ಸಂಭ್ರಮದ ಗಣರಾಜ್ಯೋತ್ಸವ


Team Udayavani, Jan 27, 2018, 9:22 AM IST

27-Jan-1.jpg

ಮಹಾನಗರ: ದ.ಕ. ಜಿಲ್ಲಾಡಳಿತ ವತಿಯಿಂದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಮಂಗಳೂರು ನೆಹರೂ ಮೈದಾನಿನಲ್ಲಿ ಶುಕ್ರವಾರ ಜರಗಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ರಾಷ್ಟ್ರಧ್ವಜಾರೋಹಣಗೈದು ಗೌರವರಕ್ಷೆ ಸ್ವೀಕರಿಸಿದರು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್‌, ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ, ಶಾಸಕರಾದ ಜೆ.ಆರ್‌. ಲೋಬೋ, ಬಿ.ಎ. ಮೊದಿನ್‌ ಬಾವಾ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮೇಯರ್‌ ಕವಿತಾ ಸನಿಲ್‌, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್‌ ಮೋನು, ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌, ಮಂಗಳೂರು ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌, ಜಿ. ಪಂ. ಸಿಇಒ ಡಾ| ಎಂ.ಆರ್‌. ರವಿ, ಅಪರ ಜಿಲ್ಲಾಧಿಕಾರಿ ಕುಮಾರ್‌, ಮೂಡಾ ಅಧ್ಯಕ್ಷ ಸುರೇಶ್‌ ಬಲ್ಲಾಳ್‌, ಗೇರು ನಿಗಮದ ಅಧ್ಯಕ್ಷ ಬಿ.ಎಚ್‌. ಖಾದರ್‌, ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತಿತರರಿದ್ದರು.

ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ
ಅತ್ಯುತ್ತಮ ಸೇವೆ ಸಲ್ಲಿಸಿದ ಸರಕಾರಿ ನೌಕರರಿಗೆ ನೀಡುವ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿಗಳನ್ನು ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಸಚಿವ ಯು.ಟಿ. ಖಾದರ್‌, ಮೇಯರ್‌ ಕವಿತಾ ಸನಿಲ್‌ ಪ್ರದಾನ ಮಾಡಿದರು.

ಟಿ.ಎನ್‌. ರೇವತಿ, (ಲೆಕ್ಕಾಧಿಕಾರಿ, ದ.ಕ. ಜಿ.ಪಂ., ಮಂಗಳೂರು), ಗೋಕುಲ್‌ ದಾಸ್‌ ನಾಯಕ್‌(ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು), ಡಾ| ಗುರುಮೂರ್ತಿ ಎ. (ಸಹಾಯಕ ನಿರ್ದೇಶಕರು, ಉಪನಿರ್ದೇಶಕರ ಕಚೇರಿ, ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಮಂಗಳೂರು) ಎನ್‌. ಶಿವಪ್ರಕಾಶ್‌ (ಕ್ಷೇತ್ರ ಶಿಕ್ಷಣಾಧಿಕಾರಿ, ಬಂಟ್ವಾಳ ) ಬಿ. ಶೇಶಪ್ಪ ಬಂಬಿಲ (ದ್ವಿತೀಯ ದರ್ಜೆ ಸಹಾಯಕರು, ವೆನ್ಲಾಕ್‌ ಜಿಲ್ಲಾ ಆಸ್ಪತ್ರೆ, ಮಂಗಳೂರ), ಲಕ್ಷ್ಮಣ ಪೂಜಾರಿ (ಕಿರಿಯ ಅಭಿಯಂತರರು, ಮಹಾನಗರಪಾಲಿಕೆ ಅವರು ಪ್ರಶಸ್ತಿ ಸ್ವೀಕರಿಸಿದರು.

