ಚುಂಗ್ ಗಾಯಾಳು; ಫೈನಲ್‌ನಲ್ಲಿ ಫೆಡರರ್
Team Udayavani, Jan 27, 2018, 12:04 PM IST
ಮೆಲ್ಬರ್ನ್: ಅನೇಕ ದೊಡ್ಡ ಬೇಟೆಗಳನ್ನಾಡಿ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಪ್ರವೇಶಿಸಿದ ದಕ್ಷಿಣ ಕೊರಿಯಾದ 21ರ ಹರೆಯದ ಹೈಯಾನ್ ಚುಂಗ್ ಅವರ ಆಸ್ಟ್ರೇಲಿಯನ್ ಓಪನ್ ಅಭಿಯಾನ ದುರಂತವಾಗಿ ಕೊನೆಗೊಂಡಿದೆ. ಹಾಲಿ ಚಾಂಪಿಯನ್ ರೋಜರ್ ಫೆಡರರ್ ಎದುರಿನ ಶುಕ್ರವಾರದ ಬಹು ನಿರೀಕ್ಷಿತ ಸೆಮಿಫೈನಲ್ ಮೇಲಾಟದ ವೇಳೆ ಪಾದದ ನೋವಿಗೆ ಸಿಲುಕಿದ ಚುಂಗ್ ಅರ್ಧದಲ್ಲೇ ಪಂದ್ಯದಿಂದ ಹಿಂದೆ ಸರಿಯುವ ಸಂಕಟಕ್ಕೆ ಸಿಲುಕಿದರು. ರವಿವಾರದ ಫೈನಲ್ ರೋಜರ್ ಫೆಡರರ್ ಮತ್ತು ಮರಿನ್ ಸಿಲಿಕ್ ನಡುವೆ ಸಾಗಲಿದೆ.
ಎಡಗಾಲಿನ ನೋವು ತೀವ್ರಗೊಳ್ಳುವ ವೇಳೆ ಹೈಯಾನ್ ಚುಂಗ್ ಮೊದಲ ಸೆಟ್ ಕಳೆದುಕೊಂಡಿದ್ದರು ಹಾಗೂ 2ನೇ ಸೆಟ್‌ನಲ್ಲಿ ಹಿನ್ನಡೆಯಲ್ಲಿದ್ದರು. ಹೀಗಾಗಿ ಫೆಡರರ್ ಅವರನ್ನು ಹಿಮ್ಮೆಟ್ಟಿಸುವ ಯಾವುದೇ ಸಾಧ್ಯತೆಯನ್ನು ಚುಂಗ್ ಹೊಂದಿರಲಿಲ್ಲ. 6-1, 5-2ರ ಮುನ್ನಡೆಯಲ್ಲಿದ್ದ ಫೆಡರರ್ ಸ್ಪಷ್ಟ ಗೆಲುವಿನತ್ತ ದಾಪುಗಾಲಿಕ್ಕುತ್ತಿದ್ದರು. ಇವರಿಬ್ಬರ ನಡುವಿನ ರ್ಯಾಕೆಟ್ ಸಮರ ಒಂದು ಗಂಟೆ, 2 ನಿಮಿಷಗಳ ತನಕ ಸಾಗಿತ್ತು. ಇದರೊಂದಿಗೆ ಫೆಡರರ್ ಅವರ ಗ್ರ್ಯಾನ್‌ಸ್ಲಾಮ್ ಸೆಮಿಫೈನಲ್ ಗೆಲುವು-ಸೋಲಿನ ದಾಖಲೆ 30-13ಕ್ಕೆ ವಿಸ್ತರಿಸಲ್ಪಟ್ಟಿತು.
