ದ್ವಿತೀಯ ವರ್ಷದ ಸಂಭ್ರಮ
Team Udayavani, Feb 2, 2018, 10:52 AM IST
ಮಹಾನಗರ: ದ್ವಿತೀಯ ವರ್ಷದ ಜಿಪಿಎಲ್ -2018 ಕ್ರಿಕೆಟ್ ಪಂದ್ಯಾಟ ಫೆ. 3 ಮತ್ತು 4ರಂದು ಅಹರ್ನಿಶಿ ನಡೆಯಲಿದ್ದು, ಸುಮಾರು 10-15 ಸಾವಿರ ಜಿಎಸ್‌ಬಿ ಸಮಾಜದ ಕ್ರೀಡಾ ಪ್ರೇಮಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಫೆ. 3 ರಂದು ಸಂಜೆ 4. 30ಕ್ಕೆ ಕ್ರಿಕೆಟಿಗರಾದ ರೋಜರ್ ಬಿನ್ನಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರೆ, ಡೇವಿಡ್ ಜಾನ್ಸನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಬ್ಯಾಟಿಂಗ್ ಮಾಡುವರು. ಉದ್ಘಾಟನ ಪಂದ್ಯದಲ್ಲಿ ಫುಜ್ಲಾನ್ ಸಂಸ್ಥೆಯ ಚೇರ್ಮನ್ ಅಚ್ಯುತ್ ಪೈ, ಫುಜ್ಲಾನಾ ಸಂಸ್ಥೆಯ ಪ್ರಕಾಶ್ ಪೈ, ಅನಂತ್ ಪೈ, ಭಾರತ್ ಬೀಡಿ ವರ್ಕ್‌ನ ಅನಂತ್ ಪೈ, ಯಜಮಾನ್ ಗ್ರೂಪ್‌ನ ವರದರಾಜ್ ಪೈ, ಫಿನ್ ಪವರ್ ದುಬೈನ ರಾಜೇಶ್ ಶೆಣೈ, ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ಪದ್ಮನಾಭ ಪೈ ಮುಂತಾದವರು ಪಾಲ್ಗೊಳ್ಳುವರು.
ಮಹಿಳೆಯರಿಗೆ ಕ್ರಿಕೆಟ್
ಈ ಬಾರಿ ವಿಶೇಷವಾಗಿ ಮಹಿಳಾ ಕ್ರಿಕೆಟ್ ಪಂದ್ಯಾಟವಿದ್ದು, ಪ್ರತಿ ಪಂದ್ಯ ಆರು ಓವರ್‌ಗಳದ್ದಾಗಿರುತ್ತದೆ. ಆರು ಮಹಿಳಾ ತಂಡಗಳು ಪ್ರಥಮ ಬಹುಮಾನಕ್ಕಾಗಿ ಸೆಣಸಲಿವೆ. ರನ್ನರ್ ಅಪ್ ತಂಡಕ್ಕೂ ನಗದು ಬಹುಮಾನ ಮತ್ತು ಟ್ರೋಫಿ ಲಭ್ಯವಾಗಲಿದೆ.
ಹೈದರಾಬಾದಿನ ಫುಜ್ಲಾನ್ ಸಂಸ್ಥೆ ಕ್ರೀಡಾಕೂಟದ ಪ್ರಮುಖ ಪ್ರಾಯೋಜಕತ್ವ ವಹಿಸಿಕೊಂಡಿದೆ. ಭಾರತ್ ಬೀಡಿ ವರ್ಕ್ಸ್, ಎಸ್ಟ್ರೋಲ್ ಪೈಪ್ಸ್, ಫಿನ್ ಪವರ್ ದುಬೈ, ಯಜಮಾನ ಪಿಕಲ್ಸ್ ಸಹ ಪ್ರಾಯೋಜಕತ್ವ ವಹಿಸಿವೆ. ಮೊದಲ ಪಂದ್ಯ ಶನಿವಾರ ಸಂಜೆ ನಡೆಯಲಿದ್ದು, ಮರುದಿನ ರಾತ್ರಿ 9.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ.
