ಉದ್ಯಾವರ : 8 ಪವನ್ ಚಿನ್ನ ಕದ್ದೊಯ್ದ ಫಕೀರ !
Team Udayavani, Jan 27, 2018, 11:12 AM IST
ಕಾಪು: ಭಿಕ್ಷೆಯ ನೆಪದಲ್ಲಿ ಮುಸ್ಲಿಂ ಮಹಿಳೆಯರಿದ್ದ ಮನೆಯೊಳಗೆ ಪ್ರವೇಶಿಸಿದ ಫಕೀರನೋರ್ವ, ಮನೆಯವರನ್ನು ವಂಚಿಸಿ 8 ಪವನ್ ಚಿನ್ನಾಭರಣವನ್ನು ಕದ್ದೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉದ್ಯಾವರ ಗ್ರಾಮದ ಬೈಲುಜಿಡ್ಡೆಯ ಆಯಿಷಾ ಅವರ ಮನೆಯಲ್ಲಿ ಗುರುವಾರ ಘಟನೆ ನಡೆದಿದೆ.
ಘಟನೆ ವಿವರ
ಗುರುವಾರ ಮಧ್ಯಾಹ್ನ ಆಯಿಷಾ ಮತ್ತವರ ಅತ್ತೆ ಮನೆಯಲ್ಲಿದ್ದ ವೇಳೆ ಆಗಮಿಸಿದ ಫಕೀರ ಈಕೃತ್ಯವೆಸಗಿದ್ದಾನೆ. ಭಿಕ್ಷೆ ನೀಡಿದ ಸಂದರ್ಭ ಮನೆಯಲ್ಲಿ ಮಹಿಳೆಯರಿಬ್ಬರೇ ಇರುವುದನ್ನು ದೃಢಪಡಿಸಿಕೊಂಡು ಅವರನ್ನು ಧರ್ಮ ಮತ್ತು ನಂಬಿಕೆಯ ಆಧಾರದಲ್ಲಿ ತನ್ನತ್ತ ಸೆಳೆಯುವ ಪ್ರಯತ್ನ ಮಾಡಿದ್ದ. ಮನೆಯೊಳಗೆ ಬಂದ ಫಕೀರ ಬಳಿಕ ಮನೆಯವರನ್ನು ಒಂದೊಂದೇ ವಿಚಾರದಲ್ಲಿ ಮಾತುಕತೆಗೆಳೆದು, ನೀವು ಒಳಗೆ ಇಟ್ಟಿರುವ ಚಿನ್ನ ನಾಪತ್ತೆಯಾಗಿದೆ. ನಿಮಗದು ತಿಳಿದಿದೆಯೇ ಎಂದು ಪ್ರಶ್ನಿಸಿದ. ಈ ವೇಳೆ ಆಯಿಷಾ ಚಿನ್ನ ಇಟ್ಟಲ್ಲೇ ಇದೆ ಎಂದು ಹೇಳಿದ್ದು, ಅದನ್ನು ತೋರಿಸುವಂತೆ ಕೇಳಿದಾಗ ಅದನ್ನು ತಂದು ತೋರಿಸಿದ್ದರು.
ಹೊಗೆಯೆಬ್ಬಿಸಿ ಚಿನ್ನ ಮಾಯ
ಆಗ ಈ ಚಿನ್ನ ಕಳೆದು ಹೋಗುವ ಭೀತಿಯಲ್ಲಿದೆ. ಇದು ನಿಮ್ಮಿಂದ ಕಳೆದು ಹೋಗದ ರೀತಿಯಲ್ಲಿ ಮಾಡುತ್ತೇನೆ ಎಂದು ನಂಬಿಸಿ, ಅದನ್ನು ಪಡೆದು ತನ್ನಲ್ಲಿದ್ದ ಮಣ್ಣಿನ ಗಡಿಗೆಯೊಳಗೆ ಹಾಕಿದ್ದು, ಬಳಿಕ ಬೆಂಕಿ ಮತ್ತು ಹೊಗೆಯೆಬ್ಬಿಸಿ ಮನೆಯವರ ಕೈಗೆ ನೀಡಿ, ಬಳಿಕ ಮನೆಯಿಂದ ತೆರಳಿದ್ದ. ಫಕೀರ ಮನೆಯಿಂದ ಹೊರಟು ಹೋದ ಬಳಿಕ ಗಡಿಗೆಯನ್ನು ತೆರೆದು ನೋಡಿದಾಗ ಮೋಸ ಹೋಗಿರುವ ವಿಚಾರ ತಿಳಿಯಿತು. ಬಳಿಕ ಕಾಪು ಪೊಲೀಸ್ ಠಾಣೆಗೆ ಆಗಮಿ ದೂರು ನೀಡಿದ್ದಾರೆ.
ಪಕ್ಕದ ಮನೆಯ ಸಿಸಿಕೆಮರಾದಲ್ಲಿ ಸೆರೆಯಾಗಿದ್ದ ಫಕೀರನ ಭಾವಚಿತ್ರವನ್ನು ಪೊಲೀಸರು ಸಂಗ್ರಹಿಸಿದ್ದು, ಆತನ ಪತ್ತೆಗಾಗಿ ಶೋಧ ಆರಂಭಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು
ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು
Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ
Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ
Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.