ಕೈತುಂಬ ಸಂಬಳದ ಕೆಲಸಕ್ಕೇ ಗುಡ್‌ಬೈ!


Team Udayavani, Jan 27, 2018, 9:58 AM IST

27-Jan-2.jpg

ಪುತ್ತೂರು: ಕೈತುಂಬ ಸಂಬಳದ ಕೆಲಸ, ಬೇಕಾದ ಸೌಕರ್ಯ. ಆದರೆ ಅವರು ಅದರಲ್ಲಿ ಒಂಚೂರೂ ತೃಪ್ತಿ ಕಾಣಲಿಲ್ಲ. ಕಾರಣ ದೇಶಸೇವೆಯ ತೀವ್ರ ತುಡಿತ. ಇದೇ ಕಾರಣಕ್ಕೆ ಅವರು ಕೆಲಸಕ್ಕೇ ಗುಡ್‌ಬೈ ಹೇಳಿದರು, ಭಾರತೀಯ ವಾಯು ಪಡೆ ಸೇರಿದರು. ಇದು ಪುತ್ತೂರಿನ ಕೂರ್ನಡ್ಕ ನಿವಾಸಿ ಫ್ಲೈಟ್‌ ಲೆಫ್ಟಿನೆಂಟ್‌ ಶರತ್‌ ಅವರ ಯಶೋಗಾಥೆ.

ಸಾಧನೆಯ ಮೆಟ್ಟಿಲು..
ವಿವೇಕಾನಂದ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಿಕ್ಷಣ ಬಳಿಕ ಮೈಸೂರಿನ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ನಲ್ಲಿ ಶರತ್‌ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಸೇನೆಗೆ ಸೇರುವ ಉದ್ದೇಶದಿಂದ ಪಿಯುಸಿ ಯಲ್ಲಿದ್ದಾಗಲೇ ಪರೀಕ್ಷೆ ಎದುರಿಸಿದ್ದರು, ಅದು ಫ‌ಲಕಾರಿಯಾಗಲಿಲ್ಲ. ಆದರೆ ಛಲ ಬಿಡಲಿಲ್ಲ!

ವಿದ್ಯಾಭ್ಯಾಸ ಬಳಿಕ ಎಲ್‌ಆ್ಯಂಡ್‌ಟಿ ಕಂಪೆನಿ ಸೇರಿದರೂ ಸೇನೆಗೆ ಸೇರುವ ತುಡಿತ ಹಾಗೇ ಇತ್ತು. ಆದ್ದರಿಂದ ತರಬೇತಿ ಕೇಂದ್ರದಲ್ಲಿ ಮಾರ್ಗದರ್ಶನ ಪಡೆದು 2013ರಲ್ಲಿ ಪರೀಕ್ಷೆ ಎದುರಿಸಿ ಯಶಸ್ವಿಯಾದರು. 2014ರಲ್ಲಿ ವಾಯುಪಡೆಗೆ ಫ್ಲೈಯಿಂಗ್‌ ಆಫೀಸರ್‌ ಆದರು. ದುಂಡಿಗಲ್‌ನ ಏರ್‌ ಫೋರ್ಸ್‌ ಅಕಾಡೆಮಿಯಲ್ಲಿ 6 ತಿಂಗಳು ತರಬೇತಿ ಪಡೆದು, ಬಳಿಕ ಜಾಲಹಳ್ಳಿಯಲ್ಲಿ 1 ವರ್ಷದ ತರಬೇತಿ ಮುಗಿಸಿದರು. ಇದೇ ಸಂದರ್ಭ ಏರ್‌ಫೋರ್ಸ್‌ ಟೆಕ್ನಾಲಜಿಕಲ್‌ ಕಾಲೇಜಿನಿಂದ ಡಿಪ್ಲೋಮಾ ಇನ್‌ ಏರೋನಾಟಿಕ್‌ ಎಂಜಿನಿಯರಿಂಗ್‌ ಸಂಪಾದಿಸಿದರು. ಅನಂತರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಸೇವೆ ಸಲ್ಲಿಸಿ, 2017ರಲ್ಲಿ ಫ್ಲೈಟ್‌ ಲೆಫಿನೆಂಟ್‌ಗೆ ಪದೋನ್ನತಿಯಾದರು.

