ನವಜಾತ ಶಿಶುಗಳ ಉಳಿವಿನಲ್ಲಿ ಲಿಂಗ ಅಂತರ ಎಚ್ಚೆತ್ತುಕೊಳ್ಳಬೇಕಾದ ಕಾಲ


Team Udayavani, Jan 28, 2018, 6:00 AM IST

newborn-baby-990691_1280.jpg

ಬದುಕುಳಿಯುವುದಕ್ಕೆ ವಂಶವಾಹೀಯ ಸಾಮರ್ಥ್ಯ ಇದೆ; ಆದರೂ ಹೆಣ್ಣು ಶಿಶುಗಳು 
ಇಲ್ಲವಾಗುತ್ತಿರುವುದೇಕೆ?

ನಿಜಕ್ಕೂ ಶಿಶುವೊಂದರ ಜನನ ಸಂಭ್ರಮ ಹುಟ್ಟಿಸುವಂಥದ್ದು. ಆದರೂ ಮನುಷ್ಯನ ಬದುಕನ್ನಿಡೀ ಗಣನೆಗೆ ತೆಗೆದುಕೊಂಡರೆ, ಜನಿಸಿದ ದಿನ ಸಾವು ಸಂಭವಿಸುವ ಅತಿಹೆಚ್ಚು ಅಪಾಯ ಇರುವ ದಿನವೂ ಹೌದು. ವಾಸ್ತವವೆಂದರೆ, ಜನಿಸಿದ ಮೊದಲ 24 ತಾಸುಗಳಲ್ಲಿ ಸಂಭವಿಸುವ ಶಿಶು ಮರಣಗಳ ಅಂದಾಜು ಪ್ರಮಾಣವನ್ನು ನಾವು ತಪ್ಪಾಗಿ ಕಡಿಮೆ ಅಂದಾಜಿಸಿರುವ ಸಾಧ್ಯತೆ ಇದೆ. ಏಕೆಂದರೆ ತುಂಬಾ ಬೇಗನೆ ಸಂಭವಿಸುವ ನವಜಾತ ಶಿಶುಗಳ ಮರಣ ಬಹಿರಂಗವಾಗುವುದು ಕಡಿಮೆ. ನವಜಾತ ಶಿಶುಗಳ ಮರಣಕ್ಕೆ ಅವಧಿಪೂರ್ವ ಜನನ, ಜನನಕಾಲದ ದೇಹತೂಕ ಕಡಿಮೆ ಇರುವುದು, ಸೋಂಕುಗಳು, ನ್ಯುಮೋನಿಯಾ, ಭೇದಿ, ಅಪೌಷ್ಟಿಕತೆ, ಅಸಿಕ್ಸಿಯಾ (ಜನನ ಕಾಲದಲ್ಲಿ ಆಮ್ಲಜನಕದ ಕೊರತೆ) ಮತ್ತು ಜನನಾಘಾತ – ಹೀಗೆ ಹಲವು ಕಾರಣಗಳಿರುತ್ತವೆ. ಜಾಗತಿಕವಾಗಿ ಸಂಭವಿಸುವ ನವಜಾತ ಶಿಶುಮರಣಗಳ ಶೇ.80 ಪ್ರಸೂತಿ ಸಂಬಂಧಿ ನವಜಾತ ಶಿಶು ಮರಣ ಅಥವಾ “ಬತ್‌ ಅಸಿಕ್ಸಿಯಾ- ಜನನಕಾಲದಲ್ಲಿ ಆಮ್ಲಜನಕ ಕೊರತೆ’ಯಿಂದ ಉಂಟಾಗುತ್ತದೆ. ಜನನ ಕಾಲದಲ್ಲಿ ಆಮ್ಲಜನಕ ಕೊರತೆ, ಅವಧಿಪೂರ್ವ ಪ್ರಸವ ಮತ್ತು ಜನ್ಮಜಾತ ವೈಕಲ್ಯಗಳು ಭಾರತದಲ್ಲಿ ನವಜಾತ ಶಿಶುಗಳ ಮರಣಕ್ಕೆ ಕೊಡುಗೆ ನೀಡುತ್ತಿವೆ. ವಿಶ್ವದ ಬಹುತೇಕ ಭಾಗಗಳಲ್ಲಿ ಹೆಣ್ಣುಮಕ್ಕಳಿಗಿಂತ ನವಜಾತ ಗಂಡು ಮಕ್ಕಳೇ ಸಾವನ್ನಪ್ಪುವ ಪ್ರಮಾಣ ಹೆಚ್ಚು. ಹೆಣ್ಣು ಮತ್ತು ಗಂಡಿನ ವಂಶವಾಹೀಯ ಮತ್ತು ಜೀವಶಾಸ್ತ್ರೀಯ ಸಾಮರ್ಥ್ಯಗಳಿಂದ ಇದನ್ನು ವ್ಯಾಖ್ಯಾನಿಸಲಾಗುತ್ತದೆ – ಗಂಡು ಮಕ್ಕಳು ಹೆಣ್ಣುಮಕ್ಕಳಿಗಿಂತ ಜೀವಶಾಸ್ತ್ರೀಯವಾಗಿ ದುರ್ಬಲರಾಗಿದ್ದು, ಕಾಯಿಲೆಗಳು ಮತ್ತು ಅವಧಿಪೂರ್ವ ಮೃತ್ಯುವಿಗೆ ತುತ್ತಾಗುವ ಸಾಧ್ಯತೆ ಹೆಚ್ಚು. ಇದೇ ವೇಳೆ, ಶಿಶುವೊಂದು ಗಂಡು ಅಥವಾ ಹೆಣ್ಣಾಗಿ ರೂಪುಗೊಳ್ಳುವ ಸಂಭವವನ್ನು ಅಸಂಖ್ಯಾತ ಜನನಪೂರ್ವ ಪಾರಿಸರಿಕ ಅಂಶಗಳು ಅಥವಾ ಪೂರ್ವಪರಿಸ್ಥಿತಿಗಳು ಪ್ರಭಾವಿಸುತ್ತವೆ ಎಂಬುದಾಗಿ ಇತ್ತೀಚೆಗೆ ನಡೆದಿರುವ ಸಂಶೋಧನೆಗಳು ಹೇಳುತ್ತವೆ. ಭಾರತದಲ್ಲಿ ಅಸಹಜ ಲಿಂಗಾನುಪಾತ ಮತ್ತು ಉತ್ತಮ ಸಾಮಾಜಿಕ-ಆರ್ಥಿಕ ಸ್ಥಿತಿಗತಿ ಹಾಗೂ ಸಾಕ್ಷರತೆಗಳ ನಡುವೆ ಧನಾತ್ಮಕ ಸಹಸಂಬಂಧ ಇದೆ ಎಂದು ಭಾರತೀಯ ಜನಗಣತಿ ಅಂಕಿಅಂಶಗಳು ಮಾಹಿತಿ ನೀಡುತ್ತವೆ. ಭಾರತದಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಲಿಂಗಾನುಪಾತ ಕುಸಿಯುವ ಗತಿಯಲ್ಲಿದೆ; ಇದು ಅಭಿವೃದ್ಧಿ ಹೊಂದುತ್ತಿರುವ ನಮ್ಮಂತಹ ದೇಶಕ್ಕೆ ಆರೋಗ್ಯಕರ ವಿದ್ಯಮಾನವಲ್ಲ. 

