ಪ್ರಿಯಕರ, ಸ್ನೇಹಿತರಿಂದ ಯುವತಿ ಅತ್ಯಾಚಾರ
Team Udayavani, Feb 2, 2018, 11:18 AM IST
ಬೆಂಗಳೂರು: 19 ವರ್ಷದ ಯುವತಿ ಜತೆ ಪ್ರೀತಿಯ ನಾಟಕವಾಡಿದ ಪ್ರಿಯಕರ ಲೈಂಗಿಕವಾಗಿ ಬಳಸಿಕೊಂಡಿದ್ದಲ್ಲದೆ, ಆತನ ಸ್ನೇಹಿತರೂ ಯುವತಿ ಮೇಲೆ ಅತ್ಯಾಚಾರವೆಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಈ ಸಂಬಂಧ ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ ಯಾದಗಿರಿ ಮೂಲದ ಮರಿಲಿಂಗ, ಯಲ್ಲಪ್ಪ ಹಾಗೂ ಮೋನಿ ಎಂಬುವವರನ್ನು ಬಂಧಿಸಿರುವ ಯಲಹಂಕ ನ್ಯೂ ಟೌನ್ ಠಾಣೆ ಪೊಲೀಸರು, ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ, ಸಂತ್ರಸ್ತೆಯ ಪ್ರಿಯಕರ ಶೇಖರ್ ಎಂಬಾತನ ಬಂಧನಕ್ಕೆ ಬಲೆ ಬೀಸಿದ್ದಾರೆ.
ಆರೋಪಿ ಶೇಖರ್ ಕ್ಯಾಬ್ ಡ್ರೈವರ್ ಆಗಿದ್ದು, ಉಳಿದವರು ನಿರ್ಮಾಣ ಹಂತದ ಕಟ್ಟಡಗಳಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಆರೋಪಿ ಶೇಖರ್ ಕ್ಯಾಬ್ ಡ್ರೈವರ್ ಕೆಲಸ ಮಾಡುವುದಕ್ಕೂ ಮೊದಲು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದ ಹಿಂದೆ ಯಲಹಂಕ ಸಮೀಪದ ಎಲ್ಬಿಎಸ್ ಕಾಲೋನಿಯ ಕಟ್ಟಡ ಕೆಲಸಕ್ಕೆ ಬಂದಿದ್ದ.
ಈ ವೇಳೆ ನೆರೆಮನೆಯ ನಿವಾಸಿಯಾದ ಸಂತ್ರಸ್ತೆಯ ಪರಿಚಯವಾಗಿದ್ದು ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಈ ವೇಳೆ ಸಂತ್ರಸ್ತೆಗೆ ಶೇಖರ್ ಮೂಲಕ ಮೂರನೇ ಆರೋಪಿ ಯಲ್ಲಪ್ಪನ ಪರಿಚಯಾಗಿತ್ತು. ಇದಾದ ಬಳಿಕ ಕೆಲ ಸಣ್ಣಪುಟ್ಟ ವೈಮನಸ್ಸಿನಿಂದ ಇಬ್ಬರೂ ದೂರವಾಗಿದ್ದರು.
ವಿಡಿಯೋ ತೋರಿಸಿ ಬ್ಲ್ಯಾಕ್ವೆುಲ್!: ನಾಲ್ಕು ತಿಂಗಳ ಹಿಂದೆ ಪುನಃ ಸಂತ್ರಸ್ತೆ ಜತೆ ಸ್ನೇಹ ಬೆಳೆಸಿಕೊಂಡ ಶೇಖರ್, ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಆಕೆಗೆ ತಿಳಿಯದಂತೆ ಇದನ್ನು ಮೊಬೈಲ್ನಲ್ಲಿ ಸೆರೆಹಿಡಿದು ತನ್ನ ಮೂವರು ಸ್ನೇಹಿತರಿಗೂ ವಿಡಿಯೋ ಕಳುಹಿಸಿಕೊಟ್ಟಿದ್ದಾನೆ.
ಹೀಗಾಗಿ ಮೂವರು ಆರೋಪಿಗಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಲ್ಲಿ ಬಿಡುಗಡೆಮಾಡುವುದಾಗಿ ಬೆದರಿಸಿ ಅಕ್ಟೋಬರ್ನಲ್ಲಿ ಪ್ರತ್ಯೇಕವಾಗಿ ಸುಬೇದಾರ್ ಪಾಳ್ಯದ ನಿಲಗಿರಿ ತೋಪಿಗೆ ಕರೆದಯ್ದು ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದರು.
ಗರ್ಭವತಿಯಾದ ಬಳಿಕ ಪ್ರಕರಣ ಬೆಳಕಿಗೆ!: ಇತ್ತೀಚೆಗೆ ಸಂತ್ರಸ್ತ ಯುವತಿ ಮೂರು ತಿಂಗಳ ಗರ್ಭ ಧರಿಸಿದ್ದಾರೆ. ಇದನ್ನು ಗಮನಿಸಿದ ಆಕೆಯ ತಾಯಿ, ವಿಚಾರಿಸಿದಾಗ ಅತ್ಯಾಚಾರದ ವಿಚಾರ ತಿಳಿಸಿದ್ದಾಳೆ. ಬಳಿಕ ಪೋಷಕರೊಂದಿಗೆ ಬಂದು ಆರೋಪಿಗಳ ವಿರುದ್ಧ ಜ.30ರಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.