ಮನೆಯಲ್ಲಿ ಸಾಕು ಪ್ರಾಣಿಗಳು ಎಲ್ಲಿರಬೇಕು?


Team Udayavani, Jan 29, 2018, 12:43 PM IST

29-24.jpg

ಹಸುಗಳನ್ನು ನಿರ್ದಿಷ್ಟವಾದ  ಸ್ಥಳದಲ್ಲಿ ಕಟ್ಟಿ ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ,
ಮುಕ್ತ ಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಕೊಟ್ಟಿಗೆಗಳನ್ನು ದಕ್ಷಿಣ ದಿಕ್ಕಿನಲ್ಲಿ ಕಟ್ಟುವುದು ಸರಿ ಅಲ್ಲ. ಹಾಗೆಯೇ
ಕುರಿ, ಕೋಳಿ, ಹಂದಿ ಸಾಕಣಿಕೆ ನಿಷಿದ್ಧವಲ್ಲ.

ಮನೆಯ ವಾಸ್ತುವಿಗೆ ಪಂಚಭೂತ ತತ್ವಾಧಾರಿತ ಬೆಳಕು, ಗಾಳಿ, ನೀರು, ಮಣ್ಣು ಹಾಗೂ ಆಕಾಶ ಧಾತುಗಳು ಮುಖ್ಯವಾದವು ಎಂಬುದು ನಾವೆಲ್ಲಾ ತಿಳಿದ ವಿಚಾರ. ಆದರೆ ಈ ಪಂಚಭೂತ ತತ್ವಗಳು ನಿರಂತರವಾಗಿ ಮಲಿನವಾಗಲೂ ತೊಡಗುತ್ತವೆ ಕ್ಷಿಪ್ರವಾಗಿ. ಹೀಗಾಗಿ ಈ ಪಂಚ ಭೂತಾತ್ಮಕ ಘಟಕಗಳು ಒಂದು ಸಾವಯವ ಚಕ್ರದ ನಿಯಂತ್ರಣಕ್ಕೆ ಒಳಗೊಂಡಾಗ ತಂತಾನೇ ಇವು 
ಅಶುದ್ಧತೆಯಿಂದ ಶುದ್ಧತೆಗೆ ಪರಿವರ್ತನೆಗೊಳ್ಳುತ್ತವೆ. ಮನುಷ್ಯ ಮಿದುಳಿನ ವಿಕಾಸದಿಂದಾಗಿ ಪರಿಸರವನ್ನು ಮಲಿನಗೊಳಿಸದ ಹಾಗೆ ಹೇಗೆ ರಕ್ಷಿಸಬೇಕೆಂಬುದನ್ನು ತಿಳಿದಿರುತ್ತಾನೆ. ಆದರೆ ಸಾಕು ಪ್ರಾಣಿಗಳಿಗೆ ಬುದ್ಧಿ ವಿಕಸನ ಇರುವುದಿಲ್ಲ. ತಮ್ಮನ್ನೇ ತಾವು ಶುದ್ಧೀಕರಿಸಿಕೊಳ್ಳುವ ವಿಚಾರದಲ್ಲಿ ಅವು ಹಿಂದೆ ಬೀಳುತ್ತವೆ. ಕಟ್ಟಿಕೊಂಡ ಮನೆಯಲ್ಲಿ ಸ್ವಾಭಾವಿಕವಾಗಿ ಅವು ಶುದ್ಧವಾಗಿರಲು 
ಸಾಧ್ಯವಾಗದು. ಹೀಗಾಗಿ ಮನೆಯೊಳಗಡೆ ಪ್ರಾಣಿಗಳನ್ನು ಸಾಧ್ಯವಾದಷ್ಟು ದೂರವಿಡಲು ಪ್ರಯತ್ನಿಸಬೇಕು.  ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಹಾಸಿಗೆಯ ಮೇಲೆ ಮಲಗಿಸಿಕೊಳ್ಳುವ, ಅವುಗಳೊಂದಿಗೆ ಆಟವಾಡುವ, ಮನೆಯಲ್ಲೇ ಒಂದೆಡೆ ಚೈನಿಗೆ
ಕಟ್ಟಿ ಈ ಪ್ರಾಣಿಗಳ ಸ್ವಾತಂತ್ರ್ಯಕ್ಕೆ ಮೊಟಕು ಹಾಕುವ ಕಾಯಕವನ್ನ ನಿರಂತರವಾಗಿ ಮುಂದುವರಿಸಿಕೊಂಡು ಬರುತ್ತಾರೆ. ಹಲವರನ್ನು ಗಮನಿಸಿರಬಹುದು. ಎಲ್ಲೋ ಮನೆಯಿಂದ ಹೊರಗೆಳೆದು ತಂದು ಸಾರ್ವಜನಿಕ ಸ್ಥಳದಲ್ಲಿ (ಉದಾ-ನಾಯಿಗಳನ್ನು) ಕಕ್ಕಸು, ಮೂತ್ರ ಇತ್ಯಾದಿ ವಿಸರ್ಜನೆಗಳನ್ನು ನೆರವೇರಿಸುತ್ತಾರೆ. ಸಾಕು ಪ್ರಾಣಿಗಳು ಬೇಕು, ಆದರೆ ಅವುಗಳ ಜವಾಬ್ದಾರಿ ಯುಕ್ತವಾಗಿ
ನಡೆಸಬೇಕೆಂಬ ಯೋಚನೆಯಲ್ಲಿ ಇವರು ಇರಲಾರರು. ಹಾಗೆಂದು ಒಂದು ರೀತಿಯ ಪ್ರೀತಿ ಹಾಗೂ ವಾತ್ಸಲ್ಯವನ್ನ
ಈ ಪ್ರಾಣಿಗಳ ಕುರಿತು ತೋರಿಸುತ್ತಾರೆ. ಆದರೂ ಸ್ವಾತಂತ್ರ್ಯ ಹರಣ ನಡೆದಿರುತ್ತದೆ.

