ಬಯಸಿದ್ದು ವೈದ್ಯ ವೃತ್ತಿ, ಆಯ್ಕೆ  ಮಾಡಿದ್ದು  ರಾಷ್ಟ್ರ ಸೇವೆ


Team Udayavani, Feb 1, 2018, 10:06 AM IST

1-Feb-3.jpg

ಬಾಲ್ಯದಲ್ಲಿ ಆಡುತ್ತಿದ್ದ ಆಟವದು. ಈಗ ಅದೇ ಬದುಕು. ಆಸಕ್ತಿ ಕ್ಷೇತ್ರ ಬೇರೆಯಾದರೂ ದೇಶ ಸೇವೆಯ ಕಾಯಕ ಅವರನ್ನು ಕರೆದಿತ್ತು. ಭೂ ಸೇನೆಯ ಕೆಚ್ಚೆದೆಯ ಯೋಧ ಕ್ಯಾ| ಪ್ರಶಾಂತ್‌ ಜಿ. ಕಶ್ಯಪ್‌ ಅವರ ಸೇನೆ ಸೇರುವ ಹಾದಿಯೇನೂ ಸುಲಭವಾಗಿರಲಿಲ್ಲ. ದೇಶ ಸೇವೆಯ ತುಡಿತ ಕಠಿನ ಪ್ರಕ್ರಿಯೆಯಲ್ಲೂ ಅವರನ್ನು ಯಶಸ್ವಿಗೊಳಿಸಿತ್ತು.

ಸುಬ್ರಹ್ಮಣ್ಯ : ಆಗ ಕಾರ್ಗಿಲ್‌ ಯುದ್ಧದ ಸಮಯ. 1999ನೇ ಇಸವಿ. ಮೂರನೇ ತರಗತಿ ಕಲಿಯುತ್ತಿದ್ದ ಬಾಲಕ ದೂರದರ್ಶನದಲ್ಲಿ ಬರುತ್ತಿದ್ದ ಯುದ್ಧದ ಸನ್ನಿವೇಶಗಳನ್ನು, ಬಂದೂಕು ಹಿಡಿದ ಸೈನಿಕರ ದೃಶ್ಯಗಳನ್ನು ನೋಡುತ್ತಿದ್ದ. ಶಾಲೆಯಿಂದ ಬಂದು ಮನೆಯಲ್ಲಿ ತಲೆದಿಂಬು ಬಂಕರಾಗಿಸಿ, ಆಟಿಕೆ ಗನ್‌ನಿಂದ ಡಿಶುಂ ಡಿಶುಂ ಎಂದು ಮಾಡುವುದು ಸಾಮಾನ್ಯವಾಗಿತ್ತು. ಈಗ ಅದೇ ಬಾಲಕ ಸೇನೆಯಲ್ಲಿ ಕ್ಯಾಪ್ಟನ್‌ ಹುದ್ದೆಗೇರಿದ್ದಾರೆ. ಅವರೇ ಕಲ್ಮಡ್ಕ ಗ್ರಾಮದ ಕ್ಯಾ| ಪ್ರಶಾಂತ ಜಿ ಕಶ್ಯಪ್‌. ಜಮ್ಮು ಮತ್ತು ಕಾಶ್ಮಿರದ 20ನೇ ಇನ್‌ಫೆಂಟ್ರಿಯ ಕುಮೌನ್‌ ರೆಜಿಮೆಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪ್ರಶಾಂತ್‌ ಡಾ| ಈಶ್ವರಯ್ಯ ಸುಗುಣ ಜಿ. ದಂಪತಿ ಅವರ ಏಕೈಕ ಪುತ್ರ.
ಪ್ರಶಸ್ತಿಯೊಂದಿಗೆ ಕ್ಯಾ| ಪ್ರಶಾಂತ್‌ .

