ಅಯ್ಯೋರಾಮನ ಹಾಡುಪಾಡು
Team Udayavani, Feb 2, 2018, 11:07 AM IST
“ಅಯ್ಯೋ ರಾಮ…’
ಸಾಮಾನ್ಯವಾಗಿ ಎಲ್ಲರ ಬಾಯಲ್ಲೂ ಇಂಥದ್ದೊಂದು ಪದ ಬಂದೇ ಇರುತ್ತೆ. ಆಡುಭಾಷೆಯ ಈ ಪದ ಎಲ್ಲೆಡೆ ಬಳಕೆಯಾಗುವುದೂ ಉಂಟು. ಈಗ ಅದು ಸಿನಿಮಾಗೂ ಬಳಕೆಯಾಗಿದೆ. ಹೌದು, “ಅಯ್ಯೋರಾಮ’ ಎಂಬ ಶೀರ್ಷಿಕೆಯ ಚಿತ್ರವೊಂದು ಸದ್ದಿಲ್ಲದೆಯೇ ಶುರುವಾಗಿ ಇದೀಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಆರ್.ವಿನೋದ್‌ಕುಮಾರ್ ಅವರ ನಿರ್ದೇಶನವಿದೆ. ಇದು ಅವರ ಮೊದಲ ಅನುಭವ. ಕಥೆ, ಸಂಭಾಷಣೆ ಮತ್ತು ಗೀತೆಗಳನ್ನೂ ರಚಿಸಿದ್ದಾರೆ. ಇತ್ತೀಚೆಗೆ ಚಿತ್ರದ ಎರಡು ಹಾಡುಗಳನ್ನು ತೋರಿಸಿ, ಆಡಿಯೋ ಬಿಡುಗಡೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು.
“ಇದೊಂದು ವಾಸ್ತವತೆಯ ಚಿತ್ರಣ ಎನ್ನುತ್ತಾರೆ ನಿರ್ದೇಶಕರು. ಮನುಷ್ಯ ಒಳ್ಳೆಯದನ್ನು ಮಾಡಲು ಹೊರಟಾಗ, ಪ್ರಾರಂಭದಲ್ಲಿ ಕಷ್ಟಗಳು ಎದುರಾದರೂ ಅದು ಕೊನೆಯಲ್ಲಿ ಒಳ್ಳೆಯದಾಗುತ್ತದೆ. ಆದರೆ, ಅದೇ ರೀತಿ ಕೆಟ್ಟದ್ದನ್ನು ಮಾಡಲು ಹೊರಟರೆ, ಆರಂಭದಲ್ಲಿ ಒಳ್ಳೆಯದೇ ಆಗಿದ್ದರೂ, ಅದು ಕೆಟ್ಟದ್ದಾಗಿ ಪರಿಣಮಿಸುತ್ತದೆ. ಈ ರೀತಿಯ ಅಂಶಗಳನ್ನಿಟ್ಟುಕೊಂಡು ಚಿತ್ರ ಮಾಡಲಾಗಿದೆ. ಪ್ರತಿಯೊಂದು ಪಾತ್ರವು ಒಂದೊಂದು ಪಾತ್ರಕ್ಕೆ ಲಿಂಕ್ ಕೊಡುತ್ತಾ ಹೋಗುತ್ತದೆ. ಇಲ್ಲಿ ಕಥೆಗೆ ಹೆಚ್ಚು ಒತ್ತು ಕೊಡಲಾಗಿದೆ. ಪಾತ್ರಗಳ ಮೂಲಕ ಹೊಸಬಗೆಯ ಕಥೆಯನ್ನು ಇಲ್ಲಿ ಹೇಳಹೊರಟಿರುವುದಾಗಿ ಹೇಳಿಕೊಂಡರು ನಿರ್ದೇಶಕರು. ಚಿತ್ರಕ್ಕೆ ಮಂಡ್ಯದ ತ್ರಿವಿಕ್ರಮ ರಘು ಗೆಳೆಯನ ಪ್ರತಿಭೆ ನೋಡಿ, ಅವರ ಭವಿಷ್ಯ ಚೆನ್ನಾಗಿ ಆಗಬೇಕು ಎಂದು ಅವರೇ ಹಣ ಹಾಕಿ ಪ್ರೋತ್ಸಾಹಿಸಿದ್ದಾರೆ. ಅಂದು ಎ.ಪಿ.ಅರ್ಜುನ್, ಚೇತನ್ ಕುಮಾರ್, ಹರಿಸಂತೊಷ್ ಇತರರು ಆಡಿಯೋ ಸಿಡಿ ಬಿಡುಗಡೆಗೆ ಆಗಮಿಸಿ, ಚಿತ್ರತಂಡಕ್ಕೆ ಶುಭಕೋರಿದರು. ಚಿತ್ರದಲ್ಲಿ ಶೇಷನ್, ಪ್ರದೀಪ್, ಸೂರ್ಯ, ಪ್ರಿಯಾಂಕಾ ಸುರೇಶ್ ನಟಿಸಿದ್ದಾರೆ. ಇವರುಗಳಿಗೆ ಇದು ಹೊಸ ಅನುಭವ. ಹಿರಿಯ ಕಲಾವಿದ ಪ್ರಣವ ಮೂರ್ತಿ, ರಾಕ್‌ಲೈನ್ ಸುಧಾಕರ್, ಬಸುಕುಮಾರ್ ಸೇರಿದಂತೆ ಇತರರು ನಟಿಸಿದ್ದಾರೆ. ವಿವೇಕ್ ಚಕ್ರವರ್ತಿ ಅವರ ಸಂಗೀತವಿದೆ. ಮಹೇಶ್ ಎಸ್ ಸಂಕಲನ ಮಾಡಿದ್ದಾರೆ. ಶ್ಯಾಮ್ ಸಿಂಧನೂರು ಅವರ ಛಾಯಗ್ರಹಣವಿದೆ. ರಘುವಂಶಿ ಅವರು ಕಲಾನಿರ್ದೇಶನ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Air Pollution: ದಿಲ್ಲಿ ಗಾಳಿಯೇ ವಿಷ, ಒಂದು ದಿನದ ಉಸಿರಾಟ 25 ಸಿಗರೇಟಿಗೆ ಸಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.