ಹೆತ್ತವರೇ ಪ್ರೇರಣೆ
ಸುಳ್ಯ ತಾ| ಕೂತ್ಕುಂಜ ಗ್ರಾಮದ ಬೇರ್ಯ ಪಟೇಲ ಮನೆತನದ ಶರತ್‌ ಅವರ ತಂದೆ ಮಾಧವ ಬಿ.ಕೆ. ನಿವೃತ್ತ ಸೈನಿಕರು, ನಿವೃತ್ತ ಯುವಜನ ಸೇವೆ ಹಾಗೂ ಕ್ರೀಡಾಧಿಕಾರಿ. ಸೇನೆಯ ರಾಷ್ಟ್ರೀಯ ಮಟ್ಟದ ಕಬಡ್ಡಿ ತರಬೇತುದಾರರು. ತಾಯಿ ಲೀಲಾವತಿ. ಅಕ್ಕ ಬಿ.ಎಂ. ಶ್ರುತಿ, ಬಿಇ, ಎಂಬಿಎ ಪದವೀಧರೆ. ಕ್ಯಾಪ್‌ಜೆಮಿನಿ ಕಂಪೆನಿಯಲ್ಲಿ ಅಸಿಸ್ಟೆಂಟ್‌ ಮ್ಯಾನೇಜರ್‌ ಆಗಿದ್ದಾರೆ. ಚಿಕ್ಕಂದಿನಲ್ಲೇ ಕ್ರೀಡೆ ಬಗ್ಗೆ ಒಲವು ಹೊಂದಿದ್ದ ಶರತ್‌ಗೆ ಸೇನೆಯಲ್ಲಿ ಅಗತ್ಯವಾದ ಫಿಟ್ನೆಸ್‌, ಸಂದರ್ಶನ ಎದುರಿಸುವ ಮಾನಸಿಕತೆ, ದೇಶಭಕ್ತಿಯ ಪರಿಸರ ಮನೆಯಿಂದಲೇ ದೊರಕಿತು.

ಸಾರ್ಥಕ ಕೆಲಸ
ರಾತ್ರಿ ಹಗಲಿನ ಪರಿವೆ ಇಲ್ಲದೇ, ದೇಶಕ್ಕಾಗಿ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದ್ದೇವೆ. ಯಾರ ಕಣ್ಣಿಗೂ ಕಾಣದಂತೆ ನಮ್ಮ ಕೆಲಸ ಇದ್ದರೂ, ಕೆಲಸದ ಬಗ್ಗೆ ಸಾರ್ಥಕಭಾವ ನಮಗಿದೆ. ಇಲ್ಲಿನ ಶಿಸ್ತು, ಅಚ್ಚುಕಟ್ಟುತನ ನಮ್ಮನ್ನು ಎಚ್ಚರಿಕೆಯಿಂದ ಇರಿಸುತ್ತವೆ. ತಂದೆಯವರ ಕೆಲಸದಲ್ಲಿದ್ದ ಅಚ್ಚುಕಟ್ಟುತನ ನನಗೆ ಸ್ಫೂರ್ತಿ ನೀಡಿದ್ದು, ಸೇನೆ ಸೇರಲು ಕಾರಣವಾಯಿತು. ವಾಯುಪಡೆಯ ಆಧುನಿಕ ತಂತ್ರಜ್ಞಾನ ಗಳು ನನ್ನನ್ನು ಬಹುವಾಗಿ ಆಕರ್ಷಿಸಿದ್ದರಿಂದ ಅದನ್ನೇ ಆಯ್ದುಕೊಂಡೆ. ಇಲ್ಲಿ ವೃತ್ತಿಪರರಂತೆ ಇಷ್ಟೇ ಹೊತ್ತು ಕೆಲಸ ಮಾಡುತ್ತೇನೆ ಎನ್ನುವಂತಿಲ್ಲ. ನಮ್ಮಲ್ಲಿ ಅಂತರ್ಗತವಾಗಿ ಬೆಳವಣಿಗೆಯ ದೃಷ್ಟಿಕೋನವಿದ್ದು, ಅದನ್ನು ದೇಶಕ್ಕೆ ಸಮರ್ಪಿಸಬೇಕು ಎನ್ನುತ್ತಾರೆ ಶರತ್‌.