ವೈದ್ಯಕೀಯದಲ್ಲಿ ಆಸಕ್ತಿ; ತೆರಳಿದ್ದು ದೇಶಸೇವೆಗೆ
ವೈದ್ಯಕೀಯ ಕಲಿಕೆಗೆ ಪ್ರಶಾತ್‌ ಅವರಿಗೆ ಆಸಕ್ತಿ ಇತ್ತು. ಆದರೆ ಅವಕಾಶ ಸಿಗದಿದ್ದಾಗ ಎಂಜಿನಿಯರಿಂಗ್‌ ಮುಗಿಸಿದರು. ಆದರೆ ಸೇನೆ ಬಗ್ಗೆ ಆಕರ್ಷಣೆ ಇದ್ದೇ ಇತ್ತು. ಪರಿಣಾಮ ಸೇನೆಗೆ ಸೇರಿದರು. ಬೆಳ್ಳಾರೆ ಜ್ಞಾನಗಂಗಾ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಪ್ರಗತಿ ಕಾಣಿಯೂರು ಶಾಲೆಯಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ಪಿಇಎಸ್‌ಐಟಿಯಲ್ಲಿ ಎಂಜಿನಿಯರಿಂಗ್‌ ಪೂರ್ಣಗೊಳಿಸಿ ಇಂಡೋ ಅಮೆರಿಕನ್‌ ಹೈಬ್ರೀಡೀಡ್ಸ್‌ ಸಂಸ್ಥೆಯಲ್ಲಿ ಕೆಲ ಸಮಯ ಉದ್ಯೋಗ ನಡೆಸಿದರು. ಇದೇ ವೇಳೆ ಸೇನಾ ಸೇರಲು ಅರ್ಜಿ ಸಲ್ಲಿಸಿದ್ದರು.

ಕಠಿನ ಆಯ್ಕೆ ಪ್ರಕ್ರಿಯೆಯಲ್ಲಿ ವಿಜಯಿ
ಆರಂಭದಲ್ಲಿ ಮೈಸೂರಲ್ಲಿ ಫ್ಲೈಯಿಂಗ್‌ ಆಫೀಸರ್ ನೇಮಕಾತಿಗೆ ಹಾಜರಾಗಿದ್ದರು. ಆದರೆ ಅವಕಾಶ ಕೈತಪ್ಪಿದಾಗ ಭೂಸೇನೆಗೆ ಅರ್ಜಿ ಸಲ್ಲಿಸಿದ್ದರು. ಪ್ರವೇಶ ಪರೀಕ್ಷೆಯಲ್ಲಿ ದೇಶದ 262 ಮಂದಿಯ ಪೈಕಿ ಆಂಧ್ರಪ್ರದೇಶ, ಕೇರಳ, ಕರ್ನಾಟಕದಿಂದ ಪ್ರಶಾಂತ್‌ ಅವರು ಸಹಿತ ಮೂವರೇ ಆಯ್ಕೆಯಾಗಿದ್ದರು. ಬಳಿಕ (ಅಖಿಲ ಭಾರತ ರಕ್ಷಣಾ ಸೇವೆಗಳ (ಸಿ.ಡಿ.ಎಸ್‌.) ಪರೀಕ್ಷೆಯಲ್ಲಿ ದೇಶದಲ್ಲಿ 67ನೇ ರ್‍ಯಾಂಕ್‌ ಪಡೆದು ನಾನ್‌ಟೆಕ್ನಿಕಲ್‌ ಆಫೀಸರ್‌ ಆಗಿ ನೇಮಕಗೊಂಡು ಲೆಫ್ಟಿನೆಂಟ್‌ ಹುದ್ದೆ ಪಡೆದರು.

