ಐಪಿಎಲ್‌ನಲ್ಲಿ ಕನ್ನಡಿಗರದ್ದೇ ಹವಾ


Team Udayavani, Feb 3, 2018, 3:20 AM IST

2-ddd.jpg

ಶ್ರಮ ಹಾಗೂ ಅದೃಷ್ಟ ಜೊತೆಗಿದ್ದರೆ ಏನುಬೇಕಾದರೂ ಆಗಬಹುದು ಎಂಬ ಮಾತಿದೆ. ಇದು ಎಲ್ಲ ಕ್ಷೇತ್ರಗಳಿಗೂ ಅನ್ವಯಿಸುವ ಮಾತು. ಈಗೇಕೆ ಈ ಮಾತು ಅಂದರೆ, ಬೆಂಗಳೂರಿನಲ್ಲಿ ನಡೆದ 2018ನೇ ಸಾಲಿನ ವಿಶ್ವದ ಶ್ರೀಮಂತ ಕ್ರೀಡಾ ಲೀಗ್‌ಗಳಲ್ಲಿ ಒಂದಾದ ಐಪಿಎಲ್‌ ಹರಾಜಿನಲ್ಲಿ ಇದು ಸಾಬೀತಾಗಿದೆ.

ಒಂದೂ ಅಂತಾರಾಷ್ಟ್ರೀಯ ಪಂದ್ಯ ಆಡದವರು ಒಳ್ಳೆಯ ಮೊತ್ತಕ್ಕೆ ಸೇಲ್‌ ಆಗಿರುವುದು ಎಲ್ಲರನ್ನು ಬೆರಗುಗೊಳಿಸಿದರೆ, ತಾರಾ ಆಟಗಾರರೇ ಕಡಿಮೆ ಮೊತ್ತಕ್ಕೆ ಮಾರಾಟವಾಗಿರುವುದು ಹಲವರಿಗೆ ಬೇಸರ ತರಿಸಿದೆ. ಆದರೆ, ಈ ಎಲ್ಲದರ ನಡುವೆ ನಮ್ಮ ಕರ್ನಾಟಕ ವೀರರು ಕೋಟಿ ಕೋಟಿ ಮೊತ್ತಕ್ಕೆ ಬಿಕರಿಯಾಗಿರುವುದು ರಾಜ್ಯ ಕ್ರಿಕೆಟ್‌ ಅಂಗಳದಲ್ಲಿ ಹೊಸ ಚೈತನ್ಯ ಮೂಡಿಸಿದೆ.

ಕನ್ನಡಿಗರಿಗೆ ಸುಗ್ಗಿ
ಐಪಿಎಲ್‌ನಲ್ಲಿ ಕರ್ನಾಟಕದ ಆಟಗಾರರನ್ನು ಕಡೆಗಣಿಸಲಾಗುತ್ತಿದೆ ಎಂಬ ಮಾತುಗಳು ಪ್ರತಿವರ್ಷವೂ ಕೇಳಿಬರುತ್ತಿದ್ದವು. ಅದಕ್ಕೆ ತಾಜಾ ಉದಾಹರಣೆ ಸ್ವತಃ ತವರಿನ ರಾಯಲ್‌ ಚಾಲೆಂಜರ್ ಬೆಂಗಳೂರು(ಆರ್‌ಸಿಪಿ) ತಂಡದಲ್ಲಿಯೇ ಕರ್ನಾಟಕದ ಒಬ್ಬರು ಅಥವಾ ಇಬ್ಬರು ಆಟಗಾರರಿಗೆ ಸ್ಥಾನ ಸಿಗುತ್ತಿತ್ತು. ಒಂದೊಂದೇ ಆವೃತ್ತಿಗಳು ಉರುಳಿದಂತೆ ಕನ್ನಡಿಗರಿಗೆ ಬೇಡಿಕೆ ಹೆಚ್ಚಾಯಿತು. 

