ಭಾರತ ಜಗತ್ತಿನ ಆರನೇ ಸಿರಿವಂತ ದೇಶ
Team Udayavani, Jan 31, 2018, 7:15 AM IST
ನವದೆಹಲಿ: ಭಾರತ ಇನ್ನು ಬಡದೇಶ ಅಲ್ಲವೇ ಅಲ್ಲ! ಹೌದು, ನ್ಯೂ ವರ್ಲ್x ವೆಲ್ತ್‌ನ ಪ್ರಕಾರ ಭಾರತ ಜಗತ್ತಿನಲ್ಲೇ ಆರನೇ ಸಿರಿವಂತ ದೇಶ. 2017ಕ್ಕೆ ಅಂತ್ಯವಾದಂತೆ ಭಾರತದ ಒಟ್ಟಾರೆ ಸಂಪತ್ತಿನ ಮೌಲ್ಯ 8,230 ಶತಕೋಟಿ ಡಾಲರ್. ಕೆಲ ತಿಂಗಳುಗಳ ಹಿಂದಷ್ಟೇ ಏಳನೇ ಸ್ಥಾನದಲ್ಲಿದ್ದ ಭಾರತ ಸದ್ಯದಲ್ಲೇ ಫ್ರಾನ್ಸ್ ಅನ್ನು ಹಿಂದಕ್ಕೆ ತಳ್ಳಿ ಆರನೇ ಸ್ಥಾನಕ್ಕೆ ಏರಲಿದೆ ಎಂದು ವರದಿಯಾಗಿತ್ತು. ಇದೀಗ ಇದಕ್ಕೆ ಪೂರಕವಾಗಿ ಸಿರಿವಂತ ದೇಶಗಳ ಪಟ್ಟಿ ಬಿಡುಗಡೆಯಾಗಿದ್ದು ಆರನೇ ಸ್ಥಾನಕ್ಕೆ ಜಿಗಿದಿದೆ.
ಮೊದಲ ಸ್ಥಾನದಲ್ಲಿ ವಿಶ್ವದ ದೊಡ್ಡಣ್ಣ ಅಮೆರಿಕವೇ ಇದೆ. ಸದ್ಯ ಆ ದೇಶದ ಒಟ್ಟಾರೆ ಸಂಪತ್ತಿನ ಮೌಲ್ಯ 64,584 ಶತಕೋಟಿ ಡಾಲರ್ ಆಗಿದೆ. ಎರಡನೇ ಸ್ಥಾನದಲ್ಲಿರುವ ಚೀನಾದ ಸಂಪತ್ತಿನ ಮೌಲ್ಯ 24,803 ಶತಕೋಟಿ ಡಾಲರ್. ಇನ್ನು ಜಪಾನ್ ಮೂರನೇ ಸ್ಥಾನದಲ್ಲಿದ್ದು 19,522 ಶತಕೋಟಿ ಡಾಲರ್ ಸಂಪತ್ತು ಹೊಂದಿದೆ.
ನಾಲ್ಕನೇ ಸ್ಥಾನದಲ್ಲಿ ಬ್ರಿಟನ್ ದೇಶವಿದೆ. ಈ ದೇಶದ ಒಟ್ಟಾರೆ ಸಂಪತ್ತು 9,919 ಶತಕೋಟಿ ಡಾಲರ್‌ಗಳಾಗಿದೆ. ಜರ್ಮನಿ ಐದನೇ ಸ್ಥಾನದಲ್ಲಿದ್ದು 9,660 ಶತಕೋಟಿ ಡಾಲರ್ ಆಸ್ತಿ ಮೌಲ್ಯ ಹೊಂದಿದೆ. ಈ ಸಂಪತ್ತಿನ ಮೌಲ್ಯವನ್ನು ದೇಶದ ಎಲ್ಲಾ ಖಾಸಗಿ ವ್ಯಕ್ತಿಗಳು ಹೊಂದಿರುವ ಒಟ್ಟಾರೆ ಆಸ್ತಿ, ಹಣ, ಲಾಭಾಂಶಗಳು, ವ್ಯಾಪಾರ ಆಸಕ್ತಿಗಳು ಸೇರಿವೆ. ಆದರೆ, ಸರ್ಕಾರದ ನಿಧಿಗಳನ್ನು ಇದರಿಂದ ಹೊರಗಿಡಲಾಗಿದೆ.
