ಜಯಕರ್ನಾಟಕ ಸಂಘಟನೆ ಬೆಂಬಲ
Team Udayavani, Jan 26, 2018, 4:03 PM IST
ದೇವರಹಿಪ್ಪರಗಿ: ಮಹದಾಯಿ ಯೋಜನೆಗಾಗಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ರಾಜ್ಯವ್ಯಾಪಿ ಬಂದ್ಗೆ ಜಯಕರ್ನಾಟಕ ಸಂಘಟನೆ ಬೆಂಬಲ ನೀಡಿ ಪ್ರತಿಭಟನೆ ನಡೆಸಿತು.
ದೇವರ ಹಿಪ್ಪರಗಿ ಸಮೀಪದ ಕೋರವಾರ ಗ್ರಾಮದ ಗಜಾನನ ವೃತ್ತದಲ್ಲಿ ಒಂದು ಘಟೆಗಳ ಕಾಲ ಪ್ರತಿಭಟನೆ ನಡೆಸಿ ಟೈರ್ಗೆ ಬೆಂಕಿ ಹಚ್ಚಿ ಸರ್ಕಾರಗಳ ವಿರುದ್ಧ ಘೋಷಣೆ ಕೂಗಲಾಯಿತು. ಜಯಕರ್ನಾಟಕ ಸಂಘಟನೆ ದೇವರಹಿಪ್ಪರಗಿ ತಾಲೂಕು ಅಧ್ಯಕ್ಷ ಚನ್ನಪ್ಪಗೌಢ ಬಿರಾದಾರ ಹಾಗೂ ಪದಾಧಿಕಾರಿ ಅಣ್ಣಪ್ಪಗೌಡ ಬೋರಾವತ ಮಾತನಾಡಿ, ಮಹದಾಯಿ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ವಹಿಸಿವೆ ಎಂದು ಆರೋಪಿಸಿದರು.
ಜಯಕರ್ನಾಟಕ ಸಂಘಟನೆ ಕೋರವಾರ ವಲಯ ಘಟಕದ ಅಧ್ಯಕ್ಷ ಸುಭಾಷ ಕುಳೆಕುಮಟಗಿ, ಸಾಗರ ಘಾಟಗೆ, ಸಂಗಯ್ಯ ಮೇಲಿನಮಠ, ಮಹೇಶ ಬಿರಾದಾರ, ಭೀಮರಾಯ ಬಿಂಗೊಳ್ಳಿ, ನಿಂಗನಗೌಡ ಬಿರಾದಾರ, ಕುಮಾರ ಮುಳವಾಡ, ಸಂತೋಷ ರೋಡಗಿ, ವೀರೇಶ ಬಿರಾದಾರ, ರಮೇಶ ಹುಣಸಗಿ, ಅಪ್ಪು ಡಾಂಗಿ, ಮಡು ಕುಳೇಕುಮಟಗಿ ಸೇರಿದಂತೆ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು, ಕಾರ್ಯರ್ತರು, ಸಾರ್ವಜನಿಕರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.