2016ರಲ್ಲಿ ಚೆನ್ನೈನಲ್ಲಿ ಭಾರತೀಯ ಸೇನೆಯ ಅಧಿಕಾರಿಗಳ ತರಬೇತಿ ಶಾಲೆ (ಒಟಿಎಸ್‌)ಗೆ ಆಯ್ಕೆಯಾದರು. ತರಬೇತಿ ಪೂರ್ಣಗೊಳಿಸಿ ರಾಷ್ಟ್ರಪತಿಗಳ ಪಾಸಿಂಗ್‌ ಹೌಸ್‌ ಪೆರೇಡ್‌ ಲೆಫ್ಟಿನೆಂಟ್‌ನ ಸೇನಾಧಿಕಾರಿಯಾದರು. ರಾಜಸ್ಥಾನ, ಉತ್ತರಪ್ರದೇಶ, ದೆಹಲಿ, ಪಂಜಾಬ್‌ ಗಳಲ್ಲಿ ಸೇವೆ ಸಲ್ಲಿಸಿರುವ ಪ್ರಶಾಂತ್‌ ಅವರು ಈಗ ಉತ್ತರಾಖಂಡದ 20ನೇ ಇನ್‌ಫೆಂಟ್ರಿಯ ಕುಮೌನ್‌ ರೆಜಿಮೆಂಟ್‌ (ಉತ್ತರಾಖಂಡದ ಬುಡಕಟ್ಟು ಜನಾಂಗಕ್ಕೆ ಸೇರಿದ ಅತಿ ಶೂರ, ಗುರಿ ನಿಪುಣ ಜವಾನರ ರೆಜಿಮೆಂಟ್‌) ನ ಸೆಕೆಂಡ್‌ ಇನ್‌ ಕಮಾಂಡ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಫೇಸ್‌ಟು ಫೇಸ್‌ ಎನ್‌ಕೌಂಟರ್‌ 
ಪಾಕಿಸ್ತಾನದ ಉಗ್ರರು ವಿವಿಧ ವೇಷ ತೊಟ್ಟು, ಭಾರತೀಯ ಯೋಧರ ಮೇಲೆ ದಾಳಿ ನಡೆಸುತ್ತಾರೆ. ಆದರೆ ನಮ್ಮ ಯೋಧರು ಹೇಡಿಗಳಲ್ಲ. ಮುಖಾಮುಖಿ ಹೋರಾಟದ ಮೂಲಕವೇ ಪ್ರತ್ಯುತ್ತರ ನೀಡುತ್ತೇವೆ. ಗಡಿಯಲ್ಲಿ ಪ್ರತಿಕ್ಷಣವೂ ತೀರ ಎಚ್ಚರಿಕೆಯಿಂದಲೇ ಕಳೆಯಬೇಕಿದೆ. ಪಾಕ್‌ ಕಡೆಯಿಂದ ದಾಳಿಗಳು ಮುಂದುವರಿಯುತ್ತಲೇ ಇವೆ. ಹೀಗೆ ಯೋಧರು ಎದುರಿಸುವ ಸವಾಲಿನ ಕ್ಷಣಗಳು, ಕಾರ್ಯಾಚರಣೆಗಳ ಅನುಭವಗಳನ್ನು ಕ್ಯಾ| ಪ್ರಶಾಂತ್‌ ಹೇಳುತ್ತಿದ್ದರೆ ರೋಮಾಂಚನ! 

ತಮ್ಮನೆಂದರೆ ಅಕ್ಕರೆ 
ಪ್ರಶಾಂತ್‌ ಅವರ ಅಕ್ಕ ಶ್ರೀವಿದ್ಯಾ ಬೆಂಗಳೂರಿನಲ್ಲಿ ಉದ್ಯೋಗಿ. ತಮ್ಮ ಎಂದರೆ ಅವರಿಗೆ ಬಲು ಅಕ್ಕರೆ. ಸೋದರನ ಪ್ರತಿ ಪ್ರಯತ್ನದ ಹಿಂದೆ ಅಕ್ಕ ಆಸರೆಯಾಗಿ ನಿಂತಿದ್ದಾರೆ. ಸೈನ್ಯ ಸೇರಿ ದೇಶ ಸೇವೆ ಮಾಡುತ್ತಿರುವುದಕ್ಕೆ ಅತೀವ ಸಂತಸವಿದೆ. ತನ್ನ ಪ್ರತಿ ಯಶಸ್ಸಿನ ಹಿಂದೆ ಅಕ್ಕನ ಹಾರೈಕೆ ಇದೆ ಎಂದು ಕ್ಯಾ| ಪ್ರಶಾಂತ್‌ ಸ್ಮರಿಸುತ್ತಾರೆ. 