ನವಜಾತ ಶಿಶುಗಳ ಬದುಕುಳಿಯುವಿಕೆಯ ಕಡೆಗೆ ಪ್ರಗತಿ ಮತ್ತು ಸಹಸ್ರಮಾನದ ಅಭಿವೃದ್ಧಿ ಗುರಿ 4 1970ರ ಬಳಿಕ ನವಜಾತ ಶಿಶುಗಳು, ಶಿಶುಗಳು ಮತ್ತು ಮಕ್ಕಳ ಮರಣ ಪ್ರಮಾಣ ಸಾಕಷ್ಟು ಕ್ರಿಪ್ರವಾಗಿ ಇಳಿಕೆಯಾಗುತ್ತ ಬಂದಿದೆ. ಸಹಸ್ರಮಾನದ ಅಭಿವೃದ್ಧಿ ಗುರಿಗಳು (ಎಂಡಿಜಿಗಳು) ವಿಸ್ತೃತವಾಗಿ ಅನುಮೋದನೆಗೊಳ್ಳುವ ಆರೋಗ್ಯ ಮತ್ತು ಅಭಿವೃದ್ಧಿ ಗುರಿಗಳಾಗಿದ್ದು, ಜಗತ್ತಿನ ಕಡು ಬಡವ ಕುಟುಂಬಗಳ ಪ್ರಗತಿಯ ವೇಗೋತ್ಕರ್ಷಕ್ಕೆ ಗಮನಾರ್ಹ ಅವಕಾಶ ಒದಗಿಸಿವೆ. ಎಂಡಿಜಿ-4, 1990 ಮತ್ತು 2015ರ ನಡುವೆ ಐದು ವರ್ಷದೊಳಗಿನ ಮಕ್ಕಳ ಮರಣ ಪ್ರಮಾಣವನ್ನು ಮೂರನೇ ಎರಡಕ್ಕೆ ಇಳಿಸುವ ಗುರಿ ಹೊಂದಿತ್ತು. 2015ಕ್ಕಾಗಿನ ಸಹಸ್ರಮಾನದ ಗುರಿಯನ್ನು ಭಾರತದಲ್ಲಿ ಸಾಧಿಸಲಾಗಿಲ್ಲ. ನವಜಾತ ಶಿಶುಗಳ ಜಾಗತಿಕ ಮರಣ ಪ್ರಮಾಣ ಕೂಡ ಇಳಿಹಾದಿಯಲ್ಲಿದೆ. ಸಹಸ್ರಮಾನದ ಅಭಿವೃದ್ಧಿ ಗುರಿ 8ರ ಆಧಾರದಲ್ಲಿ ರಚಿಸಲಾಗಿರುವ ಹಾಲಿ ಸುಸ್ಥಿರ ಅಭಿವೃದ್ಧಿ ಗುರಿ (ಎಸ್‌ಡಿಜಿ)ಯು ನಿರ್ದಿಷ್ಟವಾಗಿ 2015ರ ಒಳಗೆ ಕಡು ಬಡತನ ಮತ್ತು ಹಸಿವನ್ನು ನಿರ್ಮೂಲನೆ ಮಾಡಬೇಕು, ಸರ್ವತ್ರ ಪ್ರಾಥಮಿಕ ಶಿಕ್ಷಣ ಒದಗಿಸಬೇಕು, ಲಿಂಗ ಸಮಾನತೆಯನ್ನು ಪ್ರವರ್ಧಿಸಬೇಕು, ಮಕ್ಕಳ ಮರಣವನ್ನು ಕಡಿಮೆಗೊಳಿಸಬೇಕು, ತಾಯಂದಿರ ಆರೋಗ್ಯ ವೃದ್ಧಿಸಬೇಕು, ಮಹಿಳಾ ಸಶಕ್ತೀಕರಣ ಸಾಧನೆಯಾಗಬೇಕು, ಪಾರಿಸರಿಕ ಸುಸ್ಥಿರತೆ ಖಾತರಿಗೊಳ್ಳಬೇಕು ಮತ್ತು ಅಭಿವೃದ್ಧಿಗಾಗಿ ಜಾಗತಿಕ ಸಹಯೋಗ ಏರ್ಪಡಿಸಬೇಕು ಎಂದು ಹೇಳಿದೆ. 

