ಟೆನಿಸ್ ದಂತಕಥೆ ಫೆಡರರ್ 20 ಗ್ರ್ಯಾನ್‌ಸ್ಲಾಮ್ ಒಡೆಯ
Team Udayavani, Jan 29, 2018, 6:15 AM IST
ಮೆಲ್ಬರ್ನ್: ಟೆನಿಸ್ ದಂತಕಥೆ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್ ತನ್ನ 36ನೇ ವಯಸ್ಸಿನಲ್ಲಿ ಆಸ್ಟ್ರೇಲಿಯನ್ ಓಪನ್ ಗೆಲ್ಲುವ ಮೂಲಕ 20 ಗ್ರ್ಯಾನ್‌ಸ್ಲಾಮ್ ಒಡೆಯರಾಗಿದ್ದಾರೆ.
ಪುರುಷರ ವಿಭಾಗದಲ್ಲಿ ಇದು ಸಾರ್ವಕಾಲಿಕ ದಾಖಲೆಯಾಗಿದೆ. 16 ಗ್ರ್ಯಾನ್‌ಸ್ಲಾಮ್ ಗೆದ್ದಿರುವ ರಫಾಯೆಲ್ ನಡಾಲ್ ಗರಿಷ್ಠ ಗ್ರ್ಯಾನ್‌ಸ್ಲಾಮ್ ವಿಜೇತರಲ್ಲಿ 2ನೇ ಸ್ಥಾನದಲ್ಲಿದ್ದಾರೆ. ಭಾನುವಾರ ನಡೆದ ಫೈನಲ್‌ನಲ್ಲಿ ಫೆಡರರ್ 6-2, 6-7(5/7), 6-3, 3-6, 6-1 ರಿಂದ ಕ್ರೋಷಿಯಾದ ಮರಿನ್ ಸಿಲಿಕ್ ವಿರುದ್ಧ ಗೆಲುವು ಸಾಧಿಸಿದರು. ಇಬ್ಬರ ನಡುವಿನ ಹೋರಾಟ 3 ಗಂಟೆ 3 ನಿಮಿಷಗಳ ಕಾಲ ನಡೆಯಿತು. ಈ ಗೆಲುವಿನ ಮೂಲಕ ಫೆಡರರ್ 6ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಗೆಲುವು ಸಾಧಿಸಿ ಜೊಕೊವಿಚ್ ಮತ್ತು ರಾಯ್ ಎಮರ್ಸನ್ ದಾಖಲೆ ಸರಿಗಟ್ಟಿದ್ದಾರೆ.
ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದ ಮಾಜಿ ನಂ.1 ಶ್ರೇಯಾಂಕಿತ ಫೆಡರರ್‌ಗೆ 2ನೇ ಸೆಟ್‌ನಲ್ಲಿ ವಿಶ್ವ ನಂ.3ನೇ ಶ್ರೇಯಾಂಕಿತ ಸಿಲಿಕ್ ಆಘಾತ ನೀಡಿದರು. ಭರ್ಜರಿ ಹೋರಾಟ ನಡೆದ 2ನೇ ಸೆಟ್‌ನಲ್ಲಿ ಬ್ರೇಕ್ ಪಾಯಿಂಟ್‌ನಲ್ಲಿ ಸಿಲಿಕ್ ಗೆಲುವು ಸಾಧಿಸಿದರು. 3ನೇ ಸೆಟ್ ಫೆಡರರ್ ಗೆದ್ದರೆ, 4ನೇ ಸೆಟ್ ಸಿಲಿಕ್ ಗೆದ್ದರು. ಹೀಗಾಗಿ 5ನೇ ಸೆಟ್ ನಿರ್ಣಾಯಕವಾಗಿತ್ತು. ಈ ಹಂತದಲ್ಲಿ ರ್ಯಾಕೆಟ್‌ನಿಂದ ಭರ್ಜರಿ ಹೊಡೆತಗಳನ್ನು ಸಿಡಿಸಿದ ಫೆಡರರ್ 6-1 ರಿಂದ ಗೆದ್ದು 20ನೇ ಗ್ರ್ಯಾನ್‌ಸ್ಲಾಮ್ ವಿಜೇತರಾದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Team India; ಕಿವೀಸ್ ಸರ್ಜನ್ ಭೇಟಿಯಾದ ಬುಮ್ರಾ: ಚಾಂಪಿಯನ್ಸ್ ಟ್ರೋಫಿಗೆ ಅನುಮಾನ?
SUFC: ಸೌತ್ ಯುನೈಟೆಡ್ ಫುಟ್ಬಾಲ್ ಕ್ಲಬ್ ನಿಂದ ಮೊಟ್ಟಮೊದಲ ಇಂಟರ್-ಸಿಟಿ ಪಂದ್ಯಾವಳಿ ಆಯೋಜನೆ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
AUSvSL: ಲಂಕಾ ಸರಣಿಗೆ ಆಸೀಸ್ ತಂಡ ಪ್ರಕಟ: ಸ್ಟೀವ್ ಸ್ಮಿತ್ ಗೆ ನಾಯಕತ್ವ ಪಟ್ಟ
Vijay Hazare Trophy: ಏಕದಿನ ಪ್ರಸಿದ್ಧ್ ಕೃಷ್ಣ ,ಪಡಿಕ್ಕಲ್ ಆಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.