ಸಾಧಕರಿಗೆ ಶಾಶ್ವತಿ ಪ್ರಶಸ್ತಿ ಪ್ರದಾನ
Team Udayavani, Jan 31, 2018, 11:19 AM IST
ಬೆಂಗಳೂರು: ಸಾಹಿತ್ಯ ಕ್ಷೇತ್ರದಲ್ಲಿನ ಅನುಪಮಾ ಸೇವೆಗಾಗಿ ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ನೀಡುವ “ಶಾಶ್ವತಿ ಪ್ರಶಸ್ತಿ’ ಪ್ರಶಸ್ತಿಗಳನ್ನು ಬರಹಗಾರ್ತಿ ಮತ್ತು ವಿಮರ್ಶಕಿ ಪ್ರೊ. ಎಲ್.ವಿ.ಶಾಂತಕುಮಾರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 12 ಸಾಧಕರಿಗೆ ಪ್ರದಾನ ಮಾಡಲಾಯಿತು.
ಜಯನಗರದ 3ನೇ ಹಂತದಲ್ಲಿರುವ ಎನ್‌ಎಂಕೆಆರ್‌ವಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಡಾ.ಚಿರಂಜೀವಿ ಸಿಂಗ್ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಿದರು. 2014ನೇ ಸಾಲಿನ “ಸದೋದಿತಾ’ ಪ್ರಶಸ್ತಿಗೆ ಬರಹಗಾರ್ತಿ ಪ್ರೊ.ಎಲ್.ವಿ.ಶಾಂತಕುಮಾರಿ, 2015ನೇ ಸಾಲಿಗೆ ಶ್ರೇಷ್ಠ ವಿದ್ವಾಂಸ ವಿಮಲಾ ರಾಮರಾವ್ ಮತ್ತು 2016 ಸಾಲಿಗೆ ಮೈಸೂರಿನ ದಾಸ ಸಾಹಿತ್ಯದ ವಿದ್ವಾಂಸ ಡಾ.ಟಿ.ಎಸ್.ನಾಗರತ್ನಾರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
2014 ನೇ ಸಾಲಿನ “ಕರ್ನಾಟಕ ಕಲ್ಪವಲ್ಲಿ’ ಪ್ರಶಸ್ತಿಗೆ ಸಾಮಾಜಿಕ ಹೋರಾಟಗಾರ್ತಿ ಎ.ಪಂಕಜಾ, 2015 ರ ಸಾಲಿಗೆ ಹುಬ್ಬಳ್ಳಿಯ ಹನುಮಾಕ್ಷಿ ಗೋಗಿ ಮತ್ತು 2016ನೇ ಸಾಲಿಗೆ ಬೆಂಗಳೂರಿನ ಪವಿತ್ರಾ ವೈ.ಎಸ್. ಪುರಸ್ಕೃತರಾದರು.
2014ನೇ ಸಾಲಿನ “ನಂಜನಗೂಡ ತಿರುಮಲಾಂಬಾ’ ಪ್ರಶಸ್ತಿಗೆ ಶ್ರೇಷ್ಠ ಬಂಗಾಲಿ ಬರಹಗಾರ್ತಿ ಪ್ರೊ. ನಬನೀತಾ ದಾಸ್‌ಸೇನ್, 2015ನೇ ಸಾಲಿನ ಪ್ರಶಸ್ತಿಗೆ ಹಿಂದಿಯ ಶ್ರೇಷ್ಠ ಬರಹಗಾರ್ತಿ ಡಾ. ಅಂಜನಾ ಸಂಧೀರ್ ಮತ್ತು 2016ನೇ ಸಾಲಿಗೆ ತೆಲುಗಿನ ಶ್ರೇಷ್ಠ ಬರಹಗಾರ್ತಿ ಪ್ರೊ.ಪಿ. ಸತ್ಯವತಿ ಪಶಸ್ತಿ ಪಡೆದವರಲ್ಲಿ ಸೇರಿದ್ದಾರೆ. ರಾಷ್ಟ್ರೀಯ ಶಿಕ್ಷಣ ಸಮಿತಿ ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ ಪಾಂಡುರಂಗ ಶೆಟ್ಟಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್
Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ
Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್ ಚಾಲಕನ ವಿರುದ್ಧ ದೂರು
Birds: ಸಿಲಿಕಾನ್ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ
Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hindu Temple: ಸಂಭಲ್ ಬಳಿಕ ಬುಲಂದ್‌ಶಹರ್‌ನಲ್ಲಿ ಮತ್ತೊಂದು ಹಳೇ ದೇವಾಲಯ ಪತ್ತೆ
Rahul Gandhi: ದಲಿತನೆಂಬ ಕಾರಣಕ್ಕೆ ಪೊಲೀಸ್ ವಶದಲ್ಲಿ ವ್ಯಕ್ತಿ ಕೊ*ಲೆ
Congress MP: ವಾರಕ್ಕೆ 70 ಗಂಟೆ ಬೇಡ, 4 ದಿನ ಕೆಲಸ ಸಾಕು: ತ.ನಾಡು ಸಂಸದ ಕಾರ್ತಿ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.