ಅವಧಿಪೂರ್ವ ಜನಿಸಿದ ನವಜಾತರ ಅಸ್ವಸ್ಥತೆಯಲ್ಲಿ ಲಿಂಗ ವ್ಯತ್ಯಾಸ
ನವಜಾತ ಅಸ್ವಾಸ್ಥಕ್ಕೀಡಾಗುವ ಮತ್ತು ಮರಣ ಹೊಂದುವ ನವಜಾತ ಶಿಶುಗಳಲ್ಲಿ ಅವಧಿಪೂರ್ವ ಜನಿಸಿದ ಶಿಶುಗಳೇ ಅಧಿಕ ಸಂಖ್ಯೆಯಲ್ಲಿರುತ್ತವೆ. ಈ ವಿದ್ಯಮಾನದಲ್ಲಿ ನವಜಾತ ಶಿಶು ಮರಣಕ್ಕೆ ಕಾರಣವಾಗುವ ಅಸ್ವಾಸ್ಥಗಳಲ್ಲಿ ಪ್ರಮುಖವಾದುದು ಉಸಿರಾಟ ಹಾನಿ. ಗರ್ಭಧರಿಸಿದ ಅವಧಿಯಲ್ಲಿ, ಅಂತಿಮ ವಾರಗಳಲ್ಲಿ ಮೇಲ್ಮೆ„ ಸಾಂದ್ರತೆಯನ್ನು ಕಡಿಮೆ ಮಾಡುವ ಪದಾರ್ಥದ ಸಂಯೋಜನೆ ಹೆಚ್ಚು ಇದ್ದರೆ ನವಜಾತ ಶಿಶುಗಳು ಬದುಕುಳಿಯುವ ಪ್ರಮಾಣ ಹೆಚ್ಚಿರುತ್ತದೆ. ಜನನೋತ್ತರ ಮೇಲ್ಮೆ„ ಸಾಂದ್ರತೆಯನ್ನು ಕಡಿಮೆ ಮಾಡುವ ಪದಾರ್ಥವೊಂದೇ ಒಟ್ಟಾರೆ ಮರಣಪ್ರಮಾಣವನ್ನು ಕಡಿಮೆ ಮಾಡುತ್ತದಾದರೂ ಬದುಕುಳಿಯುವ ಪ್ರಮಾಣದಲ್ಲಿ ಲಿಂಗ ವ್ಯತ್ಯಾಸ ಹಾಗೆಯೇ ಉಳಿದಿದೆ. ಜನನಕಾಲದಲ್ಲಿ ಕಾರ್ಟಿಕೊಸ್ಟಿರಾಯ್ಡಗಳ ಬಳಕೆ 1990ರ ಮಧ್ಯಭಾಗದ ಬಳಿಕ ತೀವ್ರತೆ ಪಡೆಯಿತು. ಜೀವಶಾಸ್ತ್ರೀಯವಾಗಿ ಹೇಳುವುದಾದರೆ, ಹೆಣ್ಣು ಶಿಶುಗಳು ಗಂಡು ಶಿಶುಗಳಿಗಿಂತ ಹೆಚ್ಚಿನ ಬದುಕುಳಿಯುವ ಸಂಭಾವ್ಯತೆಯನ್ನು ಹೊಂದಿದ್ದಾರೆ. ಹಾಲಿ ಇರುವ ಗಂಡು ಶಿಶು ಮರಣ ಪ್ರಮಾಣ (ಐಎಂಆರ್‌)ದ ಎದುರು ಹೆಣ್ಣು ಶಿಶುಗಳ ಮರಣ ಪ್ರಮಾಣವು ಜೀವಶಾಸ್ತ್ರೀಯವಾಗಿ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾದಾಗ ಹೆಚ್ಚುವರಿ ಹೆಣ್ಣುಶಿಶು ಮರಣ ಪ್ರಮಾಣ ಗೋಚರವಾಗುತ್ತದೆ. ಲಿಂಗಭೇದದ ವಾತಾವರಣದಲ್ಲಿ ಹೆಣ್ಣು ಶಿಶು ಮರಣ ಪ್ರಮಾಣವು ಹೆಚ್ಚು ಇರುವುದಕ್ಕೆ ಕಾರಣವೆಂದರೆ ಬದುಕುಳಿಯುವುದು, ಆರೋಗ್ಯ, ಪೌಷ್ಟಿಕತೆ ಮತ್ತು ಮಗುವಿನ ಒಟ್ಟಾರೆ ಕಲ್ಯಾಣಕ್ಕೆ ಅತ್ಯಗತ್ಯವಾದ  ಬಾಲ್ಯಾವಸ್ಥೆಯ ಹಣ ವಿನಿಯೋಗದಲ್ಲಿಯೂ ಲಿಂಗ ಭೇದ ಮೂಗು ತೂರಿಸುವುದಾಗಿದೆ. ಈ ಲಿಂಗಭೇದವು ಎದೆಹಾಲೂಡುವಿಕೆ, ಆಹಾರ, ಪೌಷ್ಟಿಕತೆ, ಲಸಿಕೆಗಳನ್ನು ಒದಗಿಸುವ ವಿಚಾರಗಳಲ್ಲಿಯೂ ತಾರತಮ್ಯವನ್ನು ಉಂಟು ಮಾಡುತ್ತಿದೆ. 

