ಪ್ರಕ್ಷುಬ್ಧ ವಾತಾವರಣಕ್ಕೆ ಸಂಗೀತವೇ ಮದ್ದು
Team Udayavani, Jan 28, 2018, 11:19 AM IST
ಬೆಂಗಳೂರು: ನಿಜವಾದ ಸಂಗೀತ ಇವತ್ತಿನ ಪ್ರಕ್ಷುಬ್ಧ ವಾತಾವರಣಕ್ಕೆ ಸಿದೌœಷಧವಾಗಿದ್ದು, ಅಂತಹ ಸಂಗೀತವನ್ನು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತಲುಪಿಸಬೇಕಿದೆ ಎಂದು ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.
ತರಂಗ್ ಕ್ರಿಯೇಟರ್ ನಗರದ ಎಡಿಎ ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ “ಮಧುರಾಂತರಂಗ’ ಗೀತೆಗಳ ಗಾಯನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಗೀತ ಭಾಷಾತೀತ ಅದು ಎಲ್ಲರನ್ನೂ ತಲುಪುತ್ತದೆ. ಎಂತಹ ಕಲ್ಲು ಹೃದಯದವರೂ ಸಂಗೀತಕ್ಕೆ ಮನಸೋಲುತ್ತಾರೆ ಎಂದರು.
ಉತ್ತಮ ಸಂಗೀತದ ಧ್ವನಿಸುರುಳಿಗಳನ್ನು ನಮ್ಮಲ್ಲಿ ಕೇಳುವವರಿದ್ದರೂ, ಕೊಳ್ಳುವವರು ಇಲ್ಲ. ಒಬ್ಬರು ಸಿಡಿ ಖರೀದಿಸಿದರೆ, ಹಾಡುಗಳನ್ನು ಪೆನ್‌ಡ್ರೈವ್ ಮೂಲಕ ಪಡೆದುಕೊಳ್ಳುತ್ತಾರೆ. ಇದರಿಂದಾಗಿ ಉದ್ಯಮ ಬೆಳೆಯುವುದಿಲ್ಲ. ಬದಲಿಗೆ ಉದ್ಯಮ ಸ್ಥಗಿತಗೊಂಡು ನಿರ್ಮಾಪಕರು ನೇಣು ಹಾಕಿಕೊಳ್ಳಬೇಕಾಗುತ್ತದೆ. ಇಂತಹ ವಿಷಮ ಪರಿಸ್ಥಿತಿ ಕನ್ನಡಕ್ಕೆ ಒದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೈಕೋರ್ಟ್ ನ್ಯಾಯಮೂರ್ತಿ ಬಿ.ವೀರಪ್ಪ, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ.ಪಿ.ರಂಗನಾಥ್, ತರಂಗ್ ಕ್ರಿಯೇಟರ್ ಅಧ್ಯಕ್ಷ ಎಸ್.ಶ್ರೀನಿವಾಸ್ ಮೂರ್ತಿ ಸೇರಿದಂತೆ ಪ್ರಮುಖರು ಹಾಜರಿದ್ದರು.
ಬದುಕಿದ್ದೀರಾ ಎಂದು ಕೇಳುವವರಿದ್ದಿಲ್ಲ!: “ಪದ್ಮಶ್ರೀ ಪ್ರಶಸ್ತಿ ಬಂದಿರುವುದು ತಿಳಿದಾಗಿನಿಂದಲೂ ಈ ಪ್ರಶಸ್ತಿಗೆ ನಾನು ಅರ್ಹನೆ? ಎಂದು ಆತ್ಮಾವಲೋಕನ ಮಾಡಿಕೊಳ್ಳುತ್ತಿದ್ದೇನೆ. ಪ್ರಶಸ್ತಿ ಸಿಕ್ಕಿದಾಗಿನಿಂದ ಯಾವ ರಾಜಕಾರಣಿಗೂ ಕಮ್ಮಿಯಿಲ್ಲದಷ್ಟು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೇನೆ. ಈ ಮೊದಲು ಕೆಲವು ಸಂದರ್ಭಗಳಲ್ಲಿ ನೀವು ಎಲ್ಲಿದ್ದೀರಾ, ಬದುಕಿದ್ದೀರಾ? ಎಂದು ಸಹ ಕೇಳುತ್ತಿರಲಿಲ್ಲ.
ಏನೋ 1960ರಿಂದ ಒಬ್ಬ ಪದ್ಯ, ಕಾವ್ಯ ಬರೆಯುತ್ತಿದ್ದಾನೆ. ವಾಲ್ಮೀಕಿ ರೀತಿ ಸುತ್ತಲೂ ಹುತ್ತ ಕಟ್ಟಿಕೊಂಡು, ಹೆಂಡತಿ-ಮಕ್ಕಳು ಬೇಡ, ಯಾವುದೇ ವ್ಯವಹಾರ, ಹಣ, ಕಾರು, ಬಂಗಲೆ ಬೇಡವೆಂದು ತನ್ನದೇ ಆದ ಕಲ್ಪನಾ ಲೋಕದಲ್ಲಿದ್ದಾನೆ. ಪದ್ಯ ಬರಿತಾನೆ… ಒಳ್ಳೆಯ ಪದ್ಯ ಬರಿತಾನೆ ಎಂಬ ಕಾರಣಕ್ಕೆ ಪ್ರಶಸ್ತಿ ನೀಡಿರಬಹುದು,’ ಎಂದು ದೊಡ್ಡರಂಗೇಗೌಡರು ಮುಗುಳ್ನಕ್ಕರು.
ಕೋರಿಯಾ ಭೂಪನಿಗೆ ಸಿ.ಡಿ ಕಳಿಸಿ: ರಸಿಕರಿಗೆ ವೈಶಾಲ್ಯ ಮನ, ಆಸ್ವಾದಿಸುವ ಗುಣ, ಹೃದಯವಂತಿಕೆ ಹಾಗೂ ಸಂಸ್ಕಾರವಿರುತ್ತದೆ. ಆದರೆ, ಕೆಲವರಿಗೆ ಆ ಸಂಸ್ಕಾರ ಇರುವುದಿಲ್ಲ. ಉದಾಹರಣೆಗೆ ಉತ್ತರ ಕೋರಿಯಾದ ಮಹಾಭೂಪನಿಗೆ (ಕಿಮ್ ಜಾಂಗ್ ಉನ್) ಸಂಸ್ಕಾರವೇ ಇಲ್ಲ. ಎಲ್ಲರೂ ಅವನ ವಿಳಾಸ ತೆಗೆದುಕೊಂಡು ಒಂದಷ್ಟು ಸಂಗೀತದ ಸಿಡಿಗಳನ್ನು ಕಳುಹಿಸಿದರೆ, ಒಂದಾದರೂ ಹಾಡು ಕೇಳಿ ಯುದ್ಧ ಬಿಡಬಹುದೇನೋ ಎಂದು ಅವರು ಚಟಾಕಿ ಹಾರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.