ಆರ್‌ಸಿಬಿಯಲ್ಲಿ ಅವಕಾಶ ಸಿಗದಿದ್ದರೂ, ಯಾವ ತಂಡದಲ್ಲಿ ಛಾನ್ಸ್‌ ಸಿಕ್ಕರೂ ಅದನ್ನು ಕರ್ನಾಟಕದ ಆಟಗಾರರು ಸಮರ್ಥವಾಗಿ ಬಳಸಿಕೊಂಡರು. ಪರಿಣಾಮ ಎಲ್ಲ ತಂಡಗಳ ಕೋಚ್‌ಗಳು ಕರ್ನಾಟಕದ ಆಟಗಾರರ ಕಡೆ ನೋಡುವಂತಾಯಿತು. ಮೊನ್ನೆ ಬೆಂಗಳೂರಿನಲ್ಲಿ ನಡೆದ ಐಪಿಎಲ್‌ ಹರಾಜಿನಲ್ಲಿ ಕರುನಾಡ ಹುಡುಗರು ಒಳ್ಳೆಯ ಮೊತ್ತಕ್ಕೆ “ಸೇಲ್‌’ ಆಗಿದ್ದಾರೆ.

ಕಳೆದ 10 ವರ್ಷಗಳ ಐಪಿಎಲ್‌ ಲೀಗ್‌ಗಳಿಗಿಂತ ಈ ಐಪಿಎಲ್‌ನಲ್ಲಿ ಕನ್ನಡಿಗರು ಭರ್ಜರಿ ಮೊತ್ತಕ್ಕೆ ಬಿಕರಿಯಾಗಿದ್ದಾರೆ. ಹಿಂದಿನ ಐಪಿಎಲ್‌ ಲೀಗ್‌ನಲ್ಲಿ ಹೆಚ್ಚು ಮೊತ್ತಕ್ಕೆ ಮಾರಾಟವಾಗಿದ್ದು, ರಾಬಿನ್‌ ಉತ್ತಪ್ಪ. ಇದು ರಾಜ್ಯದ ಆಟಗಾರನೊಬ್ಬ ಬಿಕರಿಯಾಗಿದ್ದ ಅಧಿಕ ಮೊತ್ತವಾಗಿತ್ತು. ಅವರನ್ನು ಹೊರತು ಪಡಿಸಿ ಯಾರು ಅಷ್ಟೊಂದು ಮೊತ್ತಕ್ಕೆ ಬಿಕರಿಯಾಗಿರಲಿಲ್ಲ. ಕರಣ್‌ ನಾಯರ್‌, ಮನೀಶ್‌ ಪಾಂಡೆ, ಸ್ಟುವರ್ಟ್‌ ಬಿನ್ನಿ, ವಿನಯ್‌ ಕುಮಾರ್‌, ಕೆ.ಎಲ್‌.ರಾಹುಲ್‌, ಮಾಯಂಕ್‌ ಅಗರ್ವಾಲ್‌, ಅಭಿಮಾನ್ಯು ಮಿಥುನ್‌, ಕೆ.ಸಿ.ಕಾರ್ಯಪ್ಪ… ಅಲ್ಪ ಮೊತ್ತಕ್ಕೆ ಮಾರಾಟವಾಗಿದ್ದರು. ಆದರೆ, 2018ನೇ ಐಪಿಎಲ್‌ ಲೀಗ್‌ ಹರಾಜಿನಲ್ಲಿ ಕನ್ನಡಿಗರು ಹರಾಜಾಗಿರುವ ಮೊತ್ತ ಇತರರು ಹುಬ್ಬೇರಿಸುವಂತೆ ಮಾಡಿದೆ.

ಕಿಂಗ್ಸ್‌ಗೆ ಕರುಣ್‌ ನಾಯರ್‌
ಟೆಸ್ಟ್‌ ಕ್ರಿಕೆಟ್‌ನ ತ್ರಿಶತಕ ವೀರ ಕರುಣ್‌ ನಾಯರ್‌. ಇತ್ತೀಚಿಗೆ ನಡೆದ ರಣಜಿ ಟ್ರೋಫಿ, ಸೈಯದ್‌ ಮುಷ್ತಾಕ್‌ ಅಲಿ ಟಿ20 ಕೂಟದಲ್ಲಿ ನೀಡಿದ ಅಮೋಘ ಪ್ರದರ್ಶನ ನಾಯರ್‌ ಕೈ ಹಿಡಿದಿದೆ. ಕಳೆದ ಆವೃತ್ತಿಯಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್‌ಗೆ 4 ಕೋಟಿ ರೂ. ಹರಾಜಾಗಿದ್ದರು. ಈ ಬಾರಿ 5.60 ಕೋಟಿ ರೂ. ನೀಡಿ ಅವರನ್ನು ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಖರೀದಿಸಿದೆ.
ರಾಜಸ್ಥಾನಕ್ಕೆ ಕೆ.ಗೌತಮ್‌ ರಾಜ ರಣಜಿ ಟೂರ್ನಿಯಲ್ಲಿ ಉತ್ತಮ ಆಲ್‌ ರೌಂಡ್‌ ಪ್ರದರ್ಶನ ನೀಡಿದ ಕೆ.ಗೌತಮ್‌ ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇವರು ರಾಜಸ್ತಾನ ರಾಯಲ್ಸ್‌ ತಂಡಕ್ಕೆ 6.20 ಕೋಟಿ ರೂ.ಗೆ ಖರೀದಿಯಾಗಿದ್ದಾರೆ.