ಉಸಿರಾಟ ಸಂಬಂಧಿ 
ಅಸ್ವಾಸ್ಥದಲ್ಲಿ ಲಿಂಗ ವ್ಯತ್ಯಾಸ

ಗರ್ಭ ಧಾರಣೆಯ ಯಾವುದೇ ಕಾಲಾವಧಿಯಲ್ಲಿ ಗಂಡು ಭ್ರೂಣಗಳು ಹೆಚ್ಚು ತೂಕ ಹೊಂದಿರುತ್ತವೆ. ಹೀಗಾಗಿ ಹೆಣ್ಣು ಭ್ರೂಣಕ್ಕಿಂತ ಹೆಚ್ಚು ಅಲ್ವೆಯೊಲಿ ಮತ್ತು ಅಲ್ವೆಯೊಲಾರ್‌ ಮೇಲ್ಮೆ„ ಪ್ರದೇಶವನ್ನು ಹೊಂದಿರುತ್ತವೆ (ಅಲ್ವೆಯೊಲಿ= ಶ್ವಾಸಕೋಶದ ಒಳಭಾಗದಲ್ಲಿ ನಾವು ತೆಗೆದುಕೊಂಡ ಉಸಿರಿನಿಂದ ಆಮ್ಲಜನಕವನ್ನು ಹೀರಿಕೊಳ್ಳುವುದಕ್ಕಾಗಿ ಇರುವ ಸೂಕ್ಷ್ಮ ರಚನೆಗಳು, ಅಲ್ವೆಯೊಲಾರ್‌ ಮೇಲ್ಮೆ„= ಅಲ್ವೆಯೊಲಿಗಳು ಇರುವ ಒಟ್ಟು ಪ್ರದೇಶ, ಶ್ವಾಸಕೋಶದ ಒಳಭಿತ್ತಿ). ಆದರೆ, ಮೇಲ್ಮೆ„ ಸಾಂದ್ರತೆಯನ್ನು ಕಡಿಮೆ ಮಾಡುವ ಪದಾರ್ಥದ ಉತ್ಪಾದನೆ ಹೆಣ್ಣು ಭ್ರೂಣದ ಶ್ವಾಸಕೋಶ ಬೆಳವಣಿಗೆಯಲ್ಲಿ ಗಂಡು ಭ್ರೂಣಕ್ಕಿಂತ ಬೇಗನೆ ಉಂಟಾಗುತ್ತದೆ. ಬೇಗನೆ ಕಾಣಿಸಿಕೊಳ್ಳುವ ಮೇಲ್ಮೆ„ ಸಾಂದ್ರತೆ ಕಡಿಮೆ ಮಾಡುವ ಪದಾರ್ಥವು ಹೆಣ್ಣು ಭ್ರೂಣಗಳಲ್ಲಿ ಅಲ್ವೆಯೊಲಿ ಮತ್ತು ಕಿರು ಗಾಳಿ ಅವಕಾಶಗಳ ಕ್ಷಿಪ್ರ ಮುಚ್ಚುವಿಕೆಯನ್ನು ತಡೆಯುತ್ತಿದ್ದು, ಇದು ಹೆಣ್ಣು ಭ್ರೂಣಗಳ ಶ್ವಾಸಾಂಗ ವ್ಯವಸ್ಥೆಯಲ್ಲಿ ಕಂಡುಬರುವ ಹೆಚ್ಚು ಗಾಳಿಯಾಟ ಮತ್ತು ಕಡಿಮೆ ರೋಗ ಪ್ರತಿರೋಧಕ್ಕೆ ಕಾರಣವಾಗಿರಬಹುದಾಗಿದೆ. ಪ್ರಸೂತಿ ಕಾಲದಲ್ಲಿ ಕಾರ್ಟಿಕೊ ಸ್ಟಿರಾಯ್ಡ ಉಪಯೋಗ ಶ್ವಾಸಾಂಗ ಅಸ್ವಾಸ್ಥ್ಯವನ್ನು ತಡೆಯುತ್ತದೆ, ಪರಿಣಾಮವಾಗಿ ನವಜಾತ ಶಿಶುಗಳ ಮೃತ್ಯುವನ್ನು ಕಡಿಮೆ ಮಾಡುತ್ತದೆ. ಆದರೂ  ಪ್ರಸೂತಿ ಕಾಲದ ಕಾರ್ಟಿಕೊಸ್ಟಿರಾಯ್ಡ ನೀಡಿಕೆ ಸಮಾನವಾಗಿದ್ದರೂ, ಗಂಡು ನವಜಾತ ಶಿಶುಗಳಲ್ಲಿ ಶ್ವಾಸಾಂಗ ಅಸ್ವಾಸ್ಥ é ಸಮಸ್ಯೆ ಹೆಚ್ಚು ಪ್ರಮಾಣದಲ್ಲಿ ಕಂಡುಬರುತ್ತದೆ. ಗಂಡು ನವಜಾತ ಶಿಶುಗಳಲ್ಲಿ ಅಲ್ವೆಯೊಲಾರ್‌ ಸೋಡಿಯಂ ಸರಬರಾಜು ಪ್ರವಾಹಗಳು ಹೆಣ್ಣು ನವಜಾತ ಶಿಶುಗಳಿಗಿಂತ ಕಡಿಮೆ ಪ್ರಮಾಣದಲ್ಲಿ ಇರುವುದು ಇದಕ್ಕೆ ಕಾರಣವಾಗಿರಬಹುದು. ಸೋಡಿಯಂ ಸರಬರಾಜು ಪ್ರವಾಹಗಳು ಕಡಿಮೆ ಇದ್ದರೆ ಶ್ವಾಸಕೋಶದಲ್ಲಿ ದ್ರವಾಂಶ ಶೇಖರಣೆ ಉಂಟಾಗಬಹುದಾಗಿದ್ದು, ಇದು ಅನಿಲ ವಿನಿಮಯಕ್ಕೆ ತಡೆ ಒಡ್ಡುವ ಮೂಲಕ ಶ್ವಾಸಾಂಗ ಅಸ್ವಾಸ್ಥ್ಯದ ಅಪಾಯವನ್ನು ಹೆಚ್ಚಿಸುತ್ತದೆ. 

