ಪೆಲೆಟ್ಗಳ ಉತ್ಪಾದನೆಯಲ್ಲಿ ಕೆಐಒಸಿಎಲ್ ದಾಖಲೆ
Team Udayavani, Feb 3, 2018, 1:12 PM IST
ನವದೆಹಲಿ: ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ ಲಿ., (ಕೆಐಒಸಿಎಲ್) ಪ್ರಸಕ್ತ ಸಾಲಿನ ತ್ತೈಮಾಸಿಕ ಹಾಗೂ 2017-18ನೇ ಸಾಲಿನ ಡಿ.31 ಅಂತ್ಯದ ಒಂಬತ್ತು ತಿಂಗಳಲ್ಲಿ ಮಾಡಿರುವ ಸಾಧನೆ ವಿವರಗಳನ್ನು ಬಿಡುಗಡೆ ಮಾಡಿದೆ.
ಆರ್ಥಿಕ ವರ್ಷದ ತೃತೀಯ ತ್ತೈಮಾಸಿಕ ಪೂರ್ಣಗೊಂಡ ವೇಳೆಯಲ್ಲಿ ಪೆಲೆಟ್ಸ್ (ಅದಿರು ಗುಂಡುಗಳ) ಉತ್ಪಾದನೆಯಲ್ಲಿ ಶೇ.31 ರಷ್ಟು ಹೆಚ್ಚಳ ಮಾಡಿದೆ. ಅಂದರೆ 0.635 ಮಿಲಿಯನ್ ಟನ್ಗಳ ಪೆಲೆಟ್ಸ್ ಉತ್ಪಾದನೆಯಾಗಿದ್ದು 0.638 ಮಿಲಿಯನ್ ಟನ್ ಮಾರಾಟ ಮಾಡಿ ದಾಖಲೆ ನಿರ್ಮಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.19 ರಷ್ಟು ಮಾತ್ರ ಉತ್ಪಾದನೆ ಮಾಡಿತ್ತೆಂದು ತಿಳಿದುಬಂದಿದೆ.
ತ್ತೈಮಾಸಿಕ ಅವಧಿಯ ನಿವ್ವಳ ಲಾಭ 12.92 ಕೋಟಿ ರೂ.ಗಳಾಗಿದ್ದು ಕಳೆದ ವರ್ಷ ಇದೇ ಅವಧಿಯ 0.11 ಕೋಟಿ ರೂ.ಗೆ ಹೋಲಿಸಿದ್ದಲ್ಲಿ 12.81 ಕೋಟಿ ರೂ. ಅಧಿಕ ಲಾಭ ಮಾಡಿದೆ. ಹಲವು ವರ್ಷಗಳ ನಂತರ ಸಂಸ್ಥೆಯ ಸುಧಾರಿತ ಮಾರಾಟ ಬೆಲೆ ಮತ್ತು ವೆಚ್ಚ ಉತ್ತಮಗೊಳ್ಳುವಿಕೆಯಿಂದಾಗಿ ಪೆಲೆಟ್ ಘಟಕದ ಕಾರ್ಯನಿರ್ವಹಣಾ ಲಾಭ 4.09 ಕೋಟಿ ರೂ. ಆಗಿದೆ.
ಕಳೆದ ಒಂಬತ್ತು ತಿಂಗಳ ಬೆಳವಣಿಗೆಯಲ್ಲಿ ಸಂಸ್ಥೆ ಅಭೂತಪೂರ್ವ ಸಾಧನೆ ಮಾಡಿದ್ದು 1.700 ಮಿಲಿಯನ್ ಟನ್ ಪೆಲೆಟ್ಸ್ ಉತ್ಪಾದನೆ ಮಾಡಿ 1.763 ಮಿಲಿಯನ್ ಟನ್ ಮಾರಾಟ ಮಾಡುವ ಮೂಲಕ ಶೇ.134 ರಷ್ಟು ಅಭಿವೃದ್ಧಿ ಕಂಡಿದೆ. ಒಟ್ಟಾರೆ ಕೆಐಒಸಿಎಲ್ನ ನವಮಾಸದ ತೆರಿಗೆ ನಂತರದ ಲಾಭ 21.43 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ ಕೇವಲ 1.10 ಕೋಟಿ ರೂ. ಮಾತ್ರ ಲಾಭ ಮಾಡಿತ್ತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chennai: ತೆರಿಗೆಯಲ್ಲಿ ಶೇ.50 ಪಾಲಿಗೆ ತಮಿಳ್ನಾಡು ಮತ್ತೆ ಆಗ್ರಹ
Punjab Farmers: ಡಿ.6ರಂದು ರೈತ ಸಂಘಟನೆಗಳಿಂದ ದೆಹಲಿ ಚಲೋ
Kerala: ಆ್ಯಂಬುಲೆನ್ಸ್ ಓಡಾಟಕ್ಕೆ ಅಡ್ಡಿ: ಕಾರು ಮಾಲೀಕನ ಲೈಸೆನ್ಸ್ ರದ್ದು!
Anmol Bishnoi: ಅಮೆರಿಕದಲ್ಲಿ ಲಾರೆನ್ಸ್ ಬಿಷ್ಣೋಯ್ ಸಹೋದರ ಅನ್ಮೋಲ್ ಬಿಷ್ಣೋಯ್ ಬಂಧನ
Manipur issue: ಶಾ ಸಭೆಯ ಬಳಿಕ ಮಣಿಪುರಕ್ಕೆ ಹೆಚ್ಚುವರಿ ಪಡೆಗಳನ್ನು ಕಳುಹಿಸಿದ ಕೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.