ಪ್ರಶಸ್ತಿಯ ಗರಿ
ಉತ್ತಮ ಕರ್ತವ್ಯ ನಿರ್ವಹಣೆಗಾಗಿ ಪ್ಲೈಟ್  ಲೆಫ್ಟಿನೆಂಟ್‌ ಶರತ್‌ ಬಿ.ಎಂ. ಅವರು ಈ ವರ್ಷದ ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವ ದಿನದಂದು ಈ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಪಠಾಣ್‌ಕೋಟ್‌ ಉಗ್ರರ ಉಡೀಸ್‌ಗೆ ನೆರವು ನೀಡಿತ್ತು ಶರತ್‌ ತಂಡ !
2016 ಜ.2ರಂದು ಪಂಜಾಬ್‌ನ ಪಠಾಣ್‌ಕೋಟ್‌ ವಾಯುನೆಲೆಗೆ ಉಗ್ರರು ದಾಳಿ ಮಾಡಿದ್ದು, 17 ಗಂಟೆ ಸತತ ಹೋರಾಟ ಬಳಿಕ ಅವರನ್ನು ಸದೆಬಡಿದಿದ್ದು ಗೊತ್ತೇ ಇದೆ. ಈ ಯಶಸ್ವಿ ಕಾರ್ಯಾಚರಣೆ ಹಿಂದೆ ಶರತ್‌ ಅವರ ತಂಡ ಕೆಲಸ ಮಾಡಿದೆ. ಜೈಸಲ್ಮೇರ್‌ನಲ್ಲಿದ್ದ ಶರತ್‌ ಅವರ ತಂಡವನ್ನು ದಾಳಿಕೋರರ ಚಲನವಲನ ವೀಕ್ಷಣೆಗೆ ಕರೆಸಲಾಗಿತ್ತು. ಡ್ರೋನ್‌ಗಳ ಮೂಲಕ ತಂಡ ಕಣ್ಣಿಟ್ಟಿದ್ದು, ಕ್ಷಣಕ್ಷಣದ ಮಾಹಿತಿಯನ್ನು ಕಾರ್ಯಾಚರಣೆ ವಿಭಾಗಕ್ಕೆ ಕಳಿಸುತ್ತಿದ್ದರು. ಅತಿ ದೂರದಿಂದಲೇ ವಿಮಾನವನ್ನು ನಿಯಂತ್ರಿಸುತ್ತ, ಕಮಾಂಡೋಗಳಿಗೆ ಮಾಹಿತಿ ನೀಡುತ್ತ ಸಹಾಯ ಮಾಡಿದ್ದು ನಿಜಕ್ಕೂ ರೋಚಕ. ಡ್ರೋನ್‌ ವಿಮಾನ ಮೂಲಕ ಪ್ರತಿಯೊಬ್ಬ ಉಗ್ರರನ್ನೂ ಪತ್ತೆಹಚ್ಚಲಾಗಿದ್ದು, ಪೂರಕ ಕಾರ್ಯಾಚರಣೆ ನಡೆಸಿ ಕಮಾಂಡೋಗಳು ಉಗ್ರರನ್ನು ಉಡೀಸ್‌ ಮಾಡಿದ್ದರು!

