ನಾಲ್ಕು  ದಿನಗಳ ರಾಜ್ಯಮಟ್ಟದ ಯುವಜನ ಮೇಳಕ್ಕೆ  ಚಾಲನೆ

Team Udayavani, Feb 2, 2018, 1:00 PM IST

2Feb-9.jpg

ಪುತ್ತೂರು: ಸರಿಸುಮಾರು 25 ವರ್ಷಗಳ ಬಳಿಕ ಪುತ್ತೂರಿನ ರಾಜಬೀದಿಯಲ್ಲಿ ಯುವ ಹೆಜ್ಜೆಗಳ ಠೇಂಕಾರ ಮೂಡಿಬಂದಿದೆ.

ಗುರುವಾರ ಪುತ್ತೂರಿನಲ್ಲಿ ಆರಂಭಗೊಂಡ ರಾಜ್ಯಮಟ್ಟದ ಯುವಜನ ಮೇಳಕ್ಕೆ ಪೂರ್ವಭಾವಿಯಾಗಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮಂಜಲ್ಪಡ್ಪು ಸುದಾನ ವಸತಿಯುತ ಶಾಲೆಯವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.

1993ರಲ್ಲಿ ವಿನಯ ಕುಮಾರ್‌ ಸೊರಕೆ ಶಾಸಕತ್ವದ ಅವಧಿಯಲ್ಲಿ ಯುವಕ ಮಂಡಲಗಳ ನೇತೃತ್ವದಲ್ಲಿ ರಾಜ್ಯಮಟ್ಟದ ಯುವಜನ ಮೇಳ ನಡೆದಿತ್ತು. ಇದೀಗ ಮತ್ತೂಮ್ಮೆ ಪುತ್ತೂರಿನಲ್ಲಿ ರಾಜ್ಯಮಟ್ಟದ ಯುವಜನ ಮೇಳ ಆಯೋಜನೆಗೊಂಡಿದ್ದು, ಯುವೋ ತ್ಸಾಹದ ಕಳೆ ಮಡುಗಟ್ಟಿದೆ. ಜನವರಿಯಲ್ಲಿ ಜಿಲ್ಲಾ ಮಟ್ಟದ ಯುವಜನ ಮೇಳ ಪುತ್ತೂರು ತಾಲೂಕಿನ ಸವಣೂರಿನಲ್ಲಿ ನಡೆದಿದ್ದು, ಬೆನ್ನಿಗೇ ರಾಜ್ಯಮಟ್ಟದ ಮೇಳವೂ ಪುತ್ತೂರಿನ ಹೆಗಲಿಗೆ ಸಿಕ್ಕಿದೆ.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಸುಧಾಕರ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ದೇವರಮಾರು ಗದ್ದೆಯಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಮುಂಭಾಗದಲ್ಲಿ ಕೊಂಬು, ಕಲ್ಲಡ್ಕದ ಗೊಂಬೆ, ಕೀಲು ಕುದುರೆ, ವಾದ್ಯಮೇಳ, ಸುದಾನ ಶಾಲೆಯ ಸ್ಕೌಟ್‌ ಗೈಡ್ಸ್‌, ಗೊರವರ ಕುಣಿತ, ಬೆಟ್ಟಂಪಾಡಿಯ ಸ್ಕೌಟ್‌ ಆ್ಯಂಡ್‌ ಗೈಡ್ಸ್‌ನ ಬ್ಯಾಂಡ್‌ ತಂಡ, ಕಾಸರಗೋಡಿನ ಮಹಿಳಾ ಚಂಡೆ, ಸಿಂಗಾರಿ ಮೇಳ, ಸಂತ ಫಿಲೋಮಿನಾ ಕಾಲೇಜಿನ ಎನ್ನೆಸೆಸ್‌ ತಂಡ, ಶಿವಮೊಗ್ಗ ಜಿಲ್ಲೆಯ ಡೊಳ್ಳು ಕುಣಿತ, ಉಪ್ಪಿನಂಗಡಿ ಇಂದ್ರಪ್ರಸ್ಥ ಶಾಲೆಯ ಸ್ಕೌಟ್‌ ಆ್ಯಂಡ್‌ ಗೈಡ್ಸ್‌, ಸೋಮನ ಕುಣಿತ, ಸಹಿತ ಹಲವು ತಂಡಗಳು ಅನುಸರಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಿಂದ ಹೊರಟ ಮೆರವಣಿಗೆ, ನೆಲ್ಲಿಕಟ್ಟೆ ಖಾಸಗಿ ಬಸ್‌ ನಿಲ್ದಾಣದ ಮುಂಭಾಗದಿಂದ, ಕೆಎಸ್‌ಆರ್‌ ಟಿಸಿ ಬಸ್‌ ನಿಲ್ದಾಣವಾಗಿ ಮುಖ್ಯರಸ್ತೆಗೆ ಸೇರಿತು. ಬಳಿಕ ಮುಖ್ಯರಸ್ತೆಯಿಂದಲೇ ಸಾಗಿ, ಬೊಳುವಾರು, ಮಂಜಲ್ಪಡ್ಪು ಸುದಾನ ವಸತಿಯುತ ಶಾಲಾ ಆವರಣವನ್ನು ಪ್ರವೇಶಿಸಿತು. ಬಳಿಕ 4 ದಿನಗಳ ಕಾಲ ನಡೆಯಲಿರುವ ಯುವಜನ ಮೇಳದ ಉದ್ಘಾಟನ ಸಮಾರಂಭ ಆರಂಭಗೊಂಡಿತು.

ನೀರಿನ ವ್ಯವಸ್ಥೆ
ಮಧ್ಯಾಹ್ನ 3.45ಕ್ಕೆ ಯುವಜನ ಮೇಳದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಸುಮಾರು ಮುಕ್ಕಾಲು ಗಂಟೆ ಬಿಸಿಲಿನಲ್ಲಿ ಕಾದು ಕುಳಿತ ಯುವಕರಿಗೆ ಟೊಪ್ಪಿ ನೀಡಲಾಗಿತ್ತು. ನಾಯಕರ ತಲೆಯಲ್ಲಿ ಹುಬ್ಬಳ್ಳಿಯ ಪೇಟ ರಾರಾಜಿಸುತ್ತಿತ್ತು. ಮೆರವಣಿಗೆ ಸಾಗಿ ಬಂದ ದಾರಿ ಯುದ್ಧಕ್ಕೂ ಸ್ವಯಂ ಸೇವಕರು ನೀರು ವಿತರಣೆ ಮಾಡುತ್ತಿದ್ದರು.

ಟಾಪ್ ನ್ಯೂಸ್

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Akhilesh Yadav: ಉ.ಪ್ರ.ದಲ್ಲಿ ಬಾಬಾ ಸಾಹೇಬ್‌ ಮತ್ತು ಬಾಬಾ ನಡುವಿನ ಹೋರಾಟ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

Supreme Court: ನೇತಾಜಿ ಸಾವಿನ ರಹಸ್ಯ ತನಿಖೆ ನಡೆಸಲು ಕೋರಿದ್ದ ಅರ್ಜಿ ವಜಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಅಡಿಕೆ ವ್ಯಾಪಾರಿಯ ಬ್ಯಾಗಿನಲ್ಲಿದ್ದ 2 ಲಕ್ಷ ರೂ. ಕಳವು

Snake

Vitla: ಹಾವು ಕಡಿದು ಪೆರುವಾಯಿ ಯುವಕ ಮೃತ್ಯು

Putturu-Police

Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್‌ ಕುಮಾರ್‌ ರೈ ಭೇಟಿ

1

Puttur: ಕಲ್ಪವೃಕ್ಷಕ್ಕೆ ಮರುಜೀವವಿತ್ತ ಎಂಜಿನಿಯರ್‌

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Maharashtra Elections: ವಿಪಕ್ಷ ನಾಯಕ ರಾಹುಲ್‌ ಛೋಟಾ ಪೋಪಟ್‌: ಬಿಜೆಪಿ ವಕ್ತಾರ ಲೇವಡಿ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.