ಜೀವರಕ್ಷಕ ಪ್ರಶಸ್ತಿ
ಮುಖ್ಯಮಂತ್ರಿ ಹರೀಶ್‌ ಸಾಂತ್ವಾನ ಯೋಜನೆಯಲ್ಲಿ ಅಪಘಾತದ ಸಂದರ್ಭ ಜೀವರಕ್ಷಣೆ ಮಾಡಿದವರಿಗೆ ನೀಡುವ ಪ್ರಶಸ್ತಿಯನ್ನು ಬೆಳ್ತಂಗಡಿ ಲಾಯಿಲದ ಅಬ್ದುಲ್‌ ಹಮೀದ್‌ ಹಾಗೂ ನಂದಾವರದ ಪ್ರಕಾಶ್‌ ಮರಾಠೆ ಅವರಿಗೆ ಪ್ರದಾನ ಮಾಡಲಾಯಿತು.

ನವಕರ್ನಾಟಕ ವಿಷನ್‌ ಸ್ಪರ್ಧೆ
ನವಕರ್ನಾಟಕ ವಿಷನ್‌ 2018 ಅಂಗವಾಗಿ ಸರಕಾರದದ ವತಿಯಿಂದ ಆಯೋಜಿಸಿದ್ದ ಇಂಗ್ಲೀಷ್‌ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮೊಂತಿ ಮೇರಿ ಡಿ’ಸೋಜಾ (ಮೂಡಬಿದಿರೆ ಮಹಾವೀರ ಕಾಲೇಜು)ಹಾಗೂ ಕನ್ನಡ ಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ನವೀನ್‌ ಕುಮಾರ್‌ (ಮಂಗಳೂರು ರಥಬೀದಿ ಸರಕಾರಿ ಪ್ರಥಮದರ್ಜೆ ಕಾಲೇಜು) ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಪೂಜಾಶ್ರೀ (ಸುಳ್ಯ ಸೈಂಟ್‌ ಜೋಸೆಫ್‌ ಅ.ಮಾ. ಶಾಲೆ) ಹಾಗೂ ಅಮಿತ್‌ ಎಂ. (ಕೆನರಾ ಹಿ.ಪ್ರಾ. ಶಾಲೆ ) ಅವರಿಗೆ ಪ್ರದಾನ ಮಾಡಲಾಯಿತು.

ಆಕರ್ಷಕ ಕಾರ್ಯಕ್ರಮ
ನಗರದ ಕೇರಳ ಸಮಾಜಂ ಆ.ಮಾ. ಶಾಲೆ ಮಂಗಳೂರು, ಸೈಂಟ್‌ ಮೇರಿಸ್‌ ಆಂಗ್ಲ.ಕನ್ನಡ ಪ್ರೌಢ ಶಾಲೆ ಫಳ್ನೀರ್‌, ಇನ್ಫೆಮ್ ಟ್‌ ಜೀಸಸ್‌ ಜಾಯ್‌ಲ್ಯಾಂಡ್‌ ಶಾಲೆ ಬೋಳಾರ, ಕಾಸ್ಸಿಯಾ ಪ್ರೌಡಶಾಲೆ ಜೆಪ್ಪು, ಸೈಂಟ್‌ ರೀಟಾ ಪ್ರೌಢಶಾಲೆ ಜೆಪ್ಪು, ಸೈಂಟ್‌ ಜೆರೋಸಾ ಪ್ರೌಢ ಶಾಲೆ ಹಾಗೂ ಸೈಂಟ್‌ ಜೆರೋಸಾ ಆ.ಮಾ. ಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಡೊಂಗರಕೇರಿ ಕೆನರಾ ಬಾಲಕಿಯರ ಪ್ರೌಢಶಾಲೆ ವಿದ್ಯಾರ್ಥಿಗಳು ನಾಡಗೀತೆ, ದೇಶ ಭಕ್ತಿಗೀತೆ ಹಾಡಿದರು.

