ಕೊಂಕಣಿ ತ್ರಿವೇಣಿ ಕಲಾ ಸಂಗಮ ಮುಂಬಯಿ : ಕೊಂಕಣಿ ಉತ್ಸವ
Team Udayavani, Jan 30, 2018, 4:17 PM IST
ಮುಂಬಯಿ: ಮಾನವ ಧರ್ಮದ ಸಾರ ತಿಳಿದಾಗಲೇ ಸಮಾಜದಲ್ಲಿ ಸಾಮರಸ್ಯದ ಬದುಕು ಸಾಧ್ಯವಾಗುವುದು. ಐಕ್ಯತೆಯಿಲ್ಲದೆ ಸಮಾಜವನ್ನು ಕಟ್ಟಿಬೆಳೆಸಲು ಅಸಾಧ್ಯ. ಆದ್ದರಿಂದ ಭಾವೈಕ್ಯತಾ ಬದುಕು ತಿಳಿಸಿಕೊಡುವ ಉದ್ದೇಶ ಸಂಘ ಸಂಸ್ಥೆಗಳಿಂದಾಗಬೇಕು. ನಿಸ್ವಾರ್ಥ ಸೇವೆಯು ಸಮಾಜ ಸೇವೆಯ ಅರ್ಥವನ್ನು ವಿಸ್ತಾರಗೊಳಿಸುತ್ತದೆ. ನಮ್ಮಲ್ಲಿನ ಹಲವಾರು ಸಂಸ್ಥೆಗಳು ತಮ್ಮ ಕಾರ್ಯ ಸಾಫಲ್ಯದತ್ತ ಯಶಸ್ಸಿನ ಹೆಜ್ಜೆಗಳನ್ನು ದಾಖಲಿಸಿವೆ. ಆ ಪೈಕಿ ಕೊಂಕಣಿ ತ್ರಿವೇಣಿ ಕಲಾ ಸಂಗಮವೂ ಒಂದಾಗಿದೆ. ಸಮಾಜಮುಖೀ ಚಿಂತನೆಗಳೇ ಇದಕ್ಕೆಲ್ಲಾ ಪ್ರೇರಣೆಯಾಗಿದೆ. ಸಮಾಜ ಸೇವೆಗೆ ನೂರಾರು ದಾರಿಗಳಿವೆ. ಸರ್ವ ಕಾರ್ಯಗಳು ಸಾಂಗೋಪವಾಗಿ ನೆರವೇರಿದಾಗ ಮಾತ್ರ ಸಂಸ್ಥೆಗಳು ಮುನ್ನಡೆಯಲು ಸಾಧ್ಯ. ಭಾವೈಕ್ಯತೆಯ ಬದುಕು ರೂಢಿಸಿಕೊಂಡು ತಾವೂ ಏಕಾಗ್ರತೆಯಿಂದ ಕಾರ್ಯತತ್ಪರರಾಗಿ ಸಮಾಜಕ್ಕೆ ಆದರ್ಶಪ್ರಾಯರಾಗಬೇಕು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಮಠಾಧೀಶ ಪೂಜ್ಯ ಶ್ರೀಮದ್ ವಿದ್ಯಾಧಿರಾಜ ತೀರ್ಥ ಶ್ರೀಪಾದ್ ವಡೆಯರ್ ಸ್ವಾಮೀಜಿ ನುಡಿದರು.
ಜ. 27 ರಂದು ಸಂಜೆ ದಾದರ್ ಪೂರ್ವದ ಸ್ವಾಮಿ ನಾರಾಯಣ ಮಂದಿರದ ಯೋಗಿ ಸಭಾಗೃಹದಲ್ಲಿ ನಡೆದ ಕೊಂಕಣಿ ತ್ರಿವೇಣಿ ಕಲಾ ಸಂಗಮ್ ಮುಂಬಯಿ ಇದರ ಕೊಂಕಣಿ ಉತ್ಸವ 2018ನ್ನು ಉದ್ಘಾಟಿಸಿ ಶ್ರೀಗಳು ಅನುಗ್ರಹಿಸಿದರು.