ಉಳಿದಂತೆ ಕರ್ನಾಟಕದ ರಣಜಿ ತಂಡದ ನಾಯಕ ವಿನಯ್‌ ಕುಮಾರ್‌ 1 ಕೋಟಿ ರೂ.ಗೆ ಕೆಕೆಆರ್‌, ಮಾಯಂಕ್‌ ಅಗರವಾಲ್‌ 1 ಕೋಟಿ ರೂ. ಪಂಜಾಬ್‌, ಸ್ಟುವರ್ಟ್‌ ಬಿನ್ನಿ ರಾಜಸ್ಥಾನಕ್ಕೆ 50 ಲಕ್ಷ ರೂ.ಗೆ, ಶ್ರೇಯಸ್‌ ಗೋಪಾಲ್‌ ರಾಜಸ್ಥಾನಕ್ಕೆ, ಅನಿರುದ್ಧ ಜೋಶಿ, ಪವನ್‌ ದೇಶಪಾಂಡೆ ತಲಾ 20 ಲಕ್ಷ ರೂ.ಗೆ ಬೆಂಗಳೂರು ತಂಡದ ಪಾಲಾಗಿದ್ದಾರೆ. ಒಟ್ಟು 11 ಮಂದಿ ಕರ್ನಾಟಕದ ಆಟಗಾರರು ಹರಾಜಿನಲ್ಲಿ ವಿವಿಧ ತಂಡಗಳಿಗೆ 43.30 ಕೋಟಿ ರೂ. ಮೊತ್ತಕ್ಕೆ ಖರೀದಿಯಾಗಿದ್ದಾರೆ.

ಉತ್ತಪ್ಪ ಕೋಲ್ಕತಾಗೆ
ರಾಜ್ಯದ ಸ್ಫೋಟಕ ಬ್ಯಾಟ್ಸಮನ್‌ ರಾಬಿನ್‌ ಉತ್ತಪ್ಪ. ಇದುವರೆಗೂ ನಾಲ್ಕು ಐಪಿಎಲ್‌ ತಂಡಗಳನ್ನು ಪ್ರತಿನಿಧಿಸಿರುವ ಆಟಗಾರ. ಕಳೆದ ಬಾರಿ 5 ಕೋಟಿ ರೂ.ಗೆ ಕೋಲ್ಕತ್ತ ತಂಡದ ಪಾಲಾಗಿದ್ದ ಉತ್ತಪ್ಪ ಈ ಬಾರಿ ಅದೇ ತಂಡಕ್ಕೆ 6.40 ಕೋಟಿ ರೂ.ಗೆ ಹರಾಜಾಗಿದ್ದಾರೆ.

ಹೈದರಾಬಾದ್‌ಗೆ ಪಾಂಡೆ
ಐಪಿಎಲ್‌ ಇತಿಹಾಸದಲ್ಲಿ ಮೊಟ್ಟ ಮೊದಲ ಶತಕ ಬಾರಿಸಿದ ದೇಶದ ಕ್ರಿಕೆಟಿಗ ಎಂಬ ಹೆಗ್ಗಳಿಕೆ ಪಾತ್ರರಾದವರು ಕನ್ನಡಿಗ ಮನೀಷ್‌ ಪಾಂಡೆ. ಕಳೆದ 10 ವರ್ಷದಲ್ಲಿ ಆರ್‌ಸಿಬಿ, ಮುಂಬೈ ಇಂಡಿಯನ್ಸ್‌, ಪುಣೆ ವಾರಿಯರ್, ಕೋಲ್ಕತ ನೈಟ್‌ ರೈಡರ್ ಪರ ಆಡಿದ್ದಾರೆ. ಆದರೆ ಇಷ್ಟು ವರ್ಷ ಪಾಂಡೆಗೆ ಸಿಕ್ಕಿದ್ದು, ಅಲ್ಪ ಮೊತ್ತ. ಆದರೆ ಈ ಬಾರಿ ಐಪಿಎಲ್‌ನಲ್ಲಿ ಬರೋಬ್ಬರಿ 11 ಕೋಟಿ ರೂ.ಗೆ ಹೈದರಾಬಾದ್‌ ತಂಡಕ್ಕೆ ಹರಾಜಾಗಿದ್ದಾರೆ.

