ಚೀನದಿಂದ ಆಫ್ರಿಕನ್ ಯೂನಿಯನ್ ದತ್ತಾಂಶ ಕಳವು, ಬೇಹುಗಾರಿಕೆ?
Team Udayavani, Jan 30, 2018, 3:28 PM IST
ಪ್ಯಾರಿಸ್ : ವಿಶ್ವಾದ್ಯಂತ ವಿಶ್ವಾಸಾರ್ಹತೆಯನ್ನು ರೂಪಿಸುವಲ್ಲಿನ ಚೀನದ ಸಮಸ್ಯೆಗೆ ಕೊನೆಯೇ ಇಲ್ಲವೆಂಬುದು ಇದೀಗ ಮತ್ತೂಮ್ಮೆ ಸ್ಪಷ್ಟವಾಗಿದೆ.
ಆಫ್ರಿಕನ್ ಯೂನಿಯನ್ ನ (ಆಫ್ರಿಕ ದೇಶಗಳ ಒಕ್ಕೂಟ – AU) ಕಂಪ್ಯೂಟರ್‌ಗಳ ದತ್ತಾಂಶಗಳನ್ನು ಶಾಂಘೈನಲ್ಲಿನ ತನ್ನ ಸರ್ವರ್‌ಗೆ ಪ್ರತೀ ನಿತ್ಯ ರಾತ್ರಿ ಚೀನ ನಕಲು ಮಾಡುತ್ತಿದೆ ಎಂಬ ಆರೋಪವನ್ನು ಬೀಜಿಂಗ್ ಸಾರಾಸಗಟು ಅಲ್ಲಗಳೆದಿದೆ.
ಅಡಿಸ್ ಅಬಾಬಾದಲ್ಲಿನ ಆಫ್ರಿಕನ್ ಯೂನಿಯನ್‌ನ ಪ್ರಧಾನ ಕಾರ್ಯಾಲಯದಲ್ಲಿರುವ ಕಂಪ್ಯೂಟರ್‌ಗಳ ದತ್ತಾಂಶವನ್ನು ಚೀನದ ಶಾಂಘೈನಲ್ಲಿನ ಸರ್ವರ್‌ನಲ್ಲಿ ನಕಲು ಮಾಡಲಾಗುತ್ತಿದೆ ಎಂಬ ವರದಿಯನ್ನು ಫ್ರೆಂಚ್ ಪತ್ರಿಕೆ ಲೀ ಮಾಂಡ್ ಪ್ರಕಟಿಸಿರುವುದನ್ನು ಬೀಜಿಂಗ್ ಸಂಪೂರ್ಣ ಸುಳ್ಳೆಂದು ಹೇಳಿದೆ.
ಆಫ್ರಿಕದ ಬಹು ರಾಷ್ಟ್ರೀಯ ಒಕ್ಕೂಟದ ಪ್ರಧಾನ ಕಾರ್ಯಾಲಯದಲ್ಲಿನ ಕಂಪ್ಯೂಟರ್‌ಗಳ ದತ್ತಾಂಶ ಕಳವು ಮತ್ತು ಬೇಹುಗಾರಿಕೆ ನಡೆಯುತ್ತಿರುವುದನ್ನು ಈ ವರ್ಷ ಜನವರಿಯಲ್ಲೇ ಪತ್ತೆ ಹಚ್ಚಲಾಗಿತ್ತು. ಆಫ್ರಿಕನ್ ಯೂನಿಯನ್ ಕಂಪ್ಯೂಟರ್ ಜಾಲ ಪ್ರತೀ ನಿತ್ಯ ಮಧ್ಯರಾತ್ರಿಯಿಂದ ನಸುಕಿನ 2 ಗಂಟೆಯ ವರೆಗೆ ಅತ್ಯಂತ ಕ್ರಿಯಾಶೀಲವಾಗಿರುವುದನ್ನು ಆಫ್ರಿಕನ್ ಯೂನಿಯನ್ ಸಿಬಂದಿಗಳು ಪತ್ತೆ ಹಚ್ಚಿದ್ದರು.