ಗುರುವಂದನೆ
ಅಪರಾಹ್ನ ವಡಾಲದ ಶ್ರೀ ರಾಮ ಮಂದಿರದಿಂದ ಗುರುಶಿಷ್ಯ ಯತಿವರ್ಯರನ್ನು ಭವ್ಯ ಶೋಭಾಯಾತ್ರೆ ಮೂಲಕ ವೇದಘೋಷಗಳೊಂದಿಗೆ ಸಭಾಗೃಹಕ್ಕೆ ಕರೆತರಲಾಯಿತು. ಬಳಿಕ ಶ್ರೀ ಸಂಸ್ಥಾನ ಜೀವೋತ್ತಮ ಮಠದ ಪಟ್ಟಶಿಷ್ಯ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ದಿವ್ಯೋಪಸ್ಥಿತಿಯಲ್ಲಿ ನಡೆಸಲ್ಪಟ್ಟ ಭವ್ಯ ಸಮಾರಂಭದಲ್ಲಿ ಸ್ವರ್ಣ ಸನ್ಯಾಸ ದೀಕ್ಷೋತ್ಸವ ಪೂರೈಸಿದ ವಿದ್ಯಾಧಿರಾಜ ತೀರ್ಥಶ್ರೀಗಳ ಪಾದಪೂಜೆಯನ್ನು ಸಂಸ್ಥೆಯ ಮುಖ್ಯ ಸಂಚಾಲಕ ಡಿ. ಎಂ. ಸುಖಾ¤ಣRರ್ ಮತ್ತು ಗೌರವ ಕಾರ್ಯದರ್ಶಿ ಮುಕುಂದ್ ವೈ. ಕಾಮತ್ ನೆರೆವೆರಿಸಿ ಗುರುವಂದನೆ ಸಲ್ಲಿಸಿದರು. ವಿದ್ಯಾಧಿರಾಜ ಶ್ರೀಗಳು “ಗೌರವ ವಂದನಾ’ ಸ್ಮರಣಿಕೆಯನ್ನು ಬಿಡುಗಡೆಗೊಳಿಸಿದರು.
ಸಮಾಜ ಸೇವೆ ಎಂಬುವುದು ಮಾನವ ಸಮುದಾಯದ ಒಂದು ಅವಶ್ಯಕ ಕ್ರಿಯೆ. ತ್ಯಾಗ ಮನೋಭಾವದಿಂದ ಮಾಡಿದ ಸೇವೆ ಎಂದಿಗೂ ಶ್ರೀಹರಿಗೆ ಸಲ್ಲುತ್ತದೆ. ಆದ್ದರಿಂದ ವೈಚಾರಿಕ ಪ್ರಗತಿಯ ಜತೆಗೆ ಸಮಾಜೋನ್ನತಿಯ ಕಾಯಕ ತಮ್ಮ ಕೆಲಸವನ್ನಾಗಿಸಿಕೊಳ್ಳಬೇಕು. ಇಂತಹ ಸೇವೆ ಶಾಶ್ವತ ಮತ್ತು ಅರ್ಥಪೂರ್ಣವೂ ಆಗುತ್ತದೆ. ನಿಸ್ವಾರ್ಥ ಸಮಾಜ ಸೇವೆಯಿಂದ ಮಾತ್ರ ಜೀವನ ಸಾರ್ಥಕ್ಯ ಕಾಣಲು ಸಾಧ್ಯ. ಸೇವೆಯಲ್ಲಿ ಛಲವನ್ನು ಒಲವನ್ನು ಗಳಿಸಿಕೊಂಡಿರುವ ಮುಂಬಯಿಗರ ಆತ್ಮಬಲ ಅಪಾರವಾಗಿದೆ ಎಂದು ಶ್ರೀ ವಿದ್ಯಾಧೀಶ ತೀರ್ಥ ಶ್ರೀಗಳು ನುಡಿದರು.
