20 ಗಂಟೆ ಆಡಿ ಆಸ್ಪತ್ರೆ ಸೇರಿದ; ಸ್ಟ್ರೇಚರ್ ಮೂಲಕ ಆಸ್ಪತ್ರೆಗೆ ದಾಖಲು
Team Udayavani, Feb 3, 2018, 10:28 AM IST
ಬೀಜಿಂಗ್: ಈತ ವಿಡಿಯೋ ಗೇಮ್ ಆಡಿದ್ದು ಒಂದು ಅಥವಾ ಎರಡು ಗಂಟೆಯಲ್ಲ, ಬರೋಬ್ಬರಿ 20 ಗಂಟೆ. ಪರಿಣಾಮ
ಏನು ಗೊತ್ತೇ? ಆತನ ಸೊಂಟದ ಕೆಳಗಿನ ಭಾಗಕ್ಕೆ ಪಾರ್ಶ್ವವಾಯು ಉಂಟಾಗಿದೆ. ಸ್ಮಾರ್ಟ್ಫೋನ್, ಇಂಟರ್ನೆಟ್ ಕೆಫೆಗಳಲ್ಲಿ ಗಂಟೆಗಟ್ಟಲೆ ವಿಡಿಯೋಗೇಮ್ ಆಡುವವರಿಗೆ ಈ ಘಟನೆಯು ಎಚ್ಚರಿಕೆಯ ಸಂದೇಶ ರವಾನಿಸಿದೆ.
ಅಂದ ಹಾಗೆ ಈ ಘಟನೆ ನಡೆದದ್ದು ಚೀನಾದ ಝೆಝಿಯಾಂಗ್ ಪ್ರಾಂತ್ಯದ ಜಿಯಾಕ್ಸಿಂಗ್ನಲ್ಲಿ. ಇದು ಅಲ್ಲಿನ ಮಾಧ್ಯಮ
ಗಳಲ್ಲಿ ವರದಿಯಾಗಿದ್ದು, ವಿಡಿಯೋ ಕೂಡ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜ.27ರ ಸಂಜೆ ಕಂಪ್ಯೂಟರ್ ಮುಂದೆ ಕುಳಿತು ವಿಡಿಯೋ ಗೇಮ್ ಆಡಲು ಶುರು ಮಾಡಿದಾತ ಜ.28ರ ಮಧ್ಯಾಹ್ನದ ವರೆಗೆ ಆಟ ಮುಂದುವರಿಸಿದ್ದ. ಆತ ಶೌಚಾಲಯಕ್ಕೆ ಹೋಗಬೇಕೆಂದು ನಿರ್ಧರಿಸಿ ಕುರ್ಚಿಯಿಂದ ಏಳಲು ಯತ್ನಿಸಿದ. ಅಷ್ಟರಲ್ಲಿ ಆತನ ಸೊಂಟದ ಕೆಳಭಾಗ ಸಂಪೂರ್ಣ ಶಕ್ತಿ ಕಳೆದುಕೊಂಡಿತ್ತು.
ಅಲ್ಲಿದ್ದ ಆತನ ಸ್ನೇಹಿತ ನೆರವಾದರೂ ಸಾಧ್ಯವಾಗಲಿಲ್ಲ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಸಂದರ್ಭದಲ್ಲಿ ಕೆಲವರು ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಅದು ವೈರಲ್ ಆಗಿದೆ. ಸದ್ಯ ಆತ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ.
ಹೆಚ್ಚುತ್ತಿರುವ ಪಿಡುಗು: ಚೀನಾದ ಯುವ ಜನರಲ್ಲಿ ವಿಡಿಯೋ ಗೇಮ್ ಖಯಾಲಿ ಹೆಚ್ಚಾಗುತ್ತಿದೆ. ಅವರು ವಿದ್ಯಾಭ್ಯಾಸ ತೊರೆದು ಗೇಮ್ನತ್ತವೇ ಆಕರ್ಷಿತರಾಗುತ್ತಿದ್ದಾರೆ.
ಕಳೆದ ವಾರ ಹತ್ತು ವರ್ಷದ ಬಾಲಕ ತನ್ನ ತಾಯಿಯ ಬ್ಯಾಂಕ್ ಖಾತೆಯಿಂದ 17 ಸಾವಿರ ಪೌಂಡ್ ಅನ್ನು ಗೇಮ್ಗಾಗಿ ವಿಥ್ ಡ್ರಾ ಮಾಡಿಕೊಂಡ ಘಟನೆಯೂ ನಡೆದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 50 ಬ*ಲಿ
MUST WATCH
ಹೊಸ ಸೇರ್ಪಡೆ
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Caste ನೋಡಿ ಮತ ಹಾಕಿದರೆ ಸಮಾಜದಲ್ಲಿ ಬದಲಾವಣೆ ಅಸಾಧ್ಯ : ಸಿಎಂ ಸಿದ್ದರಾಮಯ್ಯ
ಶ್ರೀಮಂತ ಟೊಕಿಯೊ ಈ ದುಸ್ಥಿತಿಗೆ ತಲುಪಿದ್ಯಾಕೆ…ಈ ದೇಶವೀಗ ಸೆ*ಕ್ಸ್ ಟೂರಿಸಂ ಹಬ್ಬ!
BJP Protest: ʼ1,500 ವರ್ಷದ ಹಿಂದೆ ಅಲ್ಲಾನು ಇರಲಿಲ್ಲ ಮುಲ್ಲಾನೂ ಇರಲಿಲ್ಲʼ: ಸಿ.ಟಿ.ರವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.