ಕಾರ್ಯಾಲಯದಲ್ಲಿ ಯಾರೂ ಇಲ್ಲದ ಮತ್ತು ಯಾವುದೇ ಕಂಪ್ಯೂಟರ್ ಚಟುವಟಿಕೆ ನಡೆಯದ ಹೊತ್ತಿನಲ್ಲಿ ಕಾರ್ಯಾಲಯದ ಕಂಪ್ಯೂಟರ್‌ಗಳು ಇಷ್ಟೊಂದು ಕ್ರಿಯಾಶೀಲವಾಗಿರಲು ಹೇಗೆ ಸಾಧ್ಯ ಎಂಬುದು ಸಿಬಂದಿಗಳನ್ನು ಯಕ್ಷಪ್ರಶ್ನೆಯಂತೆ ಕಾಡುತ್ತಿತ್ತು.
ಈ ನಿಗೂಢ ಚಟುವಟಿಕೆಯಲ್ಲಿ ಇಲ್ಲಿನ ಕಂಪ್ಯೂಟರ್‌ಗಳಲ್ಲಿನ ದತ್ತಾಂಶಗಳು ಚೀನದ ಶಾಂಘೈ ಸರ್ವರ್‌ಗೆ ನಕಲಾಗುತ್ತಿರುವುದು ಕೊನೆಗೂ ಅವರ ಗಮನಕ್ಕೆ ಬಂತು.
ಫ್ರೆಂಚ್ ಪತ್ರಿಕೆ ಲೀ ಮಾಂಡ್ ಜತೆಗೆ ಮಾತನಾಡಿರುವ ಮೂಲಗಳ ಪ್ರಕಾರ 2012ರ ಜನವರಿಯಲ್ಲಿ ಆಫ್ರಿಕನ್ ಯೂನಿಯನ್ (ಎಯು) ಕಟ್ಟಡ ಉದ್ಘಾಟನೆಯಾದಂದಿನಿಂದಲೂ ಇಲ್ಲಿನ ಕಂಪ್ಯೂಟರ್‌ಗಳಲ್ಲಿ ಅತ್ಯಂತ ರಹಸ್ಯ ಮಾಹಿತಿಗಳೆಲ್ಲವೂ ಪ್ರತೀ ನಿತ್ಯ ರಾತ್ರಿ ಶಾಂಘೈ ಸರ್ವರ್‌ಗೆ ನಕಲಾಗಿದೆ.
ಎಯು ಪ್ರಧಾನ ಕಾರ್ಯಾಲಯವನ್ನು ನಿರ್ಮಿಸಿಕೊಟ್ಟದ್ದೇ ಚೀನ; ಮಾತ್ರವಲ್ಲದೆ ಅದರ ಸಮಗ್ರ ಕಂಪ್ಯೂಟರ್ ವ್ಯವಸ್ಥೆ ಮತ್ತು ಜಾಲಗಳನ್ನು ಸಿದ್ಧಪಡಿಸಿಕೊಟ್ಟದ್ದು ಕೂಡ ಚೀನವೇ ಆಗಿದೆ. ಇದೆಲ್ಲವನ್ನೂ ಚೀನ ಮಾಡಿಕೊಟ್ಟದ್ದು ಟರ್ನ್ಕೀ ಒಪ್ಪಂದದ ಪ್ರಕಾರ. ಸಮಗ್ರ ನಿರ್ಮಾಣ, ಚಾಲನೆ ಸಂಪೂರ್ಣಗೊಂಡಾಗ ಚೀನ ಅದನ್ನು ಎಯು ವಶಕ್ಕೆ ಒಪ್ಪಿಸಿತ್ತು !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Varanasi: ಕುಟುಂಬಿಕರ ಎದುರಿಗೆ ಪೊಲೀಸ್ ಅಧಿಕಾರಿಗೆ ಥಳಿಸಿದ ಗುಂಪು
Rishabh Pant: ಅಪಘಾತದ ವೇಳೆ ನೆರವಾದವರಿಗೆ ಗಿಫ್ಟ್ ನೀಡಿದ ರಿಷಭ್ ಪಂತ್
Prabhutva movie review: ಪ್ರಗತಿ ಪಥದಲ್ಲಿ ಕ್ರಾಂತಿಯ ಕಿಡಿ
BBK11: ಇವತ್ತು ಬಿಗ್‌ಬಾಸ್ ಮನೆಯಿಂದ ಆಚೆ ಬರುವುದು ಇವರೇ ನೋಡಿ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.