ಶರತ್‌ ಪ್ರಾಮಾಣಿಕ, ಶ್ರಮಜೀವಿ. ಆದ್ದರಿಂದಲೇ ವಾಯುಸೇನೆಗೆ ಸೇರಲು ಸಾಧ್ಯವಾಯಿತು.ಛಲದಿಂದ ಕೆಲಸ ಮಾಡಿದ ಪರಿಣಾಮ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದಾನೆ.
-ಮಾಧವ ಬಿ.ಕೆ. (ಶರತ್‌ ತಂದೆ)

ಸದೃಢತೆ ಅಗತ್ಯ
ನನ್ನ ಈಗಿನ ಕೆಲಸ ಮಾನವರಹಿತ ವೈಮಾನಿಕ ವಿಭಾಗದಲ್ಲಿದೆ. ಹಾಗೆಂದು ಕಚೇರಿಯೊಳಗಿನ ಕೆಲಸವಲ್ಲ. ದೈಹಿಕ ಕ್ಷಮತೆ, ಮಾನಸಿಕ ದೃಢತೆ ಅಗತ್ಯ. ಚಳಿಗಾಲದಲ್ಲಿ -20 ಡಿಗ್ರಿ, ಬೇಸಿಗೆಯಲ್ಲಿ 50 ಡಿಗ್ರಿ ಉಷ್ಣತೆಯಲ್ಲಿ ಕೆಲಸ ಮಾಡುವ ಸದೃಢತೆ ಹೊಂದಿರಬೇಕು. ವಿರೋಧಿಗಳನ್ನು ಅಚ್ಚರಿಗೊಳಿಸುವಂತೆ ಮಾಡಿ ಜಯಶಾಲಿಯಾಗುವುದೇ ವಾಯುಸೇನೆ ಕೆಲಸ
-ಫ್ಲೈ|ಲೆ| ಶರತ್‌

– ಗಣೇಶ್‌ ಎನ್‌. ಕಲ್ಲರ್ಪೆ 

►ಯೋಧ ನಮನ 1►ಕ್ಯಾಪ್ಟನ್‌ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ: http://bit.ly/2noe3R

ಈ ಸರಣಿಯ ಮೂಲ ಉದ್ದೇಶ ಯುವಜನರಲ್ಲಿ ಮತ್ತು ನಾಗರಿಕರಲ್ಲಿ ಸೇನೆ ಕುರಿತು ಅರಿವು ಹಾಗೂ ಸದಭಿಪ್ರಾಯ ಮೂಡಿಸುವುದು. ಅದರಲ್ಲೂ ಯುವಜನರಿಗೆ ಸ್ಫೂರ್ತಿ ತುಂಬುವುದು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕರ ಒಲವೂ ಸೇನೆಯ ಕಡೆಗೆ ಹೆಚ್ಚುತ್ತಿದೆ. ಯುವಜನರೂ ಹೆಚ್ಚಿನ ಒಲವು ತೋರುತ್ತಿದ್ದಾರೆ. ಆದ ಕಾರಣ, ನಮ್ಮ ಊರಿನ ಸೈನಿಕರನ್ನು ಎಲ್ಲರಿಗೂ ಪರಿಚಯಿಸುವುದು ಈ ಸರಣಿಯ ಧ್ಯೇಯ.

ನಿಮ್ಮ ಊರಿನಲ್ಲೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರ ಬಗ್ಗೆ ಮಾಹಿತಿ ಇದ್ದರೆ ನಮ್ಮ ವಾಟ್ಸಪ್‌ಗೆ ತಿಳಿಸಬಹುದು. ಹೆಸರು, ಊರು ಹಾಗೂ ಸಂಪರ್ಕ ಸಂಖ್ಯೆ ಕಡ್ಡಾಯವಾಗಿ ನಮ್ಮೊಂದಿಗೆ ಹಂಚಿಕೊಳ್ಳಿ. ನಮ್ಮ ವಾಟ್ಸಪ್‌ ಸಂಖ್ಯೆ 7618774529

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.