ಜ. 31: ತಾಮ್ರವರ್ಣದ ಸೂಪರ್‌ಮೂನ್‌ ಚಂದ್ರಗ್ರಹಣ


Team Udayavani, Jan 28, 2018, 3:16 PM IST

28-Jan–16.jpg

ಉಡುಪಿ: ಬುಧವಾರ (ಜ. 31) ನಡೆಯುವ ಚಂದ್ರಗ್ರಹಣ ವಿಶೇಷವಾದುದು. ಅದು ಕೇವಲ ಹುಣ್ಣಿಮೆಯಲ್ಲ, ಸೂಪರ್‌ಮೂನ್‌ ಹುಣ್ಣಿಮೆ. ಜತೆಗೆ ಖಗ್ರಾಸ ಗ್ರಹಣದೊಂದಿಗೆ ಚಂದ್ರೋದಯ ವಾಗಲಿದೆ. ಹೀಗಾಗುವುದು ಸುಮಾರು 150 ವರ್ಷಕ್ಕೊಮ್ಮೆ ಎನ್ನುತ್ತಾರೆ ಖಗೋಳ ಪರಿಣತರು.

ವರ್ಷದಲ್ಲಿ ಎರಡು ಮೂರು ಹುಣ್ಣಿಮೆಗಳು ಸೂಪರ್‌ಮೂನ್‌ ಆಗುತ್ತವೆ. ಅಂದು ಚಂದ್ರ ಸಹಜಕ್ಕಿಂತ ಸುಮಾರು 14 ಪಟ್ಟು ದೊಡ್ಡದಾಗಿ ಕಂಡು 28 ಪಟ್ಟು ಹೆಚ್ಚು ಪ್ರಭೆಯಿಂದ ಕೂಡಿರುತ್ತಾನೆ. ಚಂದ್ರ ದೀರ್ಘ‌ವೃತ್ತದಲ್ಲಿ ಭೂಮಿಯನ್ನು ಪರಿ ಭ್ರಮಿಸುತ್ತಿರುವುದರಿಂದ 28 ದಿನಗಳಿಗೊಮ್ಮೆ ಸಮೀಪವಿರುತ್ತಾನೆ (ಪೆರಿಜಿ) ಹಾಗೂ ಇನ್ನೊಮ್ಮೆ ದೂರದಲ್ಲಿರುತ್ತಾನೆ (ಎಪೊಜಿ). ಭೂಮಿ ಹಾಗೂ ಚಂದ್ರನ ದೂರ ಸರಾಸರಿ ಸುಮಾರು 3.84 ಲಕ್ಷ ಕಿ.ಮೀ. ದೀರ್ಘ‌ವೃತ್ತದಲ್ಲಿ ಪರಿಭ್ರಮಿಸುತ್ತ ಹತ್ತಿರ ಬಂದಾಗ 3.56 ಲ.ಕಿ.ಮೀ ದೂರದಲ್ಲಿರುತ್ತಾನೆ ಹಾಗೂ ಇನ್ನೊಮ್ಮೆ 4.6 ಲ.ಕಿ.ಮೀ. ದೂರಕ್ಕೆ ಹೋಗುತ್ತಾನೆ. ಸೂಪರ್‌ಮೂನ್‌ ಚಂದ್ರ ಹತ್ತಿರಕ್ಕೆ ಬರುವ ವಿದ್ಯಮಾನವಾಗಿದ್ದು, ಆಗ ಸರಾಸರಿಗಿಂತ ಸುಮಾರು 30,000 ಕಿ.ಮೀ. ಸಮೀಪ ಚಂದ್ರನಿರುವುದರಿಂದ ದೊಡ್ಡದಾಗಿ ನಮಗೆ ಕಾಣಿಸುತ್ತಾನೆ. ಬುಧವಾರ ಸೂಪರ್‌ಮೂನ್‌ ಚಂದ್ರ 3,58,995 ಕಿ.ಮೀ. ದೂರದಲ್ಲಿರುತ್ತಾನೆ. 