2017 ಭಾರತಕ್ಕೆ ಹರ್ಷದ ವರ್ಷ: ಕಳೆದ ವರ್ಷ ಭಾರತದ ಪಾಲಿಗೆ ಖುಷಿ ತಂದ ವರ್ಷವಾಗಿದೆ. 2016ರಲ್ಲಿ ಭಾರತದ ಸಂಪತ್ತು 6,584 ಶತಕೋಟಿ ಡಾಲರ್‌ಗಳಾಗಿತ್ತು. ಆದರೆ 2017ರಲ್ಲಿ ಭಾರತದ ಒಟ್ಟಾರೆ ಆಸ್ತಿ 8,230 ಶತಕೋಟಿ ಡಾಲರ್‌ಗೆ ಏರಿಕೆಯಾಗಿದೆ.
ಅಂದರೆ, ಶೇ.25ರಷ್ಟು ಪ್ರಗತಿ ಸಿಕ್ಕಿದೆ. ಇದೇ ಅವಧಿಯಲ್ಲಿ ಚೀನಾದ ಆಸ್ತಿ ಶೇ.22ರಷ್ಟು ಹೆಚ್ಚಾಗಿದ್ದರೆ, ಇಡೀ ಜಗತ್ತಿನ ಸಂಪತ್ತು ಶೇ.12 ರಷ್ಟು ಜಾಸ್ತಿಯಾಗಿದೆ. ಇನ್ನು 2007ರಿಂದ 2017ರ ವರೆಗೆ ಭಾರತದ ಆಸ್ತಿಯಲ್ಲಿ ಶೇ.160 ರಷ್ಟು ಹೆಚ್ಚಾಗಿದೆ. 2007ರಲ್ಲಿ ಭಾರತದ ಒಟ್ಟಾರೆ ಸಂಪತ್ತು 3,165 ಶತಕೋಟಿ ಡಾಲರ್ ಮಾತ್ರ ಆಗಿತ್ತು. ಅದೇ ಈಗ 8,230 ಶತಕೋಟಿ ಡಾಲರ್‌ಗೆ ತಲುಪಿದೆ.
ಕುಬೇರರ ಪಟ್ಟಿಯಲ್ಲೂ ಮೂರನೇ ಸ್ಥಾನ
ಬಿಲಿಯನೇರ್‌ಗಳ ಲೆಕ್ಕದಲ್ಲಿ ಭಾರತ ಮೂರನೇ ಸ್ಥಾನದಲ್ಲಿದ್ದು, ಮೊದಲೆರಡು ಸ್ಥಾನಗಳನ್ನು ಅಮೆರಿಕ ಮತ್ತು ಚೀನಾ ಹಂಚಿಕೊಂಡಿವೆ. ಭಾರತದಲ್ಲಿ ಇಂಥ 119 ಶತಕೋಟ್ಯಧಿಪತಿಗಳಿ ದ್ದಾರೆ. ಇನ್ನು ಭಾರತವು ಒಟ್ಟಾರೆ ಮಲ್ಟಿ ಮಿಲಿಯನೇರ್‌ಗಳ ಸಂಖ್ಯೆಯಲ್ಲಿ ಇಡೀ ಜಗತ್ತಿನಲ್ಲೇ ಏಳನೇ ಸ್ಥಾನದ ಲ್ಲಿದೆ. ಅಂದರೆ, ಇಲ್ಲಿ 20,730 ಮಿಲಿಯನೇರ್‌ಗಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.