ರೋಜರ್ ಫೆಡರರ್ ಪಾಲಿಗೆ ಇದು 7ನೇ ಆಸ್ಟ್ರೇಲಿಯನ್ ಓಪನ್ ಫೈನಲ್. ಈವರೆಗೆ 5 ಸಲ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. 2ನೇ ಸಲ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಅವಕಾಶವೊಂದು ಸ್ವಿಸ್ ಸ್ಟಾರ್‌ಗೆ ಎದುರಾಗಿದೆ. ಫೆಡರರ್ ಮೊದಲ ಸಲ 2006 ಮತ್ತು 2007ರಲ್ಲಿ ಈ ಸಾಧನೆ ಮಾಡಿದ್ದರು. ರವಿವಾರವೂ ಗೆದ್ದರೆ ಫೆಡರರ್ 20ನೇ ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಒಡೆಯನೆನಿಸಿಕೊಳ್ಳುತ್ತಾರೆ.
ಫೆಡರರ್ ಫೇವರಿಟ್
ರವಿವಾರದ ಫೈನಲ್‌ನಲ್ಲಿ ರೋಜರ್ ಫೆಡರರ್ ಅವರೇ ಫೇವರಿಟ್ ಎಂದು ಟೆನಿಸ್ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಫೆಡರರ್ ಅವರ ಅನುಭವ ಹಾಗೂ ಪ್ರಚಂಡ ಫಾರ್ಮ್, ಅವರು ಸಿಲಿಕ್ ವಿರುದ್ಧ ಸಾಧಿಸಿರುವ ಮೇಲುಗೈ ಇದಕ್ಕೆ ಸಾಕ್ಷಿ ಒದಗಿಸುತ್ತದೆ. ಸಿಲಿಕ್ ವಿರುದ್ಧ ಈವರೆಗೆ 9 ಪಂದ್ಯಗಳನ್ನಾಡಿರುವ ಫೆಡರರ್‌ಎಂಟನ್ನು ಗೆದ್ದು, ಒಮ್ಮೆಯಷ್ಟೇ ಸೋತಿದ್ದಾರೆ.
ಫೆಡರರ್ ಈವರೆಗೆ 19 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ
ಗಳನ್ನು ಬಾಚಿಕೊಂಡರೆ, ಸಿಲಿಕ್ ಗೆದ್ದದ್ದು ಒಂದು ಗ್ರ್ಯಾನ್‌ಸ್ಲಾಮ್ ಮಾತ್ರ. ಅದು 2014ರ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಒಲಿದಿತ್ತು.
ಫೈನಲ್ ಪ್ರವೇಶಿಸಿದ ಬೋಪಣ್ಣ ಜೋಡಿ
ಆಸ್ಟ್ರೇಲಿಯನ್ ಓಪನ್ ಮಿಶ್ರ ಡಬಲ್ಸ್‌ನಲ್ಲಿ ಭಾರತದ ರೋಹನ್ ಬೋಪಣ್ಣ ಹಾಗೂ ಹಂಗೇರಿಯದ ಟೈಮಿಯಾ ಬಬೋಸ್ ಜೋಡಿ ಫೈನಲ್‌ಗೇರಿದೆ. ಇಬ್ಬರೂ ಸೇರಿಕೊಂಡು ಡೆಮಾಲಿನರ್-ಮಾರ್ಟಿನೆಜ್ ಸ್ಯಾಂಚೆಸ್ ಅವರನ್ನು 7-5, 5-7, 10-6ರಿಂದ ಸೋಲಿಸಿದರು. ಇಬ್ಬರೂ ಬಿರುಸಿನ ಆಟದ ಮೂಲಕ ಗಮನ ಸೆಳೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
Pune: ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ ಬ್ಯಾಟರ್!; ವಿಡಿಯೋ ವೈರಲ್
Team India: ವೇಗಿ ಮೊಹಮ್ಮದ್ ಶಮಿಗೆ ಕಟ್ಟುನಿಟ್ಟಿನ ಗಡುವು ನೀಡಿದ ಬಿಸಿಸಿಐ!
Team Indiaಕ್ಕೆ ಆಸೀಸ್ ಪ್ರಧಾನಿ ಔತಣ: ಆಟದಲ್ಲಿ ಸ್ವಲ್ಪ ಮಸಾಲೆ ಬೇಕು
ICC ಇಂದು ಸಭೆ: ಚಾಂಪಿಯನ್ಸ್ ಟ್ರೋಫಿ; ಹೈಬ್ರಿಡ್ ಮಾದರಿಗೆ ಮತದಾನ?
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.