ಉದನೂರು ಜೋಡು ಬಸವೇಶ್ವರ ರಥೋತ್ಸವ
Team Udayavani, Feb 1, 2018, 10:29 AM IST
ಕಲಬುರಗಿ: ಗುರುವಿನಲ್ಲಿ, ಪವಾಡ ಪುರುಷರಲ್ಲಿ, ಆಧ್ಯಾತ್ಮಿಕ ಚಿಂತಕರ ಮೇಲೆ ಹೊಂದಿರುವ ಭಕ್ತಿ ಮುಂದೆ ಮತ್ತೂಂದು ದೊಡ್ಡದಿಲ್ಲ ಎಂದು ಕೋಟನೂರ-ಮುಗುಳಖೋಡದ ಮಠದ ಡಾ| ಮುರುಘ ರಾಜೇಂದ್ರ ಮಹಾಸ್ವಾಮೀಜಿ ನುಡಿದರು.
ಬುಧವಾರ ನಗರದ ಹೊರ ವಲಯ ಉದನೂರ ಗ್ರಾಮದ ರಥೋತ್ಸವಕ್ಕೆ ಚಾಲನೆ ನೀಡಿ ತದನಂತರ ನಡೆದ ಧಾರ್ಮಿಕ ಸಭೆಯನ್ನುದ್ದೇಶಿಸಿ ಅವರು ಆಶೀರ್ವಚನ ನೀಡಿದರು.
ಮಹಾತ್ಮರು, ಸತ್ಪುರುಷರಿಗೆ ಶ್ರೀಮಂತಿಕೆ ಯಾವುದೇ ಇಲ್ಲ. ಭಕ್ತರೇ ಎಲ್ಲ . ಲಿಂಗೈಕ್ಯ ಷಡಕ್ಷರಿ ಸಿದ್ಧರಾಮೇಶ್ವರ
ಶಿವಯೋಗಿಗಳು ಉದನೂರ ಜನತೆ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ರಾಜಕಾರಣಿ ಒಂದು ಗ್ರಾಮದ ಕೆಲವರ ಮೇಲೆ, ಅಧಿಕಾರಿಗಳು ಒಂದು ಬಡಾವಣೆ ಮೇಲೆ ಪ್ರೀತಿ ಹೊಂದಿರಬಹುದು. ಆದರೆ ಪವಾಡ ಪುರುಷ, ಮಹಾನ್ ಯೋಗಿ ಸಿದ್ಧರಾಮೇಶ್ವರ ಅವರು ಇಡೀ ಉದನೂರ ಗ್ರಾಮದ ಮೇಲೆ ಪ್ರೀತಿ ಹಾಗೂ ಅಪಾರ ನಂಬಿಕೆ ಹೊಂದಿದ್ದರು ಎಂದು ಅವರ ಲೀಲೆಗಳ ಕುರಿತಾಗಿ ವಿವರಣೆ ನೀಡಿದರು.
ಉದನೂರ ಜೋಡು ಬಸವೇಶ್ವರ ಜಾತ್ರೆಯು ಮುಂದಿನ ದಿನಗಳಲ್ಲಿ ಮಹಾದಾಸೋಹಿ ಶರಣಬಸವೇಶ್ವರ
ಜಾತ್ರೆಯಂತೆ ಸುಪ್ರಸಿದ್ಧಿಯಾಗಲಿದೆ. ಒಂದೇ ನಾಣ್ಯದ ಎರಡು ಮುಖಗಳಾಂತಾಗಲಿವೆ ಎಂದು ಡಾ| ಮುರುಘ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು. ಚಿನ್ಮಯಗಿರಿ-ಚೌಡಾಪುರ ಮಹಾಂತೇಶ್ವರ ಮಠದ ನೂತನ ಪಟ್ಟಾಧಿಕಾರಿಗಳಾಗಿರುವ ಅಣ್ಣಯ್ಯ ದೇವರು ಮಾತನಾಡಿ, ಗುರು ಹಿರಿಯರ ಆಶೀರ್ವಾದದೊಂದಿಗೆ ಸನ್ಮಾರ್ಗದಲ್ಲಿ ಮುನ್ನಡೆದರೆ, ತಿಳಿಯಾದ ಮನಸ್ಸು ಹೊಂದಿದ್ದಲ್ಲಿ ಬಯಸಿದ್ದನ್ನು ಪಡೆಯಬಹುದು ಎಂದು ಹೇಳಿದರು.
ಮಾಜಿ ಶಾಸಕ ಶಶೀಲ ಜಿ. ನಮೋಶಿ, ಬಸವರಾಜ ಡಿಗ್ಗಾವಿ, ದೇವೇಗೌಡ ತೆಲ್ಲೂರ, ಪವನಕುಮಾರ ವಳಕೇರಿ, ಗ್ರಾಮದ ಮುಖಂಡರಾದ ಶಿವರಾಜ ಪೊಲೀಸ್ ಪಾಟೀಲ, ಶ್ರೀಮಂತ ಉದನೂರ ಮುಂತಾದವರಿದ್ದರು. ಶಿವಶಂಕರ
ಬಿರಾದಾರ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ಜರುಗಿತು. ಗ್ರಾಮದ ಅಪ್ಪಾಜಿ ಶಿಕ್ಷಣ ಟ್ರಸ್ಟ್‌ನ ಕಾರ್ಯದರ್ಶಿ ರಾಜಕುಮಾರ ಉದನೂರ ನಿರೂಪಿಸಿದರು. ರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು
ಮೂರೂ ವರ್ಷಗಳಿಂದ ಈ ಶಾಲೆಯಲ್ಲಿ ಗಣಿತ ಶಿಕ್ಷಕರೇ ಇಲ್ಲ… ವಿದ್ಯಾರ್ಥಿಗಳಿಂದ ಪ್ರತಿಭಟನೆ
Kalaburagi: ರೌಡಿ ಶೀಟರ್ ಬರ್ಬರ ಹ*ತ್ಯೆ… ರೈಲು ಹಳಿ ಬಳಿ ಶವ ಎಸೆದು ಹೋದ ದುಷ್ಕರ್ಮಿಗಳು
Hunasagi: ನಕಲಿ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿಗಳಿಂದ ದಾಳಿ
MUST WATCH
ಹೊಸ ಸೇರ್ಪಡೆ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.