ಪಂಜಾಬ್‌ಗ ರಾಹುಲ್‌ ಕಿಂಗ್‌
ಕೆ.ಎಲ್‌.ರಾಹುಲ್‌ ರಾಜ್ಯ ಕಂಡ ಉದಯನ್ಮೋಖ ಆಟಗಾರ. ಕಳೆದ ಸಾಲಿನಲ್ಲಿ ಬೆಂಗಳೂರು ತಂಡದಲ್ಲಿ ಆಡುತ್ತಿದ್ದ ಇವರು ಖರೀದಿಯಾಗಿದ್ದು ಮಾತ್ರ 1 ಕೋಟಿ ರೂ.ಗೆ. ಆದರೆ, ಒಂದು ವರ್ಷದಲ್ಲಿ ರಾಹುಲ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವುದು, ಜತೆಗೆ ತಾತ್ಕಾಲಿಕ ಕೀಪರ್‌ ಕೂಡ ಆಗಿರುವುದರಿಂದ ಪ್ರೀತಿ ಜಿಂಟಾ ಮಾಲಿಕತ್ವದ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡ ಕಣ್ಣು ಹಾಕಿತ್ತು. ಇದೀಗ ಭರ್ಜರಿ 11 ಕೋಟಿ ರೂ. ಗೆ ರಾಹುಲ್‌ ಅವರನ್ನು ಖರೀದಿಸಿ ಅಚ್ಚರಿ ನೀಡಿದೆ.

ದೇವಲಾಪುರ ಮಹದೇವ ಸ್ವಾಮಿ

ಟಾಪ್ ನ್ಯೂಸ್

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

Eye Surgeries: ಪದವಿ ಪೂರ್ಣಗೊಳಿಸದೆ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ…

Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

Perth test: ಜೈಸ್ವಾಲ್-ರಾಹುಲ್‌ ಅಜೇಯ ಆಟ; ಪರ್ತ್‌ ನಲ್ಲಿ ಭಾರತದ ಮೇಲಾಟ

lakxmi

Belagavi: ಗ್ಯಾರಂಟಿ ವಿರೋಧಿಸಿದ ವಿಪಕ್ಷಗಳಿಗೆ ಸ್ಪಷ್ಟ ಉತ್ತರ ನೀಡಿದ ಮತದಾರ: ಹೆಬ್ಬಾಳ್ಕರ್

Kalaburagi: Shigavi result unexpected; We do not agree: C.T. Ravi

Kalaburagi: ಶಿಗ್ಗಾವಿ ಫಲಿತಾಂಶ ಅನಿರೀಕ್ಷಿತ; ನಾವು ಒಪ್ಪುವುದಿಲ್ಲ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

ಹೊಸ ಸೇರ್ಪಡೆ

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Re-Release: ಈ ವರ್ಷ ರೀ ರಿಲೀಸ್‌ ಆದ ಬಾಲಿವುಡ್‌ ಸಿನಿಮಾಗಳ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

Uttara Pradesh By poll: 30 ವರ್ಷದ ಬಳಿಕ ಮುಸ್ಲಿಂ ಬಾಹುಳ್ಯದ ಕ್ಷೇತ್ರದಲ್ಲಿ ಅರಳಿದ ಕಮಲ!

IPL Mega Auction: 2008-2024.. Here is the list of the most expensive players in each auction

IPL Mega Auction: 2008-2024.. ಪ್ರತಿ ಹರಾಜಿನ ದುಬಾರಿ ಆಟಗಾರರ ಪಟ್ಟಿ ಇಲ್ಲಿದೆ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

ಬೆಳಗಾವಿ:ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿದ ಹುಡುಗ..ಜಿಲ್ಲಾ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ

16-uv-fusion

Discipline: ಬದುಕಿನಲ್ಲಿ ಶಿಸ್ತಿರಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.