ಸಿಟಿ ಟ್ರಾಫಿಕ್ಕಿಗೆ ರೈಲೇ ಉಪಶಮನ
Team Udayavani, Feb 2, 2018, 6:35 AM IST
ಬೆಂಗಳೂರು ನಗರದ ಜನದಟ್ಟಣೆ ಕಡಿಮೆ ಮಾಡಲು ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಿಲಿಕಾನ್ ಸಿಟಿಗೆ ಸಬ್ ಅರ್ಬನ್ (ಉಪನಗರ) ರೈಲು ಬೇಕು ಎಂಬ ನಾಗರಿಕರ ಮನವಿಗೆ ಜೇಟಿÉಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಇದಕ್ಕಾಗಿ 17,000 ಕೋಟಿ ರೂ.ಗಳನ್ನು ಮೀಸಲಿರಿಸಿದ್ದಾರೆ. 160 ಕಿ.ಮೀ.ದೂರದ ಉಪನಗರಗಳ ವ್ಯಾಪ್ತಿಯಲ್ಲಿ ಯೋಜನೆ ಜಾರಿಯಾಗಲಿದೆ.
ರೈಲ್ವೆ ವಲಯದ ಅಭಿವೃದ್ಧಿಗೆ ಒಟ್ಟು 1,48,528 ಕೋಟಿ ರೂ.ಗಳ ಅನುದಾನ ಘೋಷಣೆ ಮಾಡಲಾಗಿದೆ. ಅಲ್ಲದೆ, ರೈಲ್ವೆ ವಲಯದಲ್ಲಿನ ಮೂಲಭೂತ ಸೌಕರ್ಯದ ಅಭಿವೃದ್ಧಿ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ಘೋಷಿಸಲಾಗಿದೆ.
ಕಳೆದ ಬಾರಿಯ ರೈಲ್ವೆ ಬಜೆಟ್‌ನ ಗಾತ್ರ 1.31 ಲಕ್ಷ ಕೋಟಿ ರೂ.ಗಳಾಗಿದ್ದು, ಈ ಬಾರಿ ಶೇ.13ರಷ್ಟು ಹೆಚ್ಚಳ ಮಾಡಲಾಗಿದೆ. ಈ ಬಾರಿ ಯಾವುದೇ ಹೊಸ ಪ್ರಮುಖ ರೈಲುಗಳ ಘೋಷಣೆ ಮಾಡಲಾಗಿಲ್ಲ. ಬದಲಾಗಿ, ರೈಲ್ವೆಯ ಆಧುನೀಕರಣ, ಸುರಕ್ಷತೆ ಹಾಗೂ ನೂತನ ತಂತ್ರಜ್ಞಾನಗಳ ಅಳವಡಿಕೆಗೆ ಒತ್ತು ನೀಡಲಾಗಿದೆ.
ಅಂತೂ ಈಡೇರಿತು ಬೆಂಗಳೂರಿಗರ ಕನಸು: ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನ ವಾಹನ ದಟ್ಟಣೆ ಕಡಿಮೆ ಮಾಡಲು ಸಬ್ ಅರ್ಬನ್ (ಉಪನಗರ) ರೈಲು ಬೇಕು ಎಂಬುದು ನಾಗರಿಕರ ಬಹು ವರ್ಷಗಳ ಬೇಡಿಕೆಯಾಗಿತ್ತು. ಇದರ ಜಾರಿಗೆ ಮುಂದಾಗಿರುವ ಸಚಿವರು, 160 ಕಿ.ಮೀ.ವ್ಯಾಪ್ತಿಯಲ್ಲಿ ಉಪನಗರಗಳ ಸಂಪರ್ಕ ಕಲ್ಪಿಸಲು ಸಬ್ ಅರ್ಬನ್ ರೈಲು ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಇದಕ್ಕಾಗಿ ಬಜೆಟ್‌ನಲ್ಲಿ 17,000 ಕೋಟಿ ರೂ.ಗಳನ್ನು ಮೀಸಲಿರಿಸಿದ್ದಾರೆ.
ಬುಧವಾರ ವಷ್ಟೇ ರಾಜ್ಯ ಸಚಿವ ಸಂಪುಟ ಸಬ್ ಅರ್ಬನ್ ರೈಲ್ವೆಯ ಮೊದಲ ಹಂತದ ಯೋಜನೆಗೆ ಒಪ್ಪಿಗೆ ನೀಡಿದ್ದು, ಮುಂದಿನ 3 ವರ್ಷಗಳ ಅವಧಿಯಲ್ಲಿ ಇದನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿತ್ತು. ರಾಜ್ಯ ಸರ್ಕಾರ ಹಾಗೂ ರೈಲ್ವೆ ಇಲಾಖೆಯ ಜಂಟಿ ಸಹಭಾಗಿತ್ವದಲ್ಲಿ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಕರ್ನಾಟಕ ಸರ್ಕಾರ ಯೋಜನೆಯ ಶೇ.20ರಷ್ಟು ಮೊತ್ತವನ್ನು ಭರಿಸಲಿದೆ.
