ಗ್ರಾಮೀಣರಿಗೆ 14.34 ಲಕ್ಷ ಕೋಟಿ
Team Udayavani, Feb 2, 2018, 6:15 AM IST
ಮುಂದಿನ ಆರ್ಥಿಕ ವರ್ಷದಲ್ಲಿ ಗ್ರಾಮೀಣ ಜೀವನೋಪಾಯವನ್ನು ಆದ್ಯತಾ ಕ್ಷೇತ್ರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ಬಜೆಟ್‌ನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ 14.34 ಲಕ್ಷ ಕೋಟಿ ರೂ. ಒದಗಿಸಿದೆ.
ಜೀವನೋಪಾಯ, ಕೃಷಿ ಮತ್ತು ಇತರೆ ಕೃಷಿ ಸಂಬಂಧಿ ಚಟುವಟಿಕೆಗಳು, ಗ್ರಾಮೀಣ ಮೂಲ ಸೌಕರ್ಯ ಕ್ಷೇತ್ರಗಳಿಗೆ ಹೆಚ್ಚು ವೆಚ್ಚ ಮಾಡುವ ಮೂಲಕ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಮತ್ತು ಜನಜೀವನ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಅದಕ್ಕಾಗಿ ವಿವಿಧ ಇಲಾಖೆಗಳ ಮೂಲಕ ಗ್ರಾಮೀಣ ಭಾಗದ ಜೀವನೋಪಾಯ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚುವರಿ ಬಜೆಟ್ ಮತ್ತು ಬಜೆಟೇತರ ಮೂಲಗಳಿಂದ 11.98 ಕೋಟಿ ರೂ. ಸೇರಿದಂತೆ ಒಟ್ಟು 14.34 ಲಕ್ಷ ಕೋಟಿ ರೂ. ಮೀಸಲಿಡಲಾಗಿದೆ. ಅನುದಾನದಲ್ಲಿ ಗ್ರಾಮೀಣ ಕೃಷಿ ಚಟುವಟಿಕೆಗಳು ಮತ್ತು ಸ್ವಯಂ ಉದ್ಯೋಗದ ಹೊರತಾಗಿ 321 ಕೋಟಿ ಮಾನವ ದಿನಗಳ ಸೃಷ್ಟಿ, 3.17 ಲಕ್ಷ$ ಕಿ.ಮೀ. ಗ್ರಾಮೀಣ ರಸ್ತೆ ನಿರ್ಮಾಣ, 51 ಲಕ್ಷ$ಹೊಸ ಗ್ರಾಮೀಣ ಮನೆಗಳು, 1.88 ಕೋಟಿ ಶೌಚಾಲಯ ನಿರ್ಮಾಣ ಮತ್ತು 1.75 ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಗುರಿ ಹೊಂದಲಾಗಿದೆ.
ಗ್ರಾಮೀಣ ಜೀವನೋಪಾಯ ಮಿಷನ್‌ಗೆ 5750 ಕೋಟಿ: ಇದಲ್ಲದೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್‌ಗೆ (ಎನ್‌ಆರ್‌ಎಲ್‌ಎಂ) 2018-19ನೇ ಸಾಲಿನಲ್ಲಿ 5750 ಕೋಟಿ ರೂ. ಹಂಚಿಕೆ ಮಾಡಲಾಗಿದೆ. ಸ್ವ ಸಹಾಯ ಗುಂಪುಗಳಿಗೆ ಸಾಲ ಸೌಲಭ್ಯ ಕಲ್ಪಿಸಲು ಕೂಡ ಆದ್ಯತೆ ನೀಡಿದ್ದು, 2019ರ ಮಾರ್ಚ್ ಅಂತ್ಯದೊಳಗೆ ಈ ಗುಂಪುಗಳಿಗೆ 75 ಸಾವಿರ ಕೋಟಿ ರೂ. ಸಾಲ ನೀಡುವ ಗುರಿ ಹಮ್ಮಿಕೊಳ್ಳಲಾಗಿದೆ. 2016-17ನೇ ಸಾಲಿನಲ್ಲಿ ಸ್ವಸಹಾಯ ಗುಂಪುಗಳಿಗೆ 42,500 ಕೋಟಿ ರೂ. ಸಾಲ ಒದಗಿಸಿದ್ದು, ಈ ಬಾರಿ ಗುರಿಯನ್ನು ಶೇ. 37ರಷ್ಟು ಹೆಚ್ಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra Election: ಅಮಿತ್ ಶಾ ಅವರ ಬ್ಯಾಗ್ ಪರೀಕ್ಷಿಸಿದ ಚುನಾವಣಾ ಅಧಿಕಾರಿಗಳು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.