ಎಫ್1ನಲ್ಲಿ “ಗ್ರಿಡ್ ಗರ್ಲ್’ಗಳಿಗೆ ನಿಷೇಧ
Team Udayavani, Feb 2, 2018, 6:30 AM IST
ಲಂಡನ್: ಇನ್ನು ಮುಂದೆ ಫಾರ್ಮುಲಾ ವನ್ ಸ್ಪರ್ಧೆಗಳ ಆರಂಭಿಕ ಗ್ರಿಡ್‌ಗಳಲ್ಲಿ ಚಾಲಕನ ಹೆಸರಿರುವ ಬೋರ್ಡ್ ಹಿಡಿದ ವನಿತಾ ಮಾಡೆಲ್‌ಗಳ ಮೆರವಣಿಗೆ ನಿಲ್ಲಲಿದೆ. ಇದರೊಂದಿಗೆ ಫಾರ್ಮುಲಾ ವನ್ ಸ್ಪರ್ಧೆಗಳಲ್ಲಿ ಮಹಿಳಾ ಮಾಡೆಲ್‌ಗಳನ್ನು ನಿಷೇಧಿಸಲು ನಿರ್ಧರಿಸಲಾಗಿದೆ.
ಎಫ್1 ಸ್ಪರ್ಧೆಗಳಲ್ಲಿ ಮಹಿಳಾ ಮಾಡೆಲ್‌ಗಳ ನಿಷೇಧದ ನಿರ್ಧಾರವನ್ನು ಈಗಾಗಲೇ ಪ್ರಕಟಿಸಲಾಗಿದ್ದು, ಮಾ. 25ರಂದು ಆಸ್ಟ್ರೇಲಿಯದಲ್ಲಿ ಆರಂಭಗೊಳ್ಳಲಿರುವ ಹೊಸ ಋತುವಿನಿಂದಲೇ ಈ ಕ್ರಮ ಜಾರಿಯಾಗಲಿದೆ.
“ಎಫ್1 ಸ್ಪರ್ಧೆಗಳಲ್ಲಿ ಗ್ರಿಡ್ ಗರ್ಲ್ಗಳ ಪದ್ಧತಿಯನ್ನು ದಶಕಗಳಿಂದಲೂ ಪಾಲಿಸಿಕೊಂಡು ಬರಲಾಗಿತ್ತು. ಈ ಪ್ರವೃತ್ತಿ ನಮ್ಮ ಬ್ರ್ಯಾಂಡ್ ಮೌಲ್ಯಗಳಿಗೆ ಪೂರಕವಲ್ಲವೆಂದು ನಾನು ಭಾವಿಸುತ್ತೇನೆ. ಇದು ಆಧುನಿಕ ಸಾಮಾಜಿಕ ನಿಯಮಾವಳಿಗಳಿಗೆ ಸ್ಪಷ್ಟ ವಿರೋಧವಾಗಿದೆ; ಎಫ್1 ಮತ್ತು ವಿಶ್ವದಾದ್ಯಂತ ಇರುವ ಅದರ ಅಭಿಮಾನಿ ಬಳಗಕ್ಕೂ ಸರಿ ಹೊಂದುವುದಿಲ್ಲ’ ಎಂದು ಎಫ್1ನ ವಾಣಿಜ್ಯ ಮ್ಯಾನೇಜರ್ ಸಿಯಾನ್ ಬ್ರ್ಯಾಚಸ್ ಹೇಳಿದ್ದಾರೆ.
ಈ ಕ್ರಾಂತಿಕಾರಿ ನಿರ್ಧಾರವೀಗ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಸದ್ದು ಮಾಡಿದೆ. ಬಹುತೇಕ ಜಾಲತಾಣಿಗರು ಹೊಸ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಬ್ರಿಟನ್‌ನ ವನಿತಾ ಕ್ರೀಡಾ ಸಂಸ್ಥೆ, “ಗ್ರಿಡ್ ಗರ್ಲ್ ಬಳಕೆ ನಿಲ್ಲಿಸುವ ಎಫ್1 ನಿರ್ಧಾರಕ್ಕೆ ಧನ್ಯವಾದಗಳು’ ಎಂದಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.