ಅಂತಾರಾಷ್ಟ್ರೀಯ ಮಟ್ಟದ ಮೂರು ಟರ್ಫ್ ಕ್ರಿಕೆಟ್ ಪಿಚ್
Team Udayavani, Jan 31, 2018, 9:46 AM IST
ಮಹಾನಗರ: ನಗರದ ಕ್ರಿಕೆಟ್ ಪ್ರೇಮಿಗಳಿಗೆ ಪೂರಕವಾಗುವ ನೆಲೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಮಂಗಳೂರು ವಿ.ವಿ.ಕಾಲೇಜಿನ ಆಶ್ರಯದಲ್ಲಿ ಕರಾವಳಿ ಕ್ರಿಕೆಟ್ ಅಕಾಡೆಮಿಯು ಕಾಲೇಜಿನ ಮೈದಾನದಲ್ಲಿ ಮೂರು ಟರ್ಫ್ ಕ್ರಿಕೆಟ್ ಪಿಚ್ ನಿರ್ಮಾಣ ಮಾಡಲು ತೀರ್ಮಾನಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಿಚ್ ನಿರ್ಮಾಣಕ್ಕೆ ಇಲ್ಲಿ ಯೋಚಿಸಲಾಗಿದ್ದು, ಇಂದಿನಿಂದ ಕಾಮಗಾರಿ ಆರಂಭವಾಗಲಿದೆ.
ವಿ.ವಿ.ಕಾಲೇಜಿನ ಸುಮಾರು 2 ಎಕ್ರೆ ವ್ಯಾಪ್ತಿಯ ಕ್ರೀಡಾಂಗಣದ ಪೈಕಿ ಸುಮಾರು 1 ಎಕ್ರೆ ವ್ಯಾಪ್ತಿ ಪ್ರದೇಶದಲ್ಲಿ 36×40 ಅಡಿಗಳ ಮೂರು ಟರ್ಫ್ ಕ್ರಿಕೆಟ್ ಪಿಚ್ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಇದರ ಮಧ್ಯದಲ್ಲಿ ಮೂರು ಪಿಚ್ ಬರಲಿದೆ. ಸುಮಾರು 8 ಲಕ್ಷ ರೂ. ವೆಚ್ಚ ಆಗಬಹುದೆಂಬ ನಿರೀಕ್ಷೆ ಇದೆ.
ಮಂಗಳೂರು ವ್ಯಾಪ್ತಿಯಲ್ಲಿ ಟರ್ಫ್ ಪಿಚ್‌ನಲ್ಲಿ ಮಕ್ಕಳಿಗೆ ತರಬೇತಿ ಸದ್ಯ ಸಿಗುತ್ತಿಲ್ಲ. ಹೀಗಾಗಿ ಟರ್ಫ್ ಮಾದರಿಯಲ್ಲಿಯೇ ಮಕ್ಕಳಿಗೆ ಕ್ರಿಕೆಟ್ ತರಬೇತಿ ನೀಡಬೇಕು ಎಂಬ ಆಶಯದಿಂದ ಟರ್ಫ್ ಪಿಚ್ ಮಾಡಲು ಅಕಾಡೆಮಿ ನಿರ್ಧರಿಸಿದೆ.