ತಾಮ್ರವರ್ಣದ ಖಗ್ರಾಸ ಚಂದ್ರ
ಚಂದ್ರಗ್ರಹಣವಾಗಬೇಕಾದರೆ ಸೂರ್ಯ, ಭೂಮಿ, ಚಂದ್ರ ಸರಳರೇಖೆಯಲ್ಲಿರಬೇಕು. ಹಾಗಾದಾಗ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳದೆ ಗ್ರಹಣ ಸಂಭವಿಸುತ್ತದೆ. ಜ. 31ರಂದು ಖಗ್ರಾಸ ಗ್ರಹಣದೊಂದಿಗೆ ಚಂದ್ರೋದಯವಾಗುತ್ತದೆ. ಅಂದರೆ ಸೂರ್ಯನ ಬೆಳಕು ಬೀಳದ ಚಂದ್ರನ ಉದಯ. ಖಗ್ರಾಸ ಚಂದ್ರಗ್ರಹಣದಲ್ಲಿ ಸೂರ್ಯನ ಬೆಳಕು ನೇರವಾಗಿ ಚಂದ್ರನ ಮೇಲೆ ಬೀಳದಿದ್ದರೂ ಭೂಮಿಯ ವಾತಾವರಣದಿಂದ ಚದುರಿದ ಬೆಳಕು ಚಂದ್ರನ ಮೇಲೆ ಬೀಳುತ್ತದೆ. ಹಾಗಾಗಿ ಖಗ್ರಾಸ ಗ್ರಹಣಗ್ರಸ್ತ ಚಂದ್ರ ತಾಮ್ರವರ್ಣದಲ್ಲಿ ಕಾಣಿಸುತ್ತಾನೆ. ಇದೊಂದು ಪ್ರಕೃತಿಯ ಸುಂದರ ವಿದ್ಯಮಾನ, ನೆರಳು ಬೆಳಕಿನ ಆಟ.

ಗ್ರಹಣ ವೀಕ್ಷಣೆ
ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಬಹುದು, ಎತ್ತರದಲ್ಲಿ ನಿಂತು ಚಂದ್ರೋದಯ ವೀಕ್ಷಿಸಬಹುದು ಎಂದು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಸಂಯೋಜಕ ಡಾ| ಎ.ಪಿ. ಭಟ್‌ ತಿಳಿಸಿದ್ದಾರೆ.

. ಗ್ರಹಣ ಆರಂಭ: ಸಂಜೆ 5.18 ಗಂಟೆ
. ಖಗ್ರಾಸ ಗ್ರಹಣ ಆರಂಭ: 6.21 ಗಂಟೆ
. ಚಂದ್ರೋದಯ ಸಮಯ: 6.29 ಗಂಟೆ
. ಗರಿಷ್ಠ ಗ್ರಹಣ ಸಮಯ: 6.59 ಗಂಟೆ
. ಖಗ್ರಾಸ ಗ್ರಹಣ ಅಂತ್ಯ: 7.37 ಗಂಟೆ
. ಗ್ರಹಣ ಮುಕ್ತಾಯ: 8.41 ಗಂಟೆ

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

shami

BGT 2024: ಟೀಂ ಇಂಡಿಯಾಗೆ ಗುಡ್ ನ್ಯೂಸ್:‌ ಆಸೀಸ್‌ ಸರಣಿಗೆ ತಂಡ ಸೇರಲಿದ್ದಾರೆ ಶಮಿ

ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ

Charmadi: ಮೃತ್ಯುಂಜಯ ನದಿಯಲ್ಲಿ ಕಾಣಿಸಿಕೊಂಡ ಒಂಟಿ ಸಲಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು

Tilak Varma broke Virat Kohli’s T20I record

Team India: ವಿರಾಟ್‌ ಕೊಹ್ಲಿ ದಾಖಲೆ ಮುರಿದ ತಿಲಕ್‌ ವರ್ಮಾ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

Master Rohit: ರಸ್ತೆ ಅಪಘಾತ ʼಕಾಟೇರʼ ಬಾಲನಟ ರೋಹಿತ್‌ಗೆ ಗಂಭೀರ ಗಾಯ

ರಸ್ತೆ ಅಪಘಾತ: ಮುದ್ದೇಬಿಹಾಳದ ಯುವಕ ಕಲಬುರ್ಗಿಯಲ್ಲಿ ಮೃತ್ಯು

Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು

Darshan’s Krantiveera Sangolli Rayanna movie to re release

Re Release: ದರ್ಶನ್‌ ಮತ್ತೊಂದು ಚಿತ್ರ ಮರು ಬಿಡುಗಡೆ: ರೀರಿಲೀಸ್‌ನತ್ತ ಸಂಗೊಳ್ಳಿ ರಾಯಣ್ಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.