ವೇದಿಕೆಯಲ್ಲೇ ಕುಸಿದುಬಿದ್ದು ತುಳ್ಳಲ್ ಕಲಾವಿದ ನಿಧನ
Team Udayavani, Jan 30, 2018, 8:24 AM IST
ತ್ರಿಶೂರ್: ಖ್ಯಾತ ಒಟ್ಟನ್ತುಳ್ಳಲ್ ಕಲಾವಿದ ಕಲಾಮಂಡಲಂ ಗೀತಾನಂದನ್(58) ತುಳ್ಳಲ್ ಕಲೆಯ ಪ್ರದರ್ಶನದ ವೇಳೆಯೇ ಕುಸಿದುಬಿದ್ದು, ಮೃತಪಟ್ಟ ಘಟನೆ ನಡೆದಿದೆ.
ತ್ರಿಶೂರ್ನ ಇರಿಂಜಾಲಕ್ಕುಡ ಸಮೀಪದ ದೇವಸ್ಥಾನವೊಂದರಲ್ಲಿ ತುಳ್ಳಲ್ ನೃತ್ಯ ಪ್ರದರ್ಶನ ಮಾಡುತ್ತಿದ್ದಾಗಲೇ ಅವರು ನಿಧನರಾಗಿದ್ದಾರೆ. ಇನ್ನೇನು ಕುಸಿದು ಬೀಳುತ್ತಾರೆ ಎನ್ನುವಾಗ ಅವರು ಹಿಂತಿರುಗಿ ಹಿಮ್ಮೇಳಕ್ಕೆ ಮತ್ತೆ ಮತ್ತೆ ವಂದಿಸಿದ್ದು ಕಂಡುಬಂತು. ಗೀತಾನಂದನ್ರ ದುರಂತ ಅಂತ್ಯವನ್ನು ನೋಡುತ್ತಿದ್ದಂತೆ ಕಲಾಸಕ್ತರು ಆಘಾತಕ್ಕೊಳಗಾದರು. ಈ ಘಟನೆಯ ವಿಡಿಯೋ ಇದೀಗ ದೇಶಾದ್ಯಂತ ವೈರಲ್ ಆಗಿದೆ.
ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕಲಾಮಂಡಲಂ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಈ ಕಲಾವಿದ, 30ಕ್ಕೂ ಹೆಚ್ಚು ಮಲಯಾಳಂ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಲಾಮಂಡಲಂ ಕಲೆ ಮತ್ತು ಸಂಸ್ಕೃತಿ ಡೀಮ್ಡ್ ವಿವಿಯ ತುಳ್ಳಲ್ ವಿಭಾಗದ ಮುಖ್ಯಸ್ಥರಾಗಿಯೂ ಇವರು ಕಾರ್ಯನಿರ್ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್ ಕ್ಷಮೆಗೆ ವೈದ್ಯರ ಪಟ್ಟು
Defamation notice:ಮತಕ್ಕಾಗಿ ಹಣ ಆರೋಪ: ಖರ್ಗೆ,ರಾಹುಲ್ ವಿರುದ್ಧ ತಾಬ್ಡೆ 100 ಕೋಟಿ ದಾವೆ!
Adani: ಲಂಚ ಕೇಸ್; ಜಗನ್ ವಿರುದ್ಧ ಕ್ರಮಕ್ಕೆ ಸಿಎಂ ನಾಯ್ಡು ಚಿಂತನೆ
Supreme Court: ದಿಲ್ಲಿಯ 113 ಚೆಕ್ಪೋಸ್ಟ್ನಲ್ಲಿ ಪೊಲೀಸರನ್ನು ನೇಮಿಸಿ
Delhi Elections: ಆಪ್ನಿಂದ 7 ಉಚಿತ ಯೋಜನೆ ಘೋಷಣೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.