ಎನ್‌ಸಿಸಿ ಘಟಕಗಳಲ್ಲಿ ಸಕ್ರಿಯವಾಗಿ
ದೇಶಸೇವೆಗೆ ಸೈನ್ಯವೇ ಸೇರಬೇಕೆಂದಿಲ್ಲ. ನಾವು ಆರಿಸಿಕೊಂಡ ಕ್ಷೇತ್ರದಲ್ಲೇ ಸೇವೆ ಮಾಡಲು ವಿಪುಲ ಅವಕಾಶಗಳಿವೆ. ಜಿಲ್ಲೆಯಿಂದ ಸೈನ್ಯ ಸೇರುವವರ ಸಂಖ್ಯೆ ಕಡಿಮೆ ಇದೆ. ಶಾಲಾ ದಿನಗಳಲ್ಲಿ ಎನ್‌ಸಿಸಿ ಘಟಕಗಳಲ್ಲಿ ಗುರುತಿಸಿಕೊಳ್ಳಬೇಕು.
 – ಕ್ಯಾ| ಪ್ರಶಾಂತ್‌ ಜಿ. ಕಶ್ಯಪ್‌

ದೇಶಸೇವೆಗೆ ಮಿಗಿಲಿಲ್ಲ
ಮಗ ನನ್ನಂತೆ ವೈದ್ಯನಾಗಬೇಕೆಂದಿದ್ದ. ಆದರೆ ಆತನ ಹೃದಯದಲ್ಲಿದ್ದದ್ದು ದೇಶಪ್ರೇಮ. ಹೀಗಾಗಿ ದೇಶ ಸೇವೆಗೈಯುವ ಸುಪುತ್ರನಾಗಿದ್ದಾನೆ. ದೇಶಸೇವೆಗಿಂತ ಮಿಗಿಲಾದ ಸೇವೆ ಇನ್ನೊಂದಿಲ್ಲ. ಆತನ ಸೇವೆಯಿಂದ ನಮ್ಮ ಸಂತಸವೂ ಇಮ್ಮಡಿಯಾಗಿದೆ.
– ಡಾ| ಈಶ್ವರಯ್ಯ ಗೋಳ್ತಜೆ (ತಂದೆ)

ಬಾಲ್ಯದಲ್ಲೇ ದೇಶಪ್ರೇಮದ ತುಡಿತ
ಬಾಲ್ಯದಲ್ಲೇ ಆತನಲ್ಲಿ ದೇಶಪ್ರೇಮವಿತ್ತು. ಆತನ ಆಸಕ್ತಿಗೆ ನಾವು ಬೆಂಬಲ ನೀಡಿದ್ದೇವೆ. ಇಚ್ಛೆಯಂತೆಯೇ ಸೇನೆ ಸೇರಿದ್ದಾನೆ. ಮಗ ದೇಶ ಸೇವೆ ಮಾಡುತ್ತಿರುವುದು ನಮಗೂ ಹೆಮ್ಮೆ. ತಾಯಿ ಕರುಳು ಯಾವತ್ತೂ ಮಗನ ಶ್ರೇಯಸ್ಸು ಬಯಸುತ್ತದೆ.
ಸುಗುಣ ಜಿ. (ತಾಯಿ)

–  ಬಾಲಕೃಷ್ಣ ಭೀಮಗುಳಿ

►ಯೋಧ ನಮನ 1►ಕ್ಯಾಪ್ಟನ್‌ ರಾಧೇಶ್‌ಗೆ ಅಣ್ಣನೇ ಸ್ಫೂರ್ತಿ: http://bit.ly/2noe3RR

►ಯೋಧ ನಮನ 2► ಕೈತುಂಬ ಸಂಬಳದ ಕೆಲಸಕ್ಕೇ ಗುಡ್‌ಬೈ!: http://bit.ly/2ByAZCW

►ಯೋಧ ನಮನ 3►30ನೇ ವಯಸ್ಸಿಗೇ ಉಳಿದವರಿಗೆ ಸ್ಫೂರ್ತಿಯಾದ!: http://bit.ly/2E0zx1y

►ಯೋಧ ನಮನ 4►ನೌಕಾಪಡೆ ಜಾಹೀರಾತು ಬದುಕು ತಿರುಗಿಸಿತು!: http://bit.ly/2DWurTJ

►ಯೋಧ ನಮನ 5►ಸೇನೆ ಸೇರಲು ಸಂಪತ್ತೂ ಬೇಕಿಲ್ಲ,ಶಿಫಾರಸೂ ಅಗತ್ಯವಿಲ್ಲ !: http://bit.ly/2DNF47Z

