ಉಪ್ಪಿನಂಗಡಿಯಲ್ಲಿ ಮನೆ ಕಳವು
Team Udayavani, Feb 1, 2018, 10:24 AM IST
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಕರಾಯ ಪೇಟೆಯಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಕೆ.ಕೆ. ಶಾಹುಲ್ ಹಮೀದ್ ಅವರ ಮೂಲ ಮನೆಗೆ ಜ. 30ರಂದು ರಾತ್ರಿ ಕಳ್ಳರು ನುಗ್ಗಿದ್ದಾರೆ. ಆದರೆ ಮನೆಯಲ್ಲಿ ಚಿನ್ನಾಭರಣ ಮತ್ತು ದೊಡ್ಡ ಪ್ರಮಾಣದ ನಗದು ಇರಲಿಲ್ಲ. ಸುಮಾರು 2 ಸಾ. ರೂ.ನಷ್ಟು ನಗದನ್ನು ಕಳ್ಳರು ಕೊಂಡೊಯ್ದಿದ್ದಾರೆ.
ಮನೆಯಲ್ಲಿ ಖಾಯಂ ಇರುತ್ತಿದ್ದ ಶಾಹುಲ್ ಹಮೀದ್ ಅವರ ತಾಯಿ ಮತ್ತು ಅಕ್ಕ ಜ. 30ರಂದು ಸಂಜೆ ಕೆಮ್ಮಾರದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದಾಗ ಕಳ್ಳರು ನುಗ್ಗಿದ್ದಾರೆ. ಮನೆ ಮುಂಭಾಗದ ಬೀಗ ಮುರಿದು ಒಳನುಗ್ಗಿದ್ದು, ಮನೆಯೊಳಗಿದ್ದ ಎಲ್ಲ 6 ಕಪಾಟುಗಳನ್ನು ಜಾಲಾಡಿ, ಬಟ್ಟೆಬರೆಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದು ಕಂಡು ಬಂದಿದೆ.
ಸಿಸಿ ಕೆಮರಾಕ್ಕೆ ಹಾನಿ
ಮನೆಯ ಹೊರಗಿದ್ದ ಸಿಸಿ ಕೆಮರಾ ಹಾಗೂ ಒಳಗಿದ್ದ ಕಂಪ್ಯೂಟರ್‌ಗೆ ಹಾನಿ ಮಾಡಿದ್ದಾರೆ. ಹಾರ್ಡ್‌ಡಿಸ್ಕ್ ಒಯ್ದಿರುವ ಕಳ್ಳರು ತಮ್ಮ ಕೃತ್ಯಕ್ಕೆ ಬಳಸಿದ್ದ ಕಬ್ಬಿಣದ ಸರಳು ಮತ್ತು ಅಡುಗೆ ಕೋಣೆಯಲ್ಲಿದ್ದ ಕತ್ತಿಯೊಂದನ್ನು ಬಳಸಿ ಅಲ್ಲೇ ಬಿಟ್ಟು ಹೋಗಿದ್ದಾರೆ. ಶಾಹುಲ್ ಹಮೀದ್ ಸಹೋದರಿ ಝೊಹರಾ ಅವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದು, ಸಬ್ ಇನ್‌ಸ್ಪೆಕ್ಟರ್ ನಂದಕುಮಾರ್ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎರಡು ವರ್ಷಗಳ ಹಿಂದೆಯೂ ಈ ಮನೆಗೆ ಕಳ್ಳರು ನುಗ್ಗಿದ್ದರು.
ತನಿಖೆಯಲ್ಲಿ ಹಸ್ತಕ್ಷೇಪ
ತನಿಖೆಗಾಗಿ ಅನುಮಾನಾಸ್ಪದ ವ್ಯಕ್ತಿಗಳನ್ನು ಠಾಣೆಗೆ ಕರೆ ತಂದರೆ ಒತ್ತಡ ಹೇರಿ ಬಿಡುಗಡೆ ಮಾಡಿಸುತ್ತಿರುವುದರಿಂದ ಪ್ರಕರಣ ಭೇದಿಸಲು ಅಸಾಧ್ಯ ವಾಗುತ್ತಿದೆ ಎಂದು ಪೊಲೀಸ್‌ಮೂಲಗಳು ತಿಳಿಸುತ್ತಿವೆ. ಎರಡು ವರ್ಷದಲ್ಲಿ 4ಕ್ಕೂ ಮಿಕ್ಕ ಮನೆ ಕಳವು ಪ್ರಕರಣಗಳು ಈ ಗ್ರಾಮದಲ್ಲಿ ನಡೆದಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.