ನೆಲ್ಲಿ ತೀರ್ಥ ಸೋಮನಾಥೇಶ್ವರ 


Team Udayavani, Jan 27, 2018, 4:08 PM IST

199.jpg

ದಕ್ಷಿಣ ಕನ್ನಡ ಜಿಲ್ಲೆ ಹಲವಾರು ವೈಶಿಷ್ಟ್ಯಪೂರ್ಣ ದೇವಾಲಯಗಳ ಜಿಲ್ಲೆಯೆಂದೇ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಹಲವಾರು ವೈವಿಧ್ಯಮಯ ತಾಣಗಳಲ್ಲಿ ದೇವಾಲಯಗಳನ್ನು ಕಾಣಬಹುದಾಗಿದೆ.  ಅಂತಹ ಹಲವಾರು ಪುರಾತನ ದೇವಾಲಯಗಳ ಸಾಲಿನಲ್ಲಿ ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದ ‘ನೆಲ್ಲಿತೀರ್ಥ’ ಸೋಮನಾಥೇಶ್ವರ ಗುಹಾ ದೇವಾಲಯವೂ ಒಂದು. ಇಲ್ಲಿ ದೇವರು ಗುಹೆಯೊಳಗೇ ನೆಲೆಗೊಂಡಿದ್ದಾನೆ. ಈ ದೇವಾಲಯವು 600 ವರ್ಷಗಳಷ್ಟು ಹಿಂದಿನವು ಎಂದು ಇಲ್ಲಿನ ಸ್ಥಳ ಪುರಾಣವು ತಿಳಿಸುತ್ತದೆ.  

    ಮಂಗಳೂರಿನಿಂದ ಸುಮಾರು 30ಕಿ.ಮೀ ದೂರದ ಹಚ್ಚ ಹಸುರಿನ ಪ್ರಕೃತಿಯ ಮಡಿಲಲ್ಲಿ ದೇವಾಲಯವಿದೆ.  ಗುಹಾ ದೇವಾಲಯವನ್ನು ಪ್ರತೀ ವರ್ಷ ತುಲಾ ಸಂಕ್ರಮಣದಂದು ತೆರೆಯಲಾಗುತ್ತದೆ. ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ, ಅಂದರೆ ಮೇಷ ಸಂಕ್ರಮಣದಂದು ಸಕಲ ವಿಧಿ ವಿಧಾನಗಳೊಂದಿಗೆ ದೇವಾಲಯವನ್ನು ಮುಚ್ಚಲಾಗುತ್ತದೆ. 

 ಸರಿಸುಮಾರು ಇನ್ನೂರರಿಂದ ಇನ್ನೂರೈವತ್ತು ುàಟರ್‌ನಷ್ಟು ಉದ್ದರುವ ಈ ಗುಹೆಯೊಳಗೆ ‘ಜಾಬಾಲಿ ಮಹರ್ಷಿ’ಗಳು ಶ್ರೀದೇವಿಯನ್ನು ಒಲಿಸಿಕೊಳ್ಳಲು ಕಠಿಣ ತಪಸ್ಸನ್ನಾಚರಿಸಿದ್ದರು ಎನ್ನುತ್ತದೆ ಇತಿಹಾಸ. ಈ ಗುಹಾಲಯದೊಳಗಿರುವ ಶಿವಲಿಂಗಕ್ಕೆ ಗುಹೆಯ ಮೇಲಾºಗದಲ್ಲಿ ಕಲ್ಲುಗಳ ಸಂದಿಯಿಂದ ನೆಲ್ಲಿಕಾಯಿ ಗಾತ್ರದಲ್ಲಿ ನಿರಂತರವಾಗಿ ಹನಿ ಹನಿಯಾಗಿ ನೀರು ತೊಟ್ಟಿಕ್ಕುತ್ತದೆ. ಇದನ್ನು ‘ಅಂತರ್ಗಂಗೆ’ ತೀರ್ಥವೆಂದು ಪರಿಗಣಿಸಿ ಈ ಕ್ಷೇತ್ರಕ್ಕೆ ‘ನೆಲ್ಲಿತೀರ್ಥ’ವೆಂಬ ಹೆಸರು ಬಂದಿದೆ. ಇಲ್ಲಿ ತಪಸ್ಸನ್ನಾಚರಿಸುತ್ತಿದ್ದ ಜಾಬಾಲಿ ಮುನಿಗಳ ತಪಸ್ಸಿಗೆ ಮೆಚ್ಚಿದ ದುರ್ಗಾ ಮಾತೆಯು ಪ್ರತ್ಯಕ್ಷಳಾಗಿ ‘ಅರುಣಾಸುರ’ನೆಂಬ ರಾಕ್ಷಸನನ್ನು ಸಂಹಾರ ಮಾಡುವ ಅಭಯವನ್ನು ನೀಡಿದಳಂತೆ. “ದುಂಬಿ’ಯ ರೂಪವನ್ನು ತಾಳಿ ಅಲ್ಲೇ ಸಮೀಪದಲ್ಲಿ ಹರಿಯುತ್ತಿರುವ ‘ನಂದಿನಿ’ ನದಿಯ ತಟದಲ್ಲಿ ಅರುಣಾಸುರನನ್ನು ಸಂಹಾರ ಮಾಡಿ ಅದೇ ಸ್ಥಳದಲ್ಲಿ ದುರ್ಗೆಯು ನೆಲೆನಿಂತಳಂತೆ.  ಈ ಸ್ಥಳವೇ ಶ್ರೀ ಕ್ಷೇತ್ರ ಕಟೀಲು’ ಎಂದು ಪ್ರಸಿದ್ದವಾಗಿದೆ. ಈ ಕ್ಷೇತ್ರವು ನೆಲ್ಲಿತೀರ್ಥ ಗುಹಾ ದೇವಾಲಯದಿಂದ ಅನತಿ ದೂರದಲ್ಲೇ ಇದೆ. 

