ಜೆಡಿಎಸ್ ಸಂಘಟನೆಗೆ ಕುಮಾರ ಪರ್ವ
Team Udayavani, Jan 29, 2018, 3:00 PM IST
ಮುದ್ದೇಬಿಹಾಳ: ಜ. 29ರಿಂದ 5 ದಿನ ದೇವರಹಿಪ್ಪರಗಿ ಮತ್ತು ಮುದ್ದೇಬಿಹಾಳ ವಿಧಾನಸಭಾ ಮತಕ್ಷೇತ್ರಗಳಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರವಾಸ ಕೈಗೊಂಡು ಬಹಿರಂಗ ಸಭೆ ನಡೆಸಿ ಜೆಡಿಎಸ್ ಪರ ಪ್ರಚಾರ ನಡೆಸಲಿದ್ದಾರೆ ಎಂದು ದೇವರಹಿಪ್ಪರಗಿ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ತಿಳಿಸಿದರು.
ದಾಸೋಹ ನಿಲಯದಲ್ಲಿ ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 29ರಂದು ಬೆಳಗ್ಗೆ 8ಕ್ಕೆ ಯಲಗೂರದಲ್ಲಿ ಯಲಗೂರೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪ್ರವಾಸ ಕಾರ್ಯಕ್ರಮ ಪ್ರಾರಂಭಗೊಳ್ಳಲಿದೆ. ಬೆಳಿಗ್ಗೆ 9ಕ್ಕೆ ಹುಲ್ಲೂರಿನ ಸಿಬಿಎಸ್‌ಸಿ ಶಾಲೆಯಲ್ಲಿ ಮೊದಲ ಕಾರ್ಯಕ್ರಮ ನಡೆಯಲಿದೆ. ಅಂದು ಹುಲ್ಲೂರ, ಮುದ್ದಾಪುರ, ಜೀರಲಭಾವಿ, ಇಟಗಿ, ಆರೇಶಂಕರ, ರಾಜನಾಳ, ಬ್ಯಾಲಾಳ, ಕಣಕಾಲ, ಜಾಯವಾಡಗಿ, ಬ್ಯಾಕೋಡ, ಹೂವಿನ ಹಿಪ್ಪರಗಿ, ಕುದರಿ ಸಾಲವಾಡಗಿಯಲ್ಲಿ, 30 ರಂದು ಗಂಗನಳ್ಳಿ, ಹಿಟ್ಟಿನಹಳ್ಳಿ, ಚಿಕ್ಕರೂಗಿ, ಕಡ್ಲೆàವಾಡ, ಮುಳಸಾವಳಗಿ, ನಿವಾಳಖೇಡ, ಹರನಾಳ, ಇಂಗಳಗಿ, ದೇವರ ಹಿಪ್ಪರಗಿ, ಬೊಮ್ಮನಜೋಗಿ, ಇಬ್ರಾಹಿಂಪುರ, ಜಾಲವಾದ, ಕೋರವಾರದಲ್ಲಿ, 31ರಂದು ದೇವರಹಿಪ್ಪರಗಿ, ಕೊಂಡಗೂಳಿ, ಹಂಚಲಿ, ಬೀಬಿ ಇಂಗಳಗಿ, ಕಲಕೇರಿಯಲ್ಲಿ, ಫೆ. 1ರಂದು ಮುದ್ದೇಬಿಹಾಳ, ಕುಂಟೋಜಿ, ಮಿಣಜಗಿ, ಬಳಗಾನೂರ, ಕೊಣ್ಣೂರ, ತಾಳಿಕೋಟದಲ್ಲಿ, ಫೆ. 2ರಂದು ಮುದ್ದೇಬಿಹಾಳ, ಕವಡಿಮಟ್ಟಿ, ಹಿರೇಮುರಾಳ, ನಾಗರಬೆಟ್ಟ, ನಾಲತವಾಡದಲ್ಲಿ ಸಭೆ ನಡೆಸಿ ರಸ್ತೆ ಮಾರ್ಗವಾಗಿ ಬೆಂಗಳೂರಿಗೆ ತೆರಳಲಿದ್ದಾರೆ ಎಂದರು.
ಇದು ಕುಮಾರಪರ್ವ ಭಾಗ-2 ಕಾರ್ಯಕ್ರಮ ಆಗಿದೆ. ನಿತ್ಯ 10 ಹಳ್ಳಿಗಳಿಗೆ ಭೇಟಿ, 2-3 ಸಾರ್ವಜನಿಕ ಸಭೆ, ನೇರವಾಗಿ ರೈತ ಮತ್ತು ಸಾಮಾನ್ಯ ಜನರ ಸಂಪರ್ಕ ಮಾಡುವ ತೀರ್ಮಾನ ಕೈಗೊಳ್ಳಲಾಗಿದ್ದು ಆ ಪ್ರಕಾರ ಕಾರ್ಯಕ್ರಮ ಪಟ್ಟಿ ತಯಾರಿಸಲಾಗಿದೆ. ಎರಡೂ ಮತಕ್ಷೇತ್ರದಲ್ಲಿರುವ ಮಹಿಳೆಯರು, ಮಹಿಳಾ ಸಂಘಗಳನ್ನು ಸಂಪರ್ಕಿಸುವ ಕೆಲಸ ನಡೆದಿದೆ.