ಆಕರ್ಷಕ ಪಥಸಂಚಲನ 
ಒಟ್ಟು 21 ತಂಡಗಳಿಂದ ಆಕರ್ಷಕ ಪಥಸಂಚಲನ ಜರಗಿತು. ಕೆಎಸ್‌ ಆರ್‌ಪಿ, ಸಿಎಆರ್‌, ಸಿವಿಲ್‌ ಪೊಲೀಸ್‌, ಮಹಿಳಾ ಪೊಲೀಸ್‌, ಗೃಹರಕ್ಷಕ ದಳ, ಅಗ್ನಿಶಾಮಕ ಮತ್ತು ತುರ್ತು ಸೇವೆ, ಅರಣ್ಯ ರಕ್ಷಣ ಪಡೆ, ಎನ್‌ಸಿಸಿ ಆರ್ಮಿ, ನೇವಲ್‌, ಏರ್‌ ವಿಂಗ್‌ ಹಿರಿಯ ಮತ್ತು ಕಿರಿಯರ ತಂಡ, ಸ್ಕೌಟ್ಸ್‌ ಮತ್ತು ಗೈಡ್ಸ್‌ ತಂಡ ಭಾರತ ಸೇವದಲ, ರೆಂಜರ್‌ ಮತ್ತು ರೋವರ್ , ರಸ್ತೆ ಸುರಕ್ಷತಾ ದಳ, ಬಲ್ಮಠ, ಕಾವೂರು ಪ್ರಥಮ ದರ್ಜೆ ಕಾಲೇಜು ತಂಡಗಳು ಪಥಸಂಚಲನದಲ್ಲಿ ಪಾಲ್ಗೊಂಡಿದ್ದವು. ಸಿಎಆರ್‌ ಆರ್‌ಪಿಐ ವಿಟ್ಠಲ ಶಿಂಧೆ ಅವರು ಪಥಸಂಚಲನದ ನೇತೃತ್ವ ವಹಿಸಿದ್ದರು. ಪಥಸಂಚಲನದಲ್ಲಿ ವಿದ್ಯಾರ್ಥಿಗಳ ತಂಡಕ್ಕೆ ನೀಡುವ ಪ್ರಶಸ್ತಿಯಲ್ಲಿ ಎನ್‌ಸಿಸಿ ನೇವಲ್‌ ವಿಂಗ್‌ ಪ್ರಥಮ ಹಾಗೂ ರಸ್ತೆ ಸುರಕ್ಷತಾ ದಳ ದ್ವಿತೀಯ ಪುರಸ್ಕಾರ ಪಡೆದುಕೊಂಡಿತು. 

ಟಾಪ್ ನ್ಯೂಸ್

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ICC: ಬಿಸಿಸಿಐನ ಆಕ್ಷೇಪದ ನಂತರ ಚಾಂಪಿಯನ್ಸ್ ಟ್ರೋಫಿ ಪ್ರವಾಸದ ಸ್ಥಳ ಪರಿಷ್ಕರಣೆ

ಖುಷಿ ಕೊಡಬಲ್ಲ ಕೆಲವು ವಿಧಾನ ತಿಳಿಸಿ…ಏನೂ ಇಲ್ಲದೆಯೂ ಸಂತೋಷವಾಗಿರಿ!  

renukaacharya

BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ

Team India: ದ.ಆಫ್ರಿಕಾ ವಿರುದ್ದದ ಗೆಲುವಿನೊಂದಿಗೆ ಪಾಕ್‌ ದಾಖಲೆ ಮುರಿದ ಟೀಂ ಇಂಡಿಯಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

Digi-Arrest

Mangaluru: ಡಿಜಿಟಲ್‌ ಅರೆಸ್ಟ್‌, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ

1-qweqwe

ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು

6

Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ec-aa

Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Gundlupet-Arrest

Gundlupet: ಜಿಂಕೆ ಮಾಂಸ ಸಾಗಾಣೆ: ಐವರ ಬಂಧಿಸಿದ ಅರಣ್ಯಾಧಿಕಾರಿಗಳು

amit Shah (2)

Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.