ಮುಕುಲ-ಯುಗಲ-ಬಹುಲ ನೃತ್ಯೋತ್ಸವ ಝಲಕ್
Team Udayavani, Feb 3, 2018, 4:21 PM IST
ನೃತ್ಯೋತ್ಸವ ನೋಡುವುದೇ ಒಂದು ಸೊಗಸು. ಇತ್ತೀಚೆಗೆ ಸಾಧನ ಸಂಗಮ ನೃತ್ಯ ಕೇಂದ್ರವು “ಮುಕುಲ-ಯುಗಲ-ಬಹುಲ ಶಾಸ್ತ್ರೀಯ ನೃತ್ಯೋತ್ಸವ’ವನ್ನು ವಿಭಿನ್ನವಾಗಿ ಕಟ್ಟಿಕೊಟ್ಟಿತು. ಒಟ್ಟು ಮೂರು ದಿನ, ಮೂರು ಸ್ಥಳಗಳಲ್ಲಿ ನಡೆದ ಈ ಕಾರ್ಯಕ್ರಮವನ್ನು ವಿನ್ಯಾಸ ಮಾಡಿದ್ದು ನೃತ್ಯ ಗುರು ಜ್ಯೋತಿ ಪಟ್ಟಾಭಿರಾಮ್ ಅವರು.
ಕಾರ್ಯಕ್ರಮದ ಉದ್ದಕ್ಕೂ ನಿಪುಣ, ಪರಿಣತರು ಈಗಷ್ಟೇ ಗೆಜ್ಜೆ ಕಟ್ಟಿ ವೇದಿಕೆ ಮೇಲೆ ಹೆಜ್ಜೆ ಇಡುವ ಕಿರಿಯರಿಗೆ ಹೇಗೆ ಮಾರ್ಗದರ್ಶಕರಾಗುತ್ತಾರೆ ಎನ್ನುವುದಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಯಿತು. ಅಷ್ಟೇ ಅಲ್ಲ, ಮೂರೂ ದಿನಗಳ ಕಾರ್ಯಕ್ರಮಗಳಲ್ಲಿ ಬೆಂಗಳೂರಿನ ರಾಗಿಣಿ ಸಂಗೀತ ನೃತ್ಯಾಲಯ, ನಾಟ್ಯ ಸಿಂಚನ ಸಂಗೀತ ನೃತ್ಯಶಾಲೆ, ವೆಂಕಟೇಶ ನಾಟ್ಯ ಮಂದಿರ, ಸ್ಫೂರ್ತಿ ನೃತ್ಯಶಾಲೆ, ಶ್ರುತ ನೃತ್ಯಶಾಲೆ, ರಾಜರಾಜೇಶ್ವರಿ ಕಲಾನಿಕೇತನ, ನೃತ್ಯಗಾನ ಅಕಾಡೆಮಿ, ನೃತ್ಯ ಕಲಾಮಂದಿರಂನ ಕಲಾದರಿಗೂ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಗಿತ್ತು.
ನೃತ್ಯಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ಕಲಾವಿದರಿಗೆ ಇದೇ ವೇಳೆ “ಕಲಾಯೋಗಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಭರತಾಂಜಲಿ ನಾಟ್ಯ ಶಾಲೆಯ ಗುರು ಶ್ರೀಮತಿ ಸೀತಾ ಗುರುಪ್ರಸಾದ್, ಕೈಸಿಕಿ ನಾಟ್ಯವಾಹಿನಿ ಕೇಂದ್ರದ ಗುರು ಶ್ರೀಮತಿ ಮಾಲಾ ಶಶಿಕಾಂತ್, ಮೃದಂಗ ಕಲಾವಿದರಾದ ವಿದ್ವಾನ್ ಶ್ರೀಹರಿ ರಂಗಸ್ವಾಮಿ, ಪ್ರಸಾಧನ ಕಲಾವಿದ ನೃತ್ಯ ಗುರು ಸತೀಶ್ ಬಾಬು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ನೃತ್ಯಕ್ಕೆ ವಯಸ್ಸಿನ ಮಿತಿ ಇಲ್ಲ ಎನ್ನುವುದನ್ನು “ಹರಿ ಮಾನಸ ವಿಹಾರ’ ನೃತ್ಯ ರೂಪಕ ಸಾಬೀತುಪಡಿಸಿತು. 72 ವರ್ಷದ ಗುರು ಬಿ. ಭಾನುಮತಿ ಹಾಗೂ ಗುರು ಶೀಲಾ ಚಂದ್ರಶೇಖರ್ ಅವರ ನೃತ್ಯ ಕಲಾಮಂದಿರಮ್ ತಂಡ ಸದಸ್ಯರ ಅಭಿನಯ, ಎರಡನೇ ದಿನದಲ್ಲಿ ಅನಂತ ನಾಗರಾಜ್ ಮತ್ತು ಶ್ರೀಮತಿ ಚೈತ್ರಾ ಅನಂತ್ ಸಾದರಪಡಿಸಿದ “ಸಂಕ್ಷಿಪ್ತ ರಾಮಾಯಣ’ ರೂಪಕ ಗಮನಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
UV Fusion: ಶ್ರೇಷ್ಠನಾಗುವುದಕ್ಕಿಂತ ಉತ್ತಮನಾಗುವುದೇ ಲೇಸು
Anandapura: ನಿಂತಿದ್ದ ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು ಕಾರು ಪಲ್ಟಿ
Mumbai: ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ 7 ಲಕ್ಷ ರೂ. ಕಳೆದುಕೊಂಡ ಐಐಟಿ ವಿದ್ಯಾರ್ಥಿ!
CSI ದಕ್ಷಿಣ ಪ್ರಾಂತ್ಯದ ಸಭಾಪಾಲಕರಾಗಿದ್ದ ರೆವರೆಂಡ್ ಜಾನ್ ಬೆನೆಡಿಕ್ಟ್ ನಿಧನ
Kollywood: ಲೇಡಿ ಸೂಪರ್ ಸ್ಟಾರ್ ದಂಪತಿ ವಿರುದ್ಧ ಸಿಡಿದೆದ್ದ ಧನುಷ್; ಕೇಸ್ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.