►ಯೋಧ ನಮನ 6►ದೇಶಸೇವೆಯ ತಪಸ್ಸು ಕೊನೆಗೂ ಸುಳ್ಳಾಗಲಿಲ್ಲ!: http://bit.ly/2BFnGAo

ಟಾಪ್ ನ್ಯೂಸ್

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Tulu Film: ʼಮಿಡಲ್‌ ಕ್ಲಾಸ್‌ ಫ್ಯಾಮಿಲಿʼಯಿಂದ ಬಂತು ‘ಬೊಕಾ ಬೊಕಾ’ ಹಾಡು

Leopard: ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಿರತೆ ಪ್ರತ್ಯಕ್ಷ.. ಸೆರೆ ಹಿಡಿಯಲು ಆಗ್ರಹ

Leopard: ಹಾಡಹಗಲೇ ಕುದುರೆಮುಖ ರಾಷ್ಟ್ರೀಯ ಹೆದ್ದಾರಿಯಲ್ಲಿ ಓಡಾಡಿದ ಚಿರತೆ…

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ

ChampionsTrophy: ಭಾರತೀಯ ತಂಡ ಪ್ರಕಟ ವಿಳಂಬ ಸಾಧ್ಯತೆ; ರಾಹುಲ್‌ ಗೆ ಬಿಸಿಸಿಐ ವಿಶೇಷ ಸಂದೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Alankaru ಅಸೌಖ್ಯದಿಂದ ಎರಡು ತಿಂಗಳ ಬಾಣಂತಿ ಸಾವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

Bantwal: ಬೋಳಂತೂರಿನ ದರೋಡೆ ಪ್ರಕರಣ: ವಾರ ಕಳೆದರೂ ಸಿಗದ ಮಹತ್ವದ ಸುಳಿವು

DK-DC-Mullai-mugilan

National Highway ಕಾಮಗಾರಿ ಪರಿಶೀಲನೆ: ಮಾರ್ಚ್‌ ಅಂತ್ಯಕ್ಕೆ ಶೇ. 95 ಕಾಮಗಾರಿ ಪೂರ್ಣ: ಡಿಸಿ

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

Theft Case ಜುವೆಲರಿಯಿಂದ ಕಳವು: ಆರೋಪಿಗಳಿಗೆ ಜೈಲು

10-mambadi

Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ

MUST WATCH

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

ಹೊಸ ಸೇರ್ಪಡೆ

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

ಅಂದು ಪ್ರತಾಪ್‌ ಇಂದು ಹನುಮಂತು: ಫಿನಾಲೆ ತಲುಪಿದ ರೈತನ ಮಗನಿಗೆ ಒಲಿಯುತ್ತಾ ಬಿಗ್‌ಬಾಸ್ ಕಪ್?

1-asssam-1

New York Time ಟ್ರಾವೆಲ್ 2025 ಲಿಸ್ಟ್; 52 ಸ್ಥಳಗಳ ಪಟ್ಟಿಯಲ್ಲಿ ಅಸ್ಸಾಂಗೆ ನಾಲ್ಕನೇ ಸ್ಥಾನ

allu arjun

Allu Arjun; ಜಾಮೀನು ಷರತ್ತು ಸಡಿಲಿಕೆ: ವಿದೇಶ ಪ್ರಯಾಣಕ್ಕೆ ಕೋರ್ಟ್ ಅನುಮತಿ

Vijay Hazare Trophy: Padikkal century; Karnataka entered the semi after winning against Baroda

VijayHazareTrophy: ಪಡಿಕ್ಕಲ್‌ ಶತಕ; ಬರೋಡಾ ವಿರುದ್ದ ಗೆದ್ದು ಸೆಮಿ ಪ್ರವೇಶಿಸಿದ ಕರ್ನಾಟಕ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Kannauj: ಕುಸಿದು ಬಿದ್ದ ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ… ಹಲವರು ಸಿಲುಕಿರುವ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.