ಆಯುಸ್ಸು ಗಟ್ಟಿ ಇದ್ರ ಮತ್ತೆ ಸಿಗೋಣಾ…


Team Udayavani, Jan 30, 2018, 11:13 AM IST

31-30.jpg

ಒಂದು ಸಲ ನಾನು ಬೆಂಗಳೂರಿಗೆ ಹೊರಡುವ ಪ್ರಸಂಗ ಬಂತು. ರೈಲಿನಲ್ಲಿ ಹೊರಟಿದ್ದೆ. ಜನರಲ್‌ ಬೋಗಿಯ ಪಯಣ, ಒಂದು ಲೆಕ್ಕದಲ್ಲಿ ಒಳ್ಳೆಯದೇ ಅಂತನ್ನಿಸಿತ್ತು. ಒಂದು ಮುಕ್ತ ವಾತಾವರಣ ಅಲ್ಲಿರುತ್ತೆ. ಅಲ್ಲಿ ಜನಸಾಮಾನ್ಯರ ನಡುವಿನ ಪಯಣ ನಮ್ಮದಾಗಿರುತ್ತೆ. ಆದರೆ, ನಾನು ಹೋಗಬೇಕಿದ್ದ ರೈಲೇನೋ ಬಂತು. ಒಳಗೆ ಕಾಲಿಡೋಣವೆಂದರೆ, ಜನ ಕಿಕ್ಕಿರಿದು ನೆರೆದಿದ್ದರು. ಬಾಗಿಲ ಬಳಿ ಒಬ್ಬರ ಮೇಲೊಬ್ಬರು ಜೋತು ಬಿದ್ದಿದ್ದರು. ಒಳಗೆ ಕಾಲಿಡಲು ನನ್ನಿಂದ ಸಾಧ್ಯವೇ ಇಲ್ಲ ಅಂದುಕೊಂಡಾಗ, ರೈಲೊಳಗಿಂದ ಒಬ್ಬ ಪುಣ್ಯಾತ್ಮ, “ಬರ್ರೀ ಸರಾ… ಇಲ್ಲಿ ಜಾಗ ಅದ ನೋಡ್ರಿ’ ಅಂತ ತನ್ನ ಒಂದು ಕಾಲನ್ನು ಮೇಲಕ್ಕೆತ್ತಿ, ನನಗೆ ಒಳಬರಲು ಅನುವು ಮಾಡಿಕೊಟ್ಟರು. “ಅಲ್ಲಪ್ಪಾ, ನಿಂಗೇ ನಿಲ್ಲಲು ಸರಿಯಾಗಿ ಜಾಗವಿಲ್ಲ. ಅಂಥದ್ದರಲ್ಲಿ ನನ್ನನ್ನು ಕರೀತಿಯಲ್ಲ’ ಎಂದಾಗ, “ಅದರಾಗೇನೈತಿ ಬಿಡ್ರಿ, ಇವತ್ತ ನಾ ನಿಮಗ ಅನುಕೂಲ ಮಾಡಿದಂಗ ನಾಳೆ ನನಗ್ಯಾರನ ಮಾಡ್ತಾರ, ಎಲ್ಲರೂ ಅನುಸರಿಸಿಕೊಂಡು ಹೋಗಬೇಕು. ಒಂದಿನ ಇದ್ದ ಇರತಾದಲಿ ಪರಮನೆಂಟ್‌ ಆರಾಮಾಗಿ ಕೂಡೂದು, ಅಲ್ಲಿ ಮಟ ನಾವು ಛಲೋ ಆಗಿ ಯಾರಿಗೂ ಬ್ಯಾಸರ ಆಗದಂಗ ಬಾಳಬೇಕ್ರಿ ಯಪ್ಪಾ’ ಅಂದಾಗ ಆತನ ಜೀವನೋತ್ಸಾಹಕ್ಕೆ ತಲೆ ಬಾಗಿದೆ. 

