ಬೈದಾಟ ನಿಲ್ಲಿಸಿ, ಏನು ಮಾಡುತ್ತೇವೆ ಎನ್ನುವುದು ತಿಳಿಸಿ
Team Udayavani, Jan 29, 2018, 3:15 PM IST
ಜಗಳೂರು: ನಮ್ಮ ರಾಜಕಾರಣಿಗಳು ಯಾರೇ ಆಗಿದ್ದರೂ ಒಬ್ಬರು ಮತ್ತೂಬ್ಬರನ್ನು ತೆಗಳುವುದನ್ನು ಬಿಟ್ಟು ತಾವು ಅಧಿಕಾರಕ್ಕೆ ಬಂದರೆ ಜನರಿಗೆ ಏನು ಮಾಡುತ್ತೇವೆ ಎಂಬುದನ್ನು ದೃಢ ಮಾತುಗಳಲ್ಲಿ ಹೇಳಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ
ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಜಗಳೂರು ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ ಆರನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಚುನಾವಣೆಗಳು ಇನ್ನೇನು ಹತ್ತಿರ ಬರುತ್ತಿವೆ. ಒಬ್ಬರು ಮತ್ತೂಬ್ಬರನ್ನು ಬೈಯ್ಯುವ, ಕಾಲೆಳೆಯುವ ಕೆಲಸ ನಡೆಯುತ್ತಿದೆ. ಈ ದೇಶದಲ್ಲಿ ಘೋಷಣೆಗಳು ಮಿತಿಮೀರಿವೆ. ಪ್ರಜಾಪ್ರಭುತ್ವದ ಆಶಯಗಳು ಈಡೇರಿಲ್ಲ. ಜನಪ್ರತಿನಿಧಿಗಳು ನೀಡುವ ಆಶ್ವಾಸನೆ, ಭರವಸೆಗಳೆಲ್ಲ ಸುಳ್ಳಾಗದೆ ಅವುಗಳನ್ನು ಈಡೇರಿಸುವ ಕೆಲಸ ಮಾಡಬೇಕು ಎಂದು ತಾಕೀತು ಮಾಡಿದರು.
ನಮ್ಮ ಪುರಾತನರು ವಿಚ್ಛಿದ್ರಕಾರಿ ನೀತಿಯನ್ನು ಬೋಧಿಸಿಲ್ಲ. ಸಂವಿಧಾನವನ್ನು ರೂಪಿಸಿದ ಡಾ| ಅಂಬೇಡ್ಕರ್ ಸಹ ಧರ್ಮ
ನಿರಪೇಕ್ಷತೆಯನ್ನೇ ಬೋಧಿಸಿದ್ದಾರೆ. ಎಲ್ಲರನ್ನೂ ಸಮಾನವಾಗಿ ನೋಡುವುದೇ ಧರ್ಮ ನಿರಪೇಕ್ಷತೆ ಎಂಬುದಾಗಿ ಅವರು
ಹೇಳಿದ್ದಾರೆ. ಬಸವಣ್ಣನವರು ಹೇಳಿದ ಮಾತುಗಳು ಸಂವಿಧಾನದ ಭಾಗವಾಗಿವೆ. ಸಂವಿಧಾನ ಹೇಳಿರುವ ಆಶಯದ
ಮಾತುಗಳೆಲ್ಲವೂ ಬಸವಣ್ಣನವರ ಸಾಹಿತ್ಯದಲ್ಲಿ ಪ್ರತಿಬಿಂಬಿತವಾಗಿವೆ ಎಂದು ತಿಳಿಸಿದರು. ದಾವಣಗೆರೆಯ ನಮ್ಮ ಅನುಭವ ಮಂಟಪ
ಶಾಲೆಯಲ್ಲಿ ನರ್ಸರಿ ಶಾಲೆಯಲ್ಲಿ ಓದುತ್ತಿದ್ದ ಮಕ್ಕಳು ಇಂದು ಅಮೆರಿಕಾ ದೇಶದಲ್ಲಿ ಬಹು ದೊಡ್ಡ ಹೆಸರು ಮಾಡಿರುವ ಪರಿಗೆ ನಾವು ಬೆಕ್ಕಸ ಬೆರಗಾಗಿದ್ದೇವೆ. ಹುಣ್ಣಿಮೆ ಮಹೋತ್ಸವದ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಭಕ್ತರಿಗೆ ಆರೋಗ್ಯದ ತಿಳಿವಳಿಕೆ ನೀಡಿರುವ ಇಬ್ಬರು ವೈದ್ಯರ ಸಾಧನೆ ಅಪೂರ್ವವಾದುದು. ಈ ಮಕ್ಕಳ ಸಾಧನೆಯನ್ನು ನಾವು ನರ್ಸರಿ ಶಾಲೆಯಿಂದಲೂ ಗಮನಿಸಿದ್ದೇವೆ. ಬಸಂತ ಕುಮಾರ್ ಅಮೆರಿಕಾದಲ್ಲಿ ನೆಲೆಸಿದ್ದರು. ಪ್ರತಿಭಾವಂತರಾದ ಅವರು ತಮ್ಮ ಆಶಯದಂತೆ ಅಮೆರಿಕಾ ಬಿಟ್ಟು ಬೆಂಗಳೂರಿನಲ್ಲಿ ಬಂದು ನೆಲೆಸಿ ವೈದ್ಯ ವೃತ್ತಿ ಮಾಡುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ಧರ್ಮಗಳು ಜನಾಂಗ ಜನಾಂಗಗಳ ಮಧ್ಯೆ ವಿರಸಕ್ಕೆ ಕಾರಣವಾಗಿವೆ. ಒಬ್ಬ ಕಳ್ಳ ತನ್ನ ಕೈಯಲ್ಲಿರುವ ಚಾಕುವನ್ನು ದರೋಡೆಗೆ
ಬಳಸಿದರೆ ವೈದ್ಯನೊಬ್ಬ ಅದೇ ಚಾಕುವನ್ನು ಮನುಷ್ಯನ ಪ್ರಾಣ ರಕ್ಷಿಸಲು ಬಳಸುತ್ತಾನೆ ಎಂದು ಮಾರ್ಮಿಕವಾಗಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಪ್ರಯತ್ನ: ಬಿಎಸ್ ಯಡಿಯೂರಪ್ಪ
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
Davanagere: ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ರಚನೆಯಾದ 3 ತಂಡಗಳೇ ಅಧಿಕೃತ: ರೇಣುಕಾಚಾರ್ಯ
ಸಹಕಾರ ಭಾರತಿ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಾಣೂರು ನರಸಿಂಹ ಕಾಮತ್ ಆಯ್ಕೆ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.