ಬ್ರೋಚುಗಳು ಅಥವಾ ಸಾರಿ ಪಿನ್ನುಗಳು
Team Udayavani, Feb 2, 2018, 1:31 PM IST
Everyday is a fashion show and the world is your runway ಎಂಬ ಫ್ಯಾಷನ್ ತಜ್ಞರೊಬ್ಬರ ಮಾತು ಮಹಿಳೆಯರ ಫ್ಯಾಷನ್‌ಪ್ರಿಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಹಿಂದೆ ಅವುಗಳ ಉಪಯುಕ್ತತೆಗೆ ಅನುಸಾರವಾಗಿ ಬಳಸಲ್ಪಡುತ್ತಿದ್ದ ಬ್ರೋಚ್ ಪಿನ್ನುಗಳು ಇಂದಿನ ಫ್ಯಾಷನ್ ಆಕ್ಸೆಸ್ಸರಿಗಳಲ್ಲಿ ಒಂದಾಗಿದೆ. ಕೇವಲ ಸೇಫ್ಟಿ ಪಿನ್ನುಗಳನ್ನು ಬಳಸುವ ಬದಲು ಪಿನ್ನುಗಳೊಂದಿಗೆ ಡೆಕೋರೇಟಿವ್ ಪೆಂಡೆಂಟುಗಳಿರುವ ಬ್ರೋಚುಗಳನ್ನು ಬಳಸುವುದರಿಂದ ನೀವು ತೊಟ್ಟ ಉಡುಗೆಯ ಅಂದವೂ ಹೆಚ್ಚುತ್ತದೆ ಮತ್ತು ಆವಶ್ಯಕತೆಗನುಗುಣವಾದ ಕಡೆ ಬ್ರೋಚ್ ಪಿನ್ನುಗಳ ಬಳಕೆಯಿಂದ ನೀವು ತೊಡುವ ಉಡುಗೆಯು ಸಮರ್ಪಕವಾಗಿ ಅನಾವರಣಗೊಳ್ಳುತ್ತವೆ. ಹಾಗಾಗಿ ತೊಡುವ ಪ್ರತಿಯೊಂದು ದಿರಿಸುಗಳು ಮತ್ತು ತೊಡುವ ಪ್ರತಿಯೊಂದು ಆಭರಣಗಳೂ ಕೂಡ ಟೆಂಡಿಯಾಗಿರು ವುದನ್ನು ಬಯಸುತ್ತಾರೆ. ಅಂತಹ ಫ್ಯಾಷನ್ ಆಕ್ಸೆಸ್ಸರಿಗಳಲ್ಲಿ ಸೀರೆಗಳನ್ನು ಧರಿಸಿದಾಗ ಬಳಸುವ ಬ್ರೋಚುಗಳೂ ಕೂಡ ಹೊರತಲ್ಲ. ಬ್ರೋಚುಗಳು ಅಥವಾ ಸಾರಿ ಪಿನ್ನುಗಳು ಚಿಕ್ಕದಾದ ಆಕ್ಸೆಸ್ಸರಿಯೇ ಆದರೂ ಕೂಡ ನಮ್ಮ ಸೀರೆಯ ಅಂದವನ್ನು ಹೆಚ್ಚಿಸುವಲ್ಲಿ ಸಹಾಯಕವಾಗಬಲ್ಲವು. ಕೇವಲ ಉಡುಪುಗಳಿಗಷ್ಟೇ ಸೀಮಿತವಾಗಿರದ ಈ ಬ್ರೋಚ್ ಪಿನ್ನುಗಳು ಹೇರ್, ಹ್ಯಾಟ್, ಹೆಡ್ ಬ್ಯಾಂಡ್ಸ್, ಬೆಲ್ಟ್ ಮತ್ತು ಶೂ ಆಕ್ಸೆಸ್ಸರಿಗಳಾಗಿಯೂ ಬಳಸಲ್ಪಡುತ್ತವೆ.
1ಕೆಮಿಯೊ: ಇವುಗಳು ಉದ್ದವಾದ ಮಾದರಿಯಲ್ಲಿ ದೊರೆಯುತ್ತವೆ. ಇವುಗಳು ಪೆಂಡೆಂಟ್ ಮಾದರಿಗಳೇ ಆಗಿದ್ದು, ಮೂರು ಆಯಾಮದಲ್ಲಿ ರುವ ಮುಖದಂತಿರುವ ಆಕೃತಿನ್ನು ಮೆಟಲ್ ಬೇಸ್ ಮೇಲೆ ಕೂರಿಸಲಾಗಿರು ತ್ತದೆ. ಇವುಗಳ ಹಿಂಭಾಗಕ್ಕೆ ಪಿನ್ನುಗಳನ್ನು ಜೋಡಿಸಲಾಗಿರು ತ್ತದೆ. ಇವುಗಳ ಮಾದರಿಗಳು ನಮ್ಮನ್ನು ಹದಿನೈದನೇ ಶತಮಾನದ ಆಭರಣಗಳನ್ನು ನೆನಪಿಸುವಂತಿರುತ್ತವೆ. ನೋಡಲು ಭಿನ್ನವೂ ಮತ್ತು ಸುಂದರವೂ ಆಗಿರುವ ಡಿಸೈನುಗಳಿವಾಗಿವೆ. ಮುಖವಾಡಗಳನ್ನು ಶೆಲ್ಲುಗಳಲ್ಲಿ, ಸ್ಟೋನುಗಳಲ್ಲಿ, ಗ್ಲಾಸುಗಳಲ್ಲಿ ಕೆತ್ತನೆ ಮಾಡಲಾಗಿರುತ್ತದೆ.
2ಜ್ಯುವೆಲ್ಡ್ಸ್: ವಿಶೇಷ ಸಂದರ್ಭಗಳಲ್ಲಿ ತೊಡುವ ದಿರಿಸುಗಳೊಂದಿಗೆ ಈ ಬಗೆಯ ಜ್ಯುವೆಲ್ಡ್ಸ್ ಬ್ರೋಚುಗಳು ಸುಂದರವಾಗಿ ಒಪ್ಪುತ್ತವೆ. ಹೆಸರಿಗೆ ತಕ್ಕಂತೆ ಇವುಗಳು ಗ್ರ್ಯಾಂಡ್ ಲುಕ್ಕನ್ನು ನೀಡುವಂತಹುದಾಗಿದೆ. ಪಲ್ಲುವನ್ನು ಸೆಟ್ ಮಾಡಲು ಅಥವ ನೆರಿಯನ್ನು ಫಿಕ್ಸ್ ಮಾಡುವ ಕಾರ್ಯವನ್ನು ಮಾಡುವ ಪಿನ್ನುಗಳೊಂದಿಗೆ ಸುಂದರವಾದ ಡಿಸೈನುಗಳ ಪೆಂಡೆಂಟ್ ಸೇರುವುದರ ಮೂಲಕ ತಯಾರಾಗುವ ಬ್ರೋಚುಗಳು ನಿಮ್ಮ ವಿಶೇಷ ಉಡುಗೆಯನ್ನು ಇನ್ನಷ್ಟು ವಿಶೇಷಗೊಳಿಸುತ್ತವೆ.
ಪರ್ಲ್ ಬ್ರೋಚ್: ಹೆಸರಿಗೆ ತಕ್ಕಂತೆ ಪರ್ಲುಗಳಿಂದ ಅಲಂಕೃತಗೊಂಡ ಬ್ರೋಚುಗಳು ಇವುಗಳಾಗಿವೆ. ಸೀರೆಗಳಿಗೆ, ಫ್ಯೂಷನ್‌ವೇರುಗಳಾದ ಲೆಹೆಂಗಾ-ಚೋಲಿಗಳಲ್ಲಿ ಅಥವಾ ಅನಾರ್ಕಲಿ-ದುಪಟ್ಟಾಗಳನ್ನ ಧರಿಸಿದಾಗ ಇವುಗಳನ್ನು ಅಗತ್ಯವಿದ್ದಲ್ಲಿ ಬಳಸಿಕೊಂಡು ನಿಮ್ಮ ದಿರಿಸಿನ ಅಂದವನ್ನು ಹೆಚ್ಚಿಸಿಕೊಳ್ಳಬಹುದು. ಸಿಂಗಲ್ ಪರ್ಲ್ ಬ್ರೋಚುಗಳೂ ಕೂಡ ದೊರೆಯುತ್ತವೆ. ಎಲ್ಲಾ ಬಣ್ಣಗಳ ಬಟ್ಟೆಗಳಿಗೂ ಮ್ಯಾಚ್ ಆಗುವ ಕಾರಣ ಇವುಗಳ ಬಳಕೆ ಅಧಿಕವಾಗಿರುತ್ತದೆ.
ವೈಟ್ ಸ್ಟೋನ್ಡ್ ಬ್ರೋಚ್: ಬಿಳಿಯ ಹರಳುಗಳಿಂದ ತಯಾರಾದ ಬ್ರೋಚುಗಳೂ ಕೂಡ ದೊರೆಯುತ್ತವೆ.
ಆಂಟಿಕ್ ಬ್ರೋಚ್: ಆಂಟಿಕ್ ಆಭರಣಗಳನ್ನು ಧರಿಸಿದಾಗ ಇವುಗಳಿಗೆ ಮ್ಯಾಚಿಂಗ್ ಎನಿಸುವಂತಿರುವ ಆಂಟಿಕ್ ಬ್ರೋಚುಗಳನ್ನು ಧರಿಸಬಹುದು. ಸುಂದರವಾದ ಸಾಂಪ್ರದಾಯಿಕ ಡಿಸೈನುಗಳಲ್ಲಿ ದೊರೆಯುವ ಇವುಗಳು ನೋಡಲು ಅತ್ಯಂತ ಸುಂದರವೂ ಮತ್ತು ಫ್ಯಾಷನೇಬಲ್ ಕೂಡಾ ಆಗಿರುತ್ತವೆ.
ಗೋಲ್ಡ್ ಇಮಿಟೇಶನ್ ಬ್ರೋಚ್: ಗೋಲ್ಡ್ ಇಮಿಟೇಶನ್ ಬ್ರೋಚುಗಳು ಆಂಟಿಕ್ ಬ್ರೋಚುಗಳಂತೆಯೇ ಇರುತ್ತವೆ. ಹೆಚ್ಚಾಗಿ ಸಾಂಪ್ರದಾಯಿಕ ರೇಷ್ಮೆ ಸೀರೆಗಳೊಂದಿಗೆ ಧರಿಸಬಹುದಾಗಿರುತ್ತವೆ.
ಬಟರ್ ಫ್ಲೈ ಬ್ರೋಚ್ ಮತ್ತು ಪೀಕಾಕ್ ಬ್ರೋಚ್‌ಗಳು: ವಿವಿಧ ಆಕೃತಿಗಳಲ್ಲಿ ದೊರೆಯುವ ಬ್ರೋಚುಗಳಲ್ಲಿ ಬಟರ್ ಫ್ಲೈ ಮತ್ತು ಪೀಕಾಕ್ ಬ್ರೋಚುಗಳೂ ಕೂಡ ಸೇರಿವೆ. ಹೊಳೆಯುವ ಹರಳುಗಳಿಂದ ಅಲಂಕೃತಗೊಂಡಂತಹ ಬ್ರೋಚುಗಳು ದೊರೆಯುತ್ತವೆ.
ಬ್ಲ್ಯಾಕ್ ಮೆಟಲ್ ಬ್ರೋಚ್ ಮತ್ತು ಟ್ರೈಬಲ್ ಮಾದರಿಯ ಬ್ರೋಚ್: ಹೆಸರೇ ಹೇಳುವಂತೆ ಫ್ಯೂಷನ್ ಸೀರೆಗಳೊಂದಿಗೆ ಧರಿಸಬಹುದಾದ ಬ್ರೋಚುಗಳು ಇವುಗಳಾಗಿದೆ. ಟ್ರೈಬಲ್ ಡಿಸೈನುಗಳಲ್ಲಿ ದೊರೆಯುವ ಇವುಗಳು ಸ್ಟೈಲಿಶ್ ಆದ ಲುಕ್ಕನ್ನು ನೀಡುತ್ತವೆ.
ಬ್ರೋಚ್ ವಿದ್ ಚೈನ್: ಬ್ರೋಚ್ ವಿದ್ ಚೈನ್ ಇತ್ತೀಚಿಗಿನ ಫ್ಯಾಷನೇಬಲ್ ಬ್ರೋಚುಗಳಲ್ಲಿ ಒಂದಾಗಿದ್ದು ಬಹಳ ಸ್ಟೈಲಿಶ್ ಆದ ಆಕ್ಸೆಸ್ಸರಿಯಾಗಿದೆ. ಸಾಂಪ್ರದಾಯಿಕವಲ್ಲದ ಮಾಡರ್ನ್ ಸೀರೆಗಳಿಗೆ ಮತ್ತು ಮಾಡರ್ನ್ ಬ್ಲೌಸುಗಳಿಗೆ ಬಹಳ ಚೆನ್ನಾಗಿ ಮ್ಯಾಚ್ ಆಗುವಂತಹ ಬ್ರೋಚುಗಳಿವಾಗಿವೆ. ಸ್ಲಿವ್‌ಲೆಸ್ ಅಥವಾ ಶಾರ್ಟ್ ಸ್ಲಿವ್ಡ್ ಬ್ಲೌಸುಗಳುಳ್ಳ ಸೀರೆಗಳನ್ನು ಧರಿಸಿದಾಗ ಈ ಬಗೆಯ ಬ್ರೋಚುಗಳು ಸೂಕ್ತವೆನಿಸುತ್ತವೆ. ಇವುಗಳು ಸುಂದರವಾದ ಪೆಂಡೆಂಟುಗಳನ್ನು ಹೊಂದಿರುವುದಲ್ಲದೆ ಅವುಗಳೊಂದಿಗೆ ಸಿಂಗಲ… ಅಥವಾ ಮಲ್ಟಿ ಲೇಯರ್ಡ್ ಚೈನುಗಳನ್ನು ಹೊಂದಿರುತ್ತವೆ. ಇವುಗಳನ್ನು ಮುಂಭಾಗ ಅಥವ ತೋಳುಗಳ ಬಲ ಬದಿಯಲ್ಲೂ (ಸೈಡ್ ವೈಸ್) ಧರಿಸಬಹುದು. ಶಾರ್ಟ್ ಅಥವಾ ಸ್ಲಿವ್ಲ್ಸ್ಗಳ ಬಗೆಗಳಲ್ಲಿ ಸೈಡ್ ಧರಿಸಬಹುದು. ಉಳಿದ ಬಗೆಯ ತೋಳುಗಳಾದರೆ ಎದುರು ಧರಿಸುವುದು ಹೆಚ್ಚ ಸೂಕ್ತವೆನಿಸುತ್ತದೆ. ಸ್ಟೋನುಗಳುಳ್ಳ, ಪರ್ಲುಗಳಿಂದ ತಯಾರಾದ ಚೈನ್ ಬ್ರೋಚುಗಳು, ಗೋಲ್ಡ್ ಪ್ಲೇಟೆಡ್, ಬ್ಲ್ಯಾಕ್‌ವೆುಟಲ್, ಕಲರ್ಡ್ ಬೀಡುಗಳಲ್ಲಿ ಹೀಗೆ ಹತ್ತುಹಲವಾರು ಬಗೆಗಳಲ್ಲಿ ಮಾರುಕಟ್ಟೆಯಲ್ಲಿ ದೊರೆಯುವ ಇವುಗಳು ಹೆಂಗಳೆಯರ ಕಣ್ಮನ ಸೆಳೆಯುವುದರಲ್ಲಿ ಯಾವುದೇ ಸಂಶಯವಿಲ್ಲ.
3ಸ್ಟಿಕ್ ಪಿನ್ಸ್: ಬಹಳ ಹಿಂದಿನಿಂದಲೂ ಬಳಕೆಯಲ್ಲಿದ್ದ ಬ್ರೋಚ್ ಪಿನ್ನುಗಳು ಸ್ಟೀಕ್ ಪಿನ್ನುಗಳಾಗಿವೆ. ಚೂಪಾದ ತುದಿಯನ್ನ ಹೊಂದಿರುವ ಮೆಟಲ್ ಸ್ಟಿಕ್ ಅನ್ನು ಹೊಂದಿದವಾಗಿದ್ದವು. ಇನ್ನೊಂದು ತುದಿಯಲ್ಲಿ ಡೆಕೋರೇಟಿವ್ ಸ್ಟಡ್ಡುಗಳಿರುತ್ತವೆ. ನಂತರದ ದಿನಗಳಲ್ಲಿ ಇವುಗಳು ಹಲವು ಮಾರ್ಪಾಡುಗಳೊಂದಿಗೆ ವಿವಿಧ ಸೈಜುಗಳಲ್ಲಿ, ಆಕಾರಗಳಲ್ಲಿ ದೊರೆಯಲಾರಂಭಿಸಿದವು. ಹ್ಯಾಟ… ಸ್ಟಿಕ್ ಪಿನ್ನುಗಳು ಮತ್ತು ಹೈಸ್ಟಿಕ್ ಪಿನ್ನುಗಳು ಹಲವಾರು ಮಾದರಿಗಳಲ್ಲಿ ದೊರೆಯುತ್ತವೆ.
4ಅನ್ನ್ಯುಲರ್: ಇವುಗಳು ಬಹಳ ಹಿಂದಿನಿಂದಲೂ ಬಳಕೆಯಲ್ಲಿದ್ದ ಬ್ರೋಚುಗಳು. ಇವುಗಳನ್ನು ರಿಂಗ್ ಬ್ರೋಚುಗಳೆಂದೂ ಕರೆಯಲಾಗುತ್ತದೆ. ಇವುಗಳು ಸಿಂಪಲ್ ಎನಿಸುವ ಮಾದರಿಗಳಾಗಿದ್ದರೂ ಕೂಡ ಇವುಗಳಲ್ಲಿ ಹರಳುಗಳಿಂದ ಅಲಂಕೃತಗೊಂಡ ಬ್ರೋಚುಗಳು ಕೂಡ ದೊರೆಯುತ್ತವೆ.
ಸಾರಿ ಬ್ರೋಚುಗಳನ್ನು ಹಲವು ಬಗೆಗಳಲ್ಲಿ ಧರಿಸಬಹುದು. ಬ್ಲೌಸುಗಳ ಹಿಂಭಾಗದಲ್ಲಿ, ಸೈಡುಗಳಲ್ಲಿ, ಬ್ಯಾಕ್ಲೆಸ್ ಬ್ಲೌಸುಗಳೊಂದಿಗೆ, ಕಮರ್ಬಂದ್ ಮತ್ತು ಬ್ರೋಚುಗಳನ್ನು ಸೇರಿಕೊಂಡು ಧರಿಸಬಹುದು, ಹೆಚ್ಚಿನ ಬಟ್ಟೆಗಳಲ್ಲಿ ನೆರಿಗಳನ್ನು ಮಾಡಲು ಹೀಗೆ ಹತ್ತು ಹಲವಾರು ಬಗೆಗಳಲ್ಲಿ ಧರಿಸಬಹುದಾದ ಬ್ರೋಚುಗಳು ಲಭಿಸುತ್ತವೆ. ಕೇವಲ ಸಾಂಪ್ರದಾಯಿಕ ಉಡುಪುಗಳೆನಿಸಿದ ಸೀರೆಗಳು, ದುಪಟ್ಟಾಗಳು, ಗಾಗ್ರಾಗಳು, ಲೆಹೆಂಗಾ-ದುಪ್ಪಟಾಗಳೊಂದಿಗಷ್ಟೇ ಅಲ್ಲದೆ ಫ್ಯೂಷನ್ ಮತ್ತು ಕೆಲವು ಮಾಡರ್ನ್ ದಿರಿಸುಗಳೊಂದಿಗೂ ಕೂಡ ಬ್ರೋಚುಗಳನ್ನು ಧರಿಸಬಹುದಾಗಿದೆ.
ಪ್ರಭಾ ಭಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.