ ಬದುಕಲು ಅವಕಾಶವಿದೆ. ಸಂಬಳ ಹೆಚ್ಚು ಮಾಡಿಲ್ಲ ಎಂದು ಕೆಲವೆಡೆ ಪ್ರತಿಭಟನೆ ನಡೆದ ಬಗ್ಗೆಯೂ ಕೆಲವೊಮ್ಮೆ ವರದಿಯಾಗಿದೆ. ಆದರೆ ಇವೆಲ್ಲದಕ್ಕಿಂತ ದೇಶದ ಅಭಿವೃದ್ಧಿಯೇ ಮುಖ್ಯವಾಗಬೇಕು.

ದೇಶದಷ್ಟೇ ಮಕ್ಕಳೂ ನನಗೆ ಮುಖ್ಯ. ಓರ್ವ ನೌಕಾದಳದಲ್ಲಿ ಮತ್ತೋರ್ವ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಕಳೆದ 6 ತಿಂಗಳಿಂದ ರಾಧೇಶ್‌, ಕಾರ್ಗಿಲ್‌ನ ದ್ರಾಸ್‌ ನಲ್ಲಿದ್ದಾನೆ. ಈ ಜನವರಿಯಲ್ಲಿ ಬರಬೇಕಿತ್ತು. ಆದರೆ ಮಾರ್ಚ್‌ಗೆ ಮುಂದೂಡಲಾಗಿದೆ. ಸೇನೆಗೆ ಸೇರಿದ ಮಗನ ಬಗ್ಗೆ ಅತೀವ ಹೆಮ್ಮೆಯಿದೆ.
-ಉಷಾ,ಕ್ಯಾ| ರಾಧೇಶ್‌ ತಾಯಿ

– ಗಣೇಶ್‌ ಎನ್‌. ಕಲ್ಲರ್ಪೆ 
 

ಹೊಸ ಸರಣಿ : ಸೈನಿಕರಿಗೆ ಸಲಾಂ
ನಮ್ಮ ದೇಶವನ್ನು ಕಾಯುತ್ತಿರುವುದು ಅಪಾರ ಪ್ರಮಾಣದ ಸೈನಿಕರ ಸೇನೆ. ಇದರಲ್ಲಿ ದೇಶದ ವಿವಿಧ ಭಾಗಗಳಿಂದ ಬಂದವರಿದ್ದಾರೆ. ನಮ್ಮ ರಾಜ್ಯವೇಕೆ? ನಮ್ಮ ಕರಾವಳಿಯ ಭಾಗದ ಹಲವಾರು ಮಂದಿ ಸೈನಿಕರೂ ದೇಶ ಕಾಯುವ ಕೆಲಸದಲ್ಲಿ ನಿರತರಾಗಿದ್ದಾರೆ. ದೇಶ ಕಾಯುವುದೆಂದರೆ ವಾಸ್ತವವಾಗಿ ಕೆಲಸವಲ್ಲ; ತಪಸ್ಸು. ನಾವು ಯಾವುದನ್ನಾದರೂ ಕೆಲಸವೆಂದು ಕರೆಯಬಹುದು. ಆದರೆ ಸೇನೆಯ ಕಾರ್ಯವನ್ನಲ್ಲ. ಗಡಿ ಸಹಿತ ಎಲ್ಲೆಡೆಯೂ ದೇಶದ ಸ್ವಾಭಿಮಾನಕ್ಕೆ ಮತ್ತು ಸುರಕ್ಷತೆಗೆ ಒಂದು ಗುಲಗಂಜಿಯಷ್ಟೂ ಅಪಾಯ ಎದುರಾಗದಂತೆ ಸದಾ ಕಣ್ಣಲ್ಲಿ ಕಣ್ಣಿಟ್ಟು ಕಾಯುವುದೆಂದರೆ ಖಂಡಿತಾ ಸಣ್ಣದಲ್ಲ. ಒಂದು ಲೆಕ್ಕದಲ್ಲಿ ನಾವೆಲ್ಲ ಸೇನೆಯ ಭಾಗವೇ. ಕೆಲವೊಮ್ಮೆ ಯುದ್ಧದ ಸನ್ನಿವೇಶದಲ್ಲಿ ಇಡೀ ದೇಶಕ್ಕೇ ದೇಶವೇ ಸೇನೆಯಾಗಿ ಮಾರ್ಪಡುತ್ತದೆ. ನಾಗರಿಕರೂ ಸೇನೆಗೆ ಸೇರಿ ಸೇವೆ ನಿರತರಾಗುವುದುಂಟು. ದೇಶ ರಕ್ಷಣೆಯ ಕಾಯಕದಲ್ಲಿ ಕಾಯವೂ ಬಳಕೆಗೆ ಬಂದರೆ ಅದಕ್ಕಿಂತ ದೊಡ್ಡ ಸೌಭಾಗ್ಯ ಇನ್ಯಾವುದು? ಎಂಬ ಅಭಿಪ್ರಾಯ ಸದಾ ನಾಗರಿಕರದ್ದು. ಹಾಗಾಗಿ ಶತ್ರುವನ್ನು ಸದೆಬಡಿಯುವಲ್ಲಿ, ದೇಶವನ್ನು ಅಪಾಯದಿಂದ ರಕ್ಷಿಸುವಲ್ಲಿ ಪ್ರತಿಯೊಬ್ಬರೂ ನಿಯೋಜಿತ ಸೈನಿಕರೇ.

