ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠ: ಶಾಸಕ ಪಾಟೀಲ
Team Udayavani, Jan 27, 2018, 4:42 PM IST
ಮಸ್ಕಿ: ಭಾರತದ ಸಂವಿಧಾನ ಅತ್ಯಂತ ಶ್ರೇಷ್ಠವಾದದು, ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಶಾಸಕ ಪ್ರತಾಪಗೌಡ ಪಾಟೀಲ್ ಹೇಳಿದರು. ಪಟ್ಟಣದ ಸರಕಾರಿ ಕೇಂದ್ರ ಶಾಲೆ ಆವರಣದಲ್ಲಿ ನಡೆದ 69ನೇ ಗಣರಾಜ್ಯೋತ್ಸವ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶದ ಅಖಂಡತೆ ಉಳಿಸಿಕೊಳ್ಳಲು ನಾವು ಎಲ್ಲರೂ ಭಾರತೀಯರಾಗಿ ಸ್ವತಂತ್ರ ಪ್ರೇಮ ಬೆಳಸಿಕೊಳ್ಳಬೇಕು. ಯುವಕರು ದೇಶಪ್ರೇಮ ಬೆಳಸಿಕೊಳ್ಳುವ ಮೂಲಕ ಉತ್ತಮ ಅಭಿರುಚಿಯೊಂದಿಗೆ ದೇಶದ ಸತಪ್ರಜೆಗಳಾಗಬೇಕು ಎಂದು ಹೇಳಿದರು.
ಮಸ್ಕಿ ತಾಲೂಕಿಗಾಗಿ 2003ರಲ್ಲಿ ಸುಮಾರು 58 ದಿನಗಳ ನಿರಂತರ ಹೋರಾಟದ ಫಲವಾಗಿ ಇಂದು ಮಸ್ಕಿ ಜನತೆಗೆ ಮರೆಯಲಾರದ ದಿನವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನ ಅವರು ಬಿಡುಗಡೆ ಮಾಡುವ ಮೂಲಕ ನೂತನ ತಾಲೂಕುಗಳನ್ನು ಅಸ್ತಿತ್ವಕ್ಕೆ ತಂದಿದ್ದಾರೆ. ತಾಲೂಕಿಗೆ 142 ಗ್ರಾಮಗಳು ಒಳಪಡುತ್ತಿವೆ. ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾಲೂಕು ರಚನೆ ಮಾಡಲಾಗಿದೆ. ಪಟ್ಟಣದಲ್ಲಿ 25 ಕೋಟಿ ರೂ. ವೆಚ್ಚದ ನೂತನ ಡಿಪ್ಲೋಮಾ ಕಾಲೇಜು ಮಂಜೂರಾಗಿದೆ.
ನೂತನ ತಾಲೂಕು ಕಚೇರಿ ಉದ್ಘಾಟನೆ: ಇದೇ ಸಂದರ್ಭದಲ್ಲಿ ಮಸ್ಕಿ ನೂತನ ತಾಲೂಕಿನ 25ಕ್ಕೂ ಹಚ್ಚು ಕಚೇರಿಗಳನ್ನು ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟಿಸಿದರು.
ತಹಶೀಲ್ದಾರ ಕಚೇರಿ ಉದ್ಘಾಟನೆ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಸಾಮರ್ಥ್ಯಸೌಧ ಕಟ್ಟಡದಲ್ಲಿ ಮಸ್ಕಿ ತಾಲೂಕು ನೂತನ ತಹಶೀಲ್ದಾರ ರ್ಯಾಲಯವನ್ನು ಶಾಸಕ ಪ್ರತಾಪಗೌಡ ಪಾಟೀಲ ಉದ್ಘಾಟಿಸಿದರು.
ತ್ರಿವರ್ಣ ನಡಿಗೆ: ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರ ಕಚೇರಿಯಿಂದ ಹಳೇ ಬಸ್‌ನಿಲ್ದಾಣದವರೆಗೆ ಇಲ್ಲಿನ ಯುವ ಕಾಂಗ್ರೆಸ್ ವತಿಯಿಂದ ಹಮ್ಮಿಕೊಂಡಿದ್ದ ತ್ರಿವರ್ಣ ನಡಿಗೆ ಪಾದಯಾತ್ರೆಗೆ ಶಾಸಕ ಪ್ರತಾಪಗೌಡ ಪಾಟೀಲ್ ಚಾಲನೆ ನೀಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ವೀರೇಶ ಕಮತರ, ಪ್ರಸನ್ನ ಪಾಟೀಲ, ವಿನಾಯಕ ಪಾಟೀಲ, ಚೇತನ ಪಾಟೀಲ, ಸಿದ್ದಣ್ಣ ಹೂವಿಬಾವಿ, ಮಲ್ಲಿಕಾರ್ಜುನ ಬ್ಯಾಳಿ, ಹುಸೇನ್‌ಬಾಷ, ಮಸೂದ್ ಪಾಶ,ರಿಯಾಜ್ ಶೇಡ್ಮಿ, ಶ್ರೀಧರ ಪಾಟೀಲ, ಅಜ್ಮಿರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raichur: ರಾತೋ ರಾತ್ರಿ ದೇವಸ್ಥಾನ ತೆರವುಗೊಳಿಸಿದ ಜಿಲ್ಲಾಡಳಿತ ; ಬಿಜೆಪಿಯಿಂದ ಪ್ರತಿಭಟನೆ
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Raichur: ಪ್ರಶ್ನೆಪತ್ರಿಕೆ ವಿಳಂಬ; ಪಿಡಿಒ ಪರೀಕ್ಷೆ ಬಹಿಷ್ಕಾರ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.