ಇಂದಿನಿಂದ ಕಾಮಗಾರಿ
ಪಿಚ್ ನಿರ್ಮಾಣದ ಹಿನ್ನೆಲೆಯಲ್ಲಿ ಈಗಿನ ಗ್ರೌಂಡ್‌ನ ಕೆಲವು ಭಾಗದಲ್ಲಿ 6 ಅಡಿಗಳಷ್ಟು ಅಗೆಯಬೇಕಾಗಿದೆ. ಜ.31ರಿಂದ ಈ
ಕೆಲಸ ಆರಂಭವಾಗಲಿದೆ. ಬಳಿಕ ಹುಲ್ಲು ಹಾಗೂ ಇತರ ವ್ಯವಸ್ಥೆಗಳನ್ನು ಪೂರ್ಣ ರೀತಿಯಲ್ಲಿ ಅಳವಡಿಸಲು ಸುಮಾರು 3 ತಿಂಗಳ ಆವಶ್ಯಕತೆ ಇದೆ. ಆ ಬಳಿಕ ಟರ್ಫ್ ಕ್ರೀಡಾಂಗಣ ಬಳಕೆಗೆ ಲಭ್ಯವಾಗಲಿದೆ. ಮುಂಬಯಿ ಕ್ರಿಕೆಟ್ ಅಸೋಸಿಯೇಶನ್ ಮೂಲಕ ನುರಿತ ಕರ್ಟರ್ ಅವರನ್ನು ಮಂಗಳೂರಿಗೆ ತರಿಸಿ ಪಿಚ್ ಸಿದ್ಧಗೊಳಿಸುವ ಪ್ರಕ್ರಿಯೆ ನಡೆಯಲಿದೆ. ಪ್ರಸ್ತುತ ಕರಾವಳಿ ಕ್ರಿಕೆಟ್ ಅಕಾಡೆಮಿ ವತಿಯಿಂದ ಸುಮಾರು 100ಕ್ಕೂ ಅಧಿಕ ಮಕ್ಕಳು ತರಬೇತಿ ಪಡೆಯುತ್ತಿದ್ದಾರೆ. ಜತೆಗೆ ಆಸಕ್ತ ಬಡ ವಿದ್ಯಾರ್ಥಿಗಳಿಗೂ ಉಚಿತ ತರಬೇತಿ ನೀಡಲು ಅಕಾಡೆಮಿ ಯೋಚಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ತರಗತಿ ಆರಂಭವಾಗುವ ಬೆಳಗ್ಗೆ 9 ಗಂಟೆಗಿಂತ ಮೊದಲು ಹಾಗೂ ಕಾಲೇಜು ಬಿಡುವ ಸಂಜೆ 4ರ ಅನಂತರ ಕ್ರೀಡಾಂಗಣವನ್ನು ಕರಾವಳಿ ಕ್ರಿಕೆಟ್ ಅಕಾಡೆಮಿಯವರು ಬಳಸಲು ಮಂಗಳೂರು ವಿ.ವಿ.ಯು ಒಪ್ಪಿಗೆ ಸೂಚಿಸಿದೆ. ಮಂಗಳೂರು ವಿ.ವಿ.ಯ ಆಸಕ್ತ ವಿದ್ಯಾರ್ಥಿಗಳಿಗೂ ಇಲ್ಲಿ ತರಬೇತಿ ಪಡೆಯಲು ಅವಕಾಶವಿದೆ. ಜ.31ರಂದು ಸಂಜೆ 5ಕ್ಕೆ ಕಾಮಗಾರಿಗೆ ಭೂಮಿ ಪೂಜೆ ನಡೆಯಲಿದೆ. ಪ್ರಸ್ತುತ ಮಂಗಳೂರಿನ ಸಹ್ಯಾದ್ರಿ ಕಾಲೇಜಿನಲ್ಲಿ ಇದೇ ರೀತಿಯ ಸುಸಜ್ಜಿತ ಟರ್ಫ್ ಕ್ರಿಕೆಟ್ ಪಿಚ್ ವ್ಯವಸ್ಥೆಯನ್ನು ಕಳೆದ ಕೆಲವು ವರ್ಷದ ಹಿಂದೆ ಆರಂಭಿಸಲಾಗಿತ್ತು.
ಪುಟ್ಬಾಲ್ ಟರ್ಫ್ ಬಾಕಿ!
ಮಂಗಳೂರು ಫುಟ್ಬಾಲ್ ಕ್ರೀಡಾಂಗಣದಲ್ಲಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾಟ ಆಯೋಜಿಸುವ ಉದ್ದೇಶವಿರಿಸಿ, ನೆಹರೂ ಮೈದಾನವನ್ನು ಸುಸಜ್ಜಿತ ಕ್ರೀಡಾಂಗಣವನ್ನಾಗಿ ನಿರ್ಮಿಸುವ ಸಲುವಾಗಿ ಟರ್ಫ್ ಅಳವಡಿಕೆಗೆ ಸರಕಾರ ನಿರ್ಧರಿಸಿ ಹಲವು ದಿನಗಳು ಕಳೆದಿವೆ. ಆದರೆ, ಇನ್ನೂ ಕೂಡ ಇದು ಅಂತಿಮ ಹಂತಕ್ಕೆ ಬಂದಿಲ್ಲ.
