ಶಿವಸೇನೆ ಕಾಂಗ್ರೆಸ್ ಜತೆ ಸೇರಬಹುದು: ಚವಾಣ್
Team Udayavani, Feb 1, 2018, 10:59 AM IST
ಔರಂಗಾಬಾದ್: ಶಿವಸೇನೆಗೆ ವಿರೋಧ ಪಕ್ಷದಲ್ಲಿ ಸೇರ್ಪಡೆಗೊಳ್ಳುವ ಇಚ್ಛೆ ಇದ್ದರೆ, ಪಕ್ಷವು ಮೊದಲಿಗೆ ಎನ್‌ಡಿಎ ಮೈತ್ರಿಕೂಟ ತೊರೆದು ಆಡಳಿತದಿಂದ ಹೊರಬರಬೇಕು ಎಂದು ಕಾಂಗ್ರೆಸ್ ನಾಯಕ ಹಾಗೂ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಪೃಥ್ವೀರಾಜ್ ಚವಾಣ್ ಅವರು ಬುಧವಾರ ಹೇಳಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಕೇಂದ್ರ ನೇತೃತ್ವವು ಈ ವಿಷಯದ ಕುರಿತು ಒಪ್ಪಿಗೆ ನೀಡಿದರೆ ಶಿವಸೇನೆ ಹಾಗೂ ಕಾಂಗ್ರೆಸ್ ನಡುವೆ ಔಪಚಾರಿಕ ಮೈತ್ರಿ ಮಾಡಿಕೊಳ್ಳಬಹುದು ಎಂದು ಚವಾಣ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚವಾಣ್ ಅವರು, ಶಿವಸೇನೆ ಹಾಗೂ ಬಿಜೆಪಿ ಜತೆಯಾಗಿ ಆಡಳಿತದಲ್ಲಿದೆ. ಆದರೆ ಈ ಎರಡು ಪಕ್ಷಗಳು ಬೇರೆ ಬೇರೆಯಾಗಿ, ಶಿವಸೇನೆ ವಿರೋಧ ಪಕ್ಷದ ಜತೆ ಬರುವುದಾದರೆ ನಾವು ಈ ವಿಷಯದ ಕುರಿತು ವಿಚಾರ ನಡೆಸಬಹುದು ಎಂದು ಹೇಳಿದ್ದಾರೆ. ಈ ಮೈತ್ರಿಕೂಟಕ್ಕಾಗಿ ಪ್ರಸ್ತಾವವನ್ನು ದಿಲ್ಲಿಗೆ ಕಳುಹಿಸಲಾಗುವುದು ಎಂದಿದ್ದಾರೆ. ಈ ಹಿಂದೆ ಬಿಜೆಪಿ ಹಾಗೂ ಶಿವಸೇನೆ ಬೇರೆ ಬೇರೆಯಾಗಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ತೀರ್ಮಾನಿಸಿದ್ದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.