ಪ್ರತಿಯೊಂದು ಸಾರ್ವಜನಿಕ ಸಭೆಯಲ್ಲಿ ಕನಿಷ್ಠ 5-10 ಸಾವಿರ ಜನ ಸೇರಿಸುವ ಸಿದ್ಧತೆ ನಡೆಸಿದ್ದು ದಿನಕ್ಕೆ 15-30 ಸಾವಿರ ಜನರನ್ನುದ್ದೇಶಿಸಿ ಕುಮಾರಸ್ವಾಮಿ ಮಾತನಾಡಲಿದ್ದಾರೆ. ಹಳ್ಳಿಗೆ ಭೇಟಿ ನೀಡಿದಾಗ ನಿತ್ಯ 2-3 ಸಾವಿರ ಜನರ ವೈಯುಕ್ತಿಕ ಭೇಟಿ ಮಾಡಲು ತೀರ್ಮಾನಿಸಿದೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ ಆಡಳಿತದಿಂದ ಜನ ಬೇಸತ್ತಿದ್ದಾರೆ. ಎರಡೂ ರಾಷ್ಟ್ರೀಯ ಪಕ್ಷಗಳ ಬಗ್ಗೆ ಬೇಸರ ಮೂಡಿದೆ. ಈ ಬಾರಿ ಜೆಡಿಎಸ್ ಬೆಂಬಲಿಸಲು ಎಲ್ಲರೂ ಸಿದ್ಧರಾಗಿದ್ದಾರೆ. ಕುಮಾರಸ್ವಾಮಿ ಸಿಎಂ ಆಗಲು ಎಲ್ಲರೂ
ಒಲವು ತೋರಿಸಿದ್ದಾರೆ. ಜೆಡಿಎಸ್ ಬೆಂಬಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಕುಮಾರಸ್ವಾಮಿ ಅವರನ್ನು ಅದ್ಧೂರಿಯಿಂದ ಬರಮಾಡಿಕೊಳ್ಳಲು ನಾವೆಲ್ಲ ಸಿದ್ಧರಾಗಿದ್ದೇವೆ ಎಂದರು.
ಈ ಭಾಗದಲ್ಲಿ ಜೆಡಿಎಸ್ ಬಲಿಷ್ಠವಾಗಿ ಕಟ್ಟಲು ಸಾಕಷ್ಟು ಶ್ರಮಿಸಿರುವ ದಿ| ಜೆ.ಎಸ್. ದೇಶಮುಖ ಅವರ ಪತ್ನಿ ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರು ಜೆಡಿಎಸ್ ಬೆಂಬಲಿಸುತ್ತಾರೆ. ಈ ವಿಷಯದಲ್ಲಿ ಎದ್ದಿರುವ ಊಹಾಪೋಹಗಳೆಲ್ಲ ಸುಳ್ಳು. ಹಿಂದೆ ನಡೆದ ಜಿಪಂ, ತಾಪಂ, ನಾಲತವಾಡ ಪಪಂ ಚುನಾವಣೆಯಲ್ಲಿ ಅವರು ಜೆಡಿಎಸ್ ಪರ ಸಕ್ರಿಯವಾಗಿದ್ದರು. ಅವರು ಹೇಳಿದವರಿಗೆ ಟಿಕೆಟ್ ಕೊಡಲಾಗಿದೆ. ವಿಮಲಾಬಾಯಿ ಅಮ್ಮಾವ್ರ ವಿಷಯದಲ್ಲಿ
ಗೊಂದಲ, ಊಹಾಪೋಹಕ್ಕೆ ಯಾರೂ ಮಹತ್ವ ಕೊಡಬಾರದು. ಕುಮಾರಸ್ವಾಮಿ ಅವರು ಪ್ರವಾಸದ ಸಂದರ್ಭ ಅಮ್ಮಾವ್ರನ್ನ ಭೇಟಿ ಮಾಡಿ ಆರೋಗ್ಯ ವಿಚಾರಿಸಲಿದ್ದಾರೆ ಎಂದು ನಡಹಳ್ಳಿ ತಿಳಿಸಿದರು.
ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ, ಪುರಸಭೆ ಸದಸ್ಯರಾದ ಮನೋಹರ ತುಪ್ಪದ, ಶಿವಪುತ್ರಯ್ಯ, ಮುಖಂಡರಾದ ಸಂಗಪ್ಪ ಲಕ್ಷಟ್ಟಿ, ದಾನಪ್ಪ ನಾಗಠಾಣ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಅರ್ಷದ್ ಮೋಮೀನ್, ಮಹಾಂತೇಶ ಬೂದಿಹಾಳಮಠ, ಸಂಗಪ್ಪ ಬಾಗೇವಾಡಿ, ಸಂಜಯ್ ಓಸ್ವಾಲ್, ಮಹಾಂತೇಶ ಗಂಗನಗೌಡರ, ಜಿಲಾನಿ ಮುದ್ನಾಳ ಸೇರಿದಂತೆ ಹಲವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.