ಜನಸಾಮಾನ್ಯರಿಗೆ ವರ, ಶ್ರೀಮಂತರಿಗೆ ಬರೆ


Team Udayavani, Feb 2, 2018, 10:33 AM IST

2Feb-4.jpg

ಈ ಸಾಲಿನ ಕೇಂದ್ರ ಬಜೆಟ್‌ ಬಡವರ ಪರ ಮತ್ತು ಶ್ರೀಮಂತರಿಗೆ ಬರೆ ಎಂಬಂತಾಗಿದೆ. ಕೃಷಿ, ಗ್ರಾಮೀಣಾಭಿವೃದ್ಧಿ, ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಹಾಗೂ ತಂತ್ರಜ್ಞಾನ ಕ್ಷೇತ್ರಗಳಿಗೆ ಮಹತ್ವ ನೀಡಲಾಗಿದೆ. ಅಬಕಾರಿ ಹಾಗೂ ಸೇವಾ ತೆರಿಗೆಯ ಬದಲಿಗೆ ಸರಕು ಹಾಗೂ ಸೇವಾ ತೆರಿಗೆ (ಜಿಎಸ್‌ಟಿ) ಪರಿಚಯಿಸಿದ್ದರಿಂದ ಇವುಗಳ ಯಾವುದೇ ಪ್ರಸ್ತಾವ ಇಲ್ಲ. ಆದರೆ ಸೀಮಾ ಶುಲ್ಕ (ಕಸ್ಟಮ್ಸ್‌) ಹಾಗೂ ಆದಾಯ ತೆರಿಗೆಯ ಪ್ರಸ್ತಾವವಿದೆ.

ಮೂಲ ಸೌಕರ್ಯಕ್ಕೆ ಅತ್ಯುತ್ತಮ ಬಜೆಟ್‌. ಒಟ್ಟು 600 ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೆ, ಬೆಂಗಳೂರಿನ ಸಬ್‌ ಅರ್ಬನ್‌ ರೈಲ್ವೆಗೆ 17 ಸಾವಿರ ಕೋಟಿ ರೂ., ಭಾರತ್‌ ಮಾಲಾ ಯೋಜನೆಯಡಿ 5.35 ಲಕ್ಷ ಕೋಟಿ ರೂ. ವಿನಿಯೋಗ, ಗ್ರಾಮೀಣ ಭಾಗದ ಪ್ರತಿ ಮನೆಗೆ ವಿದ್ಯುತ್‌ ಸಂಪರ್ಕಕ್ಕೆ ಹಣ, ಸ್ವಚ್ಚ ಭಾರತ ಅಭಿಯಾನದ ಅಂಗವಾಗಿ 2 ಕೋಟಿ ಶೌಚಾಲಯಗಳ ನಿರ್ಮಾಣದ ಗುರಿ, ಉಜ್ವಲ ಯೋಜನೆಯಡಿ 8 ಕೋಟಿ ಮಹಿಳೆಯರಿಗೆ ಉಚಿತ ಅಡುಗೆ ಅನಿಲ ಸಂಪರ್ಕ, ಅಮೃತ ಯೋಜನೆ‌ಯಡಿ ನಗರದ ಎಲ್ಲಾ ಮನೆಗಳಿಗೆ ನೀರಿನ ಸಂಪರ್ಕಕ್ಕೆ ಅನುದಾನ, ಗ್ರಾಮೀಣ ಪ್ರದೇಶಗಳಿಗೆ 5 ಲಕ್ಷ ವೈಫೈ- ಹಾಟ್‌ ಸ್ಪಾಟ್‌ -ಇವೆಲ್ಲವೂ ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕ.

ಇಪ್ಪತ್ತ ನಾಲ್ಕು ಹೊಸ ಸರಕಾರಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ, ಬಿ-ಟೆಕ್‌ ವಿದ್ಯಾರ್ಥಿಗಳಿಗೆ ಪಿಎಚ್‌ಡಿ ಫೆಲೋಶಿಪ್‌, ಬುಡಕಟ್ಟು ವಿದ್ಯಾರ್ಥಿಗಳಿಗಾಗಿ ನವೋದಯ ಮಾದರಿಯ ಏಕಲವ್ಯ ವಸತಿ ಶಾಲೆಗಳ ಸ್ಥಾಪನೆ-ಎಲ್ಲವೂ ಶಿಕ್ಷಣ ಕ್ಷೇತ್ರಕ್ಕೆ ಉತ್ತೇಜನಕಾರಿ.