ಬುಲೆಟ್ ರೈಲಿಗೆ ಶಂಕುಸ್ಥಾಪನೆ
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷೆಯ, ದೇಶದ ಮೊಟ್ಟ ಮೊದಲ ಬುಲೆಟ್ ರೈಲು ಯೋಜನೆ ಜಾರಿಗೆ ಸಚಿವರು ಮುಂದಾಗಿದ್ದು, 2017ರ ಸೆ.14ರಂದು ಮುಂಬೈ- ಅಹಮದಾಬಾದ್ ಬುಲೆಟ್ ರೈಲಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು. ಯೋಜನೆ ಜಾರಿಗೆ ಅಗತ್ಯವಾದ ಮಾನವ ಸಂಪನ್ಮೂಲದ ತರಬೇತಿಗೂ ಅವಕಾಶ ಕಲ್ಪಿಸಲಾಗಿದ್ದು, ಇದಕ್ಕಾಗಿ ವಡೋ ದರಾದಲ್ಲಿ ತರಬೇತಿ ಸಂಸ್ಥೆಯೊಂದನ್ನು ಸ್ಥಾಪಿಸಲಾಗುವುದು ಎಂದರು.
ಸುರಕ್ಷತೆಗೆ “ಫಾಗ್ ಸೇಫ್’, ಖಾಸಗಿ ಸಹಭಾಗಿತ್ವದಲ್ಲಿ “ಫಾಸ್ಟ್ ಟ್ರ್ಯಾಕ್’
ದೇಶದಲ್ಲಿನ ರೈಲ್ವೆ ಸಂಪರ್ಕ ಜಾಲವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ, ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿರುವ ಅವರು, ಬಜೆಟ್‌ನ ಬಹುಪಾಲು ಮೊತ್ತವನ್ನು ಮೂಲಭೂತ ಸೌಕರ್ಯ ಗಳ ಅಭಿವೃದ್ಧಿಗೆ ಮೀಸಲಿರಿಸಿದ್ದಾರೆ. ಈ ನಿಟ್ಟಿನಲ್ಲಿ 18 ಸಾವಿರ ಕಿ.ಮೀ.ದೂರದ ರೈಲ್ವೆ ಹಳಿಗಳ ಡಬಲೀ ಕರಣ, (ಅವಳಿ ಮಾರ್ಗ), 5 ಸಾವಿರ ಕಿ.ಮೀ.ಗಳ ಗೇಜ್ ಪರಿವರ್ತನೆಗೆ ಅನುದಾನ ಮೀಸಲಿರಿಸಿದ್ದಾರೆ. ಜೊತೆಗೆ, 2017-18ರ ಆರ್ಥಿಕ ಸಾಲಿನಲ್ಲಿ 4 ಸಾವಿರ ಕಿ.ಮೀ.ರೈಲ್ವೆ ಹಳಿಗಳ ವಿದ್ಯುದ್ಧೀಕರಣಕ್ಕೆ ಉದ್ದೇಶಿಸಲಾಗಿದೆ. 2018-19ರ ಸಾಲಿನಲ್ಲಿ 3,600 ಕಿ.ಮೀ.ಹಳಿ ಬದಲಾವಣೆಯ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.ಚೆನ್ನೈನ ಪೆರಂಬದೂರಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಏಕೀಕೃತ ರೈಲ್ವೆ ಕೋಚಿಂಗ್ ಕಾರ್ಖಾನೆ ಆರಂಭಿಸಲಾಗುವುದು. ಜೊತೆಗೆ, ಭಾರತೀಯ ರೈಲ್ವೆ ನಿಲ್ದಾಣ ಅಭಿವೃದ್ಧಿ ಕಂಪನಿ ಲಿಮಿಟೆಡ್ ಮೂಲಕ ದೇಶದಲ್ಲಿನ ಪ್ರಮುಖ 600 ರೈಲ್ವೆ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗಿದೆ. 2018-19ರ ಸಾಲಿನಲ್ಲಿ 12 ಸಾವಿರ ಬೋಗಿಗಳು, 5,160 ಕೋಚ್‌ಗಳು ಹಾಗೂ 700 ರೈಲ್ವೆ ಎಂಜಿನ್‌ಗಳನ್ನು ಖರೀದಿಸಲಾಗುವುದು.