ಆತ ತಾನಿಳಿಯುವ ನಿಲ್ದಾಣ ಸಮೀಪಿಸಿತೆಂದು ಪಕ್ಕದ ಸೀಟಿನ ವ್ಯಕ್ತಿಯ ಬಳಿ ಕೊಟ್ಟಿದ್ದ ತನ್ನ ಚೀಲವನ್ನು ತೆಗೆದುಕೊಂಡು ಇಳಿಯಲು ಅಣಿಯಾದ. ಆತನ ಕೈಯಲ್ಲಿ ಆಸ್ಪತ್ರೆಯ ವರದಿಗಳು ಇದ್ದಿದ್ದು ನನ್ನ ಕಣ್ಣಿಗೆ ಬಿತ್ತು. ಸುಮ್ಮನೆ ಮಾತಿಗೆಂದು, “ಯಾಕೆ ಸ್ವಾಮಿ? ಇಷ್ಟೊಂದು ಚೆನ್ನಾಗಿದ್ದೀರಿ, ಆದರೂ ಆಸ್ಪತ್ರೆಗೆ ಹೊರಟಿದ್ದೀರಲ್ಲಾ’ ಎಂದಾಗ, ಆತ ಕೂಡಲೇ “ಕ್ಯಾನ್ಸರ್‌’ ಎಂದು ಬಿಡುವುದೇ? ಒಂದು ಕ್ಷಣ ಬೆವತುಹೋದೆ. ಆಗ ಆತನೇ “ನೋಡ್ರಿ, ನನಗ ಈ ಶ್ರೀಮಂತ ರೋಗ ಬಂದದ ಅಂತ ನಾ ಏನು ಅಂಜಿ ಮೂಲ್ಯಾಗ ಕೂಡೋ ಪ್ರಾಣಿ ಅಲ್ಲ. ಏನಾರ ಆಗವಲ್ದಕ ಛಲೋ ಆಗಿ ನಕ್ಕೊಂತ, ಮನ್ಯಾವರ ಕೂಡ ಚಂದನಾಗಿ ಮಾತಾಡಿಗೋತ ಇರತೇನಿ’ ಎಂದಾಗ ನನಗೆ ಏನು ಹೇಳಬೇಕೆಂದು ತೋಚಲಿಲ್ಲ. ತಾನು ಇಳಿಯುವ ಸ್ಥಳ ಬಂದಾಗ, “ನಾ ಇನ್ನ ಬರತೇನ್ರಿ, ಸಾಹೇಬ್ರ. ಆಯುಸ್ಸು ಗಟ್ಟಿ ಇದ್ರ ಮತ್ತೆ ಸಿಗೋಣಾ’ ಅಂತ ಹೇಳಿ ಕೆಳಗಿಳಿದ.

ಬದುಕಿನ ಮೇಲೆ ಆತನಿಗಿರುವ ಉತ್ಕಟ ಪ್ರೀತಿಯನ್ನು ನೋಡಿದಾಗ, ನನಗಿಂತಲೂ ಗಟ್ಟಿ ಆಯಸ್ಸಿಗ ಎಂದು ಒಳ ಮನಸ್ಸು ಪಿಸುಗುಟ್ಟಿತು. “ಇಂಥ ಒಳ್ಳೇ ಮನಸ್ಸಿನವರನ್ನು ನೂರ್ಕಾಲ ಸುಖವಾಗಿಡಪಾ’ ಎಂದು ಪ್ರಾರ್ಥಿಸಿದೆ. ಜೀವನದ‌ ಬಗ್ಗೆ ನನಗಿದ್ದ ಅಂಧಕಾರತ್ವವನ್ನು ಹೋಗಲಾಡಿಸಿ, ಉತ್ಸಾಹದ ಬೆಳಕನ್ನು ತೋರಿಸಿದ ಆ ವ್ಯಕ್ತಿ ಎಲ್ಲಾದರೂ ಕಾಣಿಸುತ್ತಾರೇನೋ ಎಂದು ರೈಲು ನಿಲ್ದಾಣಕ್ಕೆ ಹೋದಾಗಲೆಲ್ಲ ಸುತ್ತಲೂ ಕಣ್ಣಾಡಿಸುತ್ತಿರುತ್ತೇನೆ.

ನಾಗರಾಜ್‌ ಬಿ. ಚಿಂಚರಕಿ

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.