ಪದ್ಮ ವಿಭೂಷಣ, ಅನೀಲ್ ಕಾಕೋಡ್ಕರ್, ವಿ. ಲೀಲಾಧರ್, ಪ್ರಕಾಶ್ ಮಲ್ಯ, ಎನ್. ಡಿ. ಸೋಂದೆ, ಅಶೋಕ್ ಸರಾಫ್, ಸುಮನ್ ಕಲ್ಯಾಣು³ರ್, ಅಜಿತ್ ಗುಂಜಿಕರ್, ಅನಿಲ್ ದೆೇಸಾಯಿ, ಪ್ರವೀಣ್ ಕಡ್ಲೆ, ಕಿಶೋಕ್ ಅವರೆಸೇಖರ್, ಜಗನ್ನಾಥ್ ಪೈ, ಎಸ್. ಕೆ ಸಖಾಲ್ಕರ್, ಸಂದೀಪ್ ಶಿಕ್ರೆ, ಹರೀಶ್ ಭಟ್, ಪ್ರಕಾಶ್ ಪೈ, ಶ್ಯಾಮಸುಂದರ್ ಕೇಶ್‌ಕಾಮತ್, ಎಂ. ಜಗನ್ನಾಥ್ ಶೆಣೈ, ಯು. ರಾಮದಾಸ್ ಕಾಮತ್, ಬಸ್ತಿ ವಾಮನ ಶೆಣೈ, ನ್ಯಾಯವಾದಿ ಎಂ. ವಿ. ಕಿಣಿ, ರಘುನಂಧನ್ ಎಸ್. ಕಾಮತ್, ಕುಂದಾಪುರ ಶ್ರೀನಿವಾಸ ಪ್ರಭು, ಆರ್. ಆರ್. ಕಾಮತ್, ಹನುಮಂತ ಪೈ, ದಿನೇಶ್ ಆರ್. ನಾಯಕ್, ಜಿ. ದಾಮೋದರ ರಾವ್, ಅರುಣ್ ನಾಯಕ್, ವಸಂತ್ ಶ್ಯಾನುಭಾಗ್ ಮೊದಲಾದವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.
ತ್ರಿವೇಣಿ ಸಂಗಮ್‌ನ ಜೊತೆ ಸಂಚಾಲಕ ಕೆ. ಶ್ರೀನಿವಾಸ ಪ್ರಭು, ಉಪಾಧ್ಯಕ್ಷರಾದ ಡಾ| ಸಿ. ಎನ್. ಶೆಣೈ, ಸುಗುಣಾ ಕಾಮತ್, ಶೋಭಾ ಕುಲಕರ್ಣಿ, ಪ್ರಕಾಶ್ ಭಟ್, ಉಮೇಶ್ ಪೈ, ಕಿರಣ್ ಕಾಮತ್ ಮತ್ತು ಸಚಿನ್ ಕಾಮತ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ಅಶೋಕ್ ಪಟಿR ಬಳಗದಿಂದ ಮುಗಾœ ವೈಶಂಪಯನ್, ಪ್ರಥಮೇಶ್ ಲಗಾಟೆ ಮತ್ತಿತರ ಕಲಾವಿದರ ಕೂಡುವಿಕೆಯಲ್ಲಿ ಸಂಗೀತ ಸಂಧ್ಯಾ ಕಛೇರಿ ನಡೆಯಿತು.
ವೈಧಿಕರಾದ ವೇದಮೂರ್ತಿ ಮೋಹನ್‌ದಾಸ ಆಚಾರ್ಯ, ವೇದಮೂರ್ತಿ ಸುಧಾಮ ಭಟ್, ವೇದಮೂರ್ತಿ ಅನಂತ್ ಭಟ್ ಮತ್ತು ವೇದಮೂರ್ತಿ ಗೋವಿಂದ ಆಚಾರ್ಯ ಮೊದಲಾದವರು ವೇದಘೋಷಗೈದರು. ಪೂಜಾ ಗಾಯೊ¤ಂಡೆ ಸ್ವಾಗತಗೀತೆ ಹಾಡಿದರು. ಮುಖ್ಯ ಸಂಚಾಲಕ ಡಿ. ಎಂ. ಸುಖಾ¤ಣRರ್ ಸ್ವಾಗತಿಸಿದರು.
ಅಧ್ಯಕ್ಷ ಉಲ್ಲಾಸ್ ಡಿ. ಕಾಮತ್ ತ್ರಿವೇಣಿ ಸಂಗಮ್‌ನ ಕಾರ್ಯವೈಖರಿಯನ್ನು ವಿವರಿಸಿದರು. ಮಂಗಳಾ ಖಾಡಿಳ್ಕರ್ ಮತ್ತು ಕುಂಬ್ಳೆ ನರಸಿಂಹ ಪ್ರಭು ಕಾರ್ಯಕ್ರಮ ನಿರೂಪಿಸಿದರು.
ಸಹ ಸಂಚಾಲಕ ಪ್ರದೀಪ್ ಜಿ. ಪೈ ಹಾಂಗ್ಯೋ ಮಂಗಳೂರು ಇವರು ವಂದಿಸಿದರು. ಸಮಾಜ ಬಾಂಧವರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಚಿತ್ರ-ವರದಿ: ರೋನ್ಸ್ ಬಂಟ್ವಾಳ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.