ಗುಹೆಯನ್ನು ಪ್ರವೇಶಿಸುವ ಮೊದಲು ದೇವಾಲಯದ ಸಮೀಪದಲ್ಲೇ ನೈಸರ್ಗಿಕವಾದ ‘ನಾಗಪ್ಪನ ಕೆರೆ’ಇದೆ. ಭಕ್ತರು ಇಲ್ಲಿ ಸ್ನಾನ ಮಾಡಿಯೇ ಗುಹೆಯೊಳಗೆ ಸಾಗಬೇಕೆಂಬ ನಂಬಿಕೆ ಚಾಲ್ತಿಯಲ್ಲಿದೆ. ನೆಲ್ಲಿತೀರ್ಥ ಗುಹಾ ದೇವಾಲಯವು ವರ್ಷದ ಆರು ತಿಂಗಳುಗಳ ಕಾಲ ಸಂಪೂರ್ಣ ಮುಚ್ಚಿದ ಸ್ಥಿತಿಯಲ್ಲೇ ಇರುವುದರಿಂದ ಈ ಅವಧಿಯಲ್ಲಿ ಯಾವುದೇ ಪೂಜೆಗಳು ನಡೆಯುವುದಿಲ್ಲ. 

 ಭಗವಾನ್‌ ಈಶ್ವರ (ಶ್ರೀ ಸೋಮನಾಥೇಶ್ವರ) ಈ ದೇವಾಲಯದ ಮುಖ್ಯ ದೇವರಾಗಿದ್ದು, ಪಕ್ಕದಲ್ಲಿ ‘ಮಹಾಗಣಪತಿ’ ಮತ್ತು ‘ಜಾಬಾಲಿ ಮಹರ್ಷಿ’ಯ ಗುಡಿಗಳು ಇವೆ.  ಇದರ ಜೊತೆಯಲ್ಲಿ ದೇವಾಲಯದ ಪಕ್ಕದಲ್ಲೇ ಪ್ರಮುಖ ದೈವಗಳಾದ ಪಿಲಿಚಾಮುಂಡಿ (ಪಿಲಿ ಎಂದರೆ ಹುಲಿ), ರಕ್ತೇಶ್ವರಿ, ಧೂಮಾವತಿ ಮತ್ತು ಕ್ಷೇತ್ರಪಾಲಕರ ದೇವಾಲಯವಿದೆ.  ಈ ದೇವಾಲಯದ ಆಡಳಿತವು ತುಳುನಾಡಿನ ಪ್ರಮುಖ ಮನೆತನಗಳಲ್ಲೊಂದಾದ ‘ಚೌಟ’ ಮನೆತನದ ಸುಪರ್ದಿಯಲ್ಲಿದೆ. 

    ಈ ಪವಿತ್ರ ಸ್ಥಳವು ಬಜ್ಪೆ ವಿಮಾನ ನಿಲ್ದಾಣಕ್ಕೆ ಅತ್ಯಂತ ಸನಿಹದಲ್ಲಿದೆ. ಮಂಗಳೂರಿನಿಂದ ಮೂಡಬಿದರೆ ರಸ್ತೆಯಲ್ಲಿ ಚಲಿಸುತ್ತಾ ಎಡಪದನಲ್ಲಿ ಎಡಗಡೆ ತಿರುಗಿ 8 ಕಿ.ಮೀ.ಸಾಗಿಯೂ ಈ ದೇವಾಲಯವನ್ನು ತಲುಪಬಹುದು. ಅದೇ ರೀತಿ ಬಜ್ಪೆಯಿಂದ ಕತ್ತಲ್‌ಸರ್‌ ರಸ್ತೆಯ ಮೂಲಕವೂ ಇಲ್ಲಿಗೆ ಬರಬಹುದು. 

ಸಂತೋಷ್‌ ರಾವ್‌ ಪೆರ್ಮುಡ 

ಟಾಪ್ ನ್ಯೂಸ್

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

11-sirsi

Sirsi: ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾದ ಸಂಸದ ಕಾಗೇರಿ

1

India: 68 ಮಿಲಿಯನ್‌ ಟನ್‌ ಆಹಾರ ಪೋಲು…ದೇಶದ ಅಭಿವೃದ್ಧಿ, ಜನರ ಸಾವು, ಆಹಾರ ಭದ್ರತೆಗೂ ಮಾರಕ

Vijayapura: Unnatural assault on 6-year-old boy: Convict sentenced to 20 years in prison

Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು

The day will come when our team member will become CM: Yatnal

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

ಯಡಿಯೂರಪ್ಪ

Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್‌ ಯಡಿಯೂರಪ್ಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

13-

Gundlupete: ವಿದ್ಯುತ್ ತಂತಿಗೆ ಸಿಲುಕಿ ಮರಿಯಾನೆ ಸಾವು

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ

12-sirsi

Sirsi: ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿ ಪರಾರಿ; ಆರೋಪಿ ಬಂಧನ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

EVM: ಸೋತಾಗ ಮಾತ್ರ ಯಾಕೆ ಇವಿಎಂ ಮೇಲೆ ಆರೋಪ ಮಾಡುತ್ತೀರಿ: ಸುಪ್ರೀಂ ಕೋರ್ಟ್‌ ಟೀಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.