ಹೊಸ ಬಗೆಯ ಆಡಳಿತಕ್ಕೆ ಅವಕಾಶ ನೀಡಿ
Team Udayavani, Feb 2, 2018, 3:31 PM IST
ಮುದ್ದೇಬಿಹಾಳ: ಧರ್ಮದ ಹೆಸರಲ್ಲಿ ನಡೆಯುವ ರಾಜಕಾರಣಕ್ಕೆ ಮರುಳಾಗಬೇಡಿ. ನಾನು ಜನರಿಂದ ಚುನಾಯಿತನಾದ ಪೂರ್ಣಾವಧಿ ಮುಖ್ಯಮಂತ್ರಿ ಆಗಿ ಏನು ಮಾಡುತ್ತೇನೆ ಎನ್ನುವುದನ್ನು ಪರೀಕ್ಷೆ ಮಾಡಲಿಕ್ಕಾದರೂ ನನಗೆ 5 ವರ್ಷ ಅವಕಾಶ ಮಾಡಿಕೊಡಿ. ಇಡೀ ರಾಜ್ಯದ ಚಿತ್ರಣವನ್ನೇ ಬದಲಿಸಿ ಹೊಸ ಬಗೆಯ ಆಡಳಿತ ನೀಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.
ಪಟ್ಟಣದ ಬನಶಂಕರಿ ದೇವಸ್ಥಾನ ಆವರಣದಲ್ಲಿ ಕುಮಾರಪರ್ವ ಭಾಗ-2 ಕಾರ್ಯಕ್ರಮ ಹಿನ್ನೆಲೆಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿ ವಿರೋಧಿ ಅಲೆ ವಿಜಯಪುರ ಜಿಲ್ಲೆಯಲ್ಲಿ ಇದೆ. ನೀರಾವರಿ ಕೆಲಸಗಳು ತೃಪ್ತಿಕರವಾಗಿಲ್ಲ. ಕಾಲುವೆಗಳೆಲ್ಲ ನೀರಿಲ್ಲದೆ ಒಣಗಿವೆ. ರೈತರು ಕಂಗಾಲಾಗಿದ್ದಾರೆ. ಅಭಿವೃದ್ಧಿ ಕುಂಠಿತವಾಗಿದೆ. ಇವೆಲ್ಲ ಆಡಳಿತ ವಿರೋಧಿ ಅಲೆ ತೋರಿಸುತ್ತವೆ. ಇದು ಜೆಡಿಎಸ್‌ಗೆ ವರವಾಗಿ ಪರಿಣಮಿಸಲಿದೆ.
ವಿಜಯಪುರ ಜಿಲ್ಲೆಯಲ್ಲಿ ಜೆಡಿಎಸ್ ಪರ ಉತ್ತಮ ಅಲೆ ಕಂಡುಬಂದಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 8 ಸ್ಥಾನಗಳ ಪೈಕಿ 6 ಸ್ಥಾನ ಜೆಡಿಎಸ್ ಗೆಲ್ಲುವ ವಿಶ್ವಾಸ ಮೂಡಿದೆ ಎಂದು ಹೇಳಿದರು.
ಇದುವರೆಗೆ 3500 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇನ್ನು ಮುಂದಿನ 3 ತಿಂಗಳವರೆಗೆ ಯಾವ ರೈತರೂ ಆತ್ಮಹತ್ಯೆ ಪ್ರಯತ್ನಕ್ಕೆ ಕೈ ಹಾಕಬಾರದು. ಜೆಡಿಎಸ್ ಸರ್ಕಾರ ರಚನೆಯಾದ 24ಗಂಟೆಯಲ್ಲಿ ಎಲ್ಲ ರೈತರ, ಎಲ್ಲ ರೀತಿಯ ಒಟ್ಟಾರೆ 51000 ಕೋಟಿ ರೂ. ಸಾಲವನ್ನು ಒಂದೇ ಕಂತಿನಲ್ಲಿ ಮನ್ನಾ ಮಾಡಲು ಕ್ರಮ ಕೈಕೊಳ್ಳುತ್ತೇನೆ. ಮುಂದೆ ರೈತರು ಸಾಲ ಮಾಡದಂತೆ ಹೊಸ ಯೋಜನೆ ರೂಪಿಸಿ ಸರ್ಕಾರದಿಂದಲೇ ಅವರಿಗೆ ಆರ್ಥಿಕ ನೆರವು ದೊರಕುವ ವ್ಯವಸ್ಥೆ ಮಾಡುತ್ತೇನೆ ಎಂದು ಹೇಳಿದರು.
ಶಾಂತಗೌಡ ಪಾಟೀಲ ನಡಹಳ್ಳಿ ಮಾತನಾಡಿ, ಕೆಲ ತಿಂಗಳು ಉದ್ಯೋಗ ನಿಮಿತ್ತ ಬೇರೆ ಕಡೆ ಇದ್ದುದನ್ನೇ ನಾನು ಮತ್ತು
ನನ್ನ ಸಹೋದರ ಶಾಸಕ ನಡಹಳ್ಳಿ ಮಧ್ಯೆ ಜಗಳ ಆಗಿದೆ. ಇಬ್ಬರೂ ಬೇರೆಯಾಗಿದ್ದಾರೆ ಎಂದು ಗೊಂದಲ ಮೂಡಿಸೋ ಪ್ರಯತ್ನ ನಡೆದಿದೆ. ಆದರೆ ನನ್ನ ಮತ್ತು ಸಹೋದರ ಶಾಸಕ ನಡಹಳ್ಳಿ ಮಧ್ಯೆ ಅಂಥದ್ದೇನೂ ಇಲ್ಲ. ನಾವಿಬ್ಬರೂ ರಾಮ, ಲಕ್ಷ¾ಣರಂತಿದ್ದೇವೆ. ಮುಂದೆಯೂ ಒಗ್ಗಟ್ಟಿನಿಂದಲೇ ಇರುತ್ತೇವೆ ಎಂದು ಸ್ಪಷ್ಟೀಕರಿಸಿದರು.
ಸಭೆಯಲ್ಲಿ ಶಾಸಕ ನಡಹಳ್ಳಿ ವಿರುದ್ಧ ಅಡವಿಸೋಮನಾಳದ ವಡಗೇರಿ ಕುಟುಂಬ ಭೂಕಬಳಿಕೆ ಆರೋಪ ಹೊರಿಸಿದ್ದರ ಬಗ್ಗೆ ಗೊಂದಲ ಉಂಟಾದಾಗ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ನಡಹಳ್ಳಿ ಎಂಥ ಮನುಷ್ಯ ಅನ್ನೋದು ನನಗೆ ಚನ್ನಾಗಿ ಗೊತ್ತು. ಅವರು ಯಾರಿಗೂ ಮೋಸ ಮಾಡೋರಲ್ಲ. ಅಡವಿಸೋಮನಾಳದಲ್ಲಿ ಸರ್ಕಾರಿ ಆಸ್ಪತ್ರೆಗೆ ಜಮೀನು ಖರೀದಿಸಿ ರಾಜ್ಯಪಾಲರಿಗೆ ದಾನ ಕೊಟ್ಟಿದ್ದರ ಬಗ್ಗೆ ಅವರ ಬಳಿ ದಾಖಲೆ ಇವೆ.
ಈ ಕುರಿತು ಪ್ರಕರಣ ಕೋರ್ಟಿನಲ್ಲಿದೆ ವಡಗೇರಿ ಕುಟುಂಬದವರು ಮುಗರು. ಅವರಿಗೆ ಕೆಲ ಕುತಂತ್ರ ರಾಜಕಾರಣಿಗಳು ದಾರಿ ತಪ್ಪಿಸಿದ್ದಾರೆ. ವಡಗೇರಿ ಕುಟುಂಬಕ್ಕೆ ನಿಜವಾಗಿಯೂ ಅನ್ಯಾಯ ಆಗಿದ್ದರೆ ವೇದಿಕೆ ಮೇಲೆ ಬನ್ನಿ ಬಹಿರಂಗವಾಗಿಯೇ ಚರ್ಚೆ ನಡೆಯಲಿ. ತಪ್ಪು ಯಾರದ್ದು ಅನ್ನೋದು ಜನತೆಗೆ ಗೊತ್ತಾಗಲಿ. ವಡಗೇರಿ ಕುಟುಂಬಕ್ಕೆ ಹಣಕಾಸಿನ ಅಗತ್ಯ ಇದ್ದರೆ ನಾನೇ 50000 ರೂ.ಸಹಾಯ
ಮಾಡುವೆ. ಆ ಕುಟುಂಬದ ಯುವಕನಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ಕೊಡಿಸುವೆ.
ಆದರೆ ಬೇರೆಯವರ ಮಾತು ಕೇಳಿ ನಡಹಳ್ಳಿ ತೇಜೋವಧೆ ಮಾಡಬೇಡಿ. ನಿಮ್ಮ ಈ ಯತ್ನವನ್ನು ದೇವರು ಮೆಚ್ಚೊಲ್ಲ ಎಂದು ಬಹಿರಂಗವಾಗಿಯೇ ಹೇಳಿ ನಡಹಳ್ಳಿ ಬೆಂಬಲಕ್ಕೆ ನಿಂತರು. ಹಿರಿಯ ಜೆಡಿಎಸ್ ಮುಖಂಡರಾದ ಬಿ.ಎಚ್. ಮಾಗಿ, ಸಂಗಪ್ಪ ಲಕ್ಷಟ್ಟಿ, ಚನ್ನಪ್ಪ ಕಂಠಿ, ಎಸ್.ಎಸ್ .ಪಾಟೀಲ ಹಂಡರಗಲ್, ರಸೂಲ್ ದೇಸಾಯಿ ಜೆಡಿಎಸ್ ಸಂಘಟನೆ, ಶಾಸಕ ನಡಹಳ್ಳಿ ಆಯ್ಕೆ ಕುರಿತು ಮಾತನಾಡಿದರು. ಶಾಸಕ ಎ.ಎಸ್ .ಪಾಟೀಲ ನಡಹಳ್ಳಿ ಮಾತನಾಡಿ ಈ ಬಾರಿ ನನಗೆ ಮತ ಹಾಕಿ ಗೆಲ್ಲಿಸಿದಲ್ಲಿ ಮತಕ್ಷೇತ್ರದ ಇಡೀ ಚಿತ್ರಣವನ್ನೇ ಬದಲಿಸುವ ಭರವಸೆ ನೀಡಿದರು.
ಜೆಡಿಎಸ್ ಮುಖಂಡರಾದ ಮಹಾದೇವಿ ಪಾಟೀಲ ನಡಹಳ್ಳಿ, ನಾನಾಗೌಡ ಬಿರಾದಾರ, ಸೋಮನಗೌಡ ಬಿರಾದಾರ ಕವಡಿಮಟ್ಟಿ, ಈರಸಂಗಪ್ಪಗೌಡ ಪಾಟೀಲ, ಅಲ್ತಾಪ್ ಸೈಯ್ಯದ್, ಎಂ.ಡಿ.ಬಾಗವಾನ, ಮನೋಹರ ತುಪ್ಪದ, ಸಂಗಮ್ಮ ದೇವರಹಳ್ಳಿ, ಕಾನಗೌಡ ಪಾಟೀಲ, ಮುತ್ತಮ್ಮ ಲಿಂಗಸೂರು, ಶರಣು ಬೂದಿಹಾಳಮಠ, ರಾಜು ಹೊನ್ನುಟಗಿ, ಪರಶುರಾಮ ನಾಲತವಾಡ, ಜಲಾಲ ಮುದ್ನಾಳ, ಮೋಹನ ಹಂಚಾಟೆ, ರಮೀಜಾ ನದಾಫ್, ಶೈಲಜಾ ಸ್ಥಾವರಮಠ, ಮಲ್ಲು ಅಪರಾ , ಬಲಭೀಮ ನಾಯಕಮಕ್ಕಳ ಇದ್ದರು.
ವಿಮಲಾಬಾಯಿ ಬಗ್ಗೆ ಸ್ಪಷ್ಟನೆ: ದೇಶಮುಖರ ಹೆಸರು ಬಳಸಿಕೊಳ್ಳಬೇಕು ಅನ್ನೋ ದುರುದ್ದೇಶ ಜೆಡಿಎಸ್‌ಗೆ ಇಲ್ಲ. ದಿ| ಜೆ.ಎಸ್. ದೇಶಮುಖ ಅವರು, ಮಾಜಿ ಸಚಿವೆ ವಿಮಲಾಬಾಯಿ ದೇಶಮುಖ ಅವರು ಜನತಾ ಪರಿವಾರದಿಂದ ಬಂದವರು. ವಿಮಲಾಬಾಯಿ ಅವರು ಹಿರಿಯರು. ಅವರ ಸಲಹೆ, ಮಾರ್ಗದರ್ಶನ ಪಡೆಯುವುದಾಗಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದ್ದು ಅವರಿಗೇ ಗೌರವ ತರುವಂಥದ್ದು. ಇದರಲ್ಲಿ ಬಲವಂತವೇನೂ ಇಲ್ಲ. ಮುದ್ದೇಬಿಹಾಳದಲ್ಲಿ ಎ.ಎಸ್.ಪಾಟೀಲ ಜೆಡಿಎಸ್‌ನಿಂದ ಸ್ಪ ರ್ಧಿಸಲು ನಿರ್ಧರಿಸಿ
ಅವರ ಆಶೀರ್ವಾದ ಪಡೆಯುವುದಾಗಿ ಹೇಳಿದ್ದಾರೆಯೇ ಹೊರತು ದುರುದ್ದೇಶಪಡಿಸಿಕೊಳ್ಳೋ ಉದ್ದೇಶದಿಂದಲ್ಲ.
ಇನ್ನೂ ಚುನಾವಣೆ ಪ್ರಚಾರವೇ ಪ್ರಾರಂಭಗೊಂಡಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಆ ರೀತಿ ಆದರೆ ಅದನ್ನು ಪರಿಗಣಿಸಬಹುದು ಎನ್ನುವುದು ನನ್ನ ಅಭಿಪ್ರಾಯ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Muddebihal; ಬೊಲೇರೊ-ಬೈಕ್ ಮುಖಾಮುಖಿ ಡಿಕ್ಕಿ: ಸವಾರ ಮೃ*ತ್ಯು
Muddebihal: ಕಬ್ಬು ತುಂಬಿದ್ದ ಟ್ರ್ಯಾಕ್ಟರ್ – ಟ್ರ್ಯಾಲಿ ಉರುಳಿ ಬೈಕ್ ಸವಾರ ಮೃತ್ಯು
Muddebihal: ಆಟೋ ಪಲ್ಟಿ: ಕೂಲಿ ಕಾರ್ಮಿಕ ಮಹಿಳೆ ಮೃತ್ಯು
Muddebihal: ಟ್ರ್ಯಾಕ್ಟರ್-ಟ್ರೇಲರ್ ಗೆ ಬೈಕ್ ಡಿಕ್ಕಿ ಹೊಡೆದು ಯುವಕ ಸ್ಥಳದಲ್ಲೇ ಮೃತ್ಯು
Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.