ಜಿಲ್ಲೆಯ ಜನರ ನಿರೀಕ್ಷೆ ಹುಸಿಯಾಗಿಸಿದ ಮೋದಿ ಬಜೆಟ್‌


Team Udayavani, Feb 2, 2018, 4:11 PM IST

uproote trees 2 copy.jpg

ತುಮಕೂರು: ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರದ ವಿತ್ತ ಸಚಿವ ಅರುಣ್‌ ಜೇಟ್ಲಿ ಗುರುವಾರ ಸಂಸತ್‌ ಭವನದಲ್ಲಿ ಮಂಡಿಸಿದ 2018-19 ನೇ ಸಾಲಿನ ಬಜೆಟ್‌ನಲ್ಲಿ ಕಲ್ಪತರು ನಾಡಿಗೆ ಬಂಪರ್‌ ಕೊಡುಗೆ ನೀಡುತ್ತಾರೆಂದು ಇಟ್ಟಿದ್ದ ನಿರೀಕ್ಷೆ ಉಸಿಯಾಗಿದೆ ಆದರೆ ರಾಜ್ಯದಲ್ಲೇ ರೈಲ್ವೆ ಯೋಜನೆಗೆ ಜಿಲ್ಲೆಗೆ ಕೊಡುಗೆ ನೀಡಿರುವುದು ಸಂತಸ ಉಂಟು ಮಾಡಿದ್ದರೂ ಜಿಲ್ಲೆಯ ಅಭಿವೃದ್ಧಿಗಾಗಿ ನಿರೀಕ್ಷಿಸಿದಂತೆ ಬಜೆಟ್‌ ನಲ್ಲಿ ಘೋಷಣೆ ಆಗದೆ ಇರುವುದು ನಿರಾಶೆಯಾಗಿದೆ.

ಕೈಗಾರಿಕಾ ಕಾರಿಡಾರ್‌ ಘೋಷಣೆಯಿಲ್ಲ: ರಾಜಧಾನಿ ಬೆಂಗಳೂರಿಗೆ ಉಪನಗರವಾಗಿ ಬೆಳವಣಿಗೆಯಾಗುತ್ತಿರುವ ತುಮಕೂರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಗುರುವಾರ ಮಂಡಿಸಿದ 5ನೇ ಬಜೆಟ್‌ ನಲ್ಲಿ ಕಲ್ಪತರು ನಾಡಿಗೆ ಕೈಗಾರಿಕಾ ಕಾರಿಡಾರ್‌ಮತ್ತು ಬೆಂಗಳೂರು-ಮುಂಬೈ ಇಂಡಸ್ಟ್ರಿಯಲ್‌ ಕಾರಿಡಾರ್‌ಯೋಜನೆಗಳಿಗೆ ಹೆಚ್ಚಿನ ಅನುದಾನಗಳನ್ನು ಘೋಷಣೆ ಮಾಡುತ್ತಾರೆ ಎನ್ನುವ ನಿರೀಕ್ಷೆ ಇತ್ತು ಅದು ಹುಸಿಯಾದಂತೆ ಕಾಣುತ್ತದೆ

ಆದರೆ ಜಿಲ್ಲೆಗೆ ನೇರವಾಗಿ ಸಬ್‌ಅರ್ಬನ್‌ ರೈಲು, ರಕ್ಷಣಾ ಇಲಾಖೆ ಕಾರಿಡಾರ್‌, ಮೆಡಿಕಲ್‌ ಕಾಲೇಜು ಪ್ರಯೋಜನ ಪಡೆಯಬಹುದಾಗಿರುವುದು ಸಂತಸ ಉಂಟು ಮಾಡಿದೆ. ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚು ಬೆಳವಣಿಗೆಗೆ ಪೂರಕವಾಗುವಂತೆ ವಿಶ್ವಮಟ್ಟದಲ್ಲಿ ತುಮಕೂರು ಬೆಳವಣಿಗೆಯಾಗುವಂತೆ ಗುಡಿ ಕೈಗಾರಿಕೆಗಳಿಗೆ ಹೆಚ್ಚು ಉತ್ತೇಜನ ನೀಡುವಂತಹ ಯೋಜನೆಗಳು ಚುನಾವಣೆಯ ಹೊಸ್ತಿಲಿನ ಈ ಬಜೆಟ್‌ ನಲ್ಲಿ ಘೋಷಣೆ ಆಗುತ್ತೆ ಎಂದು ನಿರೀಕ್ಷೆ ಜಿಲ್ಲೆಯ ಜನರಲ್ಲಿ ಇತ್ತು.

