ಏರ್‌ಪೋರ್ಟ್ ತಪಾಸಣೆಗೆ ಪ್ರಯಾಣಿಕರ ಬಳಕೆ ಸುದ್ದಿ ವೈರಲ್
Team Udayavani, Jan 27, 2018, 9:38 AM IST
ಮಂಗಳೂರು: ಮಂಗ ಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ(ಸಿಐಎಸ್‌ಎಫ್) ಬಿಗು ತಪಾಸಣೆಯನ್ನು ಪರೀಕ್ಷಿಸಲು ಪ್ರಯಾಣಿಕರನ್ನು ಬಳಸುತ್ತಿರುವ ಬಗ್ಗೆ ಆಕ್ಷೇಪಾರ್ಹ ಬರಹವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಭದ್ರತಾಪಡೆಗಳು ಕಟ್ಟುನಿಟ್ಟಿನ ತಪಾ ಸಣೆ ನಡೆಸುತ್ತಿವೆಯೇ ಎಂಬು ದನ್ನು ಪರೀಕ್ಷಿಸಲ ಅಧಿಕಾರಿ ಗಳು ವಿಮಾನದಲ್ಲಿ ಬಂದಿಳಿಯುವ ಪ್ರಯಾಣಿಕರನ್ನು ಬಳಸು ತ್ತಿದ್ದಾರೆ. ತಪಾಸಣೆ ಮಾಡು ವುದು ತಪ್ಪಲ್ಲವಾದರೂ, ಅದಕ್ಕಾಗಿ ಪ್ರಯಾಣಿಕರನ್ನು ಪ್ರಯೋಗಶಾಲೆ ಯಾಗಿಸುವುದಕ್ಕೆ ಜಾಲತಾಣಗಳಲ್ಲಿ ಆಕ್ಷೇಪ ವ್ಯಕ್ತವಾಗಿದೆ.
ಮಹಿಳೆಯೊಬ್ಬರು ಇದನ್ನು ಪೋಸ್ಟ್ ಮಾಡಿದ್ದು, ಜಾಲತಾಣಗಳಲ್ಲಿ ಕಳೆದ ಮೂರ್‍ನಾಲ್ಕು ಹರಿದಾಡುತ್ತಿದೆ. ಈ ಬರಹದಲ್ಲಿ, “ಬೇರೆ ಗುಂಪಿನಿಂದ ಬಂದ ಮಾಹಿತಿ ಇದಾಗಿದೆ’ ಎಂದು ಉಲ್ಲೇಖೀಸಲಾಗಿದೆ. ಮಂಗಳೂರು ವಿಮಾನ ನಿಲ್ದಾಣದಲ್ಲಿ ನನ್ನ ಪುತ್ರಿಗೆ ಭದ್ರತಾ ಸಿಬಂದಿಯಿಂದ ಗಂಭೀರ ವಾದ ಅನುಭವ ಆಗಿದೆ. ಆಕೆ ನಿಲ್ದಾ ಣದಿಂದ ಹೊರಬರುತ್ತಿರ ಬೇಕಾ ದರೆ ಸಿಐಎಸ್‌ಎಫ್ ಸಿಬಂದಿ ಎಂದು ಪರಿಚಯಿಸಿಕೊಂಡು ನಾಗರಿಕ ಉಡುಪಿನಲ್ಲಿದ್ದ ಇಬ್ಬರು, ಎರಡು ಪೊಟ್ಟಣವನ್ನು ನೀಡಿದ್ದರು. ನಮ್ಮ ಭದ್ರತಾ ಸಿಬಂದಿ ಪ್ರವೇಶ ದ್ವಾರದಲ್ಲಿ ಸರಿಯಾಗಿ ತಪಾಸಣೆ ನಡೆಸುತ್ತಾರೆಯೇ ಎಂಬುದನ್ನು ಪರೀಕ್ಷಿಸಲು ಈ ಪೊಟ್ಟಣವನ್ನು ನೀಡಲಾಗಿದೆ ಎಂದಿದ್ದರು. ಆದರೆ ನನ್ನ ಪುತ್ರಿ ಅದನ್ನು ಸ್ವೀಕರಿಸಿಲ್ಲ. ಸಿಬಂದಿ ತಮ್ಮ ಗುರುತಿನ ಚೀಟಿಯನ್ನು ತೋರಿಸಿದ್ದಾರೆ ಎಂದು ಬರೆಯಲಾಗಿದೆ.
ಬಳಿಕ ನಾನು ಅಹಮದಾಬಾದ್‌ನಲ್ಲಿರುವ ಒಎನ್‌ಜಿಸಿ ಕಮಾಂಡೆಂಟ್‌ಗೆ ಕರೆ ಮಾಡಿ ತಿಳಿಸಿದಾಗ, ಪ್ರಯಾ ಣಿಕರನ್ನು ಬಳಸಿ ಈ ರೀತಿ ಪರೀಕ್ಷಿಸುವ ಕ್ರಮ ಇಲ್ಲ ಎಂದು ಅವರು ಹೇಳಿದ್ದಾರೆ. ಇಂತಹ ನಕಲಿಗಳ ಬಗ್ಗೆ ಎಚ್ಚರದಿಂದ ಇರುವಂತೆ ಜಾಲ ತಾಣದಲ್ಲಿ ತಿಳಿಸಲಾಗಿದೆ. ಆದರೆ ಯಾವ ಪ್ರಯಾಣಿಕರು, ಯಾವ ದಿನ, ಎಲ್ಲಿಂದ ಬರುತ್ತಿದ್ದಾಗ ಈ ರೀತಿ ಆಗಿದೆ ಎಂಬ ಬಗ್ಗೆ ವಿವರವಿಲ್ಲ.
ಆದರೆ ಇಂತಹ ತಪಾಸಣೆ, ಪರೀಕ್ಷೆಗಳು ವಿಮಾನ ನಿಲ್ದಾಣದಲ್ಲಿ ಸಾಮಾನ್ಯ. ಭದ್ರತಾ ಅಲರ್ಟ್‌ಗಾಗಿ ಈ ರೀತಿ ನಡೆಸಲಾಗುತ್ತಿದೆ ಎಂದು ಸಿಐಎಸ್‌ಎಫ್ ಮೂಲಗಳು ತಿಳಿಸಿವೆ.
ಪ್ರತಿಕ್ರಿಯೆ ಇಲ್ಲ: ರಾವ್
ಈ ಬಗ್ಗೆ ಉದಯವಾಣಿಗೆ ಪ್ರತಿಕ್ರಿಯಿಸಿದ ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ.ರಾವ್, ಸಾಮಾಜಿಕ ಜಾಲ ತಾಣದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ ಎನ್ನಲಾಗಿರುವ ತಪಾಸಣೆ ವಿಚಾರಕ್ಕೆ ಸಂಬಂಧಿಸಿ ಏನೂ ಹೇಳುವುದಿಲ್ಲ. ನಿಲ್ದಾಣದ ಭದ್ರತೆ ಜವಾಬ್ದಾರಿಯನ್ನು ಸಿಐಎಸ್‌ಎಫ್‌ಗೆ ವಹಿಸಲಾಗಿದ್ದು, ಅವರೇ ಪ್ರತಿಕ್ರಿಯಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.