ಎಷ್ಟೋ ಮನೆಗಳಲ್ಲಿ ಗಿಣಿ, ಬಣ್ಣದ ಪಕ್ಷಿ, ಲವ್‌ ಬರ್ಡ್ಸ್‌ ಇತ್ಯಾದಿ ಸಾಕುತ್ತಾರೆ. ಆದರೆ ಈ ಮೂಕ ಜೀವಿಗಳನ್ನು ಬಂಧಿಸಿರುತ್ತಾರೆ. ಸ್ವತ್ಛಂದ ಹಾರಾಟಗಳಿಗೂ ತಡೆ ತರುತ್ತಾರೆ. ಇದು ಮನೆಯೊಳಗಿನ ಮೂಕ ರೋದನಕ್ಕೆ ಸಾಕ್ಷಿಯಾಗುತ್ತವೆ. ಜೀವಗಳು ಪರಿತಪಿಸುವ
ವರ್ತಮಾನ ಮನೆಯಲ್ಲಿ ನಡೆಯುವುದು ಸಹಾ ಸರಿಯಾದುದಲ್ಲ. ತಿಳಿದಿರಲಿ. ಇನ್ನು ಹಸುಗಳನ್ನು ನಿರ್ದಿಷ್ಟವಾದ ಸ್ಥಳದಲ್ಲಿ ಕಟ್ಟಿ
ಹಾಲು, ಹೈನು ಇತ್ಯಾದಿಗಳಿಗಾಗಿ ಪ್ರತ್ಯೇಕ ಕೊಟ್ಟಿಗೆ ದೊಡ್ಡಿಗಳನ್ನು ರೂಪಿಸಿ, ಯುಕ್ತ, ಮುಕ್ತ ಸ್ಥಳಾವಕಾಶ ರೂಪಿಸಿದರೆ ಅದು ಒಳ್ಳೆಯದೇ ಆಗಿದೆ. ಈ ಕೊಟ್ಟಿಗೆಗಳು ದಕ್ಷಿಣ ದಿಕ್ಕಿನಲ್ಲಿ ಕಟ್ಟಲ್ಪಡುವುದು ಸರಿ ಅಲ್ಲ. ಹಾಗೆಯೇ ಕುರಿ, ಕೋಳಿ, ಹಂದಿ ಸಾಕಣಿಕೆಗಳು ನಿಷಿದ್ಧವಲ್ಲ. 

ಜೀವೋ ಜೀವಸ್ಯ ಜೀವನಂ ಎಂಬ ಮಾತು ರೂಢಿಯಲ್ಲಿದೆ. ಜೀವಕ್ಕೆ ಜೀವವೇ ಆಹಾರವಾಗಿದೆ ವಿನಾ ಅನ್ಯ ಮಾರ್ಗಗಳಿಲ್ಲ. ಆದರೆ ಈ ಜೀವ ಜೀವದ ಆಹಾರದ ಬಗೆಗಿನ ಸಂಬಂಧ ಹಿಂಸಾ ಸ್ವರೂಪದ ಆವರಣಗಳನ್ನು ಸಾಧ್ಯವಾದಷ್ಟು ಕಡಿಮೆಯಾಗಿರುವಂತೆ
ಜಾಗ್ರತೆವಹಿಸಬೇಕು. ಈ ಜಾಗ್ರತೆಯು ಅಜಾಗ್ರತೆ ಯಾದಲ್ಲಿ ಕೆಟ್ಟ ಪರಿಣಾಮಗಳಿಗೆ ದಾರಿಯಾಗದೇ ಇರದು. ಪ್ರಕೃತಿಗೆ ಬದುಕೂ ಬೇಕು.

ನಾಶವೂ ಬೇಕು. ಅನಿವಾರ್ಯವಾಗುವ ಅಳತೆಯಲ್ಲಿ ನಾಶವಿದ್ದಾಗ, ಕ್ರೌರ್ಯಕ್ಕೆ ಸ್ಥಳವಿರದು. ಪೂರ್ತಿ ಕ್ರೌರ್ಯವೇ ತುಂಬಿ ಹೋದರೆ,
ಜಗದ್ರಕ್ಷಕ ಸ್ವರೂಪಿಯಾದ ಪ್ರಕೃತಿ ದೇವತೆ ಮುನಿಯದಿರಲಾರಳು.  

ಮೊ: 8147824707
ಅನಂತಶಾಸ್ತ್ರಿ

ಟಾಪ್ ನ್ಯೂಸ್

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

ಡಿ. 26: ಶಬರಿಮಲೆಯಲ್ಲಿ ಮಂಡಲ ಪೂಜೆ

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು

Madikeri: ಕೊಟ್ಟಿಗೆಯಿಂದ ಹಸು ಕಳವು; ದೂರು ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

football

Football Ranking: ಭಾರತ ಒಂದು ಸ್ಥಾನ ಪ್ರಗತಿ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.