ಪೂರ್ವ ಮತ್ತು ಪಶ್ಚಿಮ ಸರಕು ಸಾಗಣೆ ಕಾರಿಡಾರ್‌ನ ಕೆಲಸ ಪ್ರಗತಿಯಲ್ಲಿದೆ. ಸರಕು ಸಾಗಣೆ ಹಾಗೂ ಫಾಸ್ಟ್ ಟ್ರ್ಯಾಕ್ ವಲಯದಲ್ಲಿ ಖಾಸಗಿ ಪಾಲುದಾರಿಕೆಗೆ ಅವಕಾಶ ನೀಡಲಾಗುತ್ತಿದೆ. ದಟ್ಟ ಮಂಜು ಆವರಿಸಿದ ಸಂದರ್ಭದಲ್ಲಿ ಸುರಕ್ಷತೆಗಾಗಿ ವಿಶೇಷ ಉಪಕರಣಗಳ ಅಳವಡಿಕೆ, ಅಪಾಯ ಮುನ್ಸೂಚನೆ ನೀಡುವ ತಂತ್ರಜ್ಞಾನ ಬಳಕೆ ಸೇರಿದಂತೆ ನೂತನ ತಂತ್ರಜ್ಞಾನಗಳ ಬಳಕೆಯನ್ನು ಹೆಚ್ಚಿಸಲಾಗುವುದು. ಮುಂದಿನ ಎರಡು ವರ್ಷಗಳ ಅವಧಿಯಲ್ಲಿ ಬ್ರಾಡ್‌ಗೆàಜ್ ರೈಲು ಮಾರ್ಗದಲ್ಲಿನ 4,267 ಕಾವಲು ರಹಿತ ರೈಲ್ವೆ ಕ್ರಾಸಿಂಗ್‌ನ್ನು ತೆಗೆದು ಹಾಕಲಾ ಗುವುದು. ಅಲ್ಲದೆ, ರಾಷ್ಟ್ರೀಯ ರೈಲ್ವೆ ಸುರಕ್ಷಾ ಕೋಶ ಯೋಜನೆಯಡಿ ಇನ್ನಷ್ಟು ಹಣಕಾಸು ಸಹಾಯ ಒದಗಿಸಲು ಕೇಂದ್ರ ಸಿದ್ಧ. ಹಂತಹಂತವಾಗಿ ಎಲ್ಲಾ ರೈಲು ಹಾಗೂ ರೈಲ್ವೆ ನಿಲ್ದಾಣಗಳಿಗೆ ವೈ-ಫೈ ವ್ಯವಸ್ಥೆ ಹಾಗೂ ಸಿಸಿಟಿವಿ ಅಳವಡಿಸಲಾಗುವುದು. 25 ಸಾವಿರ ಪ್ರಯಾಣಿಕರು ಸಂಚರಿಸುವ ನಿಲ್ದಾಣಗಳಲ್ಲಿ ಎಸ್ಕಲೇಟರ್ ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.
ಬಜೆಟ್ ಬುಲೆಟ್…
– ಒಟ್ಟು 1.48 ಲಕ್ಷ ಕೋಟಿ ರೂ.ನ ರೈಲ್ವೆ ಬಜೆಟ್ ಮಂಡನೆ.
– ಕಳೆದ ಬಾರಿಗಿಂತ (1.31 ಲಕ್ಷ ಕೋಟಿ) ಶೇ.13ರಷ್ಟು ಹೆಚ್ಚಿನ ಅನುದಾನ
– ಬೆಂಗಳೂರು ಸಬ್ ಅರ್ಬನ್ ರೈಲಿಗೆ 17 ಸಾವಿರ ಕೋಟಿ ರೂ. ಮೀಸಲು.
– ಇದೇ ಮೊದಲ ಬಾರಿಗೆ ಮುಂಬೈ ಸಬ್ ಅರ್ಬನ್ ರೈಲ್ವೆ ಜಾಲ ವಿಸ್ತರಣೆ.
– ಹೊಸ ರೈಲುಗಳಿಲ್ಲ, ಆಧುನೀಕರಣಕ್ಕೆ, ಸುರಕ್ಷತೆಗೆ ಒತ್ತು.
– ದೇಶದ ಪ್ರಮುಖ 600 ರೈಲ್ವೆ ನಿಲ್ದಾಣಗಳ ಅಭಿವೃದ್ಧಿಗೆ ಯೋಜನೆ.
– ದಟ್ಟ ಮಂಜು ಆವರಿಸಿದ ಸಂದರ್ಭದಲ್ಲಿ ಸುರಕ್ಷತೆಗಾಗಿ ಬರಲಿದೆ ವಿಶೇಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra: ಏಕ್‌ನಾಥ್ ಹೇ ತೋ ಸೇಫ್ ಹೇ: ಶಿಂಧೆ ಶಿವಸೇನೆ ಹೊಸ ಮಂತ್ರ
Old Parliament House: ಭಾರತದ ಸಂವಿಧಾನವು ಜೀವಂತಿಕೆಯ, ಪ್ರಗತಿಪರ ದಾಖಲೆ: ರಾಷ್ಟ್ರಪತಿ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Chhattisgarh: ಹಳಿ ತಪ್ಪಿದ ಗೂಡ್ಸ್ ರೈಲಿನ 20 ಬೋಗಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.