ಉಪಸಂಹಾರ
ಹೆಣ್ಣು ನವಜಾತ ಶಿಶುಗಳಲ್ಲಿ ಶ್ವಾಸಾಂಗ ಅಸ್ವಾಸ್ಥ್ಯ ಮತ್ತು ಸಂಬಂಧಿತ ಸಮಸ್ಯೆಗಳು ಕಡಿಮೆ ಇದ್ದರೂ ನಮ್ಮ ಸಮಾಜದಲ್ಲಿ ಪ್ರಸಕ್ತ ಲಿಂಗಭೇದ ಮನೋಭಾವದಿಂದಾಗಿ ಯುವ ಹೆಮ್ಮಕ್ಕಳು ದೈಹಿಕವಾಗಿ, ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ಸಾಮಾಜಿಕವಾಗಿ ಭಾರೀ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಈ ಕಾರಣವಾಗಿ ಲಿಂಗಾನುಪಾತವು ಗಂಡು ಮಕ್ಕಳ ಕಡೆಗೆ ಬಾಗಿದೆ. ಗಂಡು ಮಗುವಿಗೆ ಆದ್ಯತೆ ನೀಡುವುದು, ಹೆಣ್ಣು ಭ್ರೂಣಹತ್ಯೆ, ಎದೆಹಾಲೂಡುವುದು – ಆಹಾರ ನೀಡುವುದು ಮತ್ತು ಶಿಶುವಿನ ಲಾಲನೆ ಪಾಲನೆಯಲ್ಲೂ ತಾರತಮ್ಯ ಈ ಕಳವಳಕಾರಿ ವಿದ್ಯಮಾನ ಮೂಲ ಕಾರಣಗಳಾಗಿವೆ. ಲಿಂಗಾನುಪಾತದಲ್ಲಿ ಸಮತೋಲನ ಆರೋಗ್ಯಯುತ ಸಮಾಜಕ್ಕೆ ಅಗತ್ಯ; ಆರೋಗ್ಯವಂತ ಹೆಣ್ಣು ಮಕ್ಕಳು ಖಂಡಿತವಾಗಿಯೂ ಕುಟುಂಬ ಮತ್ತು ಸಮಾಜದ ತಳಪಾಯದ ಕಿರೀಟವಾಗಿರುತ್ತಾರೆ.

– ಹಿಂದಿನ ವಾರದಿಂದ

ಟಾಪ್ ನ್ಯೂಸ್

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

Manipal: ಮಾಹೆಯ ಪ್ರಸನ್ನ ಸ್ಕೂಲ್‌ ಆಪ್‌ ಪಬ್ಲಿಕ್‌ ಹೆಲ್ತ್‌ಗೆ ಶ್ರೇಷ್ಠತೆಯ ಮಾನ್ಯತೆ

arrest-lady

PM Modi ಹ*ತ್ಯೆಗೆ ಯೋಜನೆ ಸಿದ್ಧ: ಕರೆ ಮಾಡಿದ್ದ ಮಹಿಳೆ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

4-Laparoscopic

Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Udupi: ಗೀತಾರ್ಥ ಚಿಂತನೆ-108: ಕರ್ತವ್ಯಚ್ಯುತಿಯ ದುಃಖದಿಂದ ಆತ್ಮವಿಕಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.