ಒಸ್ಟಾಪೆಂಕೊ ಕ್ವಾರ್ಟರ್ ಫೈನಲ್ ಓಟ
Team Udayavani, Feb 2, 2018, 6:25 AM IST
ಸೇಂಟ್ ಪೀಟರ್ಬರ್ಗ್: ಜೆಲೆನಾ ಒಸ್ಟಾಪೆಂಕೊ ಮತ್ತು ದರಿಯಾ ಕಸತ್ಕಿನಾ “ಸೇಂಟ್ ಪೀಟರ್ಬರ್ಗ್ ಲೇಡೀಸ್ ಟ್ರೋಫಿ ಟೆನಿಸ್’ ಪಂದ್ಯಾವಳಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮೊದಲ ಸುತ್ತಿನ ಪಂದ್ಯದಲ್ಲಿ ಪೆಟ್ರಾ ಕ್ವಿಟೋವಾ ಗೆಲುವು ಸಾಧಿಸಿದರೆ, ಫ್ರಾನ್ಸ್ನ ಕ್ಯಾರೋಲಿನ್ ಗಾರ್ಸಿಯಾ ಪರಾಭವಗೊಂಡಿದ್ದಾರೆ.
2 ಬಾರಿಯ ವಿಂಬಲ್ಡನ್ ಚಾಂಪಿಯನ್, ಜೆಕ್ ಆಟಗಾರ್ತಿ ಪೆಟ್ರಾ ಕ್ವಿಟೋವಾ ಬುಧವಾರ ರಾತ್ರಿಯ ಪಂದ್ಯದಲ್ಲಿ ರಷ್ಯಾದ ಎಲೆನಾ ವೆಸ್ನಿನಾ ವಿರುದ್ಧ 6-2, 6-0 ಅಂತರದ ಸುಲಭ ಜಯ ಸಾಧಿಸಿದರು. ವೈಲ್ಡ್ಕಾರ್ಡ್ ಮೂಲಕ ಪ್ರವೇಶ ಪಡೆದಿರುವ ಕ್ವಿಟೋವಾ ಮುಂದಿನ ಸುತ್ತಿನಲ್ಲಿ ರೊಮೇನಿಯಾದ ಐರಿನಾ ಕ್ಯಾಮೇಲಿಯಾ ಬೆಗು ವಿರುದ್ಧ ಆಡಲಿದ್ದಾರೆ.
ವಿಶ್ವ ರ್ಯಾಂಕಿಂಗ್ನಲ್ಲಿ 7ನೇ ಸ್ಥಾನದಲ್ಲಿರುವ ಕ್ಯಾರೋಲಿನ್ ಗಾರ್ಸಿಯಾ ಅವರನ್ನು ರಷ್ಯಾದ ಅರ್ಹತಾ ಆಟಗಾರ್ತಿ ಎಲೆನಾ ರಿಬಕಿನಾ 4-6, 7-6 (6), 7-6 (5) ಅಂತರದಿಂದ ಹಿಮ್ಮೆಟ್ಟಿಸಿ ಅಚ್ಚರಿಯ ಫಲಿತಾಂಶಕ್ಕೆ ಸಾಕ್ಷಿಯಾದರು.
ಕ್ವಾ.ಫೈನಲ್ನಲ್ಲಿ ಒಸ್ಟಾಪೆಂಕೊ
ಕಳೆದ ವರ್ಷದ ಫ್ರೆಂಚ್ ಓಪನ್ ಚಾಂಪಿಯನ್, ಲಾತ್ವಿಯಾದ ಜೆಲೆನಾ ಒಸ್ಟಾಪೆಂಕೊ ರಷ್ಯಾದ ಹಿರಿಯ ಆಟಗಾರ್ತಿ ವೆರಾ ಚ್ವೊನರೇವಾ ಅವರನ್ನು 7-6 (6), 6-3 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ತಲುಪಿದರು. ಒಸ್ಟಾಪೆಂಕೊ ಅವರಿನ್ನು ಕ್ವಿಟೋವಾ-ಬೆಗು ನಡುವಿನ ವಿಜೇತರನ್ನು ಎದುರಿಸಲಿದ್ದಾರೆ.
ರಷ್ಯಾದ ದರಿಯಾ ಕಸತ್ಕಿನಾ ಕೂಡ ಕ್ವಾರ್ಟರ್ ಫೈನಲಿಗೆ ಏರಿದ್ದಾರೆ. ದ್ವಿತೀಯ ಸುತ್ತಿನ ಪಂದ್ಯದಲ್ಲಿ ಅವರು ಫ್ರಾನ್ಸ್ನ ಅಲಿಜೆ ಕಾರ್ನೆಟ್ ವಿರುದ್ಧ 6-2, 6-1 ಅಂತರದ ಜಯ ಸಾಧಿಸಿದರು.
ಪ್ರಥಮ ಸುತ್ತಿನ “ಆಲ್ ರಷ್ಯನ್’ ಪಂದ್ಯವೊಂದರಲ್ಲಿ ಅನಾಸ್ತಾಸಿಯಾ ಪಾವುÉಚೆಂಕೋವಾ ಅವರನ್ನು ಎಕತೆರಿನಾ ಮಕರೋವಾ 6-4, 6-4 ಅಂತರದಿಂದ ಸೋಲಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.