ಹೊಸ ಸರಣಿ
ಇಂದು ಗಣರಾಜ್ಯೋತ್ಸವ. ಪ್ರತಿ ವರ್ಷ ದಿಲ್ಲಿಯಲ್ಲಿ ನಡೆಯುವ ಪೆರೇಡ್‌ನಲ್ಲಿ ನಮ್ಮ ಸೇನೆಯ ಶಕ್ತಿ ಪ್ರದರ್ಶನ ನಡೆಯುತ್ತದೆ. ಜನರಿಗೆ ನಮ್ಮ ಸೇನೆಯ ಸಾಹಸ ಹಾಗೂ ಬಲದ ಬಗ್ಗೆ ತಿಳಿಸಿಕೊಡಲಾಗುತ್ತದೆ. ನಿಜಕ್ಕೂ ಅದು ರೋಚಕ ಕ್ಷಣಗಳು. ಈ ಹಿನ್ನೆಲೆಯಲ್ಲೇ ಸುದಿನವು ತನ್ನ ಹೊಸ ಸರಣಿ ‘ಸೈನಿಕರಿಗೆ ಸಲಾಂ’ ಆರಂಭಿಸುತ್ತಿದೆ. ಈ ಮೂಲಕ ನಮ್ಮ ಸೈನಿಕರನ್ನು, ಸೇನೆಯಲ್ಲಿನ ಹಿರಿಮೆಯನ್ನು ಹಾಗೂ ತ್ಯಾಗದ ಮಹತ್ವವನ್ನು ಹೇಳುವ ಕೆಲಸ ಮಾಡಲಿದೆ.

ಈ ಸರಣಿಯ ಮೂಲ ಉದ್ದೇಶ ಯುವಜನರಲ್ಲಿ ಮತ್ತು ನಾಗರಿಕರಲ್ಲಿ ಸೇನೆ ಕುರಿತು ಅರಿವು ಹಾಗೂ ಸದಭಿಪ್ರಾಯ ಮೂಡಿಸುವುದು. ಅದರಲ್ಲೂ ಯುವಜನರಿಗೆ ಸ್ಫೂರ್ತಿ ತುಂಬುವುದು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಒಲವೂ ಸೇನೆಯ ಕಡೆಗೆ ಹೆಚ್ಚುತ್ತಿದೆ. ಯುವಜನರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದ ಕಾರಣ, ನಮ್ಮ ಊರಿನ ಸೈನಿಕರನ್ನು ಎಲ್ಲರಿಗೂ ಪರಿಚಯಿಸುವುದು ಈ ಸರಣಿಯ ಧ್ಯೇಯ.

ನಿಮ್ಮ ಊರಿನಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ ನಮ್ಮ ವಾಟ್ಸಪ್‌ಗೆ ತಿಳಿಸಬಹುದು. ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ವಾಟ್ಸಪ್‌ ಸಂಖ್ಯೆ 7618774529

ಟಾಪ್ ನ್ಯೂಸ್

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

yathanal-jarakiholi

Waqf Notice: ಬಸನಗೌಡ ಪಾಟೀಲ್‌ ಯತ್ನಾಳ್‌ ತಂಡದಿಂದ 1 ತಿಂಗಳು ಜನ ಜಾಗೃತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

Suside-Boy

Putturu: ನೇಣು ಬಿಗಿದು ಆತ್ಮಹತ್ಯೆ

Accident-logo

Bantwala: ಶಾಲಾ ವಾಹನ ಢಿಕ್ಕಿ; ಸ್ಕೂಟರ್‌ ಸವಾರ ಸಾವು

Suilla

Punjalkatte: ಬೈಕ್‌ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.