ಫುಜ್ಲಾನ್ ಸಂಸ್ಥೆಯ ಚೇರ್ಮನ್ ಅಚ್ಯುತ್ ಪೈ, ಸಂಸ್ಥೆಯ ಅಧ್ಯಕ್ಷ ಅಭಿಜಿತ್ ಪೈ, ಸಹ್ಯಾದ್ರಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮಂಜುನಾಥ ಭಂಡಾರಿ, ಗಣೇಶ್ ಬೀಡಿ ವರ್ಕ್‌ನ ಜಗನ್ನಾಥ್ ಶೆಣೈ, ಎಸ್ಟ್ರೋಲ್ ಪೈಪ್‌ನ ಬಿನೂ ಪಿಲೈ, ಪರಮಾನಂದ ಎಂಟರ್ ಪ್ರೈಸಸ್‌ನ ನಿತಿನ್ ಕಾಮತ್, ಐಡಿಯಲ್ ಐಸ್‌ಕ್ರೀಂನ ಮುಕುಂದ್ ಕಾಮತ್, ದೇವಗಿರಿ ಚಹಾದ ನಂದಗೋಪಾಲ್ ಶೆಣೈ, ಮಹಾರಾಜ ಹೊಟೇಲ್ಸ್‌ನ ಸುಬ್ಬಣ್ಣ ಪ್ರಭು ಭಾಗವಹಿಸುವರು. ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್, ಕೊಡಿಯಾಲ್ ನ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಶಿವಾನಂದ ಶೆಣೈ, ಕಾರ್ಯದರ್ಶಿ ಕೆ. ನರೇಶ್ ಪ್ರಭು, ಕೋಶಾಧಿಕಾರಿ ಚೇತನ್ ಕಾಮತ್ ಪ್ರಮುಖ ಪ್ರಮೋಟರ್ಸ್‌ಗಳಾಗಿದ್ದಾರೆ.
8 ತಂಡಗಳು: 8 ಓವರ್‌ಗಳು..!
ಎಂಟು ಓವರ್‌ಗಳ ಪಂದ್ಯವಾಗಿದ್ದು, ಎಂಟು ತಂಡಗಳು ಭಾಗವಹಿಸಲಿವೆ. ಕೋಟೇಶ್ವರದ ರಾಯ್ಸ ಸ್ಟೈಕರ್ಸ್, ಕೊಡಿಯಾಲ್ ಸೂಪರ್ ಕಿಂಗ್ಸ್, ಕಾರ್ಕಳದ ಕೆಬಿಸಿ, ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್‌ಬೈಲ್, ಮುಂಬಯಿ ಪಾಲ್ತನ್ಸ್, ಆರ್ ಕೆ ನೈಟ್ ರೈಡರ್ಸ್, ಪರ್ಲ್ ಸಿಟಿ ಕ್ರಿಕೆಟರ್ಸ್, ಭದ್ರಾ ಚಾಲೆಂಜರ್ಸ್ ಬಂಟ್ವಾಳ ಪಾಲ್ಗೊಳ್ಳುವ ತಂಡಗಳು. ಪ್ರಥಮ ಬಹುಮಾನ 2,22,222 ರೂ. ಮತ್ತು ಟ್ರೋಫಿ. ಪ್ರಥಮ ರನ್ನರ್ ಅಪ್ ತಂಡಕ್ಕೆ 1,77,777 ರೂ.ಮತ್ತು ಟ್ರೋಫಿ, ಎರಡನೇ ರನ್ನರ್ ಅಪ್ ತಂಡಕ್ಕೆ 1,11,111 ರೂ. ಮತ್ತು ಟ್ರೋಫಿ. ಪ್ರತಿ ಪಂದ್ಯದಲ್ಲಿ ಪಂದ್ಯಶ್ರೇಷ್ಟ ಪ್ರಶಸ್ತಿಯಿದ್ದು, ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಸುಝುಕಿ ಜಿಕ್ಸರ್ ಬೈಕ್ ನೀಡಲಾಗುತ್ತಿದೆ. ಕ್ರಿಕೆಟ್ ವೀಕ್ಷಣೆ ಮಾಡಲು ಬರುವವರಿಗೆ ಕಾಮತ್ ಕ್ಯಾಟರ್ಸ್‌ನ ಬಗೆ ಬಗೆಯ ತಿಂಡಿಗಳು ಲಭ್ಯವಿರಲಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.