ರೈತರ ಆರೋಗ್ಯ ಮರೆತಂತಿದೆ: ಸಚಿವ ಪ್ರಮೋದ್
Team Udayavani, Jan 30, 2018, 11:20 AM IST
ಮಣಿಪಾಲ: ಆಹಾರ ಪದಾರ್ಥಗಳನ್ನು ಒದಗಿಸುವ ಮೂಲಕ ವಿಶೇಷ ಸೇವೆಯನ್ನು ಮಾಡುತ್ತಿರುವ ರೈತರ ಆರೋಗ್ಯದತ್ತ ಗಮನ ಹರಿಸಲು ಸರಕಾರಗಳು ಮರೆತಂತಿವೆ. ರಾಜ್ಯ ಸರಕಾರ ಈಗಿನಿಂದಲೇ ಅವರ ಆರೋಗ್ಯವನ್ನು ಕಾಪಾಡಲು ಚಿಂತನೆ ನಡೆಸುತ್ತದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಸೋಮವಾರ ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಮಹಾ ವಿದ್ಯಾಲಯ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ಹಾಗೂ ಕರ್ನಾಟಕ ಕೃಷಿ ಬೆಲೆ ಆಯೋಗದ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಡಾ| ಟಿ.ಎಂ.ಎ. ಪೈ ಸಭಾಂಗಣದಲ್ಲಿ ಜರಗಿದ “ರಾಜ್ಯದ ರೈತರ ಆರೋಗ್ಯ ಮತ್ತು ವ್ಯಕ್ತಿತ್ವ ವಿಕಸನ ಕಾರ್ಯಾಗಾರ’ವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಕೃಷಿ ಬೆಲೆ ಆಯೋಗದ ಅಧ್ಯಕ್ಷ ಡಾ| ಪ್ರಕಾಶ್ ಕಮ್ಮರಡಿ ಪ್ರಸ್ತಾವಿಸಿ, ರಾಜ್ಯದಲ್ಲಿ ಮಣ್ಣಿನ ಆರೋಗ್ಯವನ್ನು ನೋಡಲಾಗುತ್ತಿದೆ, ಆದರೆ ರೈತರ ಆರೋಗ್ಯವನ್ನು ಅವಗಣಿಸಲಾಗುತ್ತಿದೆ ಎಂದರು.
ರಾಜ್ಯದ 8 ಜಿಲ್ಲೆಗಳ 743 ರೈತರಿಗೆ ವಿವಿಧ ಆರೋಗ್ಯ ತಪಾಸಣೆ ನಡೆಸಲಾಗಿದೆ. ಈ ಪೈಕಿ 258 ಜನರಿಗೆ ಅಧಿಕ ರಕ್ತದೊತ್ತಡ, 256 ಜನರಿಗೆ ಹಿಮೋಗ್ಲೋಬಿನ್ ಕೊರತೆ ಹಾಗೂ 364 ರೈತರಿಗೆ ರಕ್ತ ಅಥವಾ ಮೂತ್ರದಲ್ಲಿ ಕೀಟನಾಶಕ ವಿಷವಿರುವುದು ಪತ್ತೆಯಾಗಿದೆ ಎಂದು ಫೊರೆನ್ಸಿಕ್ ಮೆಡಿಸಿನ್ ವಿಭಾಗದ ಡಾ| ಶಂಕರ ಬಕಣ್ಣನವರ್ ಮಾಹಿತಿ ನೀಡಿದರು. ಕೆಎಂಸಿಯ ಸಹ ಕುಲಪತಿ ಡಾ| ಪೂರ್ಣಿಮಾ ಬಾಳಿಗಾ ಉಪಸ್ಥಿತರಿದ್ದರು.
ಡೀನ್ ಡಾ| ಪ್ರಜ್ಞಾ ರಾವ್ ಅವರು ಸ್ವಾಗತಿಸಿದರು. ಡಾ| ವಿನುತಾ ಭಟ್ ಅವರು ವಂದಿಸಿದರು. ಡಾ| ಶೋಭಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು.
ರೈತರ ದೇಹದಲ್ಲಿ ವಿಷ !
ಮಾಹೆ ಅಧ್ಯಯನ ನಡೆಸಿದ ರಾಜ್ಯದ 8 ಜಿಲ್ಲೆಯ 8 ಗ್ರಾಮಗಳಲ್ಲಿ ಶೇ. 51ರಷ್ಟು ರೈತರ ದೇಹದಲ್ಲಿ ಕೀಟನಾಶಕ ವಿಷ ಪತ್ತೆಯಾಗಿರುವುದು ಅತ್ಯಂತ ಕಳವಳಕಾರಿಯಾಗಿದೆ ಎಂದು ಪ್ರಮೋದ್ ಮಧ್ವರಾಜ್ ಹೇಳಿದರು.
ಕೃಷಿಕರ ಆರೋಗ್ಯದ ಬಗ್ಗೆ ಅತೀವ ಕಾಳಜಿಯಿಂದ ಮಾಹೆ ವಿಶೇಷ ಅಧ್ಯಯನ ನಡೆಸಿದೆ. ಈ ಹಿನ್ನೆಲೆಯಲ್ಲಿ ರೈತರ ಆರೋಗ್ಯಕ್ಕೆ ಸಹಕಾರಿಯಾಗಿ ಮಾಹೆ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಿದೆ. ಇದರಲ್ಲಿ ಶೇ. 10ರಷ್ಟು ರೈತರು, ಶೇ. 50ರಷ್ಟು ಕೆಎಪಿಸಿ ಮತ್ತು ಉಳಿದ ಶೇ. 40ರಷ್ಟನ್ನು ಮಾಹೆ ಭರಿಸಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.