‘ಅಂತಾರಾಷ್ಟ್ರೀಯ ಮಟ್ಟದ ಪಿಚ್’
ಮಂಗಳೂರಿನಲ್ಲಿಯೇ ಮೊದಲ ಬಾರಿಗೆ ಮೂರು ಟರ್ಫ್ ಕ್ರಿಕೆಟ್ ಪಿಚ್ ನಿರ್ಮಾಣಕ್ಕೆ ಕರಾವಳಿ ಕ್ರಿಕೆಟ್ ಅಕಾಡೆಮಿ ನಿರ್ಧರಿಸಿದೆ. ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಿಚ್‌ನಂತೆ ಇಲ್ಲಿನ ಕ್ರೀಡಾಂಗಣವನ್ನು ರೂಪಿಸಲಾಗುವುದು. ಈ ಮೂಲಕ ಕ್ರಿಕೆಟ್ ಕುರಿತ ಆಸಕ್ತಿಯ ವಿದ್ಯಾರ್ಥಿಗಳಿಗೆ ಪರಿಪೂರ್ಣ ನೆಲೆಯಲ್ಲಿ ತರಬೇತಿ ದೊರಕಿಸಿಕೊಡಲು ಸಾಧ್ಯ.
– ಸಂತೋಷ್ ಮಿಸ್ಕಿತ್
ಪ್ರ. ಕಾರ್ಯದರ್ಶಿ,
ಕರಾವಳಿ ಕ್ರಿಕೆಟ್ ಅಕಾಡೆಮಿ
‘ಅಕಾಡೆಮಿಯಿಂದ ಪಿಚ್ ನಿರ್ಮಾಣ’
ಹಂಪನಕಟ್ಟೆಯ ಮಂಗಳೂರು ವಿ.ವಿ.ಕಾಲೇಜಿನ ಮೈದಾನದಲ್ಲಿ ಮೂರು ಟರ್ಫ್ ಕ್ರಿಕೆಟ್ ಪಿಚ್ ನಿರ್ಮಾಣಕ್ಕೆ ಕರಾವಳಿ ಕ್ರಿಕೆಟ್ ಅಕಾಡೆಮಿ ಮುಂದೆ ಬಂದಿದೆ. ಈಗಾಗಲೇ ಈ ಮೈದಾನವನ್ನು ಸುವ್ಯವಸ್ಥಿತ ರೀತಿಯಲ್ಲಿ ಆಟಗಾರರಿಗೆ ಸಿಗುವಂತೆ ಅಕಾಡೆಮಿ ನಿರ್ವಹಣೆ ಮಾಡಿಕೊಂಡಿದೆ. ತರಬೇತಿ ಪಡೆಯುವ ಕ್ರಿಕೆಟ್ ಪಟುಗಳಿಗೆ ಉತ್ತಮ ವೇದಿಕೆ ಕಲ್ಪಿಸುವ ನೆಲೆಯಲ್ಲಿ ಈ ಕ್ರೀಡಾಂಗಣ ಸಿದ್ಧಗೊಳ್ಳಲಿದೆ.
– ಉದಯ್ ಕುಮಾರ್ ಇರ್ವತ್ತೂರು
ಪ್ರಾಂಶುಪಾಲರು ಮಂಗಳೂರು
ವಿ.ವಿ.ಕಾಲೇಜು
ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ
Road Development: ಚಾರ್ಮಾಡಿ ಘಾಟಿ ರಸ್ತೆ ದ್ವಿಪಥ ಭಾಗ್ಯ ಸನ್ನಿಹಿತ
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
Kundgol: ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬೈಕ್; ಸವಾರರು ಕಣ್ಮರೆ
Smart meters: ನೀರು ಸಂರಕ್ಷಿಸುವ ವಿಚಾರದಲ್ಲಿ ಕ್ರಾಂತಿ ಮಾಡಿದ ಸ್ಮಾರ್ಟ್ ವಾಟರ್ ಮೀಟರ್
Viral Pics: ಡೇಟಿಂಗ್ ರೂಮರ್ಸ್ ನಡುವೆ ವಿಜಯ್ – ರಶ್ಮಿಕಾ ಸೀಕ್ರೆಟ್ ಲಂಚ್ ಡೇಟ್
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.