ಧನಂಜಯ ಶತಕ; ಲಂಕಾ ತಿರುಗೇಟು
Team Udayavani, Feb 2, 2018, 6:30 AM IST
ಚಿತ್ತಗಾಂಗ್: ಬಾಂಗ್ಲಾದೇಶ ವಿರುದ್ಧದ ಚಿತ್ತಗಾಂಗ್ ಟೆಸ್ಟ್ ಪಂದ್ಯದ ದ್ವಿತೀಯ ದಿನ ಪ್ರವಾಸಿ ಶ್ರೀಲಂಕಾ ತಿರುಗೇಟು ನೀಡಿದೆ. ಬಾಂಗ್ಲಾವನ್ನು 513ಕ್ಕೆ ನಿಯಂತ್ರಿಸಿದ ಬಳಿಕ ಒಂದೇ ವಿಕೆಟಿಗೆ 187 ರನ್ ಪೇರಿಸಿದೆ. ಲಂಕೆಯ ಈ ಮೊತ್ತ ಕುಸಲ್ ಮೆಂಡಿಸ್ ಮತ್ತು ಧನಂಜಯ ಡಿ’ಸಿಲ್ವ ಅವರ ಜತೆಯಾಟದಲ್ಲಿ ಬಂದಿದೆ.
ಆರಂಭಕಾರ ದಿಮುತ್ ಕರುಣರತ್ನೆ (0) ಅವರನ್ನು 3ನೇ ಓವರಿನಲ್ಲಿ ಶೂನ್ಯಕ್ಕೆ ಕಳೆದು ಆಘಾತಕ್ಕೊಳಗಾದ ಲಂಕೆಗೆ ಮೆಂಡಿಸ್-ಡಿ’ಸಿಲ್ವ ಸೇರಿಕೊಂಡು ರಕ್ಷಣೆ ಒದಗಿಸಿದ್ದಾರೆ. ಧನಂಜಯ ಡಿ’ಸಿಲ್ವ 4ನೇ ಶತಕ ಸಂಭ್ರಮ ಆಚರಿಸಿದ್ದು, 104 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ (127 ಎಸೆತ, 15 ಬೌಂಡರಿ). ಅಜಂತ ಮೆಂಡಿಸ್ ಗಳಿಕೆ ಅಜೇಯ 83 ರನ್. 152 ಎಸೆತಗಳ ಈ ಜವಾಬ್ದಾರಿಯುತ ಆಟದ ವೇಳೆ 6 ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಯಲ್ಪಟ್ಟಿತು.
ಇದಕ್ಕೂ ಮುನ್ನ 4ಕ್ಕೆ 374 ರನ್ ಮಾಡಿದಲ್ಲಿಂದ ಬ್ಯಾಟಿಂಗ್ ಮುಂದುವರಿಸಿದ ಬಾಂಗ್ಲಾದೇಶ 513ರ ತನಕ ಸಾಗಿತು. ಆದರೆ 175 ರನ್ ಮಾಡಿ ಆಡುತ್ತಿದ್ದ ಮೊಮಿನುಲ್ ಹಕ್ ಈ ಮೊತ್ತಕ್ಕೆ ಕೇವಲ ಒಂದು ರನ್ ಸೇರಿಸಿ ನಿರ್ಗಮಿಸಿದರು. 9ರಲ್ಲಿದ್ದ ನಾಯಕ ಮಹಮದುಲ್ಲ 83ರ ತನಕ ಸಾಗಿ ಔಟಾಗದೆ ಉಳಿದರು. ಇವರಿಗೆ ಮಿರಾಜ್ (20) ಮತ್ತು ಸುಂಜಾಮುಲ್ ಇಸ್ಲಾಮ್ (24) ಉತ್ತಮ ಬೆಂಬಲವಿತ್ತರು. ಇವರ ಸಾಹಸದಿಂದ ತಂಡದ ಮೊತ್ತ ಐನೂರರ ಗಡಿ ದಾಟಿತು. ಶ್ರೀಲಂಕಾ ಪರ ಸುರಂಗ ಲಕ್ಮಲ್ ಮತ್ತು ರಂಗನ ಹೆರಾತ್ ತಲಾ 3 ವಿಕೆಟ್, ಲಕ್ಷಣ ಸಂದಕನ್ 2 ವಿಕೆಟ್ ಉರುಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.