ಆರೋಗ್ಯ ಕ್ಷೇತ್ರಕ್ಕೂ ಗಮನ ಪರವಾಗಿಲ್ಲ. ಕುಟುಂಬ- ಆರೋಗ್ಯ ವಿಮೆ ಯೋಜನೆಯಡಿ ಪ್ರತಿ ಕುಟುಂಬಕ್ಕೆ 5 ಲಕ್ಷ ರೂ. ವರೆಗಿನ ವಿಮೆ,ನ್ಯಾಷನಲ್‌ ಹೆಲ್ತ್‌ ವೆನ್‌ನೆಸ್‌ ಸ್ಕೀಮ್‌ ಇತ್ಯಾದಿ ಉಲ್ಲೇಖನೀಯ.

ಮುದ್ರಾ ಯೋಜನೆಯಡಿ ಹೆಚ್ಚಿನ ಸಾಲ, ಸ್ವ ಉದ್ಯೋಗ ಮಾಡುವವರಿಗೆ 10 ಲಕ್ಷ ರೂ. ವರೆಗೆ ಸಾಲ- ಉದ್ಯೋಗ ಸೃಷ್ಟಿಗೆ ಸೂಕ್ತ ಕ್ರಮ. ನಗದು ಅಪಮೌಲ್ಯದಿಂದಾಗಿ ಹಾಗೂ ಸರಕು ಮತ್ತು ಸೇವಾ ತೆರಿಗೆಯಿಂದಾಗಿ ಸಣ್ಣ ಉದ್ಯಮಗಳಿಗೆ ಹೊಡೆತವಾದ್ದರಿಂದ, ಅವುಗಳನ್ನು ಉತ್ತೇಜಿಸಲೂ ಗಮನಹರಿಸಿರುವುದು ಸ್ವಾಗತಾರ್ಹ.

ಆದಾಯ ತೆರಿಗೆ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡದಿದ್ದರೂ, ಆದಾಯ ಕರದ ಮೇಲಿನ ಸೆಸ್‌ ಅನ್ನು ಶೇ. 3 ರಿಂದ ಶೇ. 4ಕ್ಕೆ ಏರಿಸಲಾಗಿದೆ. ನೌಕರ ವೃಂದಕ್ಕೆ ಕೊಡುಗೆಯಾಗಿ 40 ಸಾವಿರ ರೂ. ವರೆಗೆ ಸ್ಟ್ಯಾಂಡರ್ಡ್ ಡಿಡಕ್ಷನ್‌ನ್ನು ಒದಗಿಸಲಾಗಿದೆ.

ಹಿರಿಯ ನಾಗರಿಕರಿಗೆ ಸಿಗುವ ಬ್ಯಾಂಕಿನ ಬಡ್ಡಿಯ ಮೇಲೆ 50 ಸಾವಿರ ರೂ. ವರೆಗೆ ಟಿಡಿಎಸ್‌ ಇಲ್ಲ. ಸೆಕ್ಷನ್‌ 80 ಟಿಟಿಬಿಯ ಪ್ರಕಾರ 50 ಸಾವಿರ ರೂ. ವರೆಗಿನ ಬಡ್ಡಿಯ ಮೇಲೆ ತೆರಿಗೆ ವಿನಾಯಿತಿ ಇದೆ.

ಸೆಕ್ಷನ್‌ 80 ರಡಿ ಮೆಡಿಕ್ಲೇಮ್‌ ಡಿಡಕ್ಷನನ್ನು 50 ಸಾವಿರ ರೂ. ಗೆ ಏರಿಸಲಾಗಿದೆ. ಹಿರಿಯ ನಾಗರಿಕರ ಬಡ್ಡಿ ಆಧಾರಿತ ಜೀವ ವಿಮಾ ಯೋಜನೆಯಲ್ಲಿ ಹೂಡಿಕೆಯ ಮಿತಿಯನ್ನು 7.50 ಲಕ್ಷ ರೂ. ಗಳಿಂದ 15 ಲಕ್ಷ ರೂ. ಗೆ ಏರಿಸಲಾಗಿದೆ. ಇದು ಹಿರಿಯ ನಾಗರಿಕರಿಗೆ ವರದಾನ.ಈ ಬಾರಿ ದೀರ್ಘ‌ಕಾಲದ (1ವರ್ಷದಿಂದ ಮೇಲ್ಪಟ್ಟ) ಶೇರುಗಳು ಹಾಗೂ ಮ್ಯೂಚುವಲ್‌ ಫಂಡ್‌ನ‌ 1 ಲಕ್ಷ ರೂ. ಕ್ಕಿಂತ ಮೇಲ್ಪಟ್ಟ ಆದಾಯದ ಮೇಲೆ ಶೇ. 10 ತೆರಿಗೆ ವಿಧಿಸಲಾಗಿದೆ. ಇದು ಶೇರು ಹಾಗೂ ಮ್ಯೂಚುವಲ್‌ ಫಂಡ್‌ ಮಾರುಕಟ್ಟೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಎಲೆಕ್ಟ್ರಾನಿಕ್‌ ಇನ್‌ಕಮ್‌ ಟ್ಯಾಕ್ಸ್‌ ಅಸೆಸ್‌ಮೆಂಟನ್ನು ಅಳವಡಿಸಲಾಗಿದೆ. ಇದರಿಂದಾಗಿ ಹೆಚ್ಚಿನ ಪಾರದರ್ಶಕತೆ ಹಾಗೂ ಪರಿಣಾಮಕಾರಿ ಆಡಳಿತವನ್ನು ಅಪೇಕ್ಷಿಸಬಹುದು.

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಲೀಟರಿಗೆ 2 ರೂ. ಇಳಿಸಿರುವುದು ಜನಸಾಮಾನ್ಯರಿಗೆ ನೀಡಿರುವ ಕೊಡುಗೆ. ವಾರ್ಷಿಕ ವಹಿವಾಟು 250 ಕೋಟಿ ರೂ. ಹೊಂದಿರುವ ಕಂಪೆನಿಗಳಿಗೆ ಆದಾಯ ತೆರಿಗೆಯನ್ನು ಶೇ. 25 ಗೆ ಇಳಿಸಲಾಗಿದೆ.

ಶ್ರೀಮಂತರಿಗೆ ಅನನುಕೂಲಕರ ಅಂಶಗಳೂ ಇವೆ. ಕೆಲವು ಸರಕಿನ ಮೇಲೆ ಸೀಮಾ ಶುಲ್ಕವನ್ನು ಏರಿಸಲಾಗಿದೆ. ಬಜೆಟ್‌ನಲ್ಲಿ ಶೇರು ಹಾಗೂ ಮ್ಯೂಚುವಲ್‌ ಫಂಡ್ಸ್‌ನ ಹೂಡಿಕೆ ಲಾಭದ ಮೇಲೆ ಶೇ. 10 ತೆರಿಗೆ ವಿಧಿಸಲಾಗಿದೆ. ಮೊಬೈಲ್‌ ಟಿವಿ ಹಾಗೂ ಇನ್ನಿತರ ಕೆಲವು ಉತ್ಪನ್ನಗಳಿಗೆ ಸೀಮಾ ಶುಲ್ಕವನ್ನು ಹೆಚ್ಚಿಸಲಾಗಿದೆ. ಇದಲ್ಲದೆ, ಆದಾಯ ಕರದ ಮೇಲೆ ಇದ್ದ ಶೇ. 3 ಸೆಸ್‌ ಅನ್ನು ಶೇ. 4ಗೆ ಏರಿಸಲಾಗಿದೆ. 

ಕೃಷಿ ಕ್ಷೇತ್ರವನ್ನೂ  ಮರೆತಿಲ್ಲ
ಎಲ್ಲ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಅವರ ಉತ್ಪಾದನಾ ವೆಚ್ಚದ ಒಂದೂವರೆಪಟ್ಟು ನಿಗದಿಪಡಿಸಲಾಗಿದೆ. ಕೃಷಿಕರಿಗೆ ನೀಡುವ ಸಾಲದ ಗುರಿ ಏರಿಸಲಾಗಿದೆ. ಹೈನುಗಾರಿಕಾ ಉದ್ಯಮದ ಅಭಿವೃದ್ಧಿಗಾಗಿ ಅನುದಾನ ಮೀಸಲಿಡಲಾಗಿದೆ. ಹತ್ತು ಸಾವಿರ ಕೋಟಿ ರೂ. ಮೀನುಗಾರಿಕಾ ಹಾಗೂ ಅಕ್ವಾಕಲ್ಚರ್‌ ಉತ್ತೇಜನಕ್ಕಾಗಿ ಇರಿಸಲಾಗಿದೆ. ಕಿಸಾನ್‌ ಕ್ರೆಡಿಟ್‌ ಕಾರ್ಡ್‌ ಯೋಜನೆಯನ್ನು ಮೀನುಗಾರಿಕಾ ಹಾಗೂ ಹೈನುಗಾರಿಕಾ ಉದ್ಯಮಗಳಿಗೆ ವಿಸ್ತರಿಸಿರುವುದು ಸೂಕ್ತ.

ಎಸ್‌. ಎಸ್‌. ನಾಯಕ್‌,
ಲೆಕ್ಕಪರಿಶೋಧಕರು, ಮಂಗಳೂರು

ಟಾಪ್ ನ್ಯೂಸ್

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

1-horoscope

Daily Horoscope: ವಸ್ತ್ರ, ಸಿದ್ಧ ಉಡುಪು, ಆಭರಣ ವ್ಯಾಪಾರಿಗಳಿಗೆ ನಿರೀಕ್ಷಿತ ಲಾಭ

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!

Kundapura: ತ್ರಾಸಿ – ಮರವಂತೆ ಬೀಚ್‌ನಲ್ಲಿ ಗಗನದೂಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Surathkal: ರ‍್ಯಾಗಿಂಗ್; 9 ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲು

Mangaluru: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸುರಕ್ಷೆ ಆದ್ಯತೆಯಾಗಿರಲಿ: ಶುಕ್ಲಾ

Mangaluru: ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಸುರಕ್ಷೆ ಆದ್ಯತೆಯಾಗಿರಲಿ: ಶುಕ್ಲಾ

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Ullal; ಉಳ್ಳಾಲ: ಹಲ್ಲೆ; ದೂರು-ಪ್ರತಿದೂರು

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

Moodbidri: ಆಳ್ವಾಸ್‌ ವಿರಾಸತ್‌ ಶಾಸ್ತ್ರೀಯ ಯುವಸಂಪದ

5

Mangaluru: ಎಎಸ್‌ಐಗೆ ಗಾಯ; ಡಿವೈಎಫ್ಐ ವಿರುದ್ಧ ಪ್ರಕರಣ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Nigeria: ಮುಳುಗಿದ 200 ಪ್ರಯಾಣಿಕರಿದ್ದ ಬೋಟ್;‌ ಮಹಿಳೆಯರು ಸೇರಿ ಹಲವರ ಸಾವು

Man arrested for giving Coast Guard information to Pakistan for Rs 200

Gujarat: 200 ರೂ ಆಸೆಗಾಗಿ ಪಾಕಿಸ್ತಾನಕ್ಕೆ ನೌಕಾಪಡೆ ಮಾಹಿತಿ ನೀಡಿದಾತನ ಬಂಧನ

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Dharwad: ಅಪ್ಪ ಪಡೆದ 1 ಲಕ್ಷ ರೂ. ಸಾಲಕ್ಕೆ ಮಗನ ಕಾಲಿಗೆ ಸರಪಳಿ!

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

Sabarimala: ಮಕ್ಕಳಿಗೆ ಪ್ರತ್ಯೇಕ ಗೇಟ್‌; ವೀಡಿಯೋ ಚಿತ್ರೀಕರಣಕ್ಕೆ ನಿಯಂತ್ರಣ

ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Karnataka Govt.,: ಕೇಂದ್ರ ಸ್ಥಾನದಲ್ಲಿ ವಾಸಿಸದಿದ್ದರೆ ಶಿಸ್ತು ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.