ಕೃಷಿಕರ ಸಂತಸ: ಈ ಬಜೆಟ್‌ ನಲ್ಲಿ ರೈತರಿಗೆ ಕನಿಷ್ಠ ದರ, ಬೆಳೆಗಳಿಗೆ ಬೆಲೆ ನಿಗದಿ ಸ್ವಾತಂತ್ರ್ಯ, ರೈತರಿಗೆ ಗ್ರಾಮಾಂತರ-ಇ ಬಜಾರ್‌, ರೈತರ ಕ್ಷಸ್ಟರ್‌, ಬಿದಿರು ಬೆಳೆ ಹಸಿರು ಬಂಗಾರ ಘೋಷಣೆ, ಮೀನುಗಾರರಿಗೆ, ಸಾವಯವ ಕೃಷಿಗೆ ಒತ್ತು, ಕೃಷಿ ಉತ್ಪ$ನ್ನ ಕಂಪನಿಗಳಿಗೆ ಶೇಕಡ 100 ರಷ್ಟು ತೆರಿಗೆ ರಹಿತಕ್ಕೆ ಜಿಲ್ಲೆಯ ಜನ ಸ್ವಾಗತಿಸಿದ್ದಾರೆ.

ದುಡಿಮೆದಾರರಿಗೆ ಒಂದೇ ದಿವಸದಲ್ಲಿ ಕಂಪನಿ ನೋಂದಣೆ, 2-3 ದಿವಸದಲ್ಲಿ ಪಾಸ್‌ ಪೋರ್ಟ್‌, ಆಪರೇಷನ್‌ ಗ್ರೀನ್‌, ಬಡವರಿಗೆ ಸ್ವಂತ ಮನೆ, ಉಚಿತ ವಿಧ್ಯುತ್‌, ಉಚಿತ ಗ್ಯಾಸ್‌, 3 ಸಂಸತ್‌ ಕ್ಷೇತ್ರಕ್ಕೆ ಒಂದು ಮೆಡಿಕಲ್‌ ಕಾಲೇಜು, ನರ್ಸರಿಯಿಂದ 12 ನೇ ತರಗತಿವರಿಗೆ ಬ್ಲಾಕ್‌ ಬೋರ್ಡ್‌ ಬದಲು ಡಿಜಿಟಲ್‌ ಬೋರ್ಡ್‌ ವ್ಯವಸ್ಥೆ, ಏಕಲವ್ಯ ಶಾಲೆ,ನ್ಯಾಷನಲ್‌ ಹೆಲ್ತ್‌ ಪಾಲಿಸಿ, ಎಸ್‌ಸಿ ಎಸ್‌ಟಿ ಗಳಿಗೆ ವಿಶೇಷ ಯೋಜನೆ,

ಮಹಿಳೆಯರಿಗೆ 26 ವಾರಗಳ ಹೆರಿಗೆ ರಜಾ, ಸ್ವಶಕ್ತಿ ಸಂಘಗಳ ಸಾಲ ಹೆಚ್ಚಳ, ಜಿಲ್ಲೆಗೊಂದು ಕೌಶಲ್ಯ ಕೇಂದ್ರ ಹೀಗೆ ಹಲವಾರು ಯೋಜನೆಗಳು ಉತ್ತಮವಾಗಿವೆ. ನಿರುದ್ಯೋಗಿಗಳಿಗೆ ಆಧಾರ್‌ ಮಾದರಿಯಲ್ಲಿ ಉದ್ಯೋಗ ಆಧಾರ್‌ ನಂಬರ್‌ ನಿಜಕ್ಕೂ ಉತ್ತಮವಾಗಿದೆ. ಇದರಿಂದ ಅಕೌಂಟಬಿಲಿಟಿ ದೊರಕಿದಂತಾಗುತ್ತದೆ, ನಿಜಕ್ಕೂ ನೀಡ್‌ ಬೇಸ್ಡ್ ಆಗಲಿದೆ ಈ ಎಲ್ಲಾ ಯೋಜನೆಗಳ ಬಗ್ಗೆ ನಾಗರಿಕರಿಂದ ಪ್ರಶಂಸೆ ಕೇಳಿ ಬಂದಿದೆ.

* ಚಿ.ನಿ. ಪುರುಷೋತ್ತಮ್‌

ಟಾಪ್ ನ್ಯೂಸ್

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

4-pavagada

Pavagada: ಟ್ರ್ಯಾಕ್ಟರ್ ಗೆ ಕ್ರೇನ್ ಡಿಕ್ಕಿಯಾಗಿ ಓರ್ವ ಸ